Home Crime ಬರ್ತ್‌ಡೇ ದಿನವೇ ಪ್ರೇಮಿಗೆ ಗುಂಡಿ ತೋಡಿದ್ದ ಕಪ್ಪು ಸುಂದರಿಯ ಕೇಸ್‌ಗೆ ಮೇಜರ್ ಟ್ವಿಸ್ಟ್..?! “ಹತ್ಯೆ ಮಾಡಿದ್ದು...

ಬರ್ತ್‌ಡೇ ದಿನವೇ ಪ್ರೇಮಿಗೆ ಗುಂಡಿ ತೋಡಿದ್ದ ಕಪ್ಪು ಸುಂದರಿಯ ಕೇಸ್‌ಗೆ ಮೇಜರ್ ಟ್ವಿಸ್ಟ್..?! “ಹತ್ಯೆ ಮಾಡಿದ್ದು ಅವಳಲ್ಲ”.???

723
0
SHARE

ಕಲಬುರಗಿ ಸೆಂಟ್ರಲ್ ಯೂನಿವರ್ಸಿಟಿ ಅವೊತ್ತು ಎಂದಿನಂತೆ ಇರಲಿಲ್ಲ. ಕಾರಣ.. ಯೂನಿರ್ಸಿಟಿಯಲ್ಲಿ ನಡೆದ ಒಂದು ಬರ್ಬರ ಹತ್ಯೆ.ಪ್ರತಿಷ್ಠಿಯ ಕರ್ನಾಟಕ ಯೂನಿವರ್ಸಿಟಿಯಲ್ಲಿ ನಡೆದಿತ್ತು ಒಬ್ಬ ಯುವಕನ ಬರ್ಬರ ಹತ್ಯೆ. ಸೆಪ್ಟಂಬರ್ 23 ನೇ ತಾರೀಖು ಸಂಜೆ ಹದಿಯರೆಯದ ಯುವನೊಬ್ಬ ಇದೇ ಯೂನಿವರ್ಸಿಟಿಯಲ್ಲಿ ಕೊಲೆಯಾಗಿ ಹೋಗಿದ್ದ. ಅದೇ ಕಾರಣಕ್ಕೆ ಯೂನಿವರ್ಸಿಟಿಯಲ್ಲಿ ಸೆಕ್ಯುರಿಟಿ ಇಲ್ಲಾ ಅಂತ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು. ಅಂದ ಹಾಗೆ ಸಿಯುಕೆ ನಲ್ಲಿ ಕೊಲೆಯಾಗಿದ್ದು ಮನೋಜ್ ಪ್ರಸಾದ್ ಅನ್ನೋ ಯುವಕ.ಮೊನ್ನೆ ಬೆಳಗ್ಗೆ ಹೈದರಾಬಾದ್ ನಿಂದ ಕಲಬುರಗಿಯ ಈ ಯೂನಿವರ್ಸಿಟಿಗೆ ಬಂದು ಹೆಣವಾಗಿ ಹೋದ.

ಅಂದ ಹಾಗೆ ಈ ಮನೋಜ್ ಪ್ರಸಾದ್ ಬಂದಿದ್ದು.. ತನ್ನ ಗರ್ಲ್ ಫ್ರೆಂಡ್ ಪ್ರಿಯಾಂಕ ಅನ್ನೋ ಈ ಕಪ್ಪುಸುಂದರಿ ಇನ್ವೈಟ್ ಮಾಡಿದ್ದಕ್ಕಾಗಿ.ಆದ್ರೆ ಆ ಮರ್ಡರ್ ಕೇಸಿಗೆ ಟ್ವಿಸ್ಟ್ ಸಿಕ್ಕಿದೆ.ಮನೋಜ್ ಪ್ರಸಾದ್ ಹತ್ಯೆ ಎಷ್ಟು ದಾರುಣವೋ ಅಷ್ಟೇ ರೋಚಕ ಅವನ ಕೊಲೆ ಹಿಂದಿರೋ ಕಹಾನಿ. ಈ ಹುಡುಗಿಯೇ ಪ್ರಸಾದ್ ನನ್ನ ಕೊಲೆ ಮಾಡಿಸಿದ್ದಾಳೆ ಅಂತ ಎಲ್ಲರೂ ನಂಬಿದ್ದರು. ಆದ್ರೆ ಸಿಯುಕೆ ನಲ್ಲಿ ನಡೆದ ಆ ಬರ್ಬರ ಹತ್ಯೆಯ ಹಿಂದೆ ಪ್ರಿಯಾಂಕಾಳ ಕೈವಾಡವಿಲ್ಲ. ಅವಳು ಆರೋಪ ಮುಕ್ತಳು ಅಂತ ಇದೀಗ ತನಿಖೆ ನಡೆಸಿದ್ದ ಪೊಲೀಸರು ಹೇಳಿದ್ದಾರೆ.

ಅಂದ ಹಾಗೆ ಪ್ರಸಾದ್ ನನ್ನ ಕೊಂದು ಮುಗಿಸಿದ್ದು ಯಾರು ಗೊತ್ತಾ.. ಆ ಕಿರಾತಕರು. ಹೆಸ್ರು.. ಗಣೇಶ್ ಅಂಡ್ ಶಾಂತಪ್ಪ. ಪಾಪದ ಹುಡುಗ ಮನೋಜ್ ಪ್ರಸಾದ್ ನ ರಕ್ತ ಹರಿಸಿ ಕೊಂದು ಮುಗಿಸಿದ್ದು ಈ ಇಬ್ಬರು ಕಿರಾತಕರೇನೆ. ಸೆಪ್ಟಂಬರ್ 23 ನೇ ತಾರೀಕು ಸಂಜೆ ತನ್ನ ಕೆಲವು ಫ್ರೆಂಡ್ಸ್ ಗಳನ್ನ ಕರೆದಿದ್ದ ಪ್ರಿಯಾಂಕ ಎಲ್ಲರ ಮುಂದೆನೇ ಕೇಕ್ ಕಟ್ ಮಾಡಿ ಮನೋಜ್ ಗೆ ಬರ್ತ್ ಡೇ ವಿಶಸ್ ಹೇಳಿದ್ದಳು. ಸ್ವಲ್ಪ ಹೊತ್ತಾದ್ಮೇಲೆ ಅಲ್ಲಿದ್ದ ಸ್ಟೂಡೆಂಡ್ಸ್ ಎಲ್ಲಾ ಹೋದ್ಮೇಲೆ , ಇವರಿಬ್ಬರೇ ಮಾತಾಡ್ತಾ ಕೂತಿದ್ದರು. ಆಗ ಏಕಾಏಕಿ ಬಂದ ಈ ಆಸಾಮಿಗಳು ದರೋಡೆ ಮಾಡೋದಕ್ಕೆ ಮುಂದಾಗಿದ್ದರು. ಆಗ ಪ್ರತಿರೋಧ ಒಡ್ಡಿದ್ದ ಪ್ರಸಾದ್ ನ ಕುತ್ತಿಗೆಗೆ ಚಾಕುವಿಂದ ಒಡದೇ ಬಿಟ್ಟಿದ್ದ ಶಾಂತಪ್ಪ.

ನಂತರ ಕೆಳಗೆ ಬಿದ್ದವನನ್ನ ಚಾಕುವಿನಿಂದ ಸಿಕ್ಕಸಿಕ್ಕ ಕಡೆ ತಿವಿದಿದ್ದರು. ಕಣ್ಣಮುಂದೆಯೇ ಘೋರ ಘಟನೆ ಕಂಡ ಪ್ರಿಯಾಂಕ ಬೆಚ್ಚಿಬಿದ್ದು ಕೂಗಾಡಿದ್ದಳು. ಅದಕ್ಕೆ ಹೆದರಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದರು ಈ ಪಾಪಿಗಳು.ಅಷ್ಟೇ ಅಲ್ಲಾ.. ಅವತ್ತು ಪ್ರಿಯಾಂಕಳ ನಸೀಬು ಚೆನ್ನಾಗಿತ್ತು ಅನ್ಸುತ್ತೆ. ಯಾಕಂದ್ರೆ ಪ್ರಿಯಾಂಕಳ ಪ್ರಾಣ ತೆಗೆಯೋ ಪ್ಲಾನಲ್ಲಿದ್ದರಂತೆ ಈ ರಾಕ್ಷಸರು. ಆದ್ರೆ ಅಷ್ಟೊತ್ತಿಗೆ ಚೀರಾಡಿದ್ದಕ್ಕಾಗಿ ಇನ್ನ ಎಲ್ಲಿ ನಾವು ಸಿಕ್ಕಿ ಬೀಳ್ತಿವೋ ಅಂತ ಹೆಸರಿ ಅಲ್ಲಿಂದ ಕಾಲ್ಕಿತ್ತಿದ್ದರು.ಕೇವಲ ಹಣ, ಮೊಬೈಲ್ ಗಾಗಿ ಒಬ್ಬ ಅಮಾಯಕನನ್ನ ಬರ್ಬರವಾಗಿ ಕೊಂದು ಮುಗಿಸಿಬಿಟ್ಟಿದ್ದರು ಈ ಗಣೇಶ ಹಾಗೂ ಶಾಂತಪ್ಪ. ಕೊಲೆ ಮಾಡಿ ನಾವು ಸೇಫ್ , ಸಿಕ್ಕಿಬೀಳಲ್ಲ ಬಿಡಿ ಅಂತ ಆರಾಮಾಗಿದ್ದವರನ್ನ ಪೊಲೀಸರು ಪತ್ತೆಹಚ್ಚಿ ಒದ್ದು ಎತ್ತಾಕೊಂಡು ಬಂದಿದ್ದಾರೆ.

ನಾವು ಪುಡಿಗಾಸಿಗಾಗೇ ಕೊಲೆ ಮಾಡಿದ್ವಿ ಅಂತ ಈ ಆಸಾಮಿಗಳು ಸತ್ಯ ಬಾಯಿಬಿಟ್ಟಿದ್ಮೇಲೆನೆ ಕೊಲೆಯ ರಹಸ್ಯ ಬಯಲಾಗಿದ್ದು. ಕೊಲೆ ಮಾಡಿಸಿದ ಆರೋಪ ಹೊತ್ತು ಕಣ್ಣೀರಾಕಿದ್ದ ಈ ಹುಡುಗಿ ಇದೀಗ ನಿಟ್ಟುಸಿರು ಬಿಟ್ಟಿದ್ದಾಳೆ.ಯಾವ ಪ್ರೇಮಿಗೇ ಆಗಲಿ, ತಾನು ಪ್ರೀತಿಸಿದ ಹುಡುಗಿಯೇ ತನ್ನ ಬರ್ತ್ ಡೇ ಸೆಲೆಬ್ರೇಟ್ ಮಾಡ್ತಾಳೆ, ಸರ್ಪೈಸ್ ಲವ್ಲೀ ಗಿಫ್ಟ್ ಕೊಡ್ತಾಳೆ ಅಂದ್ರೆ ಹಿರಿಹಿರಿ ಹಿಗ್ಗೋಗಲ್ಲ. ಪಾಪ ಪ್ರಸಾದ್ ಗೂ ಹಾಗೇ ಆಗಿತ್ತು. ಗರ್ಲ್ ಫ್ರೆಂಡ್ ಕರೆದಿದ್ದೇ ತಡ ಹೈದ್ರಾಬಾದ್ ನಿಂದ ಒಂದೇ ಉಸಿರಿನಲ್ಲಿ ಓಡೋಡಿ ಬಂದಿದ್ದ. ಆದ್ರೆ ಅವನಿಗಾಗಿ ಕಾದು ಕುಳಿತಿತ್ತು ಸಾವು. ಪ್ರೇಯಸಿಯೊಂದಿಗೆ ಏಕಾಂತದಲ್ಲಿರಬೇಕಾದ್ರೆ ಹಠಾತ್ತಾಗಿ ಎಂಟ್ರಿಕೊಟ್ಟಿದ್ದ ಆಗಂತುಕರು ಅವನನ್ನ ಕೊಂದೇ ಮುಗಿಸಿಬಿಟ್ಟಿದ್ದರು. ವಿಪರ್ಯಾಸ ಅಂದ್ರೆ ಆ ಹತ್ಯೆಯ ಆರೋಪ ಪ್ರಿಯಾಂಕಳ ಮೇಲೆನೆ ಬಂದಿತ್ತು. ಆದ್ರೆ ಆ ಕೊಲೆಯ ಹಿಂದೆ ಇದ್ದಿದ್ದು ಬೇರೆಯದೇ ಕಥೆ.

ಪಾಪ ರೀ.. ಮುದ್ದಾಡುತ್ತಾ ಪ್ರಣಯದಲ್ಲಿ ಮುಳುಗಿರೋ ಜೋಡಿ ಹಕ್ಕಿಯಲ್ಲಿ ಒಂದನ್ನ ಬೇಟೆಗಾರ ಹೊಡೆದು ಉರುಳಿಸಿದಾಗ ಸಂಗಾತಿಯನ್ನ ಕಳೆದುಕೊಂಡ ಹಕ್ಕಿಯ ರೋದನೆಯಂತಾಗಿತ್ತು ಕಣ್ಣಮುಂದೆಯೇ ಪ್ರಾಣಬಿಟ್ಟ ಪ್ರಿಯಕರನ ಕಳೆದುಕೊಂಡ ಪ್ರಿಯಾಂಕಾಳ ಪರಿಸ್ಥಿತಿ. ಇನ್ನಾ, ತನ್ನ ಬರ್ತ್ ಡೇ ದಿನವೇ ಪ್ರೇಯಸಿಯ ಕಣ್ಣಮುಂದೆಯೇ ಕಣ್ಮುಚ್ಚಿದ ಮನೋಜ್ ಗೆ ಸಾಯೋ ಟೈಮಲ್ಲಿ ಏನೆಲ್ಲಾ ಅನಸಿರಬಹುದಲ್ವಾ.. ಪ್ರಪಂಚದಲ್ಲಿ ಯಾವ ಪ್ರೇಮಿಗಳಿಗೂ ಇಂತಾ ಪರಿಸ್ಥಿತಿ ಬರೋದು ಬೇಡ. ಪ್ರಿಯಾಂಕ ಹಾಗೂ ಮನೋಜ್ ನತದೃಷ್ಟ ಪ್ರೇಮಿಗಳು, ನತದೃಷ್ಟ ಸ್ನೇಹಿತರು ಅನ್ನೋದಕ್ಕೆ ಇದಕ್ಕಿಂತಾ ದಾರುಣ ಘಟನೆ ಬೇಕಾ.

ಮನೋಜ್ ಪ್ರಸಾದ್ ಹತ್ಯೆ ಎಷ್ಟು ದಾರುಣವೋ ಅಷ್ಟೇ ರೋಚಕ ಅವನ ಕೊಲೆ ಹಿಂದಿರೋ ಕಹಾನಿ. ಬರ್ತ್ ಡೇ ಅಲ್ಲದಿದ್ದರೂ ಬರ್ತ್ ಡೇ ಸೆಲೆಬ್ರೇಶನ್ ಮಾಡಲು ಕರೆದಿದ್ದ ಪ್ರಿಯಾಂಕಾಳೇ ಸಂಚು ಮಾಡಿ ಕೊಲೆ ಮಾಡಿಸಿದ್ದಳಾ ಅನ್ನೋ ಆರೋಪಿ ಕೇಸ್ ರೂಪದಲ್ಲಿ ಪೊಲೀಸ್ ಠಾಣೆ ಕದ ತಟ್ಟಿತ್ತು.  ಕಂಪ್ಲೆಂಟ್ ಬಂದ ಕಾರಣ ಪೊಲೀಸರೂ ಸಹ ದೂರಿನ ಆಧಾರದ ಮೇಲೆಯೇ ತನಿಖೆ ನಡೆಸಿದ್ದರು. ಘಟನೆಗೆ ಐ ವಿಟ್ನೆಸ್ ಆಗಿದ್ದ ಪ್ರಿಯಾಂಕಳನ್ನ ಇಂಟರಾಗೇಟ್ ಮಾಡಿದ್ದರು. ಈ ಹುಡುಗಿಯೇ ಪ್ರಸಾದ್ ನನ್ನ ಕೊಲೆ ಮಾಡಿಸಿದ್ದಾಳೆ ಅಂತ ಎಲ್ಲರೂ ನಂಬಿದ್ದರು. ಆದ್ರೆ ಸಿಯುಕೆ ನಲ್ಲಿ ನಡೆದ ಆ ಬರ್ಬರ ಹತ್ಯೆಯ ಹಿಂದೆ ಪ್ರಿಯಾಂಕಾಳ ಕೈವಾಡವಿಲ್ಲ. ಅವಳು ಆರೋಪ ಮುಕ್ತಳು ಅಂತ ಇದೀಗ ತನಿಖೆ ನಡೆಸಿದ್ದ ಪೊಲೀಸರು ಹೇಳಿದ್ದಾರೆ.

ಕೇವಲ ಹಣ, ಮೊಬೈಲ್ ಗಾಗಿ ಒಬ್ಬ ಅಮಾಯಕನನ್ನ ಬರ್ಬರವಾಗಿ ಕೊಂದು ಮುಗಿಸಿಬಿಟ್ಟಿದ್ದರು ಈ ಗಣೇಶ ಹಾಗೂ ಶಾಂತಪ್ಪ. ಕೊಲೆ ಮಾಡಿ ನಾವು ಸೇಫ್ , ಸಿಕ್ಕಿಬೀಳಲ್ಲ ಬಿಡಿ ಅಂತ ಆರಾಮಾಗಿದ್ದವರನ್ನ ಪೊಲೀಸರು ಪತ್ತೆಹಚ್ಚಿ ಒದ್ದು ಎತ್ತಾಕೊಂಡು ಬಂದಿದ್ದಾರೆ. ನಾವು ಪುಡಿಗಾಸಿಗಾಗೇ ಕೊಲೆ ಮಾಡಿದ್ವಿ ಅಂತ ಈ ಆಸಾಮಿಗಳು ಸತ್ಯ ಬಾಯಿಬಿಟ್ಟಿದ್ಮೇಲೆನೆ ಕೊಲೆಯ ರಹಸ್ಯ ಬಯಲಾಗಿದ್ದು. ಕೊಲೆ ಮಾಡಿಸಿದ ಆರೋಪ ಹೊತ್ತು ಕಣ್ಣೀರಾಕಿದ್ದ ಈ ಹುಡುಗಿ ಇದೀಗ ನಿಟ್ಟುಸಿರು ಬಿಟ್ಟಿದ್ದಾಳೆ.

ಆದ್ರೆ ಏನ್ ಬಂತು ಪ್ರಯೋಜನ. ಜೀವಕ್ಕೆ ಜೀವದ ಗೆಳೆತನ ಪ್ರೀತಿ ಕೊಟ್ಟಿದ್ದ ಮನೋಜ್ ಪ್ರಸಾದ್ ಇದೀಗ ಜೀವಂತ ಇಲ್ಲ. ಎಲ್ಲವೂ ಮುಗಿದೋಗಿದೆ. ಘೋರ ಘಟನೆಯನ್ನ ಕಣ್ಣಾರೆ ಕಂಡು, ಕೊಲೆ ಆರೋಪ ಹೊತ್ತಿದ್ದ ಈ ಹೆಣ್ಮಗಳ ಕಣ್ಣಲ್ಲಿ ಆ ದಿನ ಬಂದಿದ್ದು.. ಕಣ್ಣೀರಲ್ಲಾ ರಕ್ತ ಕಣ್ಣೀರೇ ಹೌದು.ಮನೋಜ್ ಪ್ರಸಾದ್ ಹಾಗೂ ಪ್ರಿಯಾಂಕಾಳ ಜೀವನದಲ್ಲಿ ನಡೆದೋದ ಘೋರ ಘಟನೆ ಇನ್ಯಾವ ಆತ್ಮೀಯ ಸ್ನೇಹಿತರು, ಪ್ರೇಮಿಗಳ ಬದುಕಲ್ಲಿ ನಡೆಯೋದೇ ಬೇಡ. ಪಾಪ ಕಣ್ರೀ.. ಅದೆಷ್ಟೋ ಆಸೆ ಕನಸುಗಳನ್ನ ಕಂಡಿದ್ದ ಈ ನತದೃಷ್ಟ ಹುಡುಗ ಪ್ರೀತಿಸಿದ ಹುಡುಗಿಯ ಕಣ್ಣೆದುರೇ ಪ್ರಾಣ ಬಿಟ್ಟಿದ್ದ. ಆ ಘೋರ ಕ್ಷಣಕ್ಕೆ ಸಾಕ್ಷಿಯಾಗಿದ್ದ ಈ ಹುಡುಗಿಯ ಪರಿಸ್ಥಿತಿ ಹೇಗಿರಬೇಕಲ್ವಾ.. ಅದರ ಜೊತೆಗೆ ಕೊಲೆ ಆರೋಪ, ವಿಚಾರಣೆ ಬೇರೆ. ಇಷ್ಟೆಲ್ಲಾ ಆದ್ರೂ ಕಡೆಗೆ ಸತ್ಯವೇ ಗೆಲ್ಲುತ್ತೆ ಅನ್ನೋದಕ್ಕೆ ಈ ಪಾಪದ ಪ್ರಿಯಾಂಕಳೇ ಸಾಕ್ಷಿ.

ಪ್ರೀತಿಸ್ತಿದ್ದ ಹುಡುಗಿ ಕರೆದಳು ಅಂತ ಹೈದರಾಬಾದ್ ನಿಂದ ಓಡೋಡಿ ಬಂದಿದ್ದ ಮನೋಜ್ ಪ್ರಸಾದ್ ಗೆ ಕೇಕ್ ತಿನ್ನಿಸಿ ನೂರು ಕಾಲ ಬಾಳು ಡಿಯರ್ ಅಂತ ವಿಶ್ ಮಾಡಿದ್ದ ಪ್ರಿಯಾಂಕಾಳಿಗೇನು ಗೊತ್ತು, ಈ ಪ್ರಸಾದ್ ಗೆ ಏನು ಗೊತ್ತು.. ಸಂಭ್ರಮದಲ್ಲಿ ಸಾವು ಕೇಕೆ ಹಾಕಿ ಕುಣಿಯುತ್ತೆ ಅಂತ. ಈ ಗಣೇಶ ಹಾಗೂ ಶಾಂತಪ್ಪ ಅನ್ನೋ ಆಗಂತುಕರು ಪ್ರಸಾದ್ ನನ್ನ ಕೊಂದು ಮುಗಿಸೇಬಿಟ್ಟಿದ್ರು. ಅಂದಹಾಗೆ ಈ ಆಸಾಮಿಗಳು ಏನು ದರೋಡೆ ಮಾಡೋದನ್ನೇ ಕುಲ ಕಸುಬು ಮಾಡ್ಕೊರೋವ್ರಲ್ಲಾ. ಸಣ್ಣಪುಟ್ಟ ಕೆಲಸ ಮಾಡೋವ್ರು, ಅದಕ್ಕಿಂತ ಹೆಚ್ಚಾಗಿ ಕುರಿ ಮೇಯಿಸೋವ್ರು…

ಮನೋಜ್ ಪ್ರಸಾದ್ ನನ್ನ ಬರ್ಬರವಾಗಿ ಕೊಂದು ಅವನತ್ರ ಇದ್ದ ಪರ್ಸ್ ಕಿತ್ತ್ ಕೊಂಡು ಹೋಗಿದ್ದ ಈ ಹಂತಕರು ಪ್ರಿಯಾಂಕಾಳ ಮೊಬೈಲನ್ನೂ ಸಹ ಕಸಿದೋಗಿದ್ರು. ನಂತರ ತನಿಖೆಯಲ್ಲಿ ಆ ಮೊಬೈಲ್ ಜಾಡಿಡಿದ ಪೊಲೀಸರಿಗೆ ಯಾವನೋ ಒಬ್ಬನ ಹತ್ರ ಮೊಬೈಲ್ ಇರೋದು ಗೊತ್ತಾಗಿತ್ತು. ಅವನನ್ನ ಪತ್ತೆ ಹಚ್ಚಿ ಎತ್ತಾಕೊಂಡು ಬಂದಾಗ.. ಈ ಗಣೇಶ ಹಾಗೂ ಶಾಂತಪ್ಪನಿಂದ ಎರಡೇ ಎರಡು ಸಾವಿರಕ್ಕೆ ಖರೀದಿಸಿದ್ದಾಗಿ ಬಾಯಿಬಿಟ್ಟಿದ್ದ. ನಂತರ ಆರೋಪಿಗಳನ್ನು ಪತ್ತೆ ಹಚ್ಚಿದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ಈ ಆಸಾಮಿಗಳು.

ಯಸ್.. ಇವರದೇನಿದ್ರೂ ಲವರ್ಸ್ ಗಳೇ ಟಾರ್ಗೆಟ್. ಯಾಕಂದ್ರೆ ಅವರ ಹತ್ರ ಹಣ, ಮೊಬೈಲ್ ಉಂಗುರ ಕಿತ್ಕೊಂಡ್ರೆ ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೆಂಟ್ ಕೊಡಲ್ಲ. ಅಕಸ್ಮಾತ್ ಕಂಪ್ಲೆಂಟ್ ಕೊಟ್ರೆ ಪ್ರೀತಿ ಮಾಡ್ತಾ ಇರೋ ವಿಚಾರ, ಸುತ್ತಾಡೋ ವಿಚಾರ  ಮನೆಯವರಿಗೆ ಗೊತ್ತಾಗುತ್ತೆ ಅಂತ ಭಯ ಬೀಳ್ತಾರೆ. ಹೀಗಾಗಿ ಎರಡು ಸಾವಿರ ಮೂರು ಸಾವಿದಷ್ಟು ಮಾತ್ರ ಕಿತ್ಕೊಂಡು ದೂರು ಕೊಡೋದಕ್ಕೆ ಹೋಗಲ್ಲ ಅನ್ನೋ ಲೆಕ್ಕಾಚಾರದ ಮೇಲೆ ಲವರ್ಸ್ ಗಳನ್ನೇ ಟಾರ್ಗೆಟ್ ಮಾಡ್ತಿದ್ರಂತೆ. ಈ ಹಿಂದೆಯೂ ಇದೇ ರೀತಿ ರಾಬರಿ ಮಾಡಿದ್ದಾರೆ. ಆದರೀಗ ಪುಡಿಗಾಸಿಗಾಗಿ ಕೊಲೆಯನ್ನೇ ಮಾಡಿ ಅಟ್ಟಹಾಸ ಮೆರೆದುಬಿಟ್ಟಿದ್ರು ಈ ಕಿರಾತಕರು.

ಪ್ರಸಾದ್ ಹಾಗೂ ಪ್ರಿಯಾಂಕ ಎಂದೂ ಕೂಡ ಊಹಿಸದ ಘಟನೆಯೊಂದು ನಡೆದೋ ಹೋಗಿದೆ. ಆ ಘೋರ ಘಟನೆಯಲ್ಲಿ ಪಾಪ ಈ ಹುಡುಗ ಕೊಲೆಯಾಗೇ ಹೋಗಿದ್ದ. ಪಾಪದ ಈ ಹುಡುಗಿ ಆ ಘೋರವನ್ನ ಕಣ್ಣಾರೆ ಕಂಡ ನತದೃಷ್ಟಳು. ಕೊಲೆಯನ್ನ ಕಣ್ಣಾರೆ ಕಂಡಿದ್ದಲ್ಲದೇ ಆ ಕೊಲೆಯ ಆರೋಪವನ್ನೂ ಎದುರಿಸಿಬಿಟ್ಟಿದ್ದಳು. ಆದರೆ.. ಸತ್ಯ ಬೆಳಕಿಗೆ ಬಂದು ನಿಟ್ಟುಸಿರು ಬಿಟ್ಟಿದ್ದಾಳೆ. ಆದ್ರೆ.. ಪ್ರೀತಿಸ್ತಿದ್ದ ಹುಡುಗ ಮಾತ್ರ ಜೊತೆಯಲ್ಲಿಲ್ಲ.. ಇನ್ನೇನಿದ್ರೂ ಅವನ ನೆನಪೊಂದೇ..

LEAVE A REPLY

Please enter your comment!
Please enter your name here