Home Crime ಬರ್ಮುಡಾ ಧರಿಸಿ ದಂಪತಿ ದೇಗುಲ ಪ್ರವೇಶಕ್ಕೆ ಯತ್ನ..! ಗೋಕರ್ಣ ದೇಗುಲ ಸಿಬ್ಬಂದಿ, ದಂಪತಿ ನಡುವೆ ವಾಕ್ಸಮರ..!

ಬರ್ಮುಡಾ ಧರಿಸಿ ದಂಪತಿ ದೇಗುಲ ಪ್ರವೇಶಕ್ಕೆ ಯತ್ನ..! ಗೋಕರ್ಣ ದೇಗುಲ ಸಿಬ್ಬಂದಿ, ದಂಪತಿ ನಡುವೆ ವಾಕ್ಸಮರ..!

699
0
SHARE

ಅದು ಧಾರ್ಮಿಕವಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಗೋಕರ್ಣ ಮಹಾಬಲೇಶ್ವರ ಕ್ಷೇತ್ರ. ಈ ಕ್ಷೇತ್ರಕ್ಕೆ ಪ್ರತಿನಿತ್ಯ ರಾಜ್ಯ ಹೊರರಾಜ್ಯಗಳಿಂದಲೂ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ. ಅಲ್ಲದೇ ಗೋಕರ್ಣಕ್ಕೆ ಆಗಮಿಸುವ ಭಕ್ತರಿಂದ ಧಾರ್ಮಿಕ ಆಚರಣೆಗಳಿಗೆ ತೊಂದರೆಯಾಗದಂತೆ ದೇವಸ್ಥಾನದಲ್ಲಿ ವಸ್ತ್ರಸಂಹಿತೆಯನ್ನ ಸಹ ಜಾರಿ ಮಾಡಲಾಗಿದೆ. ಆದ್ರೆ ಪ್ರವಾಸಿಗರೋರ್ವರು ನಿಯಮಗಳನ್ನ ಉಲ್ಲಂಘಿಸಿ ದೇವಸ್ಥಾನ ಪ್ರವೇಶಿಸಲು ಮುಂದಾಗಿ ಭಕ್ತರಿಂದ ಟೀಕೆಗೆ ಗುರಿಯಾಗಿರುವ ಘಟನೆ ನಡೆದಿದ್ದು ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…

ಗೋಕರ್ಣ ದೇವಸ್ಥಾನದ ಆಚರಣೆಗಳಿಗೆ ತೊಂದರೆಯಾದದಿರಲು ವಸ್ತ್ರ ಸಂಹಿತೆಯನ್ನ ಜಾರಿ ಮಾಡಲಾಗಿದೆ. ಇತ್ತೀಚೆಗೆ ದೇವಸ್ಥಾನದ ಆಡಳಿತವನ್ನ ವಹಿಸಿಕೊಂಡಿದ್ದ ಸರ್ಕಾರದಿಂದ ನಿಯೋಜಿತ ಆಡಳಿತಾಧಿಕಾರಿ ಹಾಲಪ್ಪ ದೇವಸ್ಥಾನದಲ್ಲಿ ಪುರುಷರು ಪಂಚೆ ಹಾಗೂ ಮಹಿಳೆಯರು ಸೀರೆಯನ್ನ ತೊಟ್ಟು ಬರಬೇಕು ಎಂಬ ನಿಯಮವನ್ನು ರೂಪಿಸಿದ್ದರು. ಆದ್ರೆ ನಿನ್ನೆ ಸಂಜೆ ದೇವಸ್ಥಾನಕ್ಕೆ ಭೇಟಿ ನೀಡಿದ ಮಹಾರಾಷ್ಟ್ರ ಮೂಲದ ದಂಪತಿ ಬರ್ಮುಡಾ ಧರಿಸಿ ದೇಗುಲ ಪ್ರವೇಶಕ್ಕೆ ಮುಂದಾಗಿದ್ದರು.

ಈ ವೇಳೆ ಸೆಕ್ಯುರಿಟಿ ಗಾರ್ಡ್ ಅವರನ್ನ ತಡೆದು ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಯಲ್ಲಿದ್ದು, ಬರ್ಮುಡಾ ಧರಿಸಿ ಬರುವಂತಿಲ್ಲ ತಿಳಿ ಹೇಳಿದ. ಇಷ್ಟಕ್ಕೇ ದಂಪತಿ ದೇವಸ್ಥಾನ ಸಿಬ್ಬಂದಿ ವಿರುದ್ಧ ಕಿರುಚಾಟ ನಡೆಸಿ, ಸೆಕ್ಯುರಿಟಿ ಗಾರ್ಡ್‌ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು.ಈ ವೇಳೆ ಸ್ಥಳದಲ್ಲಿದ್ದ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು, ಪ್ರವಾಸಿಗರಿಗೆ ದೇವಸ್ಥಾನದ ನಿಯಮಗಳನ್ನು ತಿಳಿ ಹೇಳಲು ಪ್ರಯತ್ನಪಟ್ಟರು.

ಆದ್ರೆ ಈ ದಂಪತಿ ದೇವಸ್ಥಾನದ ಸಿಬ್ಬಂದಿ ಮಾತಿಗೆ ಬೆಲೆ ಕೊಡದೇ ದೇವರ ದರ್ಶನಕ್ಕೆ ಬಿಡಬೇಕು ಎಂದು ಪಟ್ಟು ಹಿಡಿದು, ಸಿಬ್ಬಂದಿ ಮೇಲೆ ಕೂಗಾಟ ನಡೆಸಿದ್ದರು. ಈ ವೇಳೆ ಸಿಬ್ಬಂದಿ ಹಾಗೂ ದಂಪತಿ ನಡುವೆ ಮಾತಿನ ಚಕಮಕಿ ನಡೆಯಿತು.ಸಿಬ್ಬಂದಿ, ದಂಪತಿ ನಡುವಿನ ಕಿತ್ತಾಟವನ್ನು ನಿಯಂತ್ರಿಸುವಲ್ಲಿ ಪೊಲೀಸು ಹರಸಾಹಸ ಪಟ್ಟರು. ಕೆಲ ಸಮಯದ ನಂತ್ರ ಸಿಬ್ಬಂದಿಗೆ ದಂಪತಿ ಕ್ಷಮೆ ಕೇಳಿದ ನಂತ್ರ ದಂಪತಿಯನ್ನು ವಾಸಪ್ ಕಳುಹಿಸಿಕೊಟ್ಟರು

ಇನ್ನು ದೇವಸ್ಥಾನದಲ್ಲಿ ನಡೆದ ಘಟನೆಗೆ ಪ್ರವಾಸಿಗರ ವರ್ತನೆಗೆ ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಒಟ್ಟಾರೇ ದೇವರ ದರ್ಶನಕ್ಕೆಂದು ಆಗಮಿಸಿದ್ದ ಭಕ್ತರು, ದೇವಸ್ಥಾನ ವಸ್ತ್ರಸಂಹಿತೆಯನ್ನ ವಿರೋಧಿಸಿರುವುದು ನಿಜಕ್ಕೂ ಖಂಡನೀಯ. ಇನ್ನು ಮುಂದಾದ್ರೂ ದೇವರ ದರ್ಶನಕ್ಕೆ ಆಗಮಿಸುವ ಭಕ್ತರು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕಾಗಿದೆ..

LEAVE A REPLY

Please enter your comment!
Please enter your name here