Home Crime ಬಳ್ಳಾರಿಗರು ಭತ್ತ ಬೆಳೆಯದಂತೆ ಆಂಧ್ರ ಪೊಲೀಸರ ದರ್ಪ..! ಭತ್ತ ಬೆಳೆದ್ರೆ ಕ್ರಿಮಿನಲ್ ಕೇಸ್ ಎಂದು ಡಂಗೂರ..!

ಬಳ್ಳಾರಿಗರು ಭತ್ತ ಬೆಳೆಯದಂತೆ ಆಂಧ್ರ ಪೊಲೀಸರ ದರ್ಪ..! ಭತ್ತ ಬೆಳೆದ್ರೆ ಕ್ರಿಮಿನಲ್ ಕೇಸ್ ಎಂದು ಡಂಗೂರ..!

639
0
SHARE

ಕಳೆದ ಮೂರು ವರುಷಗಳ ಬರಗಾಲದಿಂದ ಬಸವಳಿದಿರುವ ಬಳ್ಳಾರಿ ರೈತರಿಗೆ ಇದೀಗ ಮತ್ತೊಂದು ಬರೆ ಎಳೆಯಲಾಗಿದೆ. ತುಂಗಭದ್ರ ಜಲಾಶಯದ ನೀರನ್ನೇ ನೆಚ್ಚಿಕೊಂಡು ಭತ್ತ ಬೆಳೆಯುತ್ತಿದ್ದ ರೈತರಿಗೆ ಇನ್ನಷ್ಟು ಸಂಕಷ್ಟ ಶುರುವಾಗಿದೆ. ನಮ್ಮ ರಾಜ್ಯದ ರೈತರಿಗೆ ನೆರೆಯ ಆಂಧ್ರ ಪೊಲೀಸರು ಬಂದು ಎಚ್ಚರಿಕೆ ನೀಡುತ್ತಿದ್ದಾರೆ. ಸಾಲದಕ್ಕೆ ಭತ್ತ ಬೆಳೆಯಬೇಡಿ ಎಂದು ಡಂಗೂರು ಹೊಡೆಸುತ್ತಿದ್ದಾರೆ.

ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ತುಂಗಭದ್ರ ಜಲಾಶಯವನ್ನು ನಂಬಿದ ಅಚ್ಚುಕಟ್ಟು ರೈತರ ಮೇಲೆ ನೆರೆಯ ಆಂಧ್ರ ಪೊಲೀಸರು ದರ್ಪ ಮೆರೆಯುತ್ತಿದ್ದಾರೆ. ನಮ್ಮ ರಾಜ್ಯದ ರೈತರಿಗೆ ನಮ್ಮ ಪೊಲೀಸರು ರಕ್ಷಣೆ ನೀಡೋದು ನೋಡಿದಿವಿ. ಆದರೆ ನಮ್ಮ ರೈತರಿಗೆ ನೆರೆಯ ಆಂಧ್ರ ಪ್ರದೇಶದ ಸರ್ಕಾರದ ಪೊಲೀಸರು ಬಳ್ಳಾರಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಓಡಾಡುತ್ತಿದ್ದಾರೆ.

ಬಳ್ಳಾರಿ, ಕಂಪ್ಲಿ ಹಾಗೂ ಸಿರುಗುಪ್ಪ ತಾಲೂಕಿನ ಅಚ್ಚುಕಟ್ಟು ಭಾಗದ ರೈತರಿಗೆ ಭತ್ತ ಬೆಳೆಯಬೇಡಿ ಎಂದು ಡಂಗೂರು ಸಾರಿಸಿದ್ದಾರೆ.ತುಂಗಭದ್ರ ಜಲಾಶಯದ ನೀರನ್ನು ಕರ್ನಾಟಕ, ನೆರೆಯ ತೆಲುಗು ರಾಜ್ಯಗಳಾದ ಆಂಧ್ರ ಹಾಗೂ ತೆಲಂಗಾಣ ಹಂಚಿಕೊಳ್ಳುತ್ತವೆ. ಶೇ. 65 ಭಾಗ ನಮ್ಮ ರಾಜ್ಯದವರು ಬಳಸಿದರೆ, ಶೇ.35ರಷ್ಟು ನೀರನ್ನು ತೆಲುಗು ರಾಜ್ಯದ ರೈತರು ಬಳಸುತ್ತಾರೆ. ಕಳೆದ ಮೂರು ವರುಷಗಳಿಂದ ತುಂಗಭದ್ರ ಜಲಾಶಯ ತುಂಬಿದ್ದಿಲ್ಲ.

ಆದರೆ ಈ ವರುಷ ಮಲೆನಾಡಿನಲ್ಲಿ ಉತ್ತಮ ಮಳೆ ಕಾರಣ ಜಲಾಶಯ ಭರ್ತಿಯಾಗಿ ಹೆಚ್ಚುವರಿಯಾಗಿ ನೂರಕ್ಕೂ ಹೆಚ್ಚು ಟಿಎಂಸಿ ನೆರೆಯ ಆಂಧ್ರಕ್ಕೆ ನದಿ ಹಾಗೂ ಕಾಲುವೆ ಮೂಲಕ ಹರಿಬಿಡಲಾಗಿದೆ. ಆದ್ರೆ ಈಗ ಭತ್ತ ಬೆಳೆಯಬೇಡಿ ಎಂದು ಡಂಗೂರ ಹೊಡೆಸಿ ಎಚ್ಚರಿಕೆ ನೀಡುತ್ತಿದ್ದಾರೆ. ಇದು ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಎಲ್ ಎಲ್ ಸಿ ಕಾಲುವೆ ಕಂಪ್ಲಿ, ಸಿರುಗುಪ್ಪ ಹಾಗೂ ಬಳ್ಳಾರಿ ತಾಲೂಕಿನಿಂದ ಹಾದುಹೋಗಿ ನೆರೆಯ ಆಂಧ್ರಕ್ಕೆ ತಲುಪುತ್ತದೆ. ರಾಜ್ಯದಲ್ಲಿ ರೈತರು ಎರಡನೇ ಭತ್ತ ಬೆಳೆಯಲು ಮುಂದಾದರೆ ಆಂಧ್ರ ರೈತರಿಗೆ ನೀರು ತಲುಪುವುದಿಲ್ಲ, ನಮಗೆ ಕಷ್ಟವಾಗುತ್ತದೆ ಎನ್ನುವುದು ಆಂಧ್ರ ರೈತರ ಅಭಿಮತ.

 

LEAVE A REPLY

Please enter your comment!
Please enter your name here