Home District ಬಳ್ಳಾರಿಯ `ಲೋಕ’ ದಂಗಲ್ ನಲ್ಲಿ ಯಾರ್ ಆಗ್ತಾರೆ ಬಾಸ್.!? ಗಣಿನಾಡು ಬಳ್ಳಾರಿ ಬೈ ಎಲೆಕ್ಷನ್ ಗ್ರೌಂಡ್...

ಬಳ್ಳಾರಿಯ `ಲೋಕ’ ದಂಗಲ್ ನಲ್ಲಿ ಯಾರ್ ಆಗ್ತಾರೆ ಬಾಸ್.!? ಗಣಿನಾಡು ಬಳ್ಳಾರಿ ಬೈ ಎಲೆಕ್ಷನ್ ಗ್ರೌಂಡ್ ರಿಪೋರ್ಟ್.!

938
0
SHARE

ಬಳ್ಳಾರಿ ಬ್ಯಾಟಲ್ ನಲ್ಲಿ ಜಾತಿ ಮತಗಳ ಲೆಕ್ಕಾಚಾರ ಹೆಚ್ಚು ಸದ್ದು ಮಾಡುತ್ತಿದೆ. ಯಾವ ಕ್ಷೇತ್ರದಲ್ಲಿ ಯಾವ ಸಮುದಾಯದ ಮತದಾರರು ಇದ್ದಾರೆ ಅನ್ನೋದ್ರ ಮೇಲೆ ಗೆಲುವಿನ ಸೂತ್ರ ನಿಂತಿದೆ.  ಬಳ್ಳಾರಿಯ ಜಾತಿ ಲೆಕ್ಕಾಚಾರ.!:ಒಟ್ಟು ಮತದಾರರ ಸಂಖ್ಯೆ   17,08266.ಮಹಿಳಾ ಮತದಾರರು -8,54, 561.ಪುರುಷ ಮತದಾರರು -8, 53, 490.ಎಸ್. ಟಿ . (ನಾಯಕ ) -3.5 ಲಕ್ಷ .ಎಸ್ ಸಿ- 2 ಲಕ್ಷ.ಲಿಂಗಾಯತ- 2 ಲಕ್ಷ.ಮುಸ್ಲಿಂಮರು- 2 ಲಕ್ಷ..ಬ್ರಾಹ್ಮಣರು- 2 ಲಕ್ಷ

ಒಂದು ಕಡೆ ಬಿಜೆಪಿ, ಇನ್ನೊಂದು ಕಡೆ ಕಾಂಗ್ರೆಸ್ ಆರೋಪ ಪ್ರತ್ಯಾರೋಪ ಮಾಡ್ತಿದೆ. ಜಿಲ್ಲೆಯ ಮತದಾರ ಪ್ರಭು ಮಾತ್ರ ಮೂಕ ಪ್ರೇಕ್ಷಕನಾಗಿ ಎಲ್ಲವನ್ನು ಗಮನಿಸಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಮತದಾರರ ಸಂಖ್ಯೆ. 17,08266 ಇದೆ. ಅದರಲ್ಲಿ  8,54, 561 ಮಹಿಳಾ ಮತದಾರರು ಇದ್ರೆ. 8, 53, 490 ಪುರುಷ ಮತದಾರರಿದ್ದಾರೆ. ಜಾತಿವಾರು ಲೆಕ್ಕಾಚಾರ ನೋಡುವುದಾರೆ, 3.5 ಲಕ್ಷ ,  ನಾಯಕ  ಮತದಾರರು ಇದ್ದಾರೆ.  ಲಂಬಾಣಿ ಜನಾಂಗ ಸೇರಿದಂತೆ 2 ಲಕ್ಷದವರೆಗೂ ಎಸ್ ಸಿ ಮತದಾರಿದ್ದಾರೆ.

2.5 ಲಕ್ಷದವರೆಗೂ  ಲಿಂಗಾಯತ ಮತದಾರರಿದ್ರೆ.  ಉಪ್ಪಾರ, ಬಲಿಜ, ಗಂಗಾಮತಸ್ಥರು ಯಾದವ ಜನಾಂಗ ಸೇರಿದಂತೆ 2 ಲಕ್ಷದವರೆಗೆ ಇದ್ದಾರೆ. 2 ಲಕ್ಷದವರೆಗೂ ಮುಸ್ಲಿಂ ಮತದಾರರು ಇದ್ದಾರೆ.  ಬ್ರಾಹ್ಮಣ, ಶೆಟ್ರು,  ಕ್ಷತ್ರಿಯ, ಇತರೆ ಸೇರಿ 2 ಲಕ್ಷದವರೆಗೂ ಮೇಲ್ವರ್ಗದವರು ಇದ್ದಾರೆ. 1.5 ಲಕ್ಷದವರೆಗೆ ಕುರುಬ ಸಮುದಾಯದ ಮತದಾರಿದ್ರೆ. ಇತರೆ ಸಣ್ಣಪುಟ್ಟ ಜಾತಿ ಸೇರಿ ಒಂದಲಕ್ಷ ಜನ ಇದ್ದಾರೆ.ಸೋ ಒಟ್ಟಾರೆ ಮತದಾರರ ಪೈಕೆ ನಾಯಕ ಜನಾಂಗವೇ ಹೆಚ್ಚು ಮತದಾರರನ್ನ ಹೊಂದಿದೆ. ಈ ಎಲೆಕ್ಷನ್ ಯಾವ ಸಮುದಾಯ ಯಾವ ಪಕ್ಷಕ್ಕೆ ಮತ ಹಾಕುತ್ತೆ ಅನ್ನೋದ್ರ ಮೇಲೆ ಜಯ ನಿರ್ಧಾರವಾಗಲಿದೆ.

ಶ್ರೀ ರಾಮುಲು ಡಿಕೆ ಶಿವಕುಮಾರ್ ವಿರುದ್ಧ ಮಾತಿನ ಪ್ರಹಾರ ಮಾಡ್ತಾ ಇದ್ರು. ಆ ಮಾತಿಗೆ ಡಿಕೆಶಿ ಸಕ್ಕಾತ್ ಆಗಿಯೇ ಎದಿರೇಟು ಕೊಡ್ತಾ ಇದ್ರು. ಆದ್ರೀಗ ಶ್ರೀ ರಾಮುಲು ಮಾತಿಗೆ ಜೀವದ ಗೆಳೆಯ ರೆಡ್ಡಿ ಕೂಡ ಧ್ವನಿ ಗೂಡಿಸಿದ್ದಾರೆ, ಆ ಮೂಲಕ ಇಬ್ಬರು ಸೇರಿ ಶಿವಕುಮಾರ್ ಮೇಲೆ ಮುಗಿ ಬಿದ್ದಿದ್ದಾರೆ. ಮಾತಿಗೆ ಬಗ್ಗದ ಏಟಿಗೆ ನಡುಗದ ಕನಕ ಪುರ ಬಂಡೆ ಇಬ್ಬರ ಪ್ರವಾಹದೆದುರು ಗಟ್ಟಿಯಾಗಿ ನಿಂತಿದ್ದಾರೆ.ಎಸ್ ಕೇಳಿದ್ರಲ್ಲ ರೆಡ್ಡಿಗಾರು ಮಾತನ್ನ, ಡಿಕೆ ಶಿವಕುಮಾರ್ ಅವರಿಗೆ ನೇರವಾಗಿ ಮುಕ್ತ ಚರ್ಚೆಗೆ ಆಹ್ವಾನ ಮಾಡಿದ್ದಾರೆ. ಬನ್ನಿ ನಿಮ್ಮ ಸರ್ಕಾರದಲ್ಲಿ ಏನು ಮಾಡಿದ್ದೀರ, ನಮ್ಮ ಸರ್ಕಾರದಲ್ಲಿ ಏನು ಮಾಡಿದ್ವಿ ಅಂತಾ ಚರ್ಚೆ ಮಾಡೋಣ ಅಂತಾ ಡಿಕೆ ಶಿವಕುಮಾರ್ ಅವರನ್ನ ಕರೆಯುತ್ತಿದ್ದಾರೆ.

ಜನಾರ್ಧನ್ ರೆಡ್ಡಿ ಈ ರೀತಿ ಸವಾಲು ಹಾಕ್ತಾ ಇದ್ರೀ ಟ್ರಬಲ್ ಶೂಟರ್ ಸುಮ್ಮನೆ ಇರ್ತಾರೆಯೇ, ಮೊದಲೇ ಈ ಸಮ್ಮಿಶ್ರ ಸರ್ಕಾರವನ್ನ ಕಾಪಾಡಿದ ಆಪತ್ಭಾಂದವ, ಗಣಿದಣಿ ರೆಡ್ಡಿ ಸವಾಲಿಗೆ ಪ್ರತಿ ಸವಾಲನ್ನು ಹಾಕಿದ್ದಾರೆ.ಅಷ್ಟೆ ಅಲ್ಲ ಮುಕ್ತ ಚರ್ಚೆಗೆ ಆಹ್ವಾನ ಕೊಟ್ಟಿದ್ದೇ ನಾನು, ಆಗ ಯಾರು ಬರ್ಲಿಲ್ಲ ಅಂತಾ, ತಮ್ಮದೇ ಶೈಲಿಯಲ್ಲಿ ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ ಮಾತ್ರವಲ್ಲ ನವೆಂಬರ್ 1 ನೇ ತಾರೀಖು ಪ್ರೆಸ್ ಮೀಟ್ ಕರೆದಿದ್ದೇನೆ. ಅಂದೇ ಹೇಳ್ತಿನೀ ಅಂತಾ ಯಾವುದೋ ಮಹತ್ವ ಸೂಚನೆಯನ್ನು ಕೊಡುತ್ತಿದ್ದಾರೆ.

ಸಧ್ಯಕ್ಕಿರೋ ಪ್ರಶ್ನೆ ಅಂದ್ರೆ ನವೆಂಬರ್ 1 ನೇ ತಾರೀಖು ಡಿಕೆಶಿವಕುಮಾರ್ ಯಾವ ದಾಖಲೆ ಬಿಡುಗಡೆ ಮಾಡುತ್ತಾರೆ. ಅಂದು ಬೇರೆ ಏನಾದ್ರು ಸ್ಕೆಚ್ ಹಾಕಿಕೊಂಡಿದ್ದಾರ ಅನ್ನೋದು. ಅದಕ್ಕೆಲ್ಲ ಇನ್ನು ಕೆಲವೇ ಗಂಟೆಯಲ್ಲಿ ಉತ್ತರ ಸಿಗುತ್ತೆ.ಶ್ರೀ ರಾಮುಲು ವಿರುದ್ಧ ಸಿದ್ದರಾಮಯ್ಯ ಮಾಡಿದ್ದ ಸೆಕ್ಷನ್ ಮಾತಿಗೆ ಗಣಿಧಣಿ ರಾಂಗ್ ರಾಂಗ್ ಆಗಿದ್ದು ಮಾತ್ರ ಸುಳ್ಳಲ್ಲ. ಸಿದ್ದು ಮಾತಿಗೆ ಇಡೀ ಜನಾಂಗವನ್ನೇ ಎಳೆದು ತಂದ ರೆಡ್ಡಿಗಾರು, ಇದು ಬರೀ ಶ್ರೀರಾಮುಲುಗೆ ಮಾಡಿರೋ ಅಪಮಾನವಲ್ಲ ಇಡಿ ಸಮುದಾಯಕ್ಕೇ ಮಾಡಿದ್ದ ಅಪಮಾನ ಅಂತಾ ವ್ಯಾಖ್ಯಾನ ಮಾಡಿದ್ದಾರೆ.

ಈ ಬಳ್ಳಾರಿ ಬ್ಯಾಟಲ್ ನಲ್ಲಿ ಹಳೆಯ ವಿಚಾರಗಳನ್ನೆಲ್ಲ ಕೆದಕಲಾಗುತ್ತಿದೆ. ಈ ಹಿಂದೆ ಜನಾರ್ಧನ್ ರೆಡ್ಡಿ ಜೈಲಿಗೆ ಹೋದ ಸಂಗತಿಗಳ ಹಿಂದಿನ ಸತ್ಯವನ್ನ ಜನಾರ್ಧನ್ ರೆಡ್ಡಿ ಈಗ ಬಿಚ್ಚಿಟ್ಟಿದ್ದಾರೆ, ನನ್ನ ನಾಲ್ಕು ವರ್ಷದ ಜೀವನವನ್ನೆ ಸಿದ್ದು ಕುತಂತ್ರದಿಂದ ಹಾಳು ಮಾಡಿದ್ದು ಅಂತಾ ರೆಡ್ಡಿಗಾರು ಸಿದ್ದ ಮೇಲೆ ಫೈಯರ್ ಆಗಿದ್ದಾರೆ.ಎಸ್ ಸಧ್ಯ ಬಳ್ಳಾರಿ ಬ್ಯಾಟ್ ಕಂಪ್ಲೀಟ್ ಆಗಿ ಡಿಕೆ ಶಿವಕುಮಾರ್ .ಜನಾರ್ಧನ್ ರೆಡ್ಡಿ. ಶ್ರೀರಾಮುಲು ಯುದ್ಧವಂತೆ ಮಾರ್ಪಾಡಾಗಿದೆ. ಇಲ್ಲಿ ಗೆಲ್ಲಲೇ ಬೇಕು ಅಂತಾ ರೆಡ್ಡಿ ಗ್ಯಾಂಗ್ ಪಣ ತೊಟ್ಟಿದ್ರೆ. ಬೆಂಗಳೂರಿನಿಂದ ಬಳ್ಳಾರಿಗೆ ಹೋಗಿ ಗೆದ್ದೇ ಗೆಲ್ತೀನಿ ಅಂತಾ ಟ್ರಬಲ್ ಶೂಟರ್ ತಂತ್ರ ರೂಪಿಸುತ್ತಿದ್ದಾರೆ. ಇಬ್ಬರ ಜಗಳದಲ್ಲಿ ಯಾರು ಗೆಲ್ತಾರೆ. ಯಾರು ಯಾರಿಗೆ ಖೆಡ್ಡಾ ತೋಡುತ್ತಾರೆ. ಆ ಎಲ್ಲದಕ್ಕೂ ಉಪ ಚುನಾವಣೆಯ ಫಲಿತಾಂಶವೇ ಫೈನಲ್ ಆನ್ಸರ್, ಆ ಉತ್ತರ ಬರೋವರ್ಗು ಜೆಡ್ ವಾಚ್ ಈ ಬೈ ಲೆಕ್ಷನ್ ಬಡಿದಾಟ..

LEAVE A REPLY

Please enter your comment!
Please enter your name here