Home District ಬಳ್ಳಾರಿ ಅಖಾಡಕ್ಕೆ ಲಖನ್ ಜಾರಕಿಹೊಳಿ ಎಂಟ್ರಿ .! BJPಯಿಂದ ಕಣಕ್ಕಿಳಿಯುವುದು ಬಹುತೇಕ ಖಚಿತ.?!

ಬಳ್ಳಾರಿ ಅಖಾಡಕ್ಕೆ ಲಖನ್ ಜಾರಕಿಹೊಳಿ ಎಂಟ್ರಿ .! BJPಯಿಂದ ಕಣಕ್ಕಿಳಿಯುವುದು ಬಹುತೇಕ ಖಚಿತ.?!

1481
0
SHARE

ಬಳ್ಳಾರಿ ಲೋಕಸಭೆ ಚುನಾವಣಾ ಕಣಕ್ಕೆ ಲಖನ್ ಜಾರಕಿಹೊಳಿ ಕಣಕ್ಕಿಳಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಲಖನ್ ಜಾರಕಿಹೊಳಿ ಬಳ್ಳಾರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣ್ಣಿಸಲು ಖಚಿತವಾಗಿದೆ.

ಕೋಟಿ ಗಟ್ಟಲೆ ಖರ್ಚು ಮಾಡಿ ಈ ಬಾರಿ ಚುನಾವಣೆ ಸ್ವರ್ಧಿಸಲು ಅಸಾಧ್ಯ ಅಂತ ಶ್ರೀರಾಮುಲು ಅರಿತಿದ್ದಾರೆ. ಇದಲ್ಲದೇ ಶ್ರೀರಾಮುಲು ಪದೇ ಪದೇ ರಾಜೀನಾಮೆ ನೀಡಿ, ಸ್ಪರ್ಧಿಸುತ್ತಿರುವುದರಿಂದ ಕ್ಷೇತ್ರದಲ್ಲಿ ವರ್ಚಸ್ಸು ಕುಂದಿದೆ ಅಂತ ಹೇಳಲಾಗ್ತಿದೆ.

ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಇನ್ನು ಲಖನ್ ಜಾರಕಿಹೊಳಿ ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಿದ್ದಾರೆ. 25 ಕೋಟಿ ಪಾರ್ಟಿ ಫಂಡ್ ನೀಡಲಿದ್ದು, ಮತ್ತೆ ನೀವು 25 ಕೋಟಿ ಹಣವನ್ನು ಚರ್ಚು ಮಾಡಿ ಚುನಾವಣಯಲ್ಲಿ ಸ್ಪರ್ಧಿಸಿ ಎಂದು ಹೈ ಕಮಾಂಡ್ ಅಭಯ ನೀಡಿದೆಯಂತೆ.

ಈ ಹಿನ್ನೆಲೆಯಲ್ಲಿ ಬಳ್ಳಾರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಎಂದು ಪೋಸ್ಟರ್ ಹರಿಬಿಟ್ಟಿದ್ದಾರೆ. ಇಷ್ಟು ದಿನ ಡಿಕೆಶಿ ವರ್ಸಸ್ ಶ್ರೀರಾಮುಲು ನಡೆಯುತ್ತಿದ್ದ ಫೈಟ್ ಈಗ ಲಖನ್ ಜಾರಕಿಹೊಳಿ ವರ್ಸಸ್ ಡಿಕೆಶಿ ನಡುವೆ ನಡೆಯಲಿದೆ.

LEAVE A REPLY

Please enter your comment!
Please enter your name here