Home Cinema “ಬಾಕ್ಸಾ ಆಫೀಸ್ ಸುಲ್ತಾನ” ದರ್ಶನ್ ಕುಂತ್ರೂ ಸುದ್ದಿ.. ನಿಂತ್ರೂ ಸುದ್ದಿ | ತಮಿಳು ಚಿತ್ರರಂಗದಲ್ಲೂ ಮಿಂಚು...

“ಬಾಕ್ಸಾ ಆಫೀಸ್ ಸುಲ್ತಾನ” ದರ್ಶನ್ ಕುಂತ್ರೂ ಸುದ್ದಿ.. ನಿಂತ್ರೂ ಸುದ್ದಿ | ತಮಿಳು ಚಿತ್ರರಂಗದಲ್ಲೂ ಮಿಂಚು ಹರಿಸಿದ್ರು ಸಾರಥಿ..!?

2679
0
SHARE

ತಮಿಳು ಚಿತ್ರರಂಗದಲ್ಲೂ ಮಿಂಚು ಹರಿಸಿದ್ರು ಸಾರಥಿ..!:ಅಭಿಮಾನಿಗಳ ಪ್ರೀತಿಯ ಸಾರಥಿ. ಕನ್ನಡ ಚಿತ್ರರಂಗದ ಬಾಕ್ಸಾ ಆಫೀಸ್ ಸುಲ್ತಾನ. ಕುಂತ್ರೂ ಸುದ್ದಿ.. ನಿಂತ್ರೂ ಸುದ್ದಿ.. ಹೀಗೆ ಸದಾ ಸುದ್ದಿ ಮನೆಯಲ್ಲಿ ಬೇಜಾನ್ ಸದ್ದು ಮಾಡ್ತೀರುವ ದರ್ಶನ್ ಸಿಕ್ಕಾಪಟ್ಟೆ ಫ್ಯಾನ್ಸ್ ಫಾಲೋವರ‍್ಸ್‌ಗಳನ್ನು ಹೊಂದಿದ್ದಾರೆ. ದರ್ಶನ್ ಸ್ಯಾಂಡಲ್‌ವುಡ್‌ನಲ್ಲಿ ನಾಯಕನಾಗುವ ಮೊದಲು ಹತ್ತಾರು ಸಿನಿಮಾಗಳಲ್ಲಿ ಮಿಂಚುಹರಿಸಿದ್ರು. ಕಿರಿತೆರೆಯಲ್ಲಿ ತಮ್ಮ ಪ್ರತಿಭೆಯನ್ನ ಪ್ರಚುರ ಪಡಿಸಿದ್ರು.

ಸಿನಿಮಾ ಕ್ಷೇತ್ರದಲ್ಲಿ ಲೈಟ್ ಬಾಯ್ ಆಗಿ, ಗೌರಿ ಶಂಕರ್ ಅವರ ಬಳಿ ಕ್ಯಾಮರಾ ಅಸಿಸ್ಟೆಂಟ್ ಆಗಿ ದರ್ಶನ್ ಶ್ರಮಿಸಿದ್ದಾರೆ. ಈಗೆ ಕಷ್ಟದಿಂದ್ಲೇ ಸ್ಟಾರ್ ಬೆಳೆದಿರುವ ಭೂಪತಿ ರಂರ ದಾಸನ ಹಳೆಯ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.ಹೌದು, ದಶಕದಿಂದ ಕನ್ನಡಿಗರನ್ನು ರಂಜಿಸ್ತಿರೋ ನಟ. ಮಾಸ್ ಪಾತ್ರಗಳಿಂದಲೇ ಕೋಟ್ಯಾಂತರ ಅಭಿಮಾನಿಗಳ ಹೃದಯ ಸಿಮ್ಮಾಸನದಲ್ಲಿ ರಾಜಾಜಿಸುತ್ತಿರುವ ದಚ್ಚು. ಹೀರೋ ಆಗೋಕು ಮುಂಚೆಯೇ ಸಾಕಷ್ಟು ಸ್ಟ್ರಗಲ್ ಗಳನ್ನು ಪಟ್ಟಿದ್ದಾರೆ.

ಮೆಜೆಸ್ಟಿಕ್ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮುಂಚೆ ಕೆಲವು ತಮಿಳು ಚಿತ್ರಗಳಲ್ಲಿ ನಟಿಸಿದ್ದು. ಆ ಪೋಟೋ ಈಗ ಡಿ- ಬಾಸ್ ಫ್ಯಾನ್ಸ್‌ಗಳ ಮೆಚ್ಚುಗೆಗೆ ಪಾತ್ರವಾಗ್ತಿದೆ. ದರ್ಶನ್ ನಾಯಕನಾಗಿ ಆರಡಿ ಕಟೌಟ್ ಬೀಳೋಕು ಮುಂಚೆ, ಸಣ್ಣ ಪಾತ್ರಗಳಿಗಾಗಿ ಅಲೆದಾಡಿದ್ರು. ಮೆಜೆಸ್ಟಿಕ್ ನಾಯಕನಾಗಿ ನಟಿಸಿ ಚೊಚ್ಚಲ ಸಿನಿಮಾವಾದ್ರು, ಐದಾರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಅದೆಷ್ಟೊ ಮಂದಿಗೆ ದರ್ಶನ್ ತಮಿಳು ಚಿತ್ರದಲ್ಲಿ ನಟಿಸಿದ ವಿಚಾರವೇ ಗೊತ್ತಿಲ್ಲ. ವಲ್ಲರಸು ಚಿತ್ರದಲ್ಲಿ ನಾಲ್ವರು ಹುಡುಗರ ಪೈಕಿ ದ ರ್ಶನ್ ಮುಗ್ದ ಪಾತ್ರದಲ್ಲಿ ನಟಿಸಿದ್ದಾರೆ.

ವಲ್ಲರಸು, ವಿಜಯ್‌ಕಾಂತ್ ನಟನೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ. ವಿಜಯ್ ಕಾಂತ್ ಮತ್ತು ತೂಗುದೀಪ ಶ್ರೀನಿವಾಸ್ ಆಪ್ತ ಸ್ನೇಹಿತರು. ಒಮ್ಮೆ ನಟ ವಿಜಯ್‌ಕಾಂತ್, ದರ್ಶನ್‌ರನ್ನು ಭೇಟಿಯಾಗಿದ್ದರು. ಮೊದಲ ಭೇಟಿಯಲ್ಲೇ ದರ್ಶನ್ ಟ್ಯಾಲೆಂಟ್ ವಿಜಯ್‌ಗೆ ತಿಳಿದಿತ್ತು. ಆಗ ದರ್ಶನ್ ಕೂಡ ಅವಕಾಶದ ಹುಡುಕಾಟದಲ್ಲಿದ್ದರು. ಹೀಗಾಗಿ, ವಿಜಯ್ ಕಾಂತ್ ತಮ್ಮ ನಟನೆಯ ವಲ್ಲರಸು ಸಿನಿಮಾದಲ್ಲಿ ನಟಿಸೊ ಅವಕಾಶವನ್ನು ಮಾಡಿ ಕೊಟ್ಟಿದ್ದರು ಎನ್ನಲಾಗ್ತಿದೆ.ವಲ್ಲರಸು ಚಿತ್ರದಲ್ಲಿ ದಚ್ಚು ಪಾಂಡಿ ಅನ್ನೊ ಪಾತ್ರದಲ್ಲಿ ನಟಿಸಿದ್ರು.

ಇಡೀ ಸಿನಿಮಾದಲ್ಲಿ ವಿಜಯ್ ಕಾಂತ್ ಸ್ನೇಹಿತರಾಗಿ ದಚ್ಚಿ ಕಮಾಲ್ ಮಾಡಿದ್ರು. ಪೋಲೀಸ್ ಆಗುವ ಕನಸೊತ್ತಿರೋ ಪಾಂಡಿ ಅನ್ನೊ ಯುವಕನ ಪಾತ್ರದಲ್ಲಿ ದರ್ಶನ್ ರನ್ನು ನೋಡಿದ್ದ ಟಾಲಿವುಡ್ ಮಂದಿ ಭೇಷ್ ಗಿರಿ ನೀಡಿದ್ರು. ಆರಡಿ ಹೈಟ್, ಸ್ಫುರದ್ರೂಪಿಯಾಗಿ ಕಂಗೊಳಿಸುತ್ತಿದ್ದ ದ ರ್ಶನ್ ಫೇಸ್ ಕಂಡು ಕ್ಲೀನ್‌ಬೋಡ್ ಆಗಿದ್ರು. ಅಲ್ಲಿಂದ ದರ್ಶನ್ ಕೂಡ ತಮಿಳಿಗರ ಫೇವರಿಟ್ ನಟನಾಗಿ ಗುರುತಿಸಿಕೊಂಡರು. ಆನಂತರದಲ್ಲಿ ತಮಿಳಿನಲ್ಲಿ ಹಲವು ಸಿನಿಮಾಗಳು ಅವರಿಗೆ ಅರಸಿ ಬಂದವು.

ಆದ್ರೆ ಕನ್ನಡದ ಮೇಲಿನ ಅಭಿಮಾನದಿಂದ ದರ್ಶನ್ ಕನ್ನಡ ಚಿತ್ರಗಳ ಕಡೆಗೆ ಗಮನ ಹರಿಸಿದ್ರು. ಈಗ ಸ್ಯಾಂಡಲ್‌ವುಡ್‌ನ ಬಾಕ್ಸಾಫೀಸ್ ಸುಲ್ತಾನನಾಗಿ ರಾರಾಜಿಸ್ತಿದ್ದಾರೆ.ಕನ್ನಡ ಚಿತ್ರರಂಗದಲ್ಲಿ ಪುರುಸೋತ್ತಿಲ್ಲದೆ ದಚ್ಚು ದುಡಿಯುತ್ತಿದ್ದಾರೆ. ಈಗಾಗಲ್ಲೇ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಇನ್ನು ಯಜಮಾನ ಚಿತ್ರದ ಚಿತ್ರೀಕರಣ ಮುಗಿಸಿದ್ದು, ಚಿತ್ರದ ಪೋಸ್ಟ್ ಪೋಡಕ್ಷನ್ ಕೆಲ್ಸನು ಭರದಿಂದ ನಡೆಯುತ್ತಿದೆ.

ಹೀಗಿದ್ದೂ ಅಭಿಮಾನಿಗಳ ತಾರಕ್ ಟಾಲಿವುಡ್‌ನಲ್ಲಿ ನಟಿಸಿದ್ದ ಪೋಟೊ ಸಖತ್ ಸೌಂಡ್ ಮಾಡ್ತಿದೆ. ಅದೇ ಅಲ್ವ ಓನ್ ಅಂಡ್ ಓನ್ಲಿ ದರ್ಶನ್ ಕ್ರೇಜ್ ಅಂದ್ರೆ. ಅದೇನೇ, ಇದ್ರೂ ಹೆಚ್ಚು ಪ್ರಜಾರವನ್ನು ಬಯಸದೆ ಸ್ಯಾಂಡಲ್‌ವುಡ್ ಬಾಸ್ ಆಗಿ ಮಿಂಚುಹರಿಸ್ತಿರುವ ದಾಸ, ಕನ್ನಡ ಚಿತ್ರರಂಗದ ಜೊತೆಗೆ ಟಾಲಿವುಡ್‌ನಲ್ಲಿ ಮುಂದಿನ ದಿನಗಳಲ್ಲಿ ನಟಿಸುವ ಮನಸ್ಸು ಮಾಡ್ತಾರಾ ಅನ್ನೋದೆ ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

LEAVE A REPLY

Please enter your comment!
Please enter your name here