Home KARNATAKA ಬಾಲಿವುಡ್ ನಟಿಯ ಜೊತೆ ರವಿಶಾಸ್ತ್ರಿ ನಡೆಸುತ್ತಿದ್ದಾರಾ ಡೇಟಿಂಗ್..?!! ಇದು ಕ್ರಿಕೆಟ್ ದುನಿಯಾದ ಮೋಸ್ಟ್ ಸೆನ್ಸೆಶನಲ್ ನ್ಯೂಸ್..?!

ಬಾಲಿವುಡ್ ನಟಿಯ ಜೊತೆ ರವಿಶಾಸ್ತ್ರಿ ನಡೆಸುತ್ತಿದ್ದಾರಾ ಡೇಟಿಂಗ್..?!! ಇದು ಕ್ರಿಕೆಟ್ ದುನಿಯಾದ ಮೋಸ್ಟ್ ಸೆನ್ಸೆಶನಲ್ ನ್ಯೂಸ್..?!

6860
0
SHARE

ರವಿಶಾಸ್ತ್ರಿ ಟೀಂ ಇಂಡಿಯಾದ ಹೆಡ್ ಕೋಚ್.. ಭಾರತ ಕ್ರಿಕೆಟ್ ತಂಡದ ಮಾರ್ಗದರ್ಶಕರಾಗಿರೋ ಶಾಸ್ತ್ರಿ ಇದೀಗ ಸುದ್ದಿಯಾಗಿದ್ದಾರೆ. ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯ ಕುರಿತಾಗಿ ರವಿಶಾಸ್ತ್ರಿ ಖಂಡಿತಾ ಸುದ್ದಿಯಾಗಿಲ್ಲ.. ಬೇರೆಯದೇ ವಿಚಾರಕ್ಕೆ ಶಾಸ್ತ್ರಿ ಸುದ್ದಿಯಾಗಿದ್ದಾರೆ.. ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಯ ಸುದ್ದಿ ಇದೀಗ ಎಲ್ಲೆಡೆ ಹರಿದಾಡ್ತಿದೆ.

ಟೀಂ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿಯನ್ನ ಸೋತ ಬಗ್ಗೆ ಶಾಸ್ತ್ರಿ ಟಾರ್ಗೆಟ್ ಆಗಿ ಸುದ್ದಿಯಾಗಿದ್ದಾರೆ ಅಂತಾ ನೀವು ಅಂದಕೊಂಡ್ರೆ ಅದು ಅಕ್ಷರಶಃ ಸುಳ್ಳು. ರವಿಶಾಸ್ತ್ರಿ ಬೇರೆಯದೆ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಅಲ್ಲದೆ ಈ ವಿಷಯ ಅಚ್ಚರಿಯನ್ನ ಹುಟ್ಟುಹಾಕಿದೆ.ಬಾಲಿವುಡ್ ಹಾಗೂ ಕ್ರಿಕೆಟ್ ಗೆ ಅವಿನಾಭಾವ ನಂಟಿದೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಟಿ ಅನುಷ್ಕಾ ಶರ್ಮಾ ಮದುವೆಯಾದ್ಮೇಲೆ ಮತ್ತಷ್ಟು ಜೋಡಿಗಳ ಹೆಸರು ಬಹಿರಂಗವಾಗ್ತಿದೆ. ಈಗ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೆಸರು ಬಾಲಿವುಡ್ ನಟಿಯೊಂದಿಗೆ ಥಳಕು ಹಾಕಿಕೊಂಡಿದೆ.ಸದ್ಯ ರವಿಶಾಸ್ತ್ರಿ ಟೀಂ ಇಂಡಿಯಾದ ಕೋಚ್ ಹುದ್ದೆಯನ್ನ ನಿರ್ವಹಿಸುತ್ತಿದ್ದು ತಂಡದ ಜೊತೆ ಬ್ಯುಸಿಯಾಗಿದ್ದಾರೆ.

ಕೆಲವು ಮೂಲಗಳ ಪ್ರಕಾರ ರವಿಶಾಸ್ತ್ರಿ ತಮ್ಮ ಡೇಟಿಂಗ್ ವಿಷ್ಯವನ್ನ ಎಲ್ಲಿಯೂ ಲೀಕ್ ಆಗದಂತೆ ನೋಡಿಕೊಂಡಿದ್ದರು. ಆದ್ರೆ ಇದೀಗ ರವಿಶಾಸ್ತ್ರಿಯ ಡೇಟಿಂಗ್ ಮ್ಯಾಟರ್ ಸ್ಫೋಟಗೊಂಡಿದೆ. ರವಿಶಾಸ್ತ್ರಿ ಡೇಟಿಂಗ್ ನಡೆಸ್ತಿರೋದು ಯಾರ ಜೊತೆ ಗೊತ್ತಾ..?:ಅಂದಹಾಗೆ ರವಿಶಾಸ್ತ್ರಿ ಏರ್ಲಿಫ್ಟ್ ಚಿತ್ರದ ನಟಿ ನಿಮೃತ್ ಕೌರ್ ಜೊತೆ ಡೇಟಿಂಗ್ ಮಾಡ್ತಿದ್ದಾರಂತೆ.

ಕಳೆದ ಎರಡು ವರ್ಷಗಳಿಂದ ಡೇಟಿಂಗ್ ನಲ್ಲಿದ್ದು, ಈ ವಿಚಾರವನ್ನು ರವಿಶಾಸ್ತ್ರಿ ಮುಚ್ಚಿಟ್ಟಿದ್ದಾರೆಂದು ಮೂಲಗಳು ಹೇಳಿವೆ. 2015 ರಲ್ಲಿ ಇಬ್ಬರು ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರಂತೆ. ಆಡಿ ಕಾರ್ ಶೋ ಒಂದರಲ್ಲಿ ಇವರಿಬ್ಬರು ಭೇಟಿಯಾಗಿದ್ದರಂತೆ, ಅಲ್ಲಿ ಇವರಿಬ್ಬರು ಪರಸ್ಪರ ಮಾತುಕತೆಯನ್ನ ನಡೆಸಿದ್ದರು.ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿ ರವಿಶಾಸ್ತ್ರಿಯಿದ್ರೆ, ವೆಬ್ ಸರಣಿ ಶೂಟಿಂಗ್ ನಲ್ಲಿ ನಿಮೃತಾ ಬ್ಯುಸಿಯಿದ್ದಾರೆ.

ನಿಮೃತಾ ಕೌರ್, ರವಿಶಾಸ್ತ್ರಿಗಿಂತ 20 ವರ್ಷ ಚಿಕ್ಕವರು. ನಿಮೃತಾ ಮಾರ್ಚ್ 13, 1982 ರಲ್ಲಿ ಜನಿಸಿದ್ದಾರೆ. ರವಿಶಾಸ್ತ್ರಿ ವಯಸ್ಸು 56 ವರ್ಷ. ಇವರಿಬ್ಬರು ಪರಸ್ಪರ ಡೇಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.ಗುಟ್ಟಾಗಿ ಇಟ್ಟುಕೊಂಡಿದ್ದಾರೆ ತಮ್ಮ ರಿಲೇಶನ್ ಶಿಪ್:2015 ರಲ್ಲಿಯೇ ರವಿಶಾಸ್ತ್ರಿ ಹಾಗೂ ನಿಮೃತಾ ಕೌರ್ ಪರಸ್ಪರ ಲವ್ ನಲ್ಲಿ ಬಿದ್ದಿದ್ದು ಎಲ್ಲಿಯೂ ಸುದ್ದಿಯಾಗಿರಲಿಲ್ಲ.

ಆದ್ರೆ ಖಾಸಗಿ ಪತ್ರಿಕೆಯೊಂದು ಇದೀಗ ರವಿಶಾಸ್ತ್ರಿ ಹಾಗೂ ನಿಮೃತಾ ನಡುವಿನ ಗಪ್ ಚುಪ್ ವಿಷಯವನ್ನ ಬಯಲು ಮಾಡಿದೆ. ರವಿಶಾಸ್ತ್ರಿ ಹಾಗೂ ನಿಮೃತಾ ಕೌರ್ ಮಾಧ್ಯಮಗಳಲ್ಲಿ ಈ ವಿಚಾರ ಹೆಚ್ಚು ಚರ್ಚೆಯಾಗದಂತೆ ನೋಡಿಕೊಂಡಿದ್ದಾರೆ. ಆದ್ರೆ ಮುಚ್ಚಿಟ್ಟ ಸತ್ಯ ಇದೀಗ ಬಯಲಾಗಿದೆ.
ಯಾರು ಈ ನಿಮೃತಾ ಕೌರ್ ..?ನಿಮೃತಾ ಕೌರ್ ಬಾಲಿವುಡ್ ಹಾಗೂ ಜಾಹೀರಾತು ಲೋಕದಲ್ಲಿ ಗುರ್ತಿಸಿಕೊಂಡಿರೋ ಬೆಡಗಿ.

ರಾಜಸ್ತಾನ ಮೂಲದ ಈಕೆ ಸದ್ಯ ನವದೆಹಲಿಯಲ್ಲಿ ವಾಸವಾಗಿದ್ದಾಳೆ. ಬಾಲಿವುಡ್ ಸಿನಿಮಾಗಳಲ್ಲಿ ನಟನೆಯನ್ನ ಮಾಡುತ್ತಿರೋ ನಿಮೃತಾ ಕೌರ್ ಫಿಲ್ಮಂ ಫೇರ್ ಅವಾರ್ಡ್ ಗಳನ್ನ ಪಡೆದುಕೊಂಡಿದ್ದಾಳೆ. ಲಂಚ್ ಬಾಕ್ಸ್ ಹಾಗೂ ಏರ್ ಲಿಫ್ಟ್ ಸಿನಿಮಾದಲ್ಲಿ ನಟಿಸಿ ನಿಮೃತಾ ಹೆಚ್ಚಾಗಿ ಪ್ರಚಾರಕ್ಕೆ ಬಂದಿದ್ದಾಳೆ.

ರವಿಶಾಸ್ತ್ರಿ ಹಾಗೂ ನಿಮೃತಾ ಕೌರ್ ಈ ಎಲ್ಲಾ ವಿಚಾರವನ್ನ ಎಲ್ಲಿಯೂ ಬಾಯಿಬಿಟ್ಟಿಲ್ಲ. ಇನ್ನು ಈ ವಿಚಾರ ಅಂತೆ ಕಂತೆಯ ಸುದ್ದಿಯಂತೆ ಇದ್ದರೂ ಸಹ ಇವರಿಬ್ಬರ ಲವ್ ಸಂಗತಿ ಎಲ್ಲೆಡೆ ಹರಿದಾಡ್ತಿದೆ. ಒಟ್ಟಿನಲ್ಲಿ ರವಿಶಾಸ್ತ್ರಿ ಇನ್ನೊಂದು ಮದುವೆಯಾಗಲು ಹೊರಟಿದ್ದಾರಾ ಅನ್ನೋ ಅನುಮಾನ ಎದ್ದಿದೆ.

LEAVE A REPLY

Please enter your comment!
Please enter your name here