Home Cinema ಬಾಸ್ ಯಾರು ಸಮರದ ಬೆನ್ನಲ್ಲೇ ಪ್ರೇಮ್ ರಿಂದ ಶುರು ಮತ್ತೊಂದು ಯುದ್ಧ..! ವಿವಾದಕ್ಕೆ ಕಾರಣವಾಯ್ತು ದಿ...

ಬಾಸ್ ಯಾರು ಸಮರದ ಬೆನ್ನಲ್ಲೇ ಪ್ರೇಮ್ ರಿಂದ ಶುರು ಮತ್ತೊಂದು ಯುದ್ಧ..! ವಿವಾದಕ್ಕೆ ಕಾರಣವಾಯ್ತು ದಿ ವಿಲನ್‌ಗಾಗಿ ಪ್ರೇಮ್ ಬರೆದ ಆ ಪದ.!?

1085
0
SHARE

ಕನ್ನಡ ಚಿತ್ರರಂಗದ ಬಾಸ್ ಯಾರು.. ಹೀಗೊಂದು, ಚರ್ಚೆ ವಿವಾದಕ್ಕೆ ತಿರುಗಿ, ವಿವಾದ ತಾರಕಕ್ಕೇರಿದೆ. ಎಷ್ಟರ ಮಟ್ಟಿಗೆ ಅಂದ್ರೆ ಕನ್ನಡ ಚಿತ್ರರಂಗದ ನೆಲದಲ್ಲಿ ಇದೀಗ ಬಾಸ್ ಪಟ್ಟಕ್ಕಾಗಿ ದೊಡ್ಡ ಅಭಿಮಾನಿಗಳ ಕದನವೇ ನಡೆಯುತ್ತಿದೆ. ಟಗರು ನೂರು ದಿನದ ಸಂಭ್ರಮದಲ್ಲಿ ಡಾ.ಶಿವರಾಜ್ ಕುಮಾರ್‌ಗೆ ಬಾಸ್ ಪಟ್ಟ ಕೊಟ್ಟಿದ್ದ ಸೂರಿ ಮೇಲೆ ಡಿ ಬಾಸ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದರು.

ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದರು. ಅನೇಕ ದಿನಗಳವರೆಗೆ ನಡೆದ ಬಾಸ್ ಯುದ್ದ ಇನ್ನು ತಣ್ಣಗಾಗಿಲ್ಲ. ಹೀಗಿರುವಾಗ್ಲೇ ಇದೀಗ.. ಬಾಸ್ ಕದನವನ್ನೂ ಮೀರಿಸುವ ಇನ್ನೊಂದು ಕದನ ನಡೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.ಹೌದು, ಬಾಸ್ ವಾರ್‌ನನ್ನೂ ಮೀರಿಸುವ ಸಮರ ನಡೆಯುವ ಸೂಚನೆ ಇದೀಗ, ಕನ್ನಡದ ಎಲ್ಲಾ ಕಲಾವಿದರನ್ನೂ ಇಷ್ಟಪಡುವ ಅಭಿಮಾನಿಗಳಿಗೆ ಸಿಕ್ಕಿದೆ. ಇಂತಹ ಸೂಚನೆಯನ್ನ ಕೊಟ್ಟಿರೋದು ಬೇರ‍್ಯಾರು ಅಲ್ಲ ಬದ್ಲಿಗೆ ಜೋಗಿ ಪ್ರೇಮ್.

ಜೋಗಿ ಪ್ರೇಮ್.. ಸದ್ಯ ದಿ ವಿಲನ್ ಚಿತ್ರದ ಕನವರಿಕೆಯಲ್ಲೇ ಕಾಲ ಕಳೆಯುತ್ತಿರುವ ನಿರ್ದೇಶಕ. ತನ್ನ ಕನಸಿಗೆ ಸಿನಿಮಾಗೆ ಸರಿ ರೂಪ ಕೊಡಲು ಹಗಲಿರುಳು ಅನ್ನದೇ ಪ್ರೇಮ್, ಇತ್ತೀಚಿಗಷ್ಟೇ ಶಿವಣ್ಣ ಅಭಿನಯದ ಭಾಗಗಳ ಚಿತ್ರೀಕರಣವನ್ನ ಕಂಪ್ಲೀಟ್ ಮಾಡಿದ್ದಾರೆ. ಇದು, ಅಭಿಮಾನಿಗಳು ಖುಷಿ ಪಡುವ ಸಂಗತಿನೇ ಆದರು, ಅಭಿಮಾನಿಗಳಲ್ಲೊಂದು ಸಣ್ಣಮಟ್ಟದ ಅಸಹನೆಯೂ ಮೂಡಿದೆ. ಇದಕ್ಕೆ ಕಾರಣ, ಪ್ರೇಮ್ ಶಿವಣ್ಣ ಹಾಡಿಗೆ ಬರೆದಿರುವ ಸಾಲುಗಳು.

ನಿನ್ನೆ ಮೊನ್ನೆ ಬಂದವರೆಲ್ಲಾ ನಂ ೧ ಅಂತಾರೋ ಇದು ಪ್ರೇಮ್ ದಿ ವಿಲನ್‌ಗಾಗಿ, ಶಿವಣ್ಣನಿಗಾಗಿ ಬರೆದಿರುವ ಸಾಲುಗಳು. ಇದೇ ಸಾಲು ಇದೀಗ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ವಿವಾದಕ್ಕೂ ಮುನ್ನುಡಿ ಬರೆದಿದೆ. ಯಸ್, ನಿನ್ನೆ ಮೊನ್ನೆ ಬಂದವರು ನಂ ೧ ಅಂತಾರೋ ಹೀಗಂತ ಶಿವಣ್ಣ ಹೆಗಲ ಮೇಲೆ ಪ್ರೇಮ್ ಬಂದೂಕು ಇಟ್ಟು ಹೇಳಿದ್ದು ಯಾರಿಗೆ, ಹೀಗೊಂದು ಚರ್ಚೆ ಇದೀಗ ಅಭಿಮಾನಿಗಳಲ್ಲಿ ನಡಿತಿದೆ.

ಅಭಿಮಾನಿ ವಲಯದಲ್ಲಿ ಇದು ಎಷ್ಟರ ಮಟ್ಟಿಗೆ ಚರ್ಚೆ ನಡಿತಿದೆ ಅಂದ್ರೆ, ಸಾಮಾಜಿಕ ಜಾಲತಾಣದಲ್ಲಿ ಆಗ್ಲೇ ಸಮರ ಶುರುವಾಗಿದೆ. ರಾಕಿಂಗ್ ಸ್ಟಾರ್ ಭಕ್ತರು, ಪ್ರೇಮ್ ಹೇಳಿದ್ದು ನಮ್ಮಣ್ಣಂಗೆ ಅಂತ ಅನ್ಕೊಂಡು ಆಗ್ಲೇ ಅಖಾಡಕ್ಕೆ ಧುಮುಕಿ.. ವಿವಾದ ಶುರುಮಾಡಿದ್ದಾರೆ. ಇತ್ತ. ಛಾಲೆಂಜಿಂಗ್ ಸ್ಟಾರ್ ಫ್ಯಾನ್ಸ್ ಕೂಡಾ ಪ್ರೇಮ್ ಬರೆದಿರುವ ಸಾಲುಗಳ ಬಗ್ಗೆ ಚಕಾರ ಎತ್ತಲು ಶುರುವಿಟ್ಟುಕೊಂಡಿದ್ದಾರೆ. ಯಾರ್ ಹೇಳಿದ್ರೂ ನಂ ೧ ನಮ್ಮ ಡಿ ಬಾಸ್ ಅಂತಿದ್ದಾರೆ.

ಬರೀ, ಯಶ್ & ದರ್ಶನ್ ಅಭಿಮಾನಿಗಳಷ್ಟೇ ಅಲ್ಲ, ದುನಿಯಾ ವಿಜಿ, ಸುದೀಪ, ಗಣೇಶ್, ಹೀಗೆ ಇಂದಿನ ಅನೇಕ ನಾಯಕನಟರ ಅಭಿಮಾನಿಗಳು.. ಹೇಳಿದ್ದು ನಮ್ಮ ಹೀರೋಗೇನಾ ಅನ್ನುವ ಅನುಮಾನ ವ್ಯಕ್ತಪಡಿಸುತ್ತಾನೇ, ಸೊಶಿಯಲ್ ಮೀಡಿಯಾದಲ್ಲಿ ಸಮರಕ್ಕೆ ಇಳಿದಿದ್ಧಾರೆ.

ಛಾಲೆಂಜಿಂಗ್ ಸ್ಟಾರ್ ಫ್ಯಾನ್ಸ್ ಯಾರ್ ಹೇಳಿದ್ರೂ ನಂ ೧ ನಮ್ಮ ಡಿ ಬಾಸ್ ಅಂತಿದ್ದಾರೆ.ಸದ್ಯ ನಿನ್ನೆ ಮೊನ್ನೆ ಬಂದವರು ನಂ ೧ ಅಂತಾರೋ ಸಾಲುಗಳು, ಸೊಶಿಯಲ್ ಸೈಟ್‌ನಲ್ಲಿ ವೈರಲ್ ಆಗ್ತಿವೆ. ವಿವಾದಕ್ಕೆ ಬುನಾದಿಯನ್ನೂ ಹಾಕ್ತಿವೆ. ಮುಂದಿನ ದಿನಗಳಲ್ಲಿ ಇದೇ ನಿನ್ನೆ ಮೊನ್ನೆ ಬಂದವರು ಯುದ್ದ ಇನ್ನೊಂದು ಹಂತಕ್ಕೆ ತಲಿಪಿದ್ರೆ ಅಚ್ಚರಿ ಪಡುವಂಗಿಲ್ಲ. ಯಾಕಂದ್ರೆ ಅಭಿಮಾನ ಅನ್ನೋದೇ ಹಾಗೇ.

LEAVE A REPLY

Please enter your comment!
Please enter your name here