Home District ಬಿಜೆಪಿಯನ್ನ ದೂರ ಇಡಲು ಹೊರಟ “ಕೈ”ಗೆ ಬಿದ್ದಿದೆ ಪೆಟ್ಟು.! ಕಾಂಗ್ರೆಸ್ ಅಧಿನಾಯಕರ ಮುಂದೆ JDS ಶಕ್ತಿ...

ಬಿಜೆಪಿಯನ್ನ ದೂರ ಇಡಲು ಹೊರಟ “ಕೈ”ಗೆ ಬಿದ್ದಿದೆ ಪೆಟ್ಟು.! ಕಾಂಗ್ರೆಸ್ ಅಧಿನಾಯಕರ ಮುಂದೆ JDS ಶಕ್ತಿ ಪ್ರದರ್ಶನ…

2427
0
SHARE

ಶತಮಾನದ ಪಕ್ಷ ಕಾಂಗ್ರೆಸ್ ಎದುರು ಪ್ರಾದೇಶಿಕ ಪಕ್ಷಗಳು ಶಕ್ತಿ ಪ್ರದರ್ಶನ ಮಾಡಿವೆ, ಕುಮಾರ ಸ್ವಾಮಿಯ ಪ್ರಮಾಣ ವಚನ ಮಾತ್ರವಲ್ಲ ವಿಧಾನ ಸೌಧದ ಮುಂದೆ ಪ್ರಾದೇಶಿಕ ಮುಖಂಡರು ಹೇಗೆಲ್ಲಾ ಒಂದಾಗುತ್ತಿದ್ದಾರೆ ಅನ್ನೋ ಸಾಕ್ಷಾತ್ ಮಾಹಿತಿಯನ್ನ ಹೊರ ಹಾಕಿದ್ದಾರೆ, ಅಷ್ಟಕ್ಕೂ ಪ್ರಾದೇಶಿಕ ಪಕ್ಷಗಳು ಪಠಿಸುತ್ತಿರೋ ಆ ಮಂತ್ರವಾದ್ರು ಏನು? ಈ ಮೂಲಕ ಕಾಂಗ್ರೆಸ್ ಗೆ ಅದ್ಯಾವ ಸಂದೇಶವನ್ನ ನೀಡಿದ್ದಾರೆ…

ಕರ್ನಾಟಕದಲ್ಲಿ ಕುಮಾರ ಪರ್ವ ಶುರುವಾಗಿದೆ. ಅತಂತ್ರ ಫಲಿತಾಂಶ ಬಂದಾಗಿನಿಂದ ಇಲ್ಲಿವರೆಗೂ ರಾಜ್ಯದಲ್ಲಿ ಅಕ್ಷರಶಃ ರಾಜಕೀಯ ಅಸ್ಥಿರತೆ ಉಂಟಾಗಿತ್ತು. ಮೂರು ಪಕ್ಷಗಳ ಜಟಾಪಟಿಯಲ್ಲಿ ಅಂತು ಕೊನೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿಯನ್ನ ಮುಖ್ಯಮಂತ್ರಿಯನ್ನಾಗಿ ಮಾಡಿವೆ…

ಕಾಂಗ್ರೆಸ್ ನ ಅಧಿನಾಯಕಿ ಸೋನಿಯಾ ಗಾಂಧಿ, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಬ್ಬರು ಸಹ ಕುಮಾರಸ್ವಾಮಿ ಪ್ರಮಾಣ ವಚನಕ್ಕೆ ಆಗಮಿಸಿ ಶುಭಕೋರಿದ್ದಾರೆ, ಇಡೀ ದೇಶದಾದ್ಯಂತ ಸೋತು ಸುಣ್ಣವಾಗಿರೋ ಕಾಂಗ್ರೆಸ್ ಇಲ್ಲಿ ಜೆಡಿಎಸ್ ಬಾಲ ಹಿಡಿದುಕೊಂಡು ನೇತಾಡುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ಕಾಂಗ್ರೆಸ್ ಪಾಲಿಗೆ ಮತ್ತೊಂದು ಸಿಡಿಲಿನ ಆಘಾತ ಒಂದು ಎದುರಾಗಿದೆ…

ಹೌದು ಕಾಂಗ್ರೆಸ್ ಜೆಡಿಎಸ್ ಮೈತ್ರಿಯಿಂದಾಗಿ ಅಧಿಕಾರ ಹಿಡಿದಿದೆ, ಇಲ್ಲಿ ನಗುವುದೋ ಅಳುವುದೋ ಅನ್ನೋ ಪರಿಸ್ತಿತಿ ಜೆಡಿಎಸ್ ನದ್ದು, ಏಕೆಂದ್ರೆ ಕುಮಾರಸ್ವಾಮಿ ಪ್ರಮಾಣ ವಚನದೊಂದಿಗೆ ತೃತೀಯ ಕೂಟ ಬಲ ಪ್ರದರ್ಶನ ಮಾಡಿವೆ. ಒಂದರ್ಥದಲ್ಲಿ ಹೇಳಬೇಕು ಅಂದ್ರೆ ಈ ತೃತೀಯ ಕೂಟಕ್ಕೆ ದೇವೆಗೌಡ್ರೇ ನೇತೃತ್ವ ವಹಿಸಿದ್ದಾರೆ,  ಅಂದ ಹಾಗೆ ಈ ಕೂಟದಲ್ಲಿ ಭಾಗಿಯಾಗಲಿರೋದು ದೇಶದ ಘಟಾನುಘಟಿ ಪ್ರಾದೇಶಿಕ ಪಕ್ಷದ ನಾಯಕರೇ…

ಈ ಸಾಲಿನಲ್ಲಿ, ಬಿಎಸ್ಪಿ ನಾಯಕಿ ಮಾಯಾವತಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್‌, ಬಿಹಾರ್ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಆಂದ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ಚಂದ್ರಶೇಖರ ರಾವ್‌ ಮತ್ತು ಅವರ ಪುತ್ರ ಕೆಟಿಆರ್‌, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ರಾಷ್ಟ್ರೀಯ ಲೋಕದಳದ ನಾಯಕ ಅಜಿತ್ ಸಿಂಗ್‌, ನಟ-ರಾಜಕಾರಣಿ ಕಮಲ್ ಹಾಸನ್‌, ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್  ಇದ್ದಾರೆ, ಈ ಎಲ್ಲ ನಾಯಕರು ಸೇರಿಕೊಂಡು ತೃತೀಯ ರಂಗ ರಚಿಸಿರೋದು ಕಾಂಗ್ರೆಸ್ ಪಾಲಿಗೆ ಘೋರ ಪ್ರಮಾದವಾಗಿ ಪರಿಣಮಿಸಲಿದೆ ಅಂತಾ ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ…

ಮಹಾಘಟಬಂಧನ್‌ ಅಥವಾ ಫೆಡರಲ್‌ ಫ್ರಂಟ್‌ ಹೆಸರಲ್ಲಿ ದೇಶಾದ್ಯಂತ ಪ್ರತಿಪಕ್ಷಗಳು ಒಗ್ಗೂಡುತ್ತಿರುವುದರಿಂದ ಕಾಂಗ್ರೆಸ್‌ಗೆ ನಷ್ಟವೋ ಅಥವಾ ಲಾಭವೋ ಎಂಬ ಚರ್ಚೆ ಶುರುವಾಗಿದೆ. ಒಂದೊಮ್ಮೆ ದೇಶಾದ್ಯಂತ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವಲ್ಲಿ ಪ್ರತಿಪಕ್ಷಗಳು ಯಶಸ್ವಿಯಾದರು..

ಇದರಿಂದ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗಂತೂ ಖಂಡಿತ ಹೆಚ್ಚಿನ ಲಾಭ ಸಿಗಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಹೊರತಾಗಿ ಫೆಡರಲ್‌ ಫ್ರಂಟ್‌ ಕಟ್ಟಿಕೊಳ್ಳಬೇಕು ಎಂಬುದು ಈ ಒಕ್ಕೂಟದ ಮುಂಚೂಣಿಯಲ್ಲಿರುವ ನಾಯಕರ ಚಿಂತನೆ. ಈ ನಾಯಕರಿಗೂ ಕಾಂಗ್ರೆಸ್‌ ಅಂದರೆ ಅಷ್ಟಕಷ್ಟೇ ಎಂಬ ಸನ್ನಿವೇಶವಿರುವಾಗ ರಾಹುಲ್‌ಗೆ ಹೇಗೆ ಲಾಭವಾಗುತ್ತದೆ ಎಂಬ ಚರ್ಚೆಗಳೂ ಶುರುವಾಗಿವೆ…

LEAVE A REPLY

Please enter your comment!
Please enter your name here