ಕೋಲಾರ ಲೋಕಸಭಾ ಚುನಾವಣಾ ಕಣ ರಂಗೇರಿದ್ದು. ದೋಸ್ತಿ ಪಕ್ಷಗಳು ಮೈತ್ರಿ ಧರ್ಮವನ್ನು ಪಾಲನೆ ಮಾಡಿಲ್ಲ. ಇನ್ನೂ ಕಾಂಗ್ರೆಸ್ನಲ್ಲೇ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ನಿರ್ಮಾಣವಾಗಿದೆ. ಒಳಗೊಳಗೆ ಗುಂಪುಗಾರಿಕೆ, ಭಿನ್ನಮತ, ಅಸಮಾಧಾನ ಭುಗಿಲೆದ್ದಿದೆ.
ಇತ್ತ ಜೆಡಿಎಸ್ನ ಹಾಲಿ, ಮಾಜಿ ಶಾಸಕರು ಕೂಡ ಮೃತ್ರಿ ಧರ್ಮ ಪಾಲನೆಗೆ ಸಿದ್ದವಿಲ್ಲ. ಕಾಂಗ್ರೆಸ್ ಭದ್ರಕೋಟೆಗೆ ಜೆಡಿಎಸ್ ಶಾಸಕರು ಕೊಳ್ಳಿ ಇಟ್ಟಿದ್ದಾರೆ.ಕೋಲಾರದಲ್ಲಿ ಸಂಸದ ಕೆ.ಹೆಚ್. ಮುನಿಯಪ್ಪ ವಿರುದ್ಧ ಕೈ ಹಾಲಿ- ಮಾಜಿ ಶಾಸಕರು ಸೋಲಿಸಲು ಪಣತೊಟ್ಟಿದ್ದಾರೆ. ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಹಾಲಿ ಶಾಸಕ ನಾಗೇಶ್. ಮುಳಬಾಗಿಲಿನ ಕಪ್ಪಲಮಡುಗು ಗ್ರಾಮದ ಟೊಮ್ಯಾಟೋ ಮಂಡಿಯಲ್ಲಿ ತಮ್ಮ ಬೆಂಬಲಿಗರ ಸಭೆಯನ್ನ ನಡೆಸಿದ್ರು.
ಸಭೆಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಸಂಸದ ಕೆ.ಎಚ್.ಮುನಿಯಪ್ಪ ಅವರ ವಿರುದ್ದ ವಾಗ್ದಾಳಿ ನಡೆಸಿದ್ರು. ಜೊತೆಗೆ ಸಭೆಗೆ ಬಂದಿದ್ದ ಕಾರ್ಯಕರ್ತರಿಗೆ ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನ ಬೆಂಬಲಿಸುವಂತೆ ಸೂಚನೆ ನೀಡಿದ್ರು. ಕೋಲಾರ ಜಿಲ್ಲೆಯಲ್ಲಿ ಮುನಿಯಪ್ಪ ವಿರೋದಿ ಅಲೆ ಶುರುವಾಗಿದ್ದು, ನಾವು ಕಾಂಗ್ರೇಸ್ ವಿರೋಧಿಗಳಲ್ಲ. ಹಾಗಂತ ಬಿಜೆಪಿ ವೋಟ್ ಮಾಡುವುದು ನಮ್ಮ ಉದ್ದೇಶ ಅಲ್ಲ. ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಅವರನ್ನ ಸೋಲಿಸುವುದು ನಮ್ಮ ಉದ್ದೇಶ ಎಂದು ನೇರವಾಗಿ ಸಂಸದ ಮುನಿಯಪ್ಪ ವಿರುದ್ದ ವಾಗ್ದಾಳಿ ನಡೆಸಿದ್ರು.
ಇನ್ನೂ ಇದೆ ವೇಳೆ ಶಾಸಕ ನಾಗೇಶ್ ಕೂಡ ದ್ವನಿಗೂಡಿಸಿ ಮಾಜಿ ಶಾಸಕರ ನಿರ್ಧಾರವನ್ನ ಸಮರ್ಥಿಸಿಕೊಂಡ್ರು.ಕಾಂಗ್ರೆಸ್ ಮಾತ್ರವಲ್ಲದೆ ಕೋಲಾರ ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡರು ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಮತ್ತು ಮುಖಂಡರ ಸಭೆ ಕರೆದಿದ್ರು. ಮೈತ್ರಿ ಧರ್ಮ ಪಾಲನೆ ಮಾಡಬೇಕು ಎಂದಾಗ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಪರಸ್ಪರ ವಾಗ್ವಾದ, ಗದ್ದಲ ಉಂಟಾಯಿತು. ಕೂಡಲೇ ಶಾಸಕರು ಈ ಬಗ್ಗೆ ಜನಾಭಿಪ್ರಾಯ ಕೇಳುತ್ತಿದ್ದು, ನೀವು ತೆಗೆದುಕೊಳ್ಳುವ ನಿರ್ಧಾರವನ್ನು ವರಿಷ್ಟರಿಗೆ ತಿಳಿಸುವೆ ಎಂದು ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ರು.
ಆದ್ರೆ ಸಭೆಯಲ್ಲಿದ್ದ ಬಹುತೇಕ ಕಾರ್ಯಕರ್ತರು ಕೆ.ಎಚ್.ಮುನಿಯಪ್ಪ ಈ ಬಾರಿ ಯಾವುದೇ ಕಾರಣಕ್ಕೂ ಬೆಂಬಲಿಸುವುದು ಬೇಡ, ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುಬೇಕು ಎಂದ್ರು. ಶಾಸಕ ಕೆ.ಶ್ರೀನಿವಾಸಗೌಡ ಇದರ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ರು.ಒಟ್ನಲ್ಲಿ ಕೈ ಅಭ್ಯರ್ಥಿ ಮುನಿಯಪ್ಪಗೆ ನಾಲ್ವರು ಹಾಲಿ, ಮಾಜಿ ಶಾಸಕರು ತಮ್ಮ ನಿರ್ಧಾರವನ್ನ ಪ್ರಕಟಿಸಿ, ಹೂ ಅಭ್ಯರ್ಥಿ ಮುನಿಸ್ವಾಮಿ ಪರವಾಗಿ ನಿಂತಿದ್ದಾರೆ. ಇದನ್ನ ಕಾಂಗ್ರೇಸ್ ಅಭ್ಯರ್ಥಿ ಮುನಿ-ಅಪ್ಪ ಡ್ಯಾಮೇಜ್ ಕಂಟ್ರೋಲ್ ಮಾಡ್ತಾರ, ಇಲ್ಲಾ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಇದರ ಲಾಭ ಪಡೆಯುತಾರ ಕಾದು ನೋಡಬೇಕಿದೆ.