Home District ಬಿಜೆಪಿ ನಾಯಕರು ಈಗ ಯಡಿಯೂರಪ್ಪನನ್ನ ಡಮ್ಮಿ ಮಾಡಿದ್ದಾರೆ ಎಂದು ಸಿ.ಎಂ ವ್ಯಂಗ್ಯ..!! ಮುಂದುವರೆದ ಸಿ.ಎಂ-ಬಿಎಸ್‌ವೈ ವಾಕ್ಸಮರ…

ಬಿಜೆಪಿ ನಾಯಕರು ಈಗ ಯಡಿಯೂರಪ್ಪನನ್ನ ಡಮ್ಮಿ ಮಾಡಿದ್ದಾರೆ ಎಂದು ಸಿ.ಎಂ ವ್ಯಂಗ್ಯ..!! ಮುಂದುವರೆದ ಸಿ.ಎಂ-ಬಿಎಸ್‌ವೈ ವಾಕ್ಸಮರ…

109
0
SHARE


ಬಿಜೆಪಿ ವಿರುದ್ಧ ಮತ್ತೆ ಸಿಎಂ ಸಿದ್ದರಾಮಯ್ಯ ಈಗ ಟ್ವೀಟಾಸ್ತ್ರ ಪ್ರಯೋಗಿಸಿದ್ದಾರೆ. ಕರ್ನಾಟಕ ಲೂಟಿ ಮಾಡಲು ರೆಡ್ಡಿ ಬ್ರದರ್ಸ್ ಮತ್ತೆ ಬಂದಿದ್ದಾರೆ.ರಿಪಬ್ಲಿಕ್ ಅಫ್ ಬಳ್ಳಾರಿ ಮಾಡಿದ್ದ ಕಳಂಕ ರೆಡ್ಡಿ ಬ್ರದರ್ಸ್‌ಗೆ ಸಲ್ಲುತ್ತದೆ. ಆಗ ಬಿಎಸ್‌ವೈ ಅವರನ್ನ ಸೂತ್ರದ ಬೊಂಬೆ ಮಾಡಿದ್ದರು…

ಆಪರೇಷನ್ ಕಮಲ ಮೂಲಕ ಶಾಸಕರನ್ನ ಹಿಡಿದಿಟ್ಟಿಕೊಂಡು ರೆಸಾರ್ಟ್‌ನಲ್ಲಿಟ್ಟಿದ್ದರು. 35 ಸಾವಿರ ಕೋಟಿ ಮೌಲ್ಯದ ಕಬ್ಬಿಣ ಅದಿರು ಲೂಟಿ ಮಾಡಿ
ಕರ್ನಾಟಕವನ್ನು ‘ಅತಿ ಭ್ರಷ್ಟ ರಾಜ್ಯ’ ಎಂಬ ಕಳಂಕ ತಂದರು ಎಂದು ಟೀಕಿಸಿದ್ದಾರೆ…

ಇನ್ನು, ಪ್ರಧಾನಿ ನರೇಂದ್ರ ಮೋದಿ ಭಾಷಣ ಬಗ್ಗೆ ಟ್ವೀಟ್ ಮಾಡಿರೋ
ಅವರು, ಪ್ರಧಾನಿ ನರೇಂದ್ರ ಮೋದಿ ಬಂದು ಹೋಗುತ್ತಾರೆ….

ಇಲ್ಲಿ ಸಿದ್ದರಾಮಯ್ಯ -ಯಡಿಯೂರಪ್ಪ ನಡುವೆ ಸಮರ ಏರ್ಪಟ್ಟಿದೆ. ನಿಮಗೆ ಯಾರು ಗೆಲ್ಲುತ್ತಾರೆ ಎಂದು ಗೊತ್ತಿರಬಹುದು ಎಂದಿದ್ದಾರೆ. ಪ್ರಚಾರಕ್ಕಾಗಿ ರಾಜ್ಯ ಬಿಜೆಪಿ ನಾಯಕರು, ಪ್ರಧಾನಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಂತ ಉತ್ತರ ಭಾರತದ ನಾಯಕರನ್ನು ಆಮದು ಮಾಡಿಕೊಳ್ತಿದ್ದಾರೆ…

ಈ ಮೂಲಕ ರಾಜ್ಯದಲ್ಲಿ ಪ್ರಚಾರಕ್ಕೆ ನಾಯಕರಿಲ್ಲ ಎಂದು ಒಪ್ಪಿಕೊಂಡಿದ್ದಾರೆ
ಬಿಜೆಪಿ ನಾಯಕರು ಈಗ ಯಡಿಯೂರಪ್ಪ ಡಮ್ಮಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ…

LEAVE A REPLY

Please enter your comment!
Please enter your name here