ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್​ ಠಾಕೂರ್​ಗೆ ಅಶ್ಲೀಲ ವಿಡಿಯೋ; ಕಳಿಸಿದ್ದು ಯಾರು ಗೊತ್ತಾ?

ಜಿಲ್ಲೆ ತಂತ್ರಜ್ಞಾನ ರಾಜಕೀಯ ರಾಷ್ಟ್ರೀಯ ಲೈಫ್ ಸ್ಟೈಲ್

ಭೂಪಾಲ್: ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಅಶ್ಲೀಲ ಸಂದೇಶಗಳು ಮತ್ತು ವಿಡಿಯೋಗಳನ್ನು ಕಳುಹಿಸಿದ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ. ಅಪರಿಚಿತ ಮೊಬೈಲ್ ನಂಬರ್​ನಿಂದ ತಮಗೆ ಆಕ್ಷೇಪಾರ್ಹ ವಿಡಿಯೋ ಕಾಲ್ ಬಂದಿದೆ ಎಂದು ಪ್ರಗ್ಯಾ ಸಿಂಗ್​ ಠಾಕೂರ್​ ದೂರು ದಾಖಲಿಸಿದ್ದರು ಇದರ ಅನ್ವಯ ತನಿಖೆ ಕೈಗೊಂಡ ಪೊಲೀಸರು ಇಬ್ಬರು ವ್ಯಕ್ತಗಳನ್ನ ಬಂಧಿಸಿದ್ದಾರೆ. “ಪ್ರಗ್ಯಾ ಸಿಂಗ್ ಠಾಕೂರ್ ಮೊದಲು ತಮಗೆ ಬಂದ ಫೋನ್ ಕಾಲ್ ಕಡಿತಗೊಳಿಸಿದರು. ನಂತರ ಆಕೆಗೆ ಮತ್ತೊಂದು ನಂಬರ್​ನಿಂದ ಅಶ್ಲೀಲ ವಿಡಿಯೋ, ಮೆಸೇಜ್ ಕಳುಹಿಸಲಾಯಿತು. ಅಲ್ಲದೆ, ಆ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್​ಲೋಡ್ ಮಾಡುವ ಮೂಲಕ ತನ್ನ ಮಾನಹಾನಿ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಪ್ರಗ್ಯಾ ಸಿಂಗ್ ಠಾಕೂರ್ ದೂರು ನೀಡಿದ್ದಾರೆ” ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಲೈಂಗಿಕ ಕಿರುಕುಳ, 507 ಅನಾಮಧೇಯ ವಿಳಾಸದಿಂದ ಕ್ರಿಮಿನಲ್ ಬೆದರಿಕೆ ಮತ್ತು 509 ಮಹಿಳೆಯರನ್ನು ಅವಮಾನಿಸುವ ಉದ್ದೇಶದಿಂದ ಪದ, ಸನ್ನೆ ಅಥವಾ ಕೃತ್ಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published.