Home District ಬೀದರ್ ಲೋಕ ಸಂಗ್ರಾಮ:ರೊಚಕ ಹಣಾಹಣಿ ಇರುವ ಈ ಕ್ಷೇತ್ರದಲ್ಲಿ ‘ಭಗವಂತನ’ ಎದುರು ನಿಲ್ತಾನ ‘ಈಶ್ವರ’.? ಕರ್ನಾಟಕದ...

ಬೀದರ್ ಲೋಕ ಸಂಗ್ರಾಮ:ರೊಚಕ ಹಣಾಹಣಿ ಇರುವ ಈ ಕ್ಷೇತ್ರದಲ್ಲಿ ‘ಭಗವಂತನ’ ಎದುರು ನಿಲ್ತಾನ ‘ಈಶ್ವರ’.? ಕರ್ನಾಟಕದ ಮುಕುಟ ಬೀದರ್ ನಲ್ಲಿ ಈ ಬಾರಿ ಯಾರ ಕೊರಳಿಗೆ ವಿಜಯ ಮಾಲೆ.?

1657
0
SHARE

ಬೀದರ್ ಲೋಕಸಭಾ ಕ್ಷೇತ್ರದ 2014 ರ ಚುನಾವಣೆಯ ಮೇಲೆ ನೋಟ ಬೀರೋದಾದ್ರೆ, ತಮ್ಮ ಸಮೀಪದ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ರನ್ನ 92,222 ಮತಗಳ ಅಂತರದಿಂದ ಪರಾಭವಗೊಳಿಸಿ ಬಿಜೆಪಿಯ ಭಗವಂತ ಖೂಬಾ ಜಯಗಳಿಸಿದ್ದರು..

ಹಾಗಾಗಿ ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಖೂಬಾ ಅವರೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಆದ್ರೆ ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ದಿವಂಗತ ಧರಂ ಸಿಂಗ್ 3,67,068 ಮತ ಪಡೆದಿದ್ದರು.. ಆ ಕಾರಣಕ್ಕಾಗಿ ಇಲ್ಲಿ ಕಾಂಗ್ರೆಸ್ ಪಕ್ಷ ಕೂಡ ಪ್ರಬಲಾಗಿದೆ.. ಇದರ ಜೊತೆಗೆ ಜೆಡಿಎಸ್ ಕೂಡ ಇಲ್ಲಿ 58,728 ಮತ ಪಡೆದಿತ್ತು.ಈ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ , ಜೆಡಿಎಸ್ ಪ್ರಾಭಲ್ಯವೇ ಹೆಚ್ಚಾಗಿದ್ರೂ, ಕಳೆದ ಬಾರಿ ಜಯಗಳಿಸಿದ್ದು ಮಾತ್ರ ಬಿಜೆಪಿ.. ಈ ಬಾರಿಯೂ ಇರು 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ರಲ್ಲಿ ದೋಸ್ತಿ ಸರ್ಕಾರಗಳ ಶಾಸಕರೇ ಅಧಿಕಾರದಲ್ಲಿದ್ದಾರೆ. ಅಂದು ಕೊಂಡಂತೆ ಈ ಬಾರಿ ಜೆಡಿಎಸ್, ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ರೂ, ಅಥವಾ ಕಾಂಗ್ರೆಸ್ಸೇ ಜೆಡಿಎಸ್ ಜೊತೆ ಕೈ ಜೋಡಿಸಿದ್ರೂ ಒಟ್ನಲ್ಲಿ ಮೈತ್ರಿ ಕೂಟಕ್ಕೆ ಸ್ವಲ್ಪ ಮಟ್ಟದಲ್ಲಿ ಅನುಕೂಲ ಎಂಬ ಲೆಕ್ಕಾಚಾರವಿದೆ..

ಹಾಗಾದ್ರೆ ಈ ಬಾರಿ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಿಂದ ಮೈತ್ರಿಗೆ ವಿಜಯ ಲಕ್ಷ್ಮಿ ಒಲಿಯುತ್ತಾಳಾ..? ಕಳೆದ ಬಾರಿಯ ಲೋಕಸಭಾ ಚುನಾವಣೆ ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್ ಗೆ ಈ ಬಾರಿ ಸವಾಲು ಎದುರಾಗಿದೆ.. ಆ ಹಿನ್ನಲೆಯಲ್ಲಿ ಬೀದರ್  ಕ್ಷೇತ್ರವನ್ನ ಈ ಬಾರಿ ತೆಕ್ಕೆಗೆ ಪಡೆಯಲೇಬೇಕು ಎನ್ನುವ ತವಕದಲ್ಲಿ ಕೈ ಪಡೆ ಇದ್ರೆ, ಇತ್ತ ಜೆಡಿಎಸ್ ಕೂಡ ಈ ಕ್ಷೇತ್ರವನ್ನ ತನ್ನದಾಗಿಸಿಕೊಲ್ಳಬೇಕೆಂಬ ತವಕದಲ್ಲಿದೆ…. ಈಗ ಮತ್ತೆ 2019 ರ ಲೋಕಸಭೆ ಸಾರ್ವತ್ರಿಕ ಚುನಾವಣೆ ಎದುರಾಗಿದೆ. ಹಾಗಾಗಿ ಈ ಬಾರಿ ಕ್ಷೇತ್ರದಲ್ಲಿ ಪ್ರಭಾವಿ ರಾಜಕಾರಣಿಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಅಥವಾ ಧರಂ ಪುತ್ರ ಅಜೇಯ್ ಸಿಂಗ್ ರನ್ನ ಕಣಕ್ಕಿಳಿಸಲು ಚಿಂತನೆ ನಡೆಸಿದೆ.. ಇತ್ತ ಜೆಡಿಎಸ್ ಮೈತ್ರಿ ಹೆಸರಲ್ಲಿ ಪಿ.ಜಿ.ಆರ್. ಸಿಂಧ್ಯಾರನ್ನ ಕಣಕ್ಕಿಳಿಸಲು ಚಿಂತನೆ ನಡೆಸಿದೆ..

ಕಳೆದ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶದ ಮಾನದಂಡದಲ್ಲಿಯೇ 2019 ರ ಸಾರ್ವತ್ರಿಕ ಚುನಾವಣೆಯನ್ನು ಬೀದರ್ ಲೋಕಸಭಾ ವಿಚಾರಕ್ಕೆ ವಿಶ್ಲೇಷಿಸಲು ಸಾಧ್ಯವಿಲ್ಲ.. ಯಾಕಂದ್ರೆ ಕಳೆದ ಬಾರಿಗಿಂತ ಈ ಬಾರಿ ದೋಸ್ತಿ ಸರ್ಕಾರ ಕೊಂಚ ಸ್ಟ್ರಾಂಗ್ ಆಗಿದೆ.. ಇಲ್ಲಿ ಭಗವಂತನ ಎದುರು ಈಶ್ವರ ನಿಂತ್ರೂ, ಇಲ್ಲವೇ ಮೈತ್ರಿ ಏರ್ಪಟ್ಟು ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಟ್ಟು ಪಿ.ಜಿ.ಆರ್. ಸಿಂಧ್ಯಾ ನಿಂತರೂ,, ಬಿಜೆಪಿಗಂತೂ ಸುಲಭದ ಗೆಲುವು ಕಷ್ಟ.. ಯಾಕಂದ್ರೆ ರಾಜ್ಯದಲ್ಲಿರೋ ಸಮ್ಮಿಶ್ರ ಸರ್ಕಾರದ ಸಚಿವರಲ್ಲಿ ಈ ಜಿಲ್ಲಾಯರೇ ಮೂರು ಜನ ಶಾಸಕರಿರೋದು.. ಸೇರಿದಂತೆ ಹಲವು ವಿಚಾರಗಳಿಗೆ ಮೈತ್ರಿ ಈ ಬಾರಿ ಸ್ಟ್ರಾಂಗ್ ಆಗಿದೆ..

ಹಾಗಾದ್ರೆ ಕ್ಷೇತ್ರದಲ್ಲಿ ಇವರಿಬ್ಬರ ಪ್ಲಸ್, ಮತ್ತು ಮೈನಸ್ ಏನು…? ಒಟ್ನಲ್ಲಿ ಬಿಜೆಪಿಯ ಕಾಂಗ್ರೆಸ್, ಜೆಡಿಎಸ್ ಗೆ ಇಲ್ಲಿ ಈ ಬಾರಿ ಹೇಗಿದೆ ರೆಸ್ಪಾನ್ಸ್ ಅನ್ನೋದನ್ನ ನೋಡೋದಾದ್ರೆ, ಈಶ್ವರ್ ಖಂಡ್ರೆ ಬೀದರ್ ಜಿಲ್ಲೆಯ ಒಬ್ಬ ಪ್ರಭಾವಿ ರಾಜಕಾರಣಿ.. ಕಾಂಗ್ರೆಸ್ ಪಕ್ಷದಲ್ಲೂ ಅವರಿಗೆ ಅವರದ್ದೇ ಆದ ವರ್ಚಸ್ಸಿದೆ. ಜೊತೆಗೆ ಜಿಲ್ಲೆಯಲ್ಲಿ ಲಿಂಗಾಯತ ಸಮಾಜ ವೀರಶೈವರು ಹೆಚ್ಚಿನ ಸಂಖ್ಯೆಯಲ್ಲಿರೋದ್ರಿಂದ ಬಿಜೆಪಿ ಗೆ ಹೋಗಬಹುದಾದ ತಿಂಗಾಯತರ ಮತಗಳನ್ನ ಇವರು ಸೆಳೆಯಬಹುದು.. ಇದರ ಜೊತೆಗೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಆಡಳಿತದಲ್ಲಿರೋದ್ರಿಂದ ಕ್ಷೇತ್ರದ ಅಭಿವೃದ್ಧಿಗೆ ಇವರು ಶ್ರಮಿಸುತ್ತಾರೆಂಬ ನಂಬಿಕೆ ಇಲ್ಲಿನ ಜನರಲ್ಲಿದೆ… ಈಶ್ವರ್ ಖಂಡ್ರೆ ಬಿಟ್ರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಪ್ರಭಲವಾಗಿ ಕೇಳಿಬರುತ್ತಿರೋ ಮತ್ತೊಂದು ಹೆಸರು ಅಜೇಯ್ ಸಿಂಗ್..

ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವ್ರ ಪುತ್ರ.. ಸದ್ಯ ಇವರು ಕಾಂಗ್ರೆಸ್ ನ ಎಮ್ಮೆಲ್ಸಿಯಾಗಿದ್ದಾರೆ. ಈ ಭಾಗದಲ್ಲಿ ಮೊದಲಿನಿಂದಲೂ ಕೈ ಪಕ್ಷವನ್ನ ಕಟ್ಟಿ ಬೆಳೆಸಿದವರಲ್ಲಿ ಇವರ ತಂದೆ ಜೊತೆ ಇವರೂ ಒಬ್ಬರು.. ಖರ್ಗೆ ಕುಟುಂಬದ ಜೊತೆಗೆ ಅವಿನಾಭಾವ ನಂಟು ಹೊಂದಿರೋ ಇವರೂ ಟಿಕೆಟ್ ಗಾಗಿ ಪ್ರಭಲ ಪೈಪೋಟಿ ಒಡ್ಡುತ್ತಿದ್ದಾರೆನ್ನಲಾಗಿದೆ. ಒಂದು ವೇಳೆ  ಪ್ರಭಲ ಲಿಂಗಾಯತ ಸಮುದಾಯ ಬಿಜೆಪಿ ಬೆನ್ನಿಗೆ ನಿಂತರೆ ಖಂಡ್ರೆಯವರ ಬದಲು ಕೇಳಿಬರುತ್ತಿರೋ ಹೆಸರು ಇವರದ್ದು.. ಆದ್ರೆ ಬೀದರ್ ನಲ್ಲಿ ಖಂಡ್ರೆಯವರಷ್ಟು ಪ್ರಭಲ ರಾಜಕಾರಣಿ ಅಜೇಯ್ ಸಿಂಗ್ ಅಲ್ಲ.. ತಂದೆಗಿದ್ದ ವರ್ಚಸ್ಸು, ಮತ್ತು ಪಕ್ಷಕ್ಕಿರೋ ಬಲ, ಮತ್ತು ಮೈತ್ರಿ ಕೈಹಿಡಿಯಬೇಕಷ್ಟೇ..ಜೆ.ಡಿಎಸ್. ಬಲಾಬಲ ನೋಡೋದಾದ್ರೆ ಈ ಕ್ಷೇತ್ರದಲ್ಲಿ ತೆನೆ ಹೊತ್ತ ಮಹಿಳೆ ಆಟಕ್ಕುಂಟು ಲೆಕ್ಕಕ್ಕಿಲ್ಲ..

ಆದ್ರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಅಂತಾರಲ್ಲ ಹಾಗೆ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದರಿಂದ, ಲೋಕಸಭಾ ಚುನಾವಮೆಯಲ್ಲೂ ಘಟಬಂಧನ್ ಹೆಸರಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಕಾ ಆಗಿರೋದ್ರಿಂದ ಈ ಕ್ಷೇತ್ರವನ್ನ ಕೈ ಗೆ ಬಿಟ್ಟು ಕೊಡದೇ ಜೆಡಿಎಸ್ ತಾನು ಇಟ್ಟುಕೊಳ್ಳಬೇಕೆಂದು ಬಯಸಿದೆ.. ಆ ಕಾರಣಕ್ಕಾಗಿ ಇಲ್ಲಿ ಕಾಂಗ್ರೆಸ್ ಸಪೋರ್ಟ್ ನಿಂದ ಜೆಡಿಎಸ್ ಗೆಲುವಿಗಾಗಿ ಹಾತೊರೆಯುತ್ತಿದೆ.ಇನ್ನು 6 ಜನ ಶಾಸಕರು ಅದರಲ್ಲಿ ಮೂರು ಜನ ಸಚಿವರು, ಇಬ್ಬರು ಎಮ್ಮೆಲ್ಸಿಗಳು, ಮತ್ತು ನಿಗಮ ಮಂಡಳಿ ಅಧ್ಯಕ್ಷರನ್ನ, ಜೆತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಇದೇ ಜಿಲ್ಲೆಯವರಾದ್ದರಿಂದ, ಈ ಬಾರಿ  ಮೈತ್ರಿ ಸರ್ಕಾರ ಇಲ್ಲಿಗೆ ತುಸು ಹಿಚ್ಚಿನ ಸವಲತ್ತುಗಳನ್ನ ರಾಜ್ಯ ಬಜೆಟ್ ನಲ್ಲಿ ಮೈತ್ರಿ ಸರ್ಕಾರ ನೀಡಿದೆ..

ಮೈತ್ರಿ ಸರ್ಕಾರದ ಬಜೆಟ್ ಗೆ ಬೀದರ್ ಜನ ಹರ್ಷ ವ್ಯಕ್ತ ಪಡಿಸಿದ್ದಾರೆ.. ಹಾಗಾದ್ರೆ ಏನೇನೆಲ್ಲ ಕೊಡಲಾಗಿದೆ ಬೀದರ್ ಜಿಲ್ಲೆಗೆ ಅನ್ನೋದನ್ನ ನೋಡೋದಾದ್ರೆ,,,,,ಕೆರೆ ತುಂಬಿಸೋಕೆ 300 ಕೋಟಿ..ಮಾಂಜ್ರಾ ಏತ ನೀರಾವರಿ ಯೋಜನೆಗಾಗಿ 20 ಕೋಟಿ,ಕ್ರೀಡಾ ವಸತಿ ನಿಲಯಕ್ಕೆ 12.5 ಕೋಟಿ.ಏರ್ ಟರ್ಮಿನಲ್ ದುರಸ್ಥಿಗಾಗಿ 32 ಕೋಟಿ..ನಾರಂಜಲ್ ಜಲಾಶಯದಿಂದ ಕೆರೆಗೆ ನೀರು ಕಹರಿಸಲು 4.ಕೋಟಿ..ಬೀದರ್ ಹೊರ ವಲಯದಲ್ಲಿ ಕಾರಾಗೃಹ ನಿರ್ಮಾಣಕ್ಕೆ 2 ಕೋಟಿ..ಗುರು ನಾನಕ್ ಜಯಂತಿಗಾಗಿ, ಗುರು ದ್ವಾರಕ್ಕೆ 10.ಕೋಟಿ.ಸೇರಿದಂತೆ ಒಟ್ಟು ಬೀದರ್ ಗೆ ಈ ಬಾರಿ ರಾಜ್ಯ ಬಜೆಟ್ ನಲ್ಲಿ ನೀಡಿದ್ದು 4,20 ಕೋಟಿ.ಇದೆಲ್ಲದರ ಜೊತೆಗೆ ಕಳೆದ ಬಾರಿ ಕೆಲ ವಿಚಾರಗಳಲ್ಲಿ ಬಜೆಟ್ ಬಗ್ಗೆ ಇಲ್ಲಿನ ಜನರಿಗೆ ನಿರಾಶೆಯೂ ಇದೆ.ಕಳೆದ ಬಾರಿ ಸಿದ್ಧರಾಮಯ್ಯ ನೇತೃತ್ವದ ಸರಕಾರದ ಅವಧಿಯಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ 600 ಕೋಟಿ ನೀಡುವುದಾಗಿ ಹೇಳಿದ್ದರು..

ಅದರ ಪಲವಾಗಿ ಈಗ ಕನಿಷ್ಟ 100 ಕೋಟಿಯನ್ನಾದ್ರೂ ಬಿಡುಡೆ ಮಾಡಬೇಕಿತ್ತು ಅನ್ನೋದು ಜನರ ನಿರಾಶೆಗೆ ಕಾರಣ.. ಇದರ ಜೊತೆಗೆ ಬಸವ ಕಲ್ಯಾಣ ಅಬಿವೃದ್ಧಿ ಮಂಡಳಿಗೆ ಏನೂ ಕೊಡುಗೆ ನೀಡದೇ ಇರೋದು, ಮತ್ತು ಕೃಷಿ ಕಾಲೋಜು ಸ್ಥಾಪನೆಯಾಗದೇ ಇರೋದು ಬೀದರ್ ಜನತೆಗೆ ನಿರಾಶೆ ಮೂಡಿಸಿದೆ..ಬಸವಾದಿ ಶರಣರ ನಾಡು, ಕರ್ನಾಟಕದ ಮುಕುಟ ನಗರಿ ಬೀದರ್ ನಲ್ಲಿ ಜಾತಿ ರಾಜಕಾರಣದ್ದೇ ದರ್ಬಾರ್.. ಬೀದರ್ ಲೋಕಸಭಾ ಕ್ಷೇತ್ರವನ್ನು ರಾಮಚಂದ್ರ ವೀರಪ್ಪ ಎಂಬುವವರು ಈ ಹಿಂದೆ 7 ಬಾರಿ ಪ್ರತಿನಿಧಿಸಿದ್ದರು.. 2 ಬಾರಿ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಇವರು, 5 ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದರು.. 2004 ರಲ್ಲಿ ಸಂಸದರಾಗಿದ್ದಾಗಲೇ ನಿಧನ ಹೊಂದಿದ್ದರು.. ಇಂತಹ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ..ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ತನ್ನ ಪ್ರತಿ ಸ್ಪರ್ಧಿ ಬಿಜೆಪಿಯ ಜೆ.ಶಾಂತಾ ಅವರಿಗಿಂತ 27,713 ಮತಗಳ ಲೀಡ್ ಪಡೆದು ಪ್ರಥಮ ಸ್ಥಾನದಲ್ಲಿದ್ದರು,

ಅಂದ್ರೆ ಇಲ್ಲಿ ಉಗ್ರಪ್ಪ ಪಡೆದಿದ್ದ ಮತಗಳು 72,288,  ಬಿಜೆಪಿಯ ಜೆ. ಶಾಂತಾ ಅವ್ರು ಪಡೆದಿದ್ದ ಮತಗಳು.48,565..ಬಳ್ಳಾರಿ ಗ್ರಾಮೀಣ ಕ್ಷೇತ್ರವನ್ನು ನೋಡೋದಾದ್ರೆ, ಇಲ್ಲಿ ಸದ್ಯ ಕಾಂಗ್ರೆಸ್ ನ ಶಾಸಕರಿದ್ದಾರೆ. ಕಳೆದ ಬಾರಿ ಉಪ ಚುನಾವಣೆಯಲ್ಲಿ ಇಲ್ಲಿ ಮೈತ್ರಿ ಅಭ್ಯರ್ಥಿ ತನ್ನ ಪ್ರತಿ ಸ್ಪರ್ಧಿಗಿಂತ 30,400 ಮತಗಳ ಲೀಡ್ ನಿಂದ ಮುಂಚೂಣಿಯಲ್ಲಿದ್ದರು.. ಇವರು ಪಡೆದಿದ್ದ ಮತಗಳು 83,918, ಬಿಜೆಪಿ – 50,018 ಮತಗಳನ್ನ ಪಡೆದಿತ್ತು.ಸಂಡೂರು ಕ್ಷೇತ್ರವೂ ಈಗ ಕಾಂಗ್ರೆಸ್ ತೆಕ್ಕೆಯಯಲ್ಲಿದೆ.. ಕಳೆದ ಬಾರಿ ಇಲ್ಲಿ ಉಗ್ರಪ್ಪ 85,140 ಮತ ಪಡೆದಿದ್ರೆ, ಬಿಜೆಪಿ 46,465 ಮತ ಗಳಿಸಿದ್ದರು..ಹೊಸಪೇಟೆ  ಕ್ಷೇತ್ರ ಕಾಂಗ್ರೆಸ್ ಶಾಸಕ ; ಬಿ.ಎಸ್.ಆನಂದ್ ಸಿಂಗ್.ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ವಿಜಯನಗರ ವಿಧಾನ ಸಭಾ ಕ್ಷೇತ್ರವೂ ಒಂದು. ಇದನ್ನ ಹೋಸಪೇಟೆ ಅಂತಲೂ ಕರೆಯುತ್ತಾರೆ.. ಇಲ್ಲಿ ಈ ಹಿಂದೆ ರೆಡ್ಡಿ ಶ್ರೀರಾಮುಲು ಅವರೊಡನೆ ಗುರುತಿಸಿಕೊಂಡಿದ್ದ ಆನಂದ್ ಸಿಂಗ್ ಕಾಂಗ್ರೆಸ್ ನಿಂದ ಈ ಬಾರಿ ಚುನಾಯಿತರಾಗಿದ್ದಾರೆ. ಕಳೆದ ಬಾರಿ ಇಲ್ಲಿ ಮೈತ್ರಿ ಅಭ್ಯರ್ಥಿ 82,832 ಮತ ಪಡೆದಿದ್ದರು. ಬಿಜೆಪಿ 53, 372 ಮತ ಪಡೆದಿತ್ತು..

ಈ ಕ್ಷೇತ್ರದಲ್ಲಿನ ಜಾತಿವಾರು ಮತದಾರರ ಸಂಖ್ಯಾವಾರು ನೋಡೋದಾದ್ರೆ:ಎಸ್ಟಿ-3,50,000. ಎಸ್ಸಿ-2 ಲಕ್ಷ.ಲಿಂಗಾಯಿತರು-3,50,000.ಉಪ್ಪಾರ, ಬಲಿಜ, ಗಂಗಾಮತಸ್ಥರು,ಯಾದವರು–200,000.ಮುಸ್ಲಿಮರು-2,00,000.ಬ್ರಾಹ್ಮಣರು—2,00,000.ಕುರುಬರು -1.5 ಲಕ್ಷ.ಮತ್ತು ಇತರೆ—100,000.ಒಟ್ಟು ಮತದಾರರು—-17.5 ಲಕ್ಷಕ್ಕೂ ಅಧಿಕ ಮತದಾರರು.

ಇದು ಈ ಕ್ಷೇತ್ರದ ಜಾತಿ ವಾರು ಅಂಶವಾದ್ರೆ, ಇಲ್ಲಿನ ಮತದಾರರ ಸಂಖ್ಯೆ ಈ ಕೆಳಕಂಡಂತಿದೆ.: 2018ರ ಉಪಚುನಾವಣೆಯ ಬಳ್ಳಾರಿ ಲೋಕಸಭಾ ಕ್ಷೇತ್ರ:ಒಟ್ಟು ಮತದಾರರು..17.5 ಲಕ್ಷ.ಮಹಿಳಾ ಮತದಾರರು-7,73000.ಪುರುಷರು- 9,77000.ಹತ್ತಿರ ಹತ್ತಿರ 18 ಲಕ್ಷದ ಮತದಾರರನ್ನ ಹೊಂದಿರೋ ಬಹುದೊಡ್ಡ ಕ್ಷೇತ್ರ ಬಳ್ಳಾರಿ ಲೋಕಸಭಾ ಕ್ಷೇತ್ರವಾಗಿದ್ದು, ಇಂತಹ ಐತಿಹಾಸಿಕ ಕ್ಷೇತ್ರದಲ್ಲಿ ಈ ಬಾರಿಯೂ ಶ್ರೀರಾಮುಲು ಪಡೆಯನ್ನ ಸೋಲಿಸಬೇಕು ಅಂತ ಮೈತ್ರಿ ಪಡೆ ಕಸರತ್ತು ನಡೆಸಿದೆ.. ಇತ್ತ ಕೈ ಪಡೆ ಪಾಲಾಗಿರುವ ಕ್ಷೇತ್ರವನ್ನ ಮರಳಿ ಪಡೆಯಲು ಶ್ರೀರಾಮುಲು ಯಡಿಯೂರಪ್ಪ ರಣ ತಂತ್ರ ರೂಪಿಸ್ತಿದ್ದಾರೆ.. ಅಂತಿಮವಾಗಿ ವಿಜಯ ಮಾಲೆ ಯಾರ ಕೊರಳಿಗೆ ಬೀಳುತ್ತೆ ಅನ್ನೋದನ್ನ ಚುನಾವಣೆವರೆಗೂ ನಾವು ನೀವೆಲ್ಲ ಕಾಯಲೇಬೇಕಿದೆ…

LEAVE A REPLY

Please enter your comment!
Please enter your name here