Home Crime ಬೀದರ್ SP,DC ಮೇಲೆ ಲೈಂಗಿಕ ದೌರ್ಜನ್ಯದ ಆರೋಪ..! ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ ಪಿಡಿಓ…

ಬೀದರ್ SP,DC ಮೇಲೆ ಲೈಂಗಿಕ ದೌರ್ಜನ್ಯದ ಆರೋಪ..! ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ ಪಿಡಿಓ…

392
0
SHARE

ಆಕೆ ದಕ್ಷ ಪ್ರಾಮಾಣಿಕ ಪಿಡಿಓ ಅಧಿಕಾರಿ… ಜನರಿಗೆ ನ್ಯಾಯ ದೊರಕಿಸಿ ಕೊಡಿಸೋ ನಿಟ್ಟಿನಲ್ಲಿ ಸಾಕಷ್ಟು ಶ್ರಮ ವಹಿಸಿದ್ರು.. ಆದ್ರೆ ಅವರ ಏಳಿಗೆ ಸಹಿಸದೇ ಮೇಲಾಧಿಕಾರಿಗಳು ಆಕೆಗೆ ಕೊಟ್ಟ ಕಷ್ಟ ಅಷ್ಟಿಷ್ಟಲ್ಲ.

ಬೀದರ್ ಎಸ್ಪಿ ಟಿ. ಶ್ರೀಧರ್ ಹಾಗೂ ಡಿಸಿ ಶರತ್ ವಿರುದ್ಧ ಪಿಡಿಓ ಮಂಗಳ ಗಂಭೀರವಾದ ಆರೋಪ ಮಾಡಿದ್ದಾರೆ. ನಾನು ಭ್ರಷ್ಟಚಾರಕ್ಕೆ ಅವಕಾಶ ಮಾಡಿಕೊಡದೆ ಪ್ರಾಮಾಣಿಕಳಾಗಿ ಕೆಲಸ ಮಾಡ್ತಿದ್ದೆ, ಹೀಗಾಗಿ ಇದನ್ನ ಸಹಿಸದೇ ನನ್ನ ಮೇಲೆ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾರೆ. ಈ ಕೃತ್ಯಕ್ಕೆ ಕೆಲ ಹಿರಿಯ ಅಧಿಕಾರಿಗಳು ಕೈ ಜೋಡಿಸಿದ್ದು, ನನಗೆ ತುಂಬಾ ತೊಂದರೆ ನೀಡಿ ನನ್ನ ಮೇಲೆ ವಿನಾಕಾರಣ ಸುಳ್ಳು ಕೇಸ್ ಗಳನ್ನ ಸಹ ದಾಖಲು ಮಾಡ್ತಿದ್ದಾರೆ.

ನನಗೆ ಸರಿಯಾದ ರಕ್ಷಣೆಯೂ ಇಲ್ಲದೆ ಪದೇ ಪದೇ ಸಸ್ಪೆಂಡ್ ಕೂಡ ಮಾಡ್ತಿದ್ದಾರೆ. ಹೆಲ್ಪ್ ಮಾಡ್ತೀನಿ ನೀನು ಬರ್ತೀಯಾ ಅಂಥ ಕೆಟ್ಟದಾಗಿ ಮಾತಾಡಿ , ಲೈಂಗಿಕ ಕಿರುಕುಳ ನೀಡ್ತುದ್ದಾರೆ. ಈ ಕುರಿತು ನಾನು  ರಾಜ್ಯಪಾಲರಿಗೆ, ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಕಡೆ ದೂರು ನೀಡಿದ್ದು ನಮಗೆ ಎಲ್ಲೂ ನ್ಯಾಯ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ.

ಇನ್ನೂ ಈ ಹಿಂದೆಯೂ ಸಹ  ಮಹಿಳೆಯನ್ನ ಪೋಲೀಸ್ರು ಠಾಣೆಗೆ ಕರೆದೊಯ್ದು ರಾತ್ರಿ ೧೨ ತನಕ ಠಾಣೆಯಲ್ಲಿಟ್ಟು ಹಲ್ಲೆ  ಮಾಡಿದ್ರು. ಈ ಸಂಬಂಧ ಅಷ್ಟೂ ಅಧಿಕಾರಿಗಳು ಸಸ್ಪೆಂಡ್ ಆಗಿದ್ರು. ಇಷ್ಟಾದ್ರು ನನ್ನಮೇಲಿನ ದೌರ್ಜನ್ಯ ನಿರಂತರವಾಗಿ  ಮುಂದುವರೆದಿದೆ. ಹೀಗಾಗಿ ನ್ಯಾಯ ಒದಗಿಸುವಂತೆ ಮಹಿಳೆ ಮಹಿಳಾ ಆಯೋಗಕ್ಕೆ ದೂರು ದಾಖಲಿಸಿದ್ದಾರೆ.

ಇನ್ನೂ ಈಗಾಗಲೇ ಸಾಕಷ್ಟು ಕಡೆ ದೂರು ದಾಖಲಿಸಿರುವ ಮಂಗಳ , ಮಹಿಳಾ ಆಯೋಗದ ಮೊರೆ ಹೋಗಿದ್ದು ನ್ಯಾಯ ಸಿಗುವ ಭರವಸೆಯಲ್ಲಿದ್ದಾರೆ. ಆದ್ರೆ ದೂರು ಸ್ವೀಕಾರ ಮಾಡಿರುವ ಮಹಿಳಾ ಆಯೋಗದ ಅಧ್ಯಕ್ಷೇ ನಾಗಲಕ್ಷ್ಮೀ ಭಾಯಿಯವರು ಮಹಿಳೆಗೆ ನ್ಯಾಯ ಒದಗಿಸ್ತಾರ ಅನ್ನೋದನ್ನ ಕಾದು ನೋಡಬೇಕಾಗಿದೆ…

LEAVE A REPLY

Please enter your comment!
Please enter your name here