Home District ಬೀದಿಗೆ ಬಂದ BJP ಸಂಸದರ ಕಿತ್ತಾಟ..! “ಕಾಮನ್‌ ಸೆನ್ಸ್‌ ಇದೆಯಾ ನಿಮಗೆ ಬನ್ರೀ, ನೀವೇನು ದಾದಾಗಿರಿ...

ಬೀದಿಗೆ ಬಂದ BJP ಸಂಸದರ ಕಿತ್ತಾಟ..! “ಕಾಮನ್‌ ಸೆನ್ಸ್‌ ಇದೆಯಾ ನಿಮಗೆ ಬನ್ರೀ, ನೀವೇನು ದಾದಾಗಿರಿ ಮಾಡುತ್ತಿದ್ದಿರಾ..?”

2358
0
SHARE

ಏ ಎನ್ರೀ ಸಿನೀಯರ್ ಆಗಿ ಹೀಂಗ್ ಮಾಡ್ತಿರಲ್ಲಾ… ನಿಮಗ್ ಸ್ವಲ್ಪನಾದ್ರು ಕಾಮನಸೆನ್ಸ್ ಇದೆಯಾ? ಏನು ದಾದಾಗಿರಿ ಮಾಡ್ತೀರಾ ನನಗೆ ಕಾಮನ್ ಸೆನ್ಸ್ ಬಗ್ಗೆ ಹೇಳ್ತಿಯಾ… ಹೀಗೆ ಬಹಿರಂಗವಾಗಿಯೇ ಸಾರ್ವಜನಿಕರು ಹಾಗೂ ಮಾಧ್ಯಮಗಳ ಮುಂದೆ ಕಿತ್ತಾಡಿಕೊಂಡಿದ್ದು ನಮ್ಮ ಜನನಾಯಕರು. ಇವರ ಬೀದಿ ಜಗಳ ನೋಡ್ಕೊಂಡು ಮುಗುಳ್ನಗುತ್ತಿದ್ರು ಆ ಸಚಿವರು. ಹೌದು ಇಂತಹದೊಂದು ಬೆಳವಣಿಗೆಗೆ ಸಾಕ್ಷಿಯಾಗಿದ್ದು ಕುಂದಾನಗರಿ ಬೆಳಗಾವಿ.

ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕದ ವಿಷಯಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಇಬ್ಬರು ಪ್ರಭಾವಿ ಬಿಜೆಪಿ ನಾಯಕರು ಬೀದಿ ಜಗಳ ಮಾಡಿಕೊಂಡಿದ್ದಾರೆ. ಬಿಜೆಪಿ ಸಂಸದ ಸುರೇಶ್‌ ಅಂಗಡಿ ಮತ್ತು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರು ನೂರಾರು ಜನರ ಎದುರೇ ವಾಗ್ವಾದ ನಡೆಸಿದ್ದಾರೆ. ಬೆಳಗಾವಿಯಲ್ಲಿ ನಡೆದ ರೈಲ್ವೇ ಓವರ್‌ ಬ್ರಿಡ್ಜ್ ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಇಬ್ಬರ ಜಗಳಕ್ಕೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಸಾಕ್ಷಿಯಾಗಿದ್ದಾರೆ.

ರೈಲ್ವೆ ಮೇಲ್ಸೆತುವೆ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರು ಹಾಕಿಲ್ಲ ಅಂತ ಗರಂ ಆದ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ವೇದಿಕೆ ಏರದೇ ಸಿಟ್ಟಾಗಿ ಕುಳಿತುಕೊಂಡು ಬಿಟ್ಟಿದ್ದರು. ಆಗ ಸಂಸದ ಸುರೇಶ ಅಂಗಡಿ ಕೋರೆಯವ್ರ ಮನವೊಲಿಸಲು ಬಂದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಸಿನಿಯರ್ ಆಗಿ ಹೀಗ್ ಮಾಡ್ತಿರಾ… ನಿಮಗೆ ಸ್ವಲ್ಪಾನಾದ್ರು ಕಾಮನ್ ಸೇನ್ಸ್ ಇದೇಯಾ ಎಂದು ಪ್ರಭಾಕರ್ ಕೋರೆ ಪ್ರಶ್ನಿಸಿದ್ದಾರೆ..

ಇದಕ್ಕೆ ಪ್ರತಿ ಉತ್ತರ ನೀಡಿದ ಡಾ. ಕೋರೆ, ನಾನು ಬರಲ್ಲ, ನೀವೇನು ದಾದಾಗಿರಿ ಮಾಡುತ್ತಿದ್ದಿರಾ ಎಂದು ಆವಾಜ್ ಹಾಕಿದರು. ನಾನೆಂದು ಹೆಸರಿನ ಸಲುವಾಗಿ ನಾನೆಂದು ಜಗಳವಾಡಿದವನಲ್ಲ. ಅಷ್ಟಕ್ಕೂ ಇದು ನಿನ್ನ ಪರ್ಸನಲ್ ಕಾರ್ಯಕ್ರಮವಲ್ಲ ಇದು ಸರಕಾರಿ ಕಾರ್ಯಕ್ರಮ ಎಂದು ಅಂಗಡಿ ವಿರುದ್ಧ ಹರಿಹಾಯ್ದರು.ಸಂಸದ ಅಂಗಡಿ ಹಾಗೂ ಪ್ರಭಾಕರ ಕೋರೆಯವ್ರ ಬೀದಿ ಕಾಳಗಕ್ಕೆ ಸಾಕ್ಷಿಯಾಗಿದ್ದು ಸಚಿವ ಸತೀಶ್ ಜಾರಕಿಹೊಳಿಯವ್ರು.

ಇನ್ನೂ ಇಬ್ಬರು ಕೆಲ ಹೊತ್ತು ವಾಗ್ವಾದ ಕೆಲವರಿಗೆ ಪುಕ್ಕಟೆ ಮನೋರಂಜನೆ ನೀಡಿದ್ರು.ಇನ್ನೂ ರೈಲ್ವೆ ಮೇಲ್ಸೆತುವೆ ವೇದಿಕೆ ಕಾರ್ಯಕ್ರಮದ ಭಾಷಣದಲ್ಲಿ ಟಾಂಗ್‌ ನೀಡಿದ ಕೋರೆ, ಈ ಬ್ರಿಡ್ಜ್‌ಗೆ ಸುರೇಶ್‌ ಅಂಗಡಿ ಅವರ ಸ್ಮರಣಾರ್ಥ ಅವರ ಹೆಸರು ಇಡಬೇಕು ಅನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಅವರು ಇನ್ನೂ ಜೀವಂತವಾಗಿದ್ದಾರೆ ಎಂದು ಕಾಲೆಳೆದ್ರು…

ಮತ್ತೊಂದೆಡೆ, ಸಮಾರಂಭದಲ್ಲಿ ಮಾತನಾಡಿದ ಸುರೇಶ್ ಅಂಗಡಿ, ಇದು ನಮ್ಮ ಮನೆ ಕೆಲಸ ಅಲ್ಲ.. ಬೆಳಗಾವಿ ಜನರ ಕೆಲಸಕ್ಕೆ ಆಹ್ವಾನ ನೀಡಬೇಕಂತಿಲ್ಲ.. ಫೇಸ್ ಬುಕ್, ಟ್ವೀಟರ್ ನಲ್ಲಿ ಎಲ್ಲರನ್ನು ಕರೆದಿದ್ದೇವೆ ಎಂದು ಹೇಳಿದ್ರು.ಒಂದು ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದರಿಬ್ಬರು ಬೀದಿಜಗಳ ಮಾಡಿಕೊಂಡಿದ್ದು ವಿಷಾದನೀಯ.. ಸಾರ್ವಜನಿಕವಾಗಿ ಸಂಸದರಿಬ್ಬರು ಸಂಯಮದಿಂದ ವರ್ತಿಸಿದ್ದರೆ ಚೆನ್ನಾಗಿತ್ತು..

LEAVE A REPLY

Please enter your comment!
Please enter your name here