Home Health ಬೃಹತ್ ಕೇತುಗ್ರಸ್ತ ಚಂದ್ರಗ್ರಹಣ ಭಾರತದಲ್ಲೂ ಕಾಣಿಸಿಕೊಳ್ಳಲಿದೆ..! ಯಾವ ರಾಶಿಯವರಿಗೆ ಗ್ರಹಣದ ಎಫೆಕ್ಟ್ ಇದೆ?

ಬೃಹತ್ ಕೇತುಗ್ರಸ್ತ ಚಂದ್ರಗ್ರಹಣ ಭಾರತದಲ್ಲೂ ಕಾಣಿಸಿಕೊಳ್ಳಲಿದೆ..! ಯಾವ ರಾಶಿಯವರಿಗೆ ಗ್ರಹಣದ ಎಫೆಕ್ಟ್ ಇದೆ?

2049
0
SHARE

ಈ ಬಾರಿ ಖಗ್ರಾಸ ಕೇತುಗ್ರಸ್ತ ಚಂದ್ರಗ್ರಹಣ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಿದೆಯಂತೆ.. ಇದೇ ಜುಲೈ 27ರ ಶುಕ್ರವಾರ ನಭೋಮಂಡಲದಲ್ಲಿ ನಡೆಯಲಿರೋ ಚಂದ್ರಗ್ರಹಣ ಗ್ರಹಣ ಹಲವು ಖಗೋಳ ಅದ್ಭುತಗಳಿಗೆ ಸಾಕ್ಷಿಯಾಗಲಿದೆ.. ಜೊತೆಗೆ ಈ ಖಗ್ರಾಸ ಕೇತು ಚಂದ್ರಗ್ರಹಣವನ್ನು ಸೂತಕವೆಂದೇ ಎಲ್ಲರೂ ಭಾವಿಸಿದ್ದಾರೆ..

ಹೀಗಾಗಿಯೇ ಬೆಂಗಳೂರಿನಲ್ಲಿರೋ ಲಕ್ಷ್ಮೀನರಸಿಂಹ, ಕಾಡು ಮಲ್ಲಿಕಾರ್ಜುನ, ಗಂಗಮ್ಮದೇವಿ ದೇವಾಲಯಗಳು ಸೇರಿದಂತೆ ಎಲ್ಲಾ ದೇವಸ್ಥಾನಗಳು ಸಂಜೆಯಿಂದಲೇ ಭಕ್ತರಿಗೆ ದರ್ಶನವನ್ನು ನಿಷೇಧಿಸಲಾಗಿದೆ..ಜುಲೈ 27ರ ಶುಕ್ರವಾರ ಶ್ರೀ ವಿಳಂಬಿ ನಾಮ ಸಂವತ್ಸರದ ಆಷಾಢ ಶುಕ್ಲ ಹುಣ್ಣಿಮೆ, ಉತ್ತರಾಷಾಢ ಮತ್ತು ಶ್ರವಣ ನಕ್ಷತ್ರಗಳಲ್ಲಿ, ಮಕರ ರಾಶಿಯಲ್ಲಿ, ಮೇಷ, ವೃಷಭ ಮತ್ತು ಮಿಥುನ ಲಗ್ನಗಳಲ್ಲಿ, ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತದೆ.

ಈ ಕೇತುಗ್ರಸ್ತ ಚಂದ್ರ ಗ್ರಹಣವನ್ನು ಸೂತಕ ಸಮಯವೆಂದೇ ಭಾವಿಸಲಾಗಿದೆ.. ಈ ಗ್ರಹಣ ಸಮಯದಲ್ಲಿ ಕೆಲವು ಆಚರಣೆಗಳನ್ನು ತಪ್ಪದೇ ಪಾಲಿಸಲೇಬೇಕಾಗಿದೆ.. ಗರ್ಭಿಣಿಯರು, ಖಾಯಿಲೆಯಿಂದ ಬಳಲುತ್ತಿರುವವರು ಶುಕ್ರವಾರದಂದು ರಾತ್ತಿ 8 ಗಂಟೆಯೊಳಗೆ ಉಪಹಾರವನ್ನು ಸೇವಿಸಬಹುದು.. ಉಳಿದಂತೆ ಎಲ್ಲರೂ ಮಧ್ಯಾಹ್ನ 4 ಗಂಟೆ ಒಳಗೆ ಆಹಾರವನ್ನು ಸೇವಿಸಬೇಕು.. ಗ್ರಹಣದ ಕಿರಣಗಳು‌ ಭೂಮಿಯಲ್ಲಿ ಬೀಳುವುದರಿಂದ ಹೆಚ್ಚು ಜಾಗೃತಿವಹಿಸುವುದು ಉತ್ತಮ ಎನ್ನುತ್ತಾರೆ ಅರ್ಚಕರು..

ಇನ್ನು ರಾತ್ರಿ 11ಗಂಟೆ 54 ನಿಮಿಷಕ್ಕೆ ಕೇತುಗ್ರಸ್ತ ಗ್ರಹಣ ಭೂಮಿಗೆ ಸ್ಪರ್ಶಿಸಲಿದೆ.. ಸುಮಾರು ಮಧ್ಯರಾತ್ರಿ 1 ಗಂಟೆ 52 ನಿಮಿಷದವರೆಗೂ ಗ್ರಹಣದ ಪ್ರಭಾವ ಇರುತ್ತೆ.. ಬೆಳಗ್ಗೆ 3 ಗಂಟೆ 49 ನಿಮಿಷಕ್ಕೆ ಚಂದ್ರನಿಗೆ ಗ್ರಹಣದಿಂದ ಮೋಕ್ಷ ಸಿಗಲಿದೆ.. ಈ ಗ್ರಹಣವು ಉತ್ತರಾಷಾಢ ನಕ್ಷತ್ರ ಹಾಗೂ ಶ್ರವಣ ನಕ್ಷತ್ರವನ್ನು ಹೊಂದಿದೆ.. ಇದರ ಪ್ರಭಾವ ಮಕರ, ಧನಸ್ಸು ರಾಶಿಯವರ ಮೇಲೆ ಹೆಚ್ಚು ಬೀರಲಿದೆ.. ಹೀಗಾಗಿ ರಾಶಿಯವರೆಗೆ ದೇವಸ್ಥಾನಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಚಂಡಿಕಾ ಶಾಂತಿ ಹೋಮಗಳನ್ನು ನಡೆಸಲಾಗುತ್ತದೆ..

ಯಾರ್ಯಾರಿಗೆ ಗ್ರಹಣದ ಎಫೆಕ್ಟ್ ಇದೆ? ಏನೇನು ಪರಿಹಾರ ಮಾರ್ಗಗಳಿವೆ ಅನ್ನೋದನ್ನೂ ದೇವಸ್ಥಾನಗಳ ಮುಂದೆ ಹಾಕಲಾಗಿದೆ.. ಭಕ್ತರು ಹೋಮಕ್ಕಾಗಿ ಅಕ್ಕಿ, ಗೋಧಿ, ಬೆಲ್ಲ, 3 ತೆಂಗಿನಕಾಯಿ, 3 ನಿಂಬೆ ಹಣ್ಣು, ಎಲೆ ಅಡಿಕೆ, ಮಲ್ಲಿಗೆ ಹೂ, 11 ರೂಪಾಯಿ ನಾಣ್ಯ ತರಬೇಕು ಎಂದೂ ಅರ್ಚಕರು ಹೇಳುತ್ತಿದ್ದಾರೆ. ಹೀಗಾಗಿ ಭಕ್ತರು ಗ್ರಹಣದ ಸಮಯದಲ್ಲಿ ಅತೀ ಹೆಚ್ಚು ಜಾಗೃತರಾಗಿರೋದು ಒಳ್ಳೆಯದು ಎಂದು ನಂಬಿದ್ದಾರೆ..

ಒಟ್ಟಾರೆ, ಈ ಬಾರಿಯ ಖಗ್ರಾಸ ಚಂದ್ರ ಗ್ರಹಣ ಭಾರೀ ಕುತೂಹಲವನ್ನು ಮೂಡಿಸಿದ್ದು ಈ ಬಗ್ಗೆ ದೇವಾಲಯಗಳು ಮುಂಜಾಗೃತವಾಗಿ ಬಂದ್ ಆಗಲಿವೆ.. ಜೊತೆಗೆ ಗ್ರಹಣ ಮುಕ್ತವಾದ ಬಳಿಕ ಪಾಪದ ಶಮನಕ್ಕಾಗಿ ವಿಶೇಷ ಪೂಜೆಗಳನ್ನು ಕೈಗೊಂಡಿದ್ದು, ಯಾವ ರಾಶಿವರ ಮೇಲೆ ಗ್ರಹಣ ಪ್ರಭಾವ ಬೀರುತ್ತದೆಯೋ ಅವರು ಪೂಜೆಯಲ್ಲಿ ಭಾಗಿಯಾಗಿ ಗ್ರಹಣದಿಂದ ಮುಕ್ತರಾಗಬಹುದಾಗಿದೆ.. ಇನ್ನುಂದಡೆ ಇಡೀ ವಿಶ್ವವೇ ಖಗ್ರಾಸ ಚಂದ್ರಗ್ರಹಣದಂತ ಕುತೂಹಲದಿಂದ ತನ್ನ ಚಿತ್ತ ನೆಟ್ಟಿದೆ ಹೀಗಾಗಿ ಶುಕ್ರವಾರ ಯಾವ ರೀತಿ ಗ್ರಹಣ ಕಾಣಿಸಿಕೊಳ್ಳಲಿದೆ ಅನ್ನೋದನ್ನ ಸಧ್ಯದ ಮಟ್ಟಿಗೆ ಕಾದುನೋಡಬೇಕಿದೆ..

LEAVE A REPLY

Please enter your comment!
Please enter your name here