Home Cinema ಬೆಂಕಿಯುಂಡೆ ಉಗುಳೇ ಬಿಟ್ರಲ್ಲ ತಲೈವಾ (ಸೂಪರ್ ಸ್ಟಾರ್ ರಜಿನಿಕಾಂತ್)..! ಕಾಳಿ ಮಹಾಯಾಗಕ್ಕೆ ದಿಲ್ ಖುಷ್ ಹುವಾ..!

ಬೆಂಕಿಯುಂಡೆ ಉಗುಳೇ ಬಿಟ್ರಲ್ಲ ತಲೈವಾ (ಸೂಪರ್ ಸ್ಟಾರ್ ರಜಿನಿಕಾಂತ್)..! ಕಾಳಿ ಮಹಾಯಾಗಕ್ಕೆ ದಿಲ್ ಖುಷ್ ಹುವಾ..!

955
0
SHARE

ಯಸ್, ಪೆಟ್ಟಾ.. ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಸಿನಿಮಾ. ರಜಿನಿ ಅಭಿಮಾನಿಗಳ ಅತೀವ ಕೂತುಹಲಕ್ಕೆ ಕಾರಣವಾಗಿರುವ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ.ಪೆಟ್ಟಾ, ಕಂಪ್ಲೀಟ್ಲೀ ಕಮರ್ಷಿಯಲ್ ಸಿನಿಮಾ. ಸಿಂಪಲ್ಲಾಗ್ ಹೇಳಬೇಕಂದ್ರೆ ರಜಿನಿ ಅಭಿಮಾನಿಗಳಿಗಾಗಿ ಅಂಥನೇ ಹೇಳಿ ಮಾಡಿಸಿದ ಸಿನಿಮಾ ಇದು. ಇನ್ನೂ ಹಿಂದೆ ಕಬಾಲಿ, ಕಾಲಾದಲ್ಲಿ ಕಾಣೆಯಾಗಿದ್ದ ರಜಿನಿ ಇಲ್ಲಿ ಪ್ರತ್ಯಕ್ಷವಾಗಿದ್ದಾರೆ.

ಇದುವೇ ಇದೀಗ ಅಭಿಮಾನಿಗಳ ಸಂತಸ, ಸಂಭ್ರಮವನ್ನೂ ಹೆಚ್ಚಿಸಿದೆ.ಪೆಟ್ಟಾದಲ್ಲಿ ಕಾಳಿ ಪಾತ್ರ ಮಾಡಿರುವ ರಜಿನಿಯನ್ನ, ಇಲ್ಲಿ ನೋಡೋದೇ ಚೆಂದ. ಇನ್ನೂ ನಲವತ್ತರ ಪ್ರಾಯದವನಂತೆ ಇಲ್ಲಿ ಕಾಣಸಿಗುವ ರಜಿನಿ, ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ರಜಿನಿ ಡೈಲಾಗ್‌ಗಳೂ ಪಡೆಯಪ್ಪ ಸಿನಿಮಾವನ್ನೂ ನೆನಪಿಸುತ್ತದೆ.ಇನ್ನೂ ಪೆಟ್ಟಾ, ತ್ರಿಶಾ ಕನಸನ್ನೂ ನನಸು ಮಾಡಿದೆ. ಸಿನಿಮಾ ಸರ್ಕಲ್ ಕಂಪ್ಲೀಟ್ ಮಾಡಿದೆ.

ಹೌದು, ಇಲ್ಲಿವರೆಗೂ ಅನೇಕ ನಾಯಕ ನಟರೊಂದಿಗೆ ಬಣ್ಣ ಹಚ್ಚಿರುವ ತ್ರಿಶಾಗೆ, ಮೊದಲಿಂದನೂ ಒಂದು ಬಯಕೆ ಇತ್ತು. ಕನಸು ಇತ್ತು. ಅದುವೇ ರಜಿನಿಯೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಬೇಕೆನ್ನೋದು. ಇದೀಗ ತ್ರಿಶಾಳ ಇದೇ ಕನಸು ನನಸಾಗಿದೆ. ಸಾರೋ ಪಾತ್ರವನ್ನ ತ್ರಿಶಾ ಇಲ್ಲಿ ನಿರ್ವಹಿಸಿದ್ದಾರೆ.ಸಿಮ್ರನ್ ಚಿತ್ರದ ಮತ್ತೊಂದು ಆಕರ್ಷಣೆ. ಇನ್ನೂ ಚಿತ್ರದಲ್ಲಿ ವಿಜಯ್ ಸೇತುಪತಿನೂ ಇದ್ದಾರೆ.

ಇದು ಸಿನಿಮಾ ನೋಡಲು ಅಭಿಮಾನಿಗಳಿಗೆ ಇರಲು ಇನ್ನೊಂದು ಕಾರಣ. ಜೀತು ಪಾತ್ರವನ್ನ ನಿರ್ವಹಿಸಿರುವ ವಿಜಯ್ ಸೇತುಪತಿನೂ ರಜಿನಿ ಜೊತೆ ಕಾಣಿಸಿಕೊಳ್ತಿರೋದು ಇದೇ ಮೊದಲು.ಬಿಟೌನ್‌ನ ಟ್ಯಾಲೆಂಟಡ್ ನಟ ನವಾಜುದ್ದೀನ್ ಸಿದ್ದಿಕಿ, ಪೆಟ್ಟಾದಲ್ಲಿ ರಜಿನಿಗೆ ಸವಾಲು ಹಾಕುವ ಪಾತ್ರದಲ್ಲಿ ಕಾಣಸಿಗಲಿದ್ದಾರೆ. ಇಲ್ಲೂ ತಮ್ಮ ಅಭಿನಯದಿಂದ ಅಭಿಮಾನಿಗಳನ್ನ ಚಕಿತಗೊಳಿಸುವ ಕೆಲ್ಸಕ್ಕೆ ಕೈ ಹಾಕಿದಂತಿರುವ ನವಾಜುದ್ದೀನ್‌ಗೆ ಆಗ್ಲೇ ಅನೇಕರು ಬಹುಪರಾಕ್ ಹಾಕುತ್ತಿದ್ದಾರೆ.

ಬರೀ ಇವ್ರಷ್ಟೇ ಅಲ್ಲ, ಶಶಿಕುಮಾರ್, ಬಾಬಿ ಸಿಂಹಾ. ಮಾಳ್ವಿಕಾ ಮೋಹನನ್, ಮೇಘನಾ ಆಕಾಶ್ ಸೇರಿ ಬಹುದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ. ಇನ್ನೂ ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಚಿತ್ರಕ್ಕೆ, ಅನಿರುದ್ದ್ ಆಸ್ ಎ ಮ್ಯೂಸಿಕ್ ಡೈರೆಕ್ಟರ್ ಆಗಿ ಸಾಥ್ ನೀಡಿದ್ದಾರೆ.ಅಂದ ಹಾಗೇ ಪೆಟ್ಟಾ ಸಿನಿಮಾದ ಟ್ರೇಲರ್ ಬಿಡುಗಡೆಯಾಗ್ತಿದ್ದಂತೆ, ಚಿತ್ರದ ಬಿಡುಗಡೆಯ ದಿನ ಹತ್ತಿರ ಬರ‍್ತಿದ್ದಂತೆ ಕನ್ನಡ ಚಿತ್ರರಂಗದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗುತ್ತಿದೆ. ಕಾರಣ, ಪೆಟ್ಟಾ ಕನ್ನಡಕ್ಕೆ ಡಬ್ ಆಗಿ ತೆರೆಗೆ ಬರಲಿದೆ ಅನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿರೋದು…

LEAVE A REPLY

Please enter your comment!
Please enter your name here