Home District ಬೆಂಕಿ ಹಚ್ಚಿದ್ರೆ ಹೊತ್ತಿ ಉರಿಯುತ್ತೆ ಬಾವಿಯಲ್ಲಿರುವ ನೀರು..! ಆತಂಕದಲ್ಲಿ ಹಬ್ಬ ಬಿಟ್ಟು ಬೀದಿಗೆ ಬಂದ ಜನರು..!

ಬೆಂಕಿ ಹಚ್ಚಿದ್ರೆ ಹೊತ್ತಿ ಉರಿಯುತ್ತೆ ಬಾವಿಯಲ್ಲಿರುವ ನೀರು..! ಆತಂಕದಲ್ಲಿ ಹಬ್ಬ ಬಿಟ್ಟು ಬೀದಿಗೆ ಬಂದ ಜನರು..!

365
0
SHARE

ಬೆಂಕಿ ಹಚ್ಚಿದರೆ ಬಾವಿ ನೀರು ಉರಿಯುವ ವಿಲಕ್ಷಣ ಘಟನೆ ಮಂಗಳೂರಿನ ದೇರಳಕಟ್ಟೆಯಲ್ಲಿ ಕಂಡುಬಂದಿದೆ. ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇರಳಕಟ್ಟೆ ಸಮೀಪದ ಕಾನಕೆರೆ ಎಂಬಲ್ಲಿ ಈ ಘಟನೆ ನಡೆಯುತ್ತಿದೆ. ಕಾನಕೆರೆಯ ನಾಲ್ಕು ಬಾವಿಗಳ ನೀರಿನಲ್ಲಿ ಪೆಟ್ರೋಲಿಯಂ ಅಂಶ ಕಂಡುಬರುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಾನಕೆರೆ ಪ್ರದೇಶ ಜನವಸತಿ ಹೊಂದಿದ್ದು, ಇಲ್ಲಿ ಹಲವು ತೆರೆದ ಬಾವಿಗಳಿವೆ. ಈ ಪೈಕಿ ನಾಲ್ಕು ಬಾವಿಗಳಲ್ಲಿನ ನೀರು ಪೆಟ್ರೋಲ್ ವಾಸನೆಯಿಂದ ಕೂಡಿದ್ದು, ಬೆಂಕಿ ಕೊಟ್ಟರೆ ಹೊತ್ತಿ ಉರಿಯುತ್ತಿದೆ. ಇದು ಸ್ಥಳೀಯ ನಿವಾಸಿಗಳನ್ನು ಆತಂಕಿತರನ್ನಾಗಿಸಿದೆ.

ಕಳೆದೆರಡು ದಿನಗಳಿಂದ ಇಂತಹ ಪ್ರಕರಣ ನಡೆಯುತ್ತಿದ್ದರೂ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ರಾತ್ರಿ ಬಾವಿಗಳನ್ನು ಪರಿಶೀಲಿಸಿದಾಗ ಇದು ಬೆಳಕಿಗೆ ಬಂದಿದೆ. ಈ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಆದರೆ ರಾತ್ರಿಯವರೆಗೆ ಅಗ್ನಿಶಾಮಕ ದಳ ಇತ್ತ ಆಗಮಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ದೇರಳಕಟ್ಟೆ ಜಂಕ್ಷನ್ನಲ್ಲಿರುವ ಪೆಟ್ರೋಲ್ ಪಂಪ್ ನ ತೈಲ ಬಾವಿ ಲೀಕೇಜ್ ಆಗಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here