Home Elections 2019 ಬೆಂಗಳೂರಿಗೆ ಬಜೆಟ್‌ನಲ್ಲಿ ಯೋಜನೆಗಳ ಮಹಾಪೂರ..! ನಗರದ ಮೂಲಸೌಕರ್ಯ, ಸಂಚಾರ ವ್ಯವಸ್ಥೆಗೆ ಒತ್ತು.! ರಾಜಧಾನಿ ಅಭಿವೃದ್ಧಿಗೆ $8.015...

ಬೆಂಗಳೂರಿಗೆ ಬಜೆಟ್‌ನಲ್ಲಿ ಯೋಜನೆಗಳ ಮಹಾಪೂರ..! ನಗರದ ಮೂಲಸೌಕರ್ಯ, ಸಂಚಾರ ವ್ಯವಸ್ಥೆಗೆ ಒತ್ತು.! ರಾಜಧಾನಿ ಅಭಿವೃದ್ಧಿಗೆ $8.015 ಕೋಟಿ ಮೀಸಲು..

344
0
SHARE

ವಿಶ್ವಮಾನ್ಯತೆ ಹೊಂದಿರೋ ರಾಜಧಾನಿ ಬೆಂಗಳೂರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಕಡೆಗಣಿಸಿಲ್ಲ. ಹತ್ತು ಹಲವು ಯೋಜನೆಗಳನ್ನು ಉದ್ಯಾನನಗರಿಗೆ ಘೋಷಣೆ ಮಾಡಿದ್ದಾರೆ.

ಸಿಲಿಕಾನ್ ಸಿಟಿ ಅಭಿವೃದ್ಧಿಗೆ 2019-20 ಸಾಲಿನ ಬಜೆಟ್‌ನಲ್ಲಿ 8 ಕೋಟಿಗೂ ಹೆಚ್ಚು ಹಣ ಮೀಸಲಿಟ್ಟಿದ್ದಾರೆ.ನವ ಬೆಂಗಳೂರು ಕ್ರಿಯಾ ಯೋಜನೆ ಅನುಷ್ಠಾನಕ್ಕೆ 2.300 ಕೋಟಿ ಮೀಸಲಿಟ್ಟಿದ್ದಾರೆ.ಬೆಂಗಳೂರು ಮೂಲಸೌಕರ್ಯ ಹಾಗೂ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಿರ್ಧರಿಸಲಾಗಿದೆ.ಕಾವೇರಿ ನೀರು ಪೂರೈಕೆ ಯೋಜನೆ 5ನೇ ಹಂತ ಅನುಷ್ಠಾನಕ್ಕೆ 500 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ.ಹಣಕಾಸು ಸಚಿವರೂ ಆಗಿರೋ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸದ 2019-20ನೇ ಸಾಲಿನ ಬಜೆಟ್‌ನಲ್ಲಿ ಬೆಂಗಳೂರಿಗರನ್ನು ನಿರಾಸಗೊಳಿಸಿಲ್ಲ.

ಅತಿವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಬ್ರ್ಯಾಂಡ್ ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಇನ್ನುಷ್ಟು ಆಕರ್ಷಣೀಯವಾಗಿಸಲು ಸರ್ಕಾರ 1.2 ಲಕ್ಷ ಕೋಟಿ ವೆಚ್ಚದಲ್ಲಿ ದೂರದೃಷ್ಟಿ ಯೋಜನೆಗಳಿಗೆ ಚಾಲನೆ ನೀಡಿದೆ.ಇದರ ಜೊತೆ ಇಂದಿನ ಬಜೆಟ್‌ನಲ್ಲಿ ಸರ್ಕಾರ 8.015 ಕೋಟಿ ಮೀಸಲಿಟ್ಟಿದೆ.ಬೆಂಗಳೂರಿಗೆ ಏನು ?ನವ ಬೆಂಗಳೂರು ಕ್ರಿಯಾ ಯೋಜನೆ ಅನುಷ್ಠಾನಕ್ಕೆ $2.300 ಕೋಟಿ.

ಎಲಿವೇಟೆಡ್ ಕಾರಿಡಾರ್ ಯೋಜನೆಗೆ 1 ಸಾವಿರ ಕೋಟಿ ಮೀಸಲು.5 ಲಕ್ಷ ಬೀದಿ ದೀಪಗಳನ್ನು ಎಲ್ಇಡಿ ದೀಪಗಳಾಗಿ ಪರಿವರ್ತನೆ.ಕಮರ್ಷಿಯಲ್ ಸ್ಟ್ರೀಟ್ ,ಬ್ರಿಗೇಡ್ ರೋಡ್ ಪಾದಚಾರಿ ರಸ್ತೆಗಳನ್ನಾಗಿ ಪರಿವರ್ತನೆ.ಘನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನೆ.
10 ಸಾವಿರ ವಾಹನಗಳ ನಿಲುಗಡೆಗೆ 87 ಆಯ್ದ ರಸ್ತೆಗಳನ್ನು ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ. $195 ಕೋಟಿ ವೆಚ್ಚದಲ್ಲಿ ಹೆಬ್ಬಾಳ, ಕೆ.ಆರ್.ಪುರಂ ಮೇಲ್ಸೇತುವೆಗಳಲ್ಲಿ ಹೆಚ್ಚುವರಿ ಲೂಪ್ ನಿರ್ಮಾಣ. ಗೊರಗುಂಟೆಪಾಳ್ಯದಲ್ಲಿ ಹೊಸ ಅಂಡರ್ ಪಾಸ್ ನಿರ್ಮಾಣ.17,200 ಕೋಟಿ ವೆಚ್ಚದಲ್ಲಿ ಫೆರಿಫೆರಲ್ ರಿಂಗ್ ರಸ್ತೆ ಯೋಜನೆ .

ಘೋಷಣೆ ಮಾಡಿದ 8.015 ಕೋಟಿ ಪೈಕಿ ನವ ಬೆಂಗಳೂರು ಕ್ರಿಯಾ ಯೋಜನೆ ಅನುಷ್ಠಾನಕ್ಕೆ 2.300 ಕೋಟಿ ಮೀಸಲಿಡಲಾಗಿದೆ. ಎಲಿವೇಟೆಡ್ ಕಾರಿಡಾರ್ ಯೋಜನೆಗೆ 1 ಸಾವಿರ ಕೋಟಿ ಮೀಸಲು, 5 ಲಕ್ಷ ಬೀದಿ ದೀಪಗಳನ್ನು ಎಲ್ಇಡಿ ದೀಪಗಳಾಗಿ ಪರಿವರ್ತನೆ, ಕಮರ್ಷಿಯಲ್ ಸ್ಟ್ರೀಟ್ ,ಬ್ರಿಗೇಡ್ ರೋಡ್ ಪಾದಚಾರಿ ರಸ್ತೆಗಳನ್ನಾಗಿ ಪರಿವರ್ತನೆಗೆ ಕ್ರಮ, ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ 400 ಮೆಟ್ರಿಕ್ ಟನ್ ಸಾಮರ್ಥ್ಯದ ಘನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನೆ,

10 ಸಾವಿರ ವಾಹನಗಳ ನಿಲುಗಡೆಗೆ 87 ಆಯ್ದ ರಸ್ತೆಗಳನ್ನು ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ, 195 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಬ್ಬಾಳ ಮತ್ತು ಕೆ.ಆರ್.ಪುರಂ ಮೇಲ್ಸೇತುವೆಗಳಲ್ಲಿ ಹೆಚ್ಚುವರಿ ಲೂಪ್ ನಿರ್ಮಾಣ, ಗೊರಗುಂಟೆಪಾಳ್ಯದಲ್ಲಿ ಹೊಸ ಅಂಡರ್ ಪಾಸ್ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 17,200 ಕೋಟಿ ವೆಚ್ಚದಲ್ಲಿ ಫೆರಿಫೆರಲ್ ರಿಂಗ್ ರಸ್ತೆ ಯೋಜನೆ ಕೈಗೆತ್ತಿಕೊಳ್ಳಲಿದ್ದು, ಈ ಯೋಜನೆಗಾಗಿ 1 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ.

23,093 ಕೋಟಿ ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲು ಸೇವೆ ಯೋಜನೆ.
ಬೆಂಗಳೂರು ಮೂಲಸೌಕರ್ಯ ಹಾಗೂ ಅಭಿವೃದ್ಧಿ ನಿಗಮ ಸ್ಥಾಪನೆ.ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಠಾನ.ಬಹುಮಾದರಿ ಪ್ರಯಾಣ ಹಬ್ ಕಾರ್ಯ ಸಾಧ್ಯತೆ ಅಧ್ಯಯನ.ಯಶವಂತಪುರ, ಬನಶಂಕರಿ, ವಿಜಯನಗರ, ಪೀಣ್ಯ ಮೆಟ್ರೋ ರೈಲು.ಟಿಟಿಎಂಸಿಗಳ ಅಂತರ ಕ್ರಮ ಸಂಯೋಜನೆ ವಿನ್ಯಾಸ, ಮೂಲ ಸೌಕರ್ಯ.ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸಂಖ್ಯೆ ಹೆಚ್ಚಳವಾಗುತ್ತಿದೆ.

ಹೀಗಾಗಿಯೇ ಸಂಚಾರ ದಟ್ಟಣೆ ನಿಯಂತ್ರಣ ದೊಡ್ಡ ಸವಾಲಾಗಿದೆ.ಆದ್ದರಿಂದಲೇ 23,093 ಕೋಟಿ ವೆಚ್ಚದಲ್ಲಿ ಬೆಂಗಳೂರು ಉಪ ನಗರ ರೈಲು ಸೇವೆ ಯೋಜನೆಗೆ ಸರ್ಕಾರ ಚಾಲನೆ ನೀಡಿದೆ.ಬೆಂಗಳೂರು ಮೂಲಸೌಕರ್ಯ ಹಾಗೂ ಅಭಿವೃದ್ಧಿ ನಿಗಮ (B-RIDE) ಸ್ಥಾಪಿಸಲು ತೀರ್ಮಾನಿಸಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಇದನ್ನು ಅನುಷ್ಠಾನಕ್ಕೆ ತೀರ್ಮಾನಿಸಲಾಗಿದೆ.ಹೆಬ್ಬಾಳ, ಬೈಯ್ಯಪ್ಪನಹಳ್ಳಿ, ಕೆ.ಆರ್.ಪುರಂ, ಕಾಡುಗೋಡಿ, ಚಲ್ಲಘಟ್ಟ, ಪೀಣ್ಯ ಪ್ರದೇಶಗಳಲ್ಲಿ ಬಹುಮಾದರಿ ಪ್ರಯಾಣ ಹಬ್ ಕಾರ್ಯ ಸಾಧ್ಯತೆ ಅಧ್ಯಯನಕ್ಕೆ ತೀರ್ಮಾನಿಸಲಾಗಿದೆ.

ಯಶವಂತಪುರ, ಬನಶಂಕರಿ, ವಿಜಯನಗರ, ಪೀಣ್ಯ ಮತ್ತು ಇತರೆ ಪ್ರದೇಶಗಳಲ್ಲಿ ಮೆಟ್ರೋ ರೈಲು ಮತ್ತು ಟಿಟಿಎಂಸಿಗಳ ಅಂತರ ಕ್ರಮ ಸಂಯೋಜನೆ ವಿನ್ಯಾಸ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ.ಮೆಟ್ರೋಗೆ ಏನು ಸಿಕ್ತು ?2ನೇ ಹಂತ ಮೆಟ್ರೋ ಯೋಜನೆ ಪ್ರಗತಿ.50 ರೈಲು ಸೆಟ್‌ಗಳು 6 ಕೋಚ್‌ಗಳ ಸೆಟ್ ಗಳಾಗಿ ಪರಿವರ್ತನೆ.10 ಮೆಟ್ರೋ ನಿಲ್ದಾಣಗಳಲ್ಲಿ ದ್ವಿಚಕ್ರವಾಹನ ವಿದ್ಯುತ್ ಚಾರ್ಜಿಂಗ್ ವ್ಯವಸ್ಥೆ.10 ಮೆಟ್ರೋ ನಿಲ್ದಾಣಗಳಲ್ಲಿ ಬಿಎಂಟಿಸಿಯಿಂದ ಸಣ್ಣ ಸಾಮರ್ಥ್ಯದ ಬಸ್‌ ಸೌಲಭ್ಯ.ಯಶವಂತಪುರ ರೈಲ್ವೆ ಹಾಗೂ ಮೆಟ್ರೋ ನಿಲ್ದಾಣಗಳ ನಡುವೆ ಮೇಲ್ಸೇತುವೆ ನಿರ್ಮಾಣ.ಸೆಂಟ್ರಲ್ ಸಿಲ್ಕ್ ಬೋರ್ಡ್ – ಕೆ.ಆರ್.ಪುರಂ- ಹೆಬ್ಬಾಳ ಮಾರ್ಗ.

ಹೊರ ವರ್ತುಲ ರಸ್ತೆ- ವಿಮಾನ ನಿಲ್ದಾಣ ಮಾರ್ಗ ನಿರ್ಮಾಣಕ್ಕಾಗಿ 16,579 ಕೋಟಿ ಅನುದಾನ.
ಮೆಟ್ರೋ ಮತ್ತು ಬಸ್ ಸೇವೆಗಳಲ್ಲಿ ಬಳಸಬಹುದಾದ ಚಾಲನೆ ಕಾರ್ಡ್‌ಗಳ ಜಾರಿಗೆ.
ಮೆಟ್ರೋ ರೈಲಿನಲ್ಲಿ ಪ್ರತಿದಿನ ಲಕ್ಷಾಂತರ ಪ್ರಯಾಣ ಮಾಡುತ್ತಿದ್ದು,ಅವರ ಮೇಲೆ ಸಿಎಂ ಕೃಪೆ ತೋರಿದ್ದಾರೆ.ಈಗಾಗಲೇ 2ನೇ ಹಂತ ಯೋಜನೆ ಪ್ರಗತಿಯಲ್ಲಿ ಎಂದು ಪ್ರಟಿಸಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳಾಗುತ್ತಿರುವುದರಿಂದ 3 ಕೋಚ್ ಗಳಿರುವ ಎಲ್ಲಾ 50 ರೈಲು ಸೆಟ್‌ಗಳನ್ನು 6 ಕೋಚ್ ಗಳ ಸೆಟ್ ಗಳಾಗಿ ಪರಿವರ್ತನೆ ಮಾಡಲು ನಿರ್ಧರಿಸಲಾಗಿದೆ.

ಆಯ್ದ 10 ಮೆಟ್ರೋ ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನಗಳಿಗೆ ವಿದ್ಯುತ್ ಚಾರ್ಜಿಂಗ್ ಸೌಕರ್ಯ, 10 ಮೆಟ್ರೋ ನಿಲ್ದಾಣಗಳಲ್ಲಿ ಬಿಎಂಟಿಸಿಯಿಂದ ಸಣ್ಣ ಸಾಮರ್ಥ್ಯದ ಬಸ್‌ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ. ಯಶವಂತಪುರ ರೈಲ್ವೆ ಹಾಗೂ ಮೆಟ್ರೋ ನಿಲ್ದಾಣಗಳ ನಡುವೆ ಮೇಲ್ಸೇತುವೆ ನಿರ್ಮಾಣ, ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆ.ಆರ್.ಪುರಂ- ಹೆಬ್ಬಾಳ ಮಾರ್ಗವಾಗಿ ಹೊರ ವರ್ತುಲ ರಸ್ತೆ- ವಿಮಾನ ನಿಲ್ದಾಣ ಮಾರ್ಗ ನಿರ್ಮಾಣಕ್ಕಾಗಿ 16,579 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಪ್ರಕಟಿಸಿದ್ದಾರೆ. ಮೆಟ್ರೋ ಮತ್ತು ಬಸ್ ಸೇವೆಗಳಲ್ಲಿ ಬಳಸಬಹುದಾದ ಚಾಲನೆ ಕಾರ್ಡ್‌ಗಳನ್ನು ಜಾರಿಗೆ ತರಲಾಗುತ್ತಿದೆ.

ಕುಡಿಯುವ ನೀರಿಗೆ ಆದ್ಯತೆ…ಕಾವೇರಿ ನೀರು ಸರಬರಾಜು ಯೋಜನೆ5ನೇ ಹಂತ.5550 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನ.ಕುಡಿಯುವ ನೀರು ಯೋಜನೆಗೆ 500 ಕೋಟಿ ಮೀಸಲು.ಮತ್ತೆ ನೀರು ಹರಿಸುವ ಯೋಜನೆಗೆ 50 ಕೋಟಿ ಅನುದಾನ.ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ.ಬೆಂಗಳೂರಿನಲ್ಲಿ ಕುಡಿಯುವ ನೀರು ದೊಡ್ಡ ಸಮಸ್ಯೆಯಾಗಿದೆ. ನಗರದಲ್ಲಿ ಸುಮಾರು 1 ಕೋಟಿ ಜನರು ವಾಸಿಸುತ್ತಿದ್ದು ಅವರಿಗೆ ಕುಡಿಯುವ ನೀರು ಒದಗಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.ಹೀಗಾಗಿಯೇ ಜೈಕ ನೆರವಿನೊಂದಿಗೆ 5550 ಕೋಟಿ ರೂಪಾಯಿ ವೆಚ್ಚದಲ್ಲಿ ಕಾವೇರಿ ನೀರು ಸರಬರಾಜು ಯೋಜನೆಯ5ನೇ ಹಂತ ಅನುಷ್ಠಾನಕ್ಕೆ ಸರ್ಕಾರ ತೀರ್ಮಾನಿಸಿದೆ.

ಈ ಯೋಜನೆಗಾಗಿ ಸರ್ಕಾರ 500 ಕೋಟಿ ಮೀಸಲಿಟ್ಟಿದೆ. ಇದೇ ವೇಳೆ,ಬೆಂಗಳೂರಿನ ಜಲಸಂಪನ್ಮೂಲ ಬಳಸಿ ಅರ್ಕಾವತಿ, ದಕ್ಷಿಣ ಪಿನಾಕಿ ನದಿಗಳನ್ನು ಮತ್ತೆ ನೀರು ಹರಿಸುವ ಯೋಜನೆ ಜಾರಿಗೊಳಿಸಲಾಗುವುದು.ಈ ಯೋಜನೆಗೆ ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿ ರಚನೆ ಮಾಡಲಾಗುತ್ತದೆ.ಈ ಯೋಜನೆಗಾಗಿ 50 ಕೋಟಿ ಅನುದಾನ ಹಾಗೂ ತಿಪ್ಪಗೊಂಡನಹಳ್ಳಿ ಜಲಾಶಯದ ಪುನಶ್ಚೇತನಕ್ಕೆ ಸರ್ಕಾರ ತೀರ್ಮಾನಿಸಿದೆ. ಒಟ್ಟಿನಲ್ಲಿ ಬೆಂಗಳೂರು ನಗರ ಅಭಿವೃದ್ಧಿಗಾಗಿ ಭರಪೂರ ಭರವಸೆಗಳನ್ನು ಮುಖ್ಯಮಂತ್ರಿ ಬಜೆಟ್‌ನಲ್ಲಿ ನೀಡಿದ್ದಾರೆ. ಆದ್ರೆ, ಅವು ಎಷ್ಟರ ಮಟ್ಟಿಗೆ ಜಾರಿಗೆ ಆಗುತ್ತವೋ ಎಂಬುದೇ ರಾಜಧಾನಿ ಜನತೆ ಮುಂದಿರೋ ಪ್ರಶ್ನೆ.

LEAVE A REPLY

Please enter your comment!
Please enter your name here