ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ರಾಜ್ಯಪಾಲ ವಜು ಭಾಯ್ ವಾಲಾ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿವಿಧ ತುಕಡಿಗಳಿಂದ ವಂದನೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಭಾಷಣ ಮಾಡಿದ ರಾಜ್ಯಪಾಲರು ಸರ್ಕಾರದ ಸಾಧನೆ-ಯೋಜನೆಗಳನ್ನು ತಮ್ಮ ಭಾಷಣದಲ್ಲಿ ಬಿಚ್ಚಿಟ್ಟರು.5ಲಕ್ಷ ರೂ.ವರಗೆ ಶೂನ್ಯ ಬಡ್ಡಿದರದಲ್ಲಿ ಮತ್ತು 10 ಲಕ್ಷದವರಗೆ ಶೇಕಡಾ 4ರಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತಿದೆ.
ಬೀದಿ ಬದಿ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆ ರೂಪಿಸಲಾಗಿದೆ .ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯೆಇ 6.05 ಕೋಟಿ ಶ್ರಮದಿನಗಳನ್ನು ಸೃಷ್ಟಿಸಲಾಗಿದ್ದು,ಸ್ವಯಂ ಉದ್ಯೋಗಕ್ಕೆ 2607 ಕೋಟಿ ರೂ.ಒದಗಿಸಲಾಗಿದೆ.ಕೌಶಲ್ಯಾಭಿವೃದ್ದಿ ಮತ್ತು ಉದ್ಯಮ ಶೀಲತೆ ಗುಣಮಟ್ಟ ಹೆಚ್ಚಳಕ್ಕೆ ಕಾಯಕ ಯೋಜನೆ ಅನುಷ್ಡಾನಗೊಳಿಸಲಾಗುತ್ತಿದೆ ಎಂದಿದ್ದಾರೆ. ರೈತರು ಸಹಕಾರಿ ವಲಯದ ಬ್ಯಾಂಕ್ ಗಳಲ್ಲಿ ಮಾಡಿದ 50,000ರೂ ವರೆಗಿನ ಬೆಳೆ ಸಾಲ ಮನ್ನಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗಿದೆ.
2018-19ರ ಅವಧಿಯಲ್ಲಿ ಸಹಕಾರ ಬ್ಯಾಂಕ್ ಗಳಲ್ಲಿನ ರೈತರ ಕುಟುಂಬದ 1,00000ರೂ ಹಾಗೂ ವಾಣಿಜ್ಯ ಬ್ಯಾಂಕ್ ಗಳಲ್ಲಿನ ರೈತರ ಕುಟುಂಬದ 2ಲಕ್ಷವರಗಿನ ಸಾಲ ಮನ್ನಾ ಅನುಷ್ಠಾನ ಪ್ರಾರಂಭಿಸಿದೆ.11-01-2019ರಲ್ಲಿ 1.1ಲಕ್ಷ ಸಹಕಾರಿ ಬ್ಯಾಂಕ್ ಸಾಲ ಮತ್ತು 58,000 ವಾಣಿಜ್ಯ ಬ್ಯಾಂಕ್ ಗಳಲ್ಲಿನ ಸಾಲಮನ್ನಾಗೆ 876 ಕೋಟಿ ರೂ.ಬಿಡುಗಡೆ ಮಾಡಲಾಗಿದೆ.ಗ್ರಾಮೀಣ ಪ್ರದೇಶಗಳಿಗೆ ಶುದ್ದ ಕುಡಿಯುವ ನೀರು ಒದಗಿಸಲು 2018-19ರಲ್ಲಿ 5778 ವಸತಿ ಪ್ರದೇಶಗಳಿಗೆ 1143 ಕೋಟಿ ರೂ.ಖರ್ಚು ಮಾಡಲಾಗಿದೆ.
2018ರ ಡಿಸೆಂಬರ್ ವರಗೆ 309 ಕೊಳವೆ ನೀರು ಪೂರೈಕೆ ಯೋಜನೆ ಹಾಗೂ 15,767 ನೀರು ಶುದ್ದೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ.ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ 70.26 ಲಕ್ಷ ಕುಟುಂಬಗಳಿಗೆ ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ.172ನಗರಗಳನ್ನು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಲಾಗಿದೆ.2019ರ ಮಾರ್ಚ್ ಅಂತ್ಯಕ್ಕೆ 279 ನಗರಗಳನ್ನು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸುವ ಗುರಿ ಹೊಂದಲಾಗಿದೆ.
ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಮನೆ ನಿರ್ಮಾಣಕ್ಕೆ ನೆರವು ನೀಡುವ ಗುರಿ ಹೊಂದಲಾಗಿದೆ.ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆಯಡಿ ಪ್ರತಿ ವಸತಿ ಘಟಕಕ್ಕೆ 8 ಲಕ್ಷ ವೆಚ್ಚದಲ್ಲಿ ಜಿ ಪ್ಲಸ್ 14 ಮಹಡಿಗಳ ಅಪಾರ್ಟಮೆಂಟ್ ನಿರ್ಮಿಸಲು 1014ಎಕರೆ ಭೂಮಿ ಗುರುತಿಸಲಾಗಿದೆ ಎಂದು ತಮ್ಮ ಭಾಷಣದಲ್ಲಿ ರಾಜ್ಯಪಾಲರು ಹೇಳಿದ್ದಾರೆ 2018 ರ ಆಗಷ್ಟ ನಲ್ಲಿ ಉಂಟಾದ ಅತಿವೃಷ್ಟಿ ಹಾನಿ.
ಘೋರ ವಿಪತ್ತಿಗೆ ಸರ್ಕಾರ ತಕ್ಷಣ ಸ್ಪಂದಿಸಿದೆ.ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ತಲಾ 3800 ರೂ.ಮೃತಪಟ್ಟವರಿಗೆ ತಲಾ 7ಲಕ್ಷ ಎಕ್ಸಗ್ರೇಷಿಯಾ ಮತ್ತು 50000ರೂ ಪರಿಹಾರ ನೀಡಲಾಗಿದೆ.ಬಾಧಿತ ಕುಟುಂಬಗಳಿಗೆ ತಲಾ 9.85 ಲಕ್ಷ ರೂ ವೆಚ್ಚದಲ್ಲಿ 840 ಮನೆಗಳ ನಿರ್ಮಾಣ ಮಾಡಲಾಗುತ್ತಿದೆ.ಮುಂಗಾರು ಅವಧಿಯಲ್ಲಿ 100ತಾಲೂಕು,ಹಿಂಗಾರು ಅವಧಿಯಲ್ಲಿ 156ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ.ಬರ ಪರಿಹಾರ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.