Friday, April 20, 2018
Home Crime ಬೆಂಗಳೂರಿನಲ್ಲಿ ಪೊಲೀಸ್‌ಗೆ ಇಲ್ವಾ ರಕ್ಷಣೆ..? ರೋಡ್‌ನಲ್ಲಿ ಅಟ್ಟಾಡಿಸಿ ಹೊಡೆದ ದುಷ್ಕರ್ಮಿಗಳು.

ಬೆಂಗಳೂರಿನಲ್ಲಿ ಪೊಲೀಸ್‌ಗೆ ಇಲ್ವಾ ರಕ್ಷಣೆ..? ರೋಡ್‌ನಲ್ಲಿ ಅಟ್ಟಾಡಿಸಿ ಹೊಡೆದ ದುಷ್ಕರ್ಮಿಗಳು.

112
0
SHARE

 ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸ್ ಪೇದೆಯನ್ನ ನಡು ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿರೋ ಪ್ರಕರಣ ಬೆಂಗಳೂರಿನ ಸಿದ್ದಾಪುರದಲ್ಲಿ ನಡೆದಿದೆ. ವರ್ತೂರು ಮೈನ್ ರೋಡ್‌ನ ಸಿದ್ದಾಪುರದಲ್ಲಿ ನಿನ್ನೆ ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಗುಂಪೊಂದು ಇಸ್ಪೀಟ್ ದಂಧೆಯಲ್ಲಿ ತೊಡಗಿದ್ರು.

ಆ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ವೈಟ್ ಫೀಲ್ದ್ ಪೊಲೀಸ್ ಸ್ಟೇಷನ್ ಪೇದೆಗಳಾದ ಬಸಪ್ಪ ಗಾಣ್ಗೇರಿ, ಶರಣ ಬಸಪ್ಪ ಈ ಇಸ್ಟೀಟ್ ಅಡ್ಡೆಯ ಮೇಲೆ ದಾಳಿ ಮಾಡಿದ್ರು. ಆ ವೇಳೆ ಪೊಲೀಸ್ ಪೇದೆ ವಿರುದ್ಧ ತಿರುಗಿ ಬಿದ್ದ ಗ್ಯಾಂಗ್, ಪೊಲೀಸರು  ಅನ್ನೋದನ್ನು ಕೇರ್ ಮಾಡದೇ ನಡು ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿದ್ದಾರೆ. ಅಲ್ಲಿದ್ದವರ್ಯಾರೂ ಹಲ್ಲೆ ನಡೆಸ್ತಿದ್ದ ಗ್ಯಾಂಗ್ ನಿಂದ ಪೊಲೀಸ್ ಪೇದೆಯನ್ನ ರಕ್ಷಿಸಲು ಮುಂದಾಗಿಲ್ಲ. ಮತ್ತೊಂದೆಡೆ ಹಲ್ಲೆಯ ದೃಶ್ಯವನ್ನ ಸಾರ್ವಜನಿಕರೊಬ್ಬರು ಮೊಬೈಲ್ ನಲ್ಲಿ ಸೆರೆ ಮಾಡಿ, ಡಿಸಿಪಿ ಅಬ್ದುಲ್ ಅಹದ್ ಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡಿರೋ ವೈಟ್ ಫೀಲ್ಡ್ ಪೊಲೀಸ್ರು ಕುಮಾರ, ಸಂದೀಪ, ಮೂರ್ತಿ, ಮತ್ತು ಮುರುಳಿ ಮೋಹನ್ ಎಂಬುವರನ್ನ ಬಂಧಿಸಿ ತನಿಖೆ ಕೈಗೊಂಡಿದ್ದಾರೆ…

LEAVE A REPLY

Please enter your comment!
Please enter your name here