Home Crime ಬೆಂಗಳೂರಿನಲ್ಲಿ ರಾತ್ರೋರಾತ್ರಿ ಕಣ್ಮರೆಯಾದ ಕೆರೆ..!! ಫೈವ್ ಸ್ಟಾರ್ ಹೊಟೇಲ್‌ಗಾಗಿ ಶಿವನಹಳ್ಳಿ ಕೆರೆ ಗುಳುಂ..! ರಾಜಕಾರಣಿಗಳು, IAS...

ಬೆಂಗಳೂರಿನಲ್ಲಿ ರಾತ್ರೋರಾತ್ರಿ ಕಣ್ಮರೆಯಾದ ಕೆರೆ..!! ಫೈವ್ ಸ್ಟಾರ್ ಹೊಟೇಲ್‌ಗಾಗಿ ಶಿವನಹಳ್ಳಿ ಕೆರೆ ಗುಳುಂ..! ರಾಜಕಾರಣಿಗಳು, IAS ಅಧಿಕಾರಿಗಳ ಅಕ್ರಮಕ್ಕೆ BDA ಸಾಥ್..!?

3079
0
SHARE

ಬೆಂಗಳೂರಿನಲ್ಲಿ ರಾತ್ರೋ ರಾತ್ರಿ ಏನಾಬೇಕಾದ್ರ ನಾಪತ್ತೆಯಾಗುತ್ತೆ ಅನ್ನೋದನ್ನ ಕೇಳಿದ್ದೇವೆ ನೋಡಿದ್ದೇವೆ.. ಮನೆಮುಂದೆ ನಿಲ್ಲಿಸಿದ, ಬೈಕ್, ಕಾರು ಅಷ್ಟೇ ಯಾಕೆ ರಸ್ತೆ ಪಕ್ಕದಲ್ಲಿರೋ ಎಟಿಎಂ ಮಷಿನ್ ಗಳೇ ನಾಪತ್ತೆಯಾಗಿವೆ.. ಆದ್ರೆ ಈಗ ಮಿಡ್ ನೈಟ್ ನಲ್ಲಿ ನಾಪತ್ತೆಯಾಗರೋದನ್ನ ನೋಡಿದ್ರೆ.. ಒಂದು ಕ್ಷಣ ದಂಗಾಗ್ತಿರಾ…

ಹೌದು, ಬೆಂಗಳೂರಿನ ಯಲಹಂಕದ ಜಕ್ಕೂರಿನ ಬಳಿ ಇರೋ ಶಿವನವಹಳ್ಳಿ ಕೆರೆಯನ್ನ ರಾತ್ರೋ ರಾತ್ರಿ ಖದೀಮರು ಕಳ್ಳತನ ಮಾಡಿದ್ದಾರೆ.. ಸುಮಾರು 45 ಎಕರೆವಷ್ಟು ವಿಶಾಲವಾದ ಪ್ರದೇಶವನ್ನು ಹೊಂದಿದ್ದ ಕರೆಯನ್ನು ಹೋಟೆಲ್, ರೆಸ್ಟೋರೆಂಟ್, ಚೌಟ್ರಿ, ಕನ್ವೆಷನ್ ಹಾಲ್, ಬಹುಮಹಡಿ ಕಟ್ಟಡ ಮಾಲೀಕರು ಕದ್ದಿದ್ದಾರೆ..

ಇದಕ್ಕೆ ಪ್ಲಾನಿಂಗ್ ಕೊಟ್ಟು ಕೈ ತೊಳೆದುಕೊಂಡಿರೋದು, ಬೆಂಗಳೂರು ಉದ್ಧಾರ ಮಾಡ್ತೀನಿ ಅಂತಾ ಸ್ಥಾಪನೆಯಾಗಿರೋ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ.. ಹೀಗಾಗಿ ಇವರ ಮೇಲೆಲ್ಲ ಯಲಹಂಕ ಪೋಲಿಸ್ ಠಾಣೆಯಲ್ಲಿ ಏಫ್ಐಆರ್ ದಾಖಲಾಗಿದ್ರು, ಪೊಲೀಸರು ಮಾತ್ರ ಇನ್ನೂ ಕೆರೆಯನ್ನು ಹುಡಕಾಡೋದಕ್ಕೆ ಹರಸಾಹಸ ಪಡುತ್ತಿದ್ದಾರೆ..

ರಾಜ್ಯ ಸರ್ಕಾರ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರ, ಬಿಡಿಎ ನಕ್ಷೆ ಇಡ್ಕೊಂಡು ಹುಡುಕಿದ್ರೂ, ಕೆರೆ ಇಲ್ಲಿ ಇತ್ತ ಅನ್ನೋ ಅನುಮಾನ ಕಾಡುತ್ತಿದೆ.. ಯಾಕಾಂದ್ರೆ ಅಷ್ಟೊಂದು ಆಳದ ಕೆರೆರೆ ಮಣ್ಣು ಸುರಿದು ಬೃಹತ್ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ.. ಆದ್ರೂ ಬಿಡಿಎ ಈ ಜಾಗವನ್ನು ತೆರವುಗೊಳಿಸೋದಕ್ಕೆ ಮುಂದಾಗಿಲ್ಲ..

ಯಾಕಾಂದ್ರೆ ಬಿಡಿಎನಲ್ಲಿ ಕೂತಿರೋ ಅಧಿಕಾರಿಗಳಿಗೆ ಬಿಟ್ಟಿ ಬಂದಿರೋ ದುಡ್ಡು ಏಣಿಸೋದಕ್ಕೆ ಅವರಿಗೆ ಪುರುಸೋತ್ತಿಲ್ಲ.. ಹೀಗಿರುವಾಗ ತೆರವು ಕಾರ್ಯಾಚರಣೆಗೆ ಎಲ್ಲಿ ಬರ್ತಾರೆ ಅನ್ನೋದು ದೂರುದಾರರ ಪ್ರಶ್ನೆ.. ಸಧ್ಯ ಪ್ರಕರಣ ಕೋರ್ಟ್ ಕಟಕಟೆಯಲ್ಲಿ…

LEAVE A REPLY

Please enter your comment!
Please enter your name here