Home Crime ಬೆಂಗಳೂರಿನಲ್ಲಿ ಶುರುವಾಯ್ತು ಪೊಲೀಸ್ ಖದರ್..!!! ಸುಲಿಗೆಗಳ ಮಾಸ್ಟರ್ ಮೈಂಡ್ ರೌಡಿಶೀಟರ್‌ಗೆ ಗುಂಡು ಹಾರಿಸಿ ಅಂದರ್ ಮಾಡಿದ...

ಬೆಂಗಳೂರಿನಲ್ಲಿ ಶುರುವಾಯ್ತು ಪೊಲೀಸ್ ಖದರ್..!!! ಸುಲಿಗೆಗಳ ಮಾಸ್ಟರ್ ಮೈಂಡ್ ರೌಡಿಶೀಟರ್‌ಗೆ ಗುಂಡು ಹಾರಿಸಿ ಅಂದರ್ ಮಾಡಿದ ಪೊಲೀಸರು…

755
0
SHARE

ಅಬ್ಬಾ ಅಂತೂ ಬೆಂಗಳೂರಲ್ಲಿ ಪೊಲೀಸ್ರು ಗಂಡಸ್ರ ಕೆಲ್ಸ ಮಾಡಿದ್ದಾರೆ. ರೋಡ್ ರಾಬರಿ ಮಾಡ್ಕೊಂಡು ಒಂಟಿ ಮನೆಗಳಿಗೆ ನುಗ್ಗಿದ ಸುಲಿಗೆ ಮಾಡ್ತಿದ್ದ ಕುಖ್ಯಾತ ರೌಡಿ ಸರವಣನ ಕಾಲಿಗೆ ಗುಂಡು ನುಗ್ಸಿದ್ದಾರೆ ಕಾಮಾಕ್ಷಿಪಾಳ್ಯದ ಪೊಲೀಸರು. ಕಳೆದೊಂದು ವಾರದಲ್ಲಿ, ಚಂದ್ರಾಲೇಔಟ್, ವಿಜಯನಗರ, ಬ್ಯಾಟರಾಯನಪುರ, ಜ್ಞಾನಭಾರತಿ ಲಿಮಿಟ್ಸ್ ನಲ್ಲಿ ಸಿಕ್ಕಾಪಟ್ಟೆ ಸುಲಿಗೆ ಕೇಸ್ ಗಳು ನಡಿತ್ತಿತ್ತು…

ರಾತ್ರಿ 10 ಗಂಟೆ ಮೇಲೆ ರಿಂಗ್ ರೋಡ್ ನಲ್ಲಿ ನಡೆದಾಡೊಂಗೇ ಇರ್ಲಿಲ್ಲ..ಒಂಟಿಯಾಗಿ ಯಾರೇ ಬಂದ್ರು ಅಡ್ಡ ಹಾಕಿ ಮಚ್ಚು ಬೀಸಿ ಚೈನ್, ಕ್ಯಾಷ್ ಕಿತ್ಕೊಂಡು ಹೋಗ್ತಿದ್ರು. ಮೊನ್ನೆ ಕಾಮಾಕ್ಷಿಪಾಳ್ಯದ ಹತ್ತಿರ ಹಾಡಹಗಲೇ ಲಾಂಗ್ ತೋರಿಸಿ 3 ಲಕ್ಷ ಕಿತ್ಕೊಂಡು ಹೋಗಿದ್ರು…

ಸಿಕ್ಕಾಪಟ್ಟೆ ಸುಲಿಗೆ ನಡಿತ್ತಿದ್ರಿಂದ ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡ ರಚನೆ ಮಾಡಿ ಹುಡುಕ್ತಿದ್ದಾಗ ಮಾಗಡಿ ರೋಡ್ ನ ರಾಬ್ರಿಗಳಾದ ಸುಮಂತ್ ಮತ್ತೆ ಪ್ರಶಾಂತ್ ಸಿಕ್ಕಿಬಿದ್ರು. ಇವರಿಗೆ ರಿಪೇರಿ ಮಾಡ್ತಿದ್ದಂತೆ ಸುಲಿಗೆಗಳ ಮಾಸ್ಟರ್ ಮೈಂಡ್ ಬ್ಯಾಡರಹಳ್ಳಿಯ ರೌಡಿಶೀಟರ್ ಶರವಣ ಅಲಿಯಾಸ್ ತರುಣ್ ಅನ್ನೋದು ಗೊತ್ತಾಯ್ತು…

ನಿನ್ನೆ ನೈಟ್ ರಿಂಗ್ ರೋಡ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ತರುಣ್ ಗೆ ಚೆನ್ನಪ್ಪ ಎಸ್ಟೇಟ್ ಹಿಂದೆ ಕಾಲಿಗೆ ಫೈರ್ ಮಾಡಿ ಎತ್ಕೊಂಡು ಹೋಗಿ ವಿಕ್ಟೋರಿಯಾ ಆಸ್ಪತ್ರೆ ಸೇರ್ಸಿದ್ದಾರೆ. ಸದ್ಯ ಇವನ ಮೇಲೆ ಏಳೆಂಟು ಕೇಸ್ ಗಳು ಫಿಟ್ ಆಗಿದ್ದು, ಅಪ್ ಸ್ಕಾಂಡಿಂಗ್ ಆಗಿರೋ ಮತ್ತಿಬ್ಬರಿಗಾಗಿ ಹುಡುಕಾಟ ನಡೆಸ್ತಿದ್ದಾರೆ ಪೊಲೀಸ್ರು….

LEAVE A REPLY

Please enter your comment!
Please enter your name here