Home Crime ಬೆಂಗಳೂರಿನಲ್ಲೊಬ್ಬ ಚಾಕೊಲೇಟ್ ಕಳ್ಳ..! ಈತ ಕದ್ದಿರೋದು 8ವರೆ ಲಕ್ಷ ಬೆಲೆಯ ವೆರೈಟೀಸ್ ಆಫ್ ಚಾಕೋಲೇಟ್..!

ಬೆಂಗಳೂರಿನಲ್ಲೊಬ್ಬ ಚಾಕೊಲೇಟ್ ಕಳ್ಳ..! ಈತ ಕದ್ದಿರೋದು 8ವರೆ ಲಕ್ಷ ಬೆಲೆಯ ವೆರೈಟೀಸ್ ಆಫ್ ಚಾಕೋಲೇಟ್..!

739
0
SHARE

ಸಾಮಾನ್ಯವಾಗಿ ಕಳ್ಳರು ಅಂದ್ರೆ ಆಭರಣ, ದುಡ್ಡು, ವೆಹಿಕಲ್ಸ್ ನ ಕದೀಬಹುದು, ಆದ್ರೆ ಸಿಲಿಕಾನ್ ಸಿಟಿಯಲ್ಲಿ ಒಬ್ಬ ಚಾಕೋಲೇಟ್ ಕಳ್ಳ ಇದ್ದಾನೆ. ಇವನು ಕದ್ದಿರೋದು 1, 2 ರುಪಾಯಿ ಚಾಕೋಲೆಟ್ ಅಲ್ಲ. ಬದಲಿಗೆ 8ವರೆ ಲಕ್ಷ ಬೆಲೆಯ ವೆರೈಟೀಸ್ ಆಫ್ ಚಾಕೋಲೇಟ್ ಐಟಮ್ ನ್ನ ಕದ್ದು ಪರಾರಿಯಾಗಿದ್ದಾನೆ.

ಅವಿನ್ಯೂ ರಸ್ತೆಯಲ್ಲಿರೋ ರಾಜೇಶ್ವರ್ ಮಾರ್ಕೆಟಿಂಗ್ ಅಂಗಡಿಗೆ ವಾರಕ್ಕೆ 2 ಬಾರಿ ಬರ್ತಿದ್ದ ಇವನು ಒಳ್ಳೆಯವನಂತೆ ನಟಿಸಿ ಖರೀದಿ ಮಾಡ್ತಿದ್ದ. ಬಂದಾಗಲೆಲ್ಲಾ ಅಂಗಡಿಯನ್ನ ಫುಲ್ ಅಬ್‌ಸರ್ವ್ ಮಾಡ್ಕೊಂಡು ಹೋಗ್ತಿದ್ದ ಇವನು ಮಾಲೀಕ ಪೂನಮ್ ರಾಮ್‌ಗೆ ಸರಿಯಾಗೇ ಚಳ್ಳೆಹಣ್ಣು ತಿನ್ನಿಸಿದ್ದಾನೆ.

ಮಾಲೀಕನನ್ನು ಪೂರ್ತಿಯಾಗಿ ನಂಬಿಸಿ ರೆಗ್ಯುಲರ್ ಕಸ್ಟಮರ್ ಥರಾ ಆ್ಯಕ್ಟ್ ಮಾಡಿ ಬರೊಬ್ಬರಿ 8ವರೆ ಲಕ್ಷ ಬೆಲೆಬಾಳುವ ಚಾಕೋಲೆಟ್, ಕೂಲ್ ಡ್ರಿಂಕ್ಸ್, ಗಿಫ್ಟ್ ಐಟಮ್ ಖರೀದಿ ಮಾಡಿ, ದುಡ್ಡು ಕೊಡದೇ ಯಾಮಾರಿಸಿ ಈ ಹರೀಶ್ ಅಲಿಯಾಸ್ ಕಿಶನ್ ರಾಹುಲ್ ಎಸ್ಕೇಪ್ ಆಗಿದ್ದಾನೆ.

ಕೊನೆಗೆ ಮೋಸ ಹೋದ ವಿಷಯ ತಿಳಿದ ಮಾಲೀಕ ಪೂನಮ್ ರಾಮ್ ನಂಬಿಕೆದ್ರೋಹಿ ವಿರುದ್ಧ ಪೋಲೀಸರಿಗೆ ದೂರು ನೀಡಿದ್ದಾನೆ. ಸದ್ಯ ದೂರು ದಾಖಲಿಸಿಕೊಂಡಿರುವ ಚಿಕ್ಕಪೇಟೆ ಪೋಲೀಸ್ರು ಚಾಕೋಲೇಟ್ ಕಳ್ಳನಿಗಾಗಿ ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here