Home KARNATAKA ಬೆಂಗಳೂರಿನ ಕಾಟನ್‌ಪೇಟೆಯಲ್ಲಿ ಭೂ ಕುಸಿತ..! 8 ಅಡಿವರೆಗೆ ಕುಸಿದ ಕಾಟನ್‌ಪೇಟೆ ರೋಡ್..!

ಬೆಂಗಳೂರಿನ ಕಾಟನ್‌ಪೇಟೆಯಲ್ಲಿ ಭೂ ಕುಸಿತ..! 8 ಅಡಿವರೆಗೆ ಕುಸಿದ ಕಾಟನ್‌ಪೇಟೆ ರೋಡ್..!

509
0
SHARE

ಬೆಂಗಳೂರಿಗರು ಅದೇನು ಪಾಪ ಮಾಡಿ ಬಿಬಿಎಂಪಿ, ಬಿಡಬ್ಲೂಎಸ್ಎಸ್ ಬಿ ಇಲಾಖೆ ಕೈಯಲ್ಲಿ ಸಿಕ್ಕಿ ಹಾಕಿಕೊಳ್ತಾರೋ ದೇವರೆ ಬಲ್ಲ.. ಸಿಟಿಯಲ್ಲಿ ಫುಟ್ ಪಾತ್ ಮೇಲೂ ಓಡಾಡೋಕು ಭಯ ಪಡಬೇಕು.. ಜೊತೆಗೆ ರಸ್ತೆಯಲ್ಲಿ ಗಾಡಿ ಓಡಿಸೋಕು ಜೀವ ಕೈಯಲ್ಲಿ ಗಟ್ಟಿಯಾಗಿ ಇಟ್ಕೊಂಡಿರಬೇಕು.. ಯಾಕಾಂದ್ರೆ ನೀವು ನಡೆದಾಡೋ ಫುಟ್ ಪಾತ್, ರಸ್ತೆ ಯಾವಾಗ ಬೇಕಾದ್ರು ಕುಸಿದು ಬಿಳಬಹುದು ಅನ್ನೋದಕ್ಕೆ ಇದಕ್ಕಿಂತ ಬೇರೊಂದು ನಿದರ್ಶನ ಬೇಕಾಗಿಲ್ಲ.

ಕಾಟನ್ ಪೇಟೆಯಲ್ಲಿ ಪ್ರತಿದಿನ ಲಕ್ಷಗಟ್ಟಲೇ ವಾಹನಗಳು ಓಡಾಡ್ತಾನೇ ಇರ್ತಾವೆ.ಬೆಳಗ್ಗೆ 8 ಗಂಟೆಗೆ ಇದೆ ಸ್ಥಳದಲ್ಲಿ ಹಾದು ಹೋದ ಟಾಟಾ ಯಸ್ ಗಾಡಿಯ ಲಕ್ ಚೆನ್ನಾಗಿತ್ತು ಅನಿಸುತ್ತೆ.. ಜಸ್ಟ್ ಗಾಡಿ ಮೂವ್ ಆಗೋದಕ್ಕೂ ರಸ್ತೆ ಕುಸಿದು ಬಿಳೋದಕ್ಕೂ ಸರಿ ಹೋಗಿದೆ.. ಒಂದು ಸೆಕೆಂಡ್ ಗಾಡಿ ನಿಧಾನವಾಗಿ ಚಲಿಸಿದ್ರೆ.. ಸುಮಾರು 10 ಅಡಿಯ ಮ್ಯಾನ್ ಹೋಲ್ ನಲ್ಲಿ ಚಾಲಕ ಸಹಿತ ಗಾಡಿ ಬಿಳೋ ಸಾಧ್ಯತೆ ಇತ್ತು..

ಆದ್ರೆ ಚಾಲಕನ ಗ್ರಹಚಾರ ಚೆನ್ನಾಗಿ ಇದ್ದುದ್ದರಿಂದ ಬಚಾವ್ ಆಗಿದ್ದಾನೆ. ಸ್ಥಳೀಯ ಟ್ರಾಫಿಕ್ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ.. ಆದ್ರೆ ಪಾಲಿಕೆ, ಬಿಡಬ್ಲೂಎಸ್ಎಸ್ ಇಂಜಿನಿಯರ್ ಗಳು ಘಟನೆ ನಡೆದು ಎರಡು ಗಂಟೆ ಆದ್ಮೇಲೆ ಆಗಮಿಸಿದ್ದಾರೆ.ಸ್ಟ್ರಾಮ್ ವಾಟರ್ ಲೈನ್ ಬಗ್ಗೆ ಬಿಡಬ್ಲೂಎಸ್ಎಸ್ ಬಿಗೆ ಮಾಹಿತಿನೇ ಇಲ್ವಂತೆ.ಸುಮಾರು 50 ರಿಂದ 60 ವರ್ಷಗಳ ಹಿಂದೆಯೇ ಮಾಡಿರೋ ಚರಂಡಿಯಾಗಿರೋದ್ರಿಂದ ಇಲ್ಲೊಂದು ಸ್ಟ್ರಾಮ್ ವಾಟರ್ ಲೈನ್ ಇರೋ ಸ್ಕೆಚ್ಚೇ ಇಲ್ವಂತೆ.. ಆದ್ರೆ ಸ್ಥಳೀಯರಿಗೆಲ್ಲ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ.. ಇದೀಗ ದಿಢೀರ್ ಕುಸಿತ ಆದ್ಮೇಲೆ ಎಚ್ಚಿತ್ತಿರೋ ಅಧಿಕಾರಿಗಳು ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಪೈಪ್ ಹಾಕಿ ವ್ಯವಸ್ಥೆ ಮಾಡ್ತಾ ಇದ್ದಾರೆ.ಒಟ್ಟಾರೆ, ಕಾಟನ್ ಪೇಟೆಯಲ್ಲಿ ಉಂಟಾದ ಭಾರೀ ಕಂದಕ ವಾಹನ ಸವಾರರಲ್ಲಿ ನಡುಕ ಹುಟ್ಟಿಸಿದ್ದು ಮಾತ್ರ ಸುಳ್ಳಲ್ಲ. ವಾಹನ ಸವಾರರಂತೂ ಉರಿ ಬಿಸಿಲಿನಲ್ಲಿ ಬಿಬಿಎಂಪಿ, ಬಿಡಬ್ಲೂಎಸ್ಎಸ್ ಬಿ ಇಲಾಖೆಗಳಿಗೆ ಇಡೀ ಶಾಪ ಹಾಕಿದ್ದಂತೂ ದಿಟ.

LEAVE A REPLY

Please enter your comment!
Please enter your name here