Home KARNATAKA ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿದೆ ಉಚಿತ ಪಬ್ಲಿಕ್ ಪ್ರಿಡ್ಜ್.!! ಬಡಜನರಿಗೆ ಸಿಗುತ್ತೆ ಇಲ್ಲಿ ಉಚಿತ ಆಹಾರ..!!

ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿದೆ ಉಚಿತ ಪಬ್ಲಿಕ್ ಪ್ರಿಡ್ಜ್.!! ಬಡಜನರಿಗೆ ಸಿಗುತ್ತೆ ಇಲ್ಲಿ ಉಚಿತ ಆಹಾರ..!!

389
0
SHARE

ಬೆಂಗಳೂರಿನ ಬಿಟಿಎಂ ಲೇಔಟ್ ಎರಡನೇ ಹಂತದ ಡಾಲರ್ಸ್ ಲೇಔಟ್ ನಲ್ಲಿ ಪಬ್ಲಿಕ್ ಫ್ರಿಡ್ಜ್ ಸ್ಥಾಪಿಸಲಾಗಿದೆ.. ಇದು ಸಂಪೂರ್ಣವಾಗಿ ಪಬ್ಲಿಕ್ ಗೆ ಸೇರಿದ್ದು, ಇಲ್ಲಿ ಯಾರು ಬೇಕಾದ್ರು ಆಹಾರವನ್ನು ಇಡಬಹುದು ಹಾಗೆ ಯಾರೂ ಬೇಕಾದ್ರು ಆಹಾರವನ್ನು ತೆಗೆದುಕೊಂಡು ಹೋಬಹುದು.. ಈ ಪಬ್ಲಿಕ್ ಫ್ರಿಡ್ಜ್ ಸುತ್ತಮುತ್ತಲಿನ ಅದೇಷ್ಟು ಬಡ ಮಕ್ಕಳಿಗೆ ಆಹಾರ ಒದಗಿಸೋ ಅಕ್ಷಯಪಾತ್ರೆಯಾಗಿದೆ..

ಇಲ್ಲಿರೋ ಸುತ್ತಮುತ್ತಲಿನ ಐದಾರು ಆಪಾರ್ಟ್ಮೆಂಟ್ ನಿವಾಸಿಗಳು ಈ ಪಬ್ಲಿಕ್ ಪ್ರಿಡ್ಜ್ ನಲ್ಲಿ ಬನ್, ಬಿಸ್ಕೆಟ್, ಅನ್ನ ಸಾಂಬಾರ್, ಚಪಾತಿ ಸೇರಿದಂತೆ ನಾನಾ ವಿಧದ ಆಹಾರವನ್ನು ಇಡುತ್ತಿದ್ದಾರೆ.. ಜೊತೆಗೆ ಮಕ್ಕಳ ಬಟ್ಟೆ, ಸೀರೆ, ಗೊಂಬೆ ಇತ್ಯಾದಿ ಅವರಿಗೆ ಬೇಡ್ವಾಗಿರೋ ವಸ್ತುಗಳನ್ನು ಇಲ್ಲಿ ಇಡ್ತಾ ಬಂದಿದ್ದಾರೆ…

ಈ ಪಬ್ಲಿಕ್ ಫ್ರಿಡ್ಜ್ ಬಡವರಿಗೆ ಅನುಕೂಲವಾಗ್ಲಿ ಹಸಿದವರ ಹಸಿವು ನೀಗಿಸಲಿ ಅಂತಾ ಆಪಾರ್ಟ್ಮೆಂಟ್ ನಿವಾಸಿಗಳು ಮಾಡಿದ್ದಾರೆ.. ಆದ್ರೆ ಪಬ್ಲಿಕ್ ಫ್ರಿಡ್ಜ್ ಕೆಲವೇ ಕೆಲವರ ಪಾಲಾಗ್ತಿರೋದು ಒಂದು ರೀತಿ ಮೂಲ ಉದ್ದೇಶವನ್ನೇ ಬಲಿ ಪಡೆಯುತ್ತಿದೆ.. ಅದೇನು ಹೇಳ್ತರಲ್ಲ ಬಿಟ್ಟಿ ಸಿಕ್ರೇ ನನಗೊಂದು ಇರ್ಲಿ, ನಮ್ಮ ಅಪ್ಪನಿಗೊಂಡು ಇರ್ಲಿ ಅನ್ನೋ ಹಾಗೆ ಫ್ರಿಡ್ಜ್ ಇಲ್ಲಿಡೋ ವಸ್ತುಗಳು ಹತ್ತು ಜನಕ್ಕೆ ಉಪಯೋಗಕ್ಕೆ ಬರೋ ಬದಲು ಕೇವಲ ಎರಡು ಮೂರು ವ್ಯಕ್ತಿಗಳೇ ದೋಚಿಕೊಂಡು ಹೋಗ್ತಾರೆ..

ಕೆಲ ಮಕ್ಕಳು ಇಲ್ಲಿ ಇಡ್ತಿರೋ ವಸ್ತುಗಳಿಗಾಗಿಯೇ ಕಾಯ್ತಾ ಕೂತು ಇರೋ ಬರೋದನ್ನ ದೋಚಿಕೊಂಡು ಹೋಗ್ತಾರೆ.. ಹೀಗಾಗಿ ಆಪಾರ್ಟ್ಮೆಂಟ್ ನಿವಾಸಿಗಳು ಹಸಿದವರ ಅನುಕೂಲಕ್ಕೆ ಮಾಡಿದ್ರೆ, ಹೊಟ್ಟೆ ತುಂಬಿದವರ ಹೊಟ್ಟೆಯನ್ನೇ ತುಂಬಿಸುತ್ತಿದೆ…

LEAVE A REPLY

Please enter your comment!
Please enter your name here