Home Elections 2019 ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಯಾರು ಕಮಲ ಕಲಿ? ಚುನಾವಣೆ ಸ್ಪರ್ಧೆಗೆ ತೇಜಸ್ವಿನಿ ಅನಂತ್ ಕುಮಾರ್ ಹಿಂದೇಟು,...

ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಯಾರು ಕಮಲ ಕಲಿ? ಚುನಾವಣೆ ಸ್ಪರ್ಧೆಗೆ ತೇಜಸ್ವಿನಿ ಅನಂತ್ ಕುಮಾರ್ ಹಿಂದೇಟು, ಒಪ್ಪದಿರಲು ಕಾರಣವೇನು?

2282
0
SHARE

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ನಿತ್ಯವೂ ಚರ್ಚೆಯಾಗುತ್ತಿದೆ..ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅನಂತ್ ಕುಮಾರ್ ನಿಧನದಿಂದ ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ಅಭ್ಯರ್ಥಿಗಳಿಗಾಗಿ ಬಿಜೆಪಿ ಚಿಂತನೆ ನಡೆಸಿದಾಗ,

ಮೊದಲಿಗೆ ಬಂದಿದ್ದೇ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರು..ಅನಂತ್ ಕುಮಾರ್ ಸ್ಥಾನ ತುಂಬಬಲ್ಲಂಥವರು ಇನ್ಯಾರೂ ಸಿಗುತ್ತಿಲ್ಲದ ಕಾರಣ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೆಚ್ಚುತ್ತಿದೆ..ಆದ್ರೆ ತೇಜಸ್ವಿನಿ ಅನಂತ್ ಕುಮಾರ್ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ..ಅದಕ್ಕೆ ಒಂದು ಪ್ರಬಲವಾದ ಕಾರಣವೂ ಇದೆ..ತೇಜಸ್ವಿನಿ ಅನಂತ್ ಕುಮಾರ್ ಅವರೇ ಸ್ಪರ್ಧಿಸಬೇಕೆಂಬುದು ಸ್ಥಳೀಯ ಶಾಸಕರು ಸೇರಿದಂತೆ ಹಲವರ ಒತ್ತಾಸೆಯಾಗಿದೆ..

ಆದ್ರೆ ಮೊದಲಿನಿಂದಲೂ ನೇರವಾಗಿ ಪಕ್ಷ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವುದು ಅವರಿಗೆ ಇಷ್ಟವಿರಲಿಲ್ಲ..ಅದಲ್ಲದೆ, ಹಿಂದೆ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ವಿಜಯ್ ಕುಮಾರ್ ನಿಧನರಾದಾಗ ಅವರ ಸಹೋದರನಿಗೆ ಟಿಕೆಟ್ ಕೊಡಲಾಗಿತ್ತು..ಒಂದು ಕಡೆ ವಿಜಯ್ ಕುಮಾರ್ ಅವರ ಮೇಲಿದ್ದ ಉತ್ತಮ ಅಭಿಪ್ರಾಯ ಮತ್ತೊಂದೆಡೆ ಅನುಕಂಪ ಇನ್ನೊಂದೆಡೆ ಬಿಜೆಪಿ ನಾಯಕರ ಪ್ರಬಲ ಬೆಂಬಲ ಕೆಲಸ ಮಾಡುತ್ತೆ ಅಂದುಕೊಂಡರೇ ವಿಜಯ್ ಕುಮಾರ್ ಸಹೋದರ ಸೋತು ಹೋಗಿದ್ದರು..ಸೌಮ್ಯ ರೆಡ್ಡಿ ಗೆಲುವಿನ ನಗೆ ಬೀರಿದ್ದರು..

ಸೋತಾಗ ಒಬ್ಬರೇ ಅವರು ಮತ ಎಣಿಕೆ ಕೇಂದ್ರದಿಂದ ಮನೆ ಕಡೆಗೆ ನಡೆದುಕೊಂಡೇ ಹೊರಟಿದ್ದ ಚಿತ್ರಣ ತೇಜಸ್ವಿನಿ ಅನಂತ್ ಕುಮಾರ್ ಗಮನಿಸಿದ್ದಾರೆ..ಹೀಗಾಗಿ ತಮಗೂ ಇಂಥದ್ದೇ ಸಂದರ್ಭ ಎದುರಾದರೆ ಅಂತ ಅವರು ಯೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ..

LEAVE A REPLY

Please enter your comment!
Please enter your name here