Home Crime ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಯಾರಿಗೂ ಗೊತ್ತಾಗಲ್ಲ ಅಂದುಕೊಂಡ ಗಂಡ ಏನ್ ಮಾಡ್ದಾ ಗೊತ್ತಾ..?!...

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಯಾರಿಗೂ ಗೊತ್ತಾಗಲ್ಲ ಅಂದುಕೊಂಡ ಗಂಡ ಏನ್ ಮಾಡ್ದಾ ಗೊತ್ತಾ..?! ನನ್ನ ಗಂಡಾನೇ ಬೇಕಿತ್ತಾ ಅಂತಾ ಇನ್ನೊಬ್ಳ ಜುಟ್ಟಿಡಿದಿದ್ದೇಕೆ ಇವನ ಹೆಂಡ್ತಿ..?!

1077
0
SHARE

ಈ ಕಥೆ ಕೇಳಿದ್ರೆ ಈ ಮಹಿಳೆಯ ಗೋಳು ಯಾರಿಗೂ ಬರಬಾರದು ಅನ್ನಿಸುತ್ತದೆ. ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಗಂಡ ಆಲಿಂಗನಕ್ಕಾಗಿ ಹೆಂಡತಿ ಗೋಳಾಡುತ್ತಿದ್ದಾಳೆ.ಹೆಂಡತಿ ಇದ್ದರು ನೀನು ಬೇಡಾ ಅಂತಾ ಬೇರೊಬ್ಬವಳನ್ನು ಕದ್ದು ಮದುವೆಯಾದ ಭೂಪನಿಗೆ ಇಂದು ರುಚಿ ಮುಟ್ಟಿಸಿದ್ದಾಳೆ.ಖದ್ದು ರೆಡ್ ಹ್ಯಾಂಡಾಗಿ ಗಂಡನ ಮನೆಗೆ ಹೋಗಿ ಅತ್ತೆ ಮತ್ತು ಸವತಿಗೆ ವಾರ್ನ್ ಮಾಡಿ ನ್ಯಾಯಕ್ಕಾಗಿ ಠಾಣೆ ಮೆಟ್ಟಿಲು ಹತ್ತಿದ್ದಾಳೆ.

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಯಾರಿಗೂ ಗೊತ್ತಾಗಲ್ಲ ಎಂದು ಕಣ್ಮುಚ್ಚಿ ಹಾಲು ಕುಡಿದ್ರೆ ಇದು ಅವರ ಸುತ್ತಮುತ್ತ ಇರುವವರಿಗೆ ಗೊತ್ತಾಗುತ್ತೆ. ಅದೇ ರೀತಿ ಒಬ್ಬ ಪುರುಷ ಮೊದಲೇ ಮದುವೆಯಾಗಿ ಮೊದಲನೆಯವಳಿಗೆ ಗೊತ್ತಾಗಲ್ಲ ಎಂದು ಇನ್ನೊಂದು ಮದುವೆಯಾದ ಅಂದ್ರೆ ಗೊತ್ತಾಗಲ್ಲ ಎಂದು ತಿಳಿದುಕೊಂಡ್ರೆ ಅದು ಅವನ ತಪ್ಪು, ಅದೇ ರೀತಿ ತಿಳಿದುಕೊಂಡ ಪುರುಷನೊಬ್ಬ ಹಾವೇರಿಯಲ್ಲಿ ಮೊದಲ ಹೆಂಡತಿಗೆ ತಿಳಿಯದ ಹಾಗೇ ಮದುವೆಯಾಗಿ ಫಜೀತಿಗೆ ಸಿಲುಕಿದ್ದಾನೆ.

ಹೌದು ಮೊದಲ ಪತ್ನಿ ಇರುವಾಗಲೇ ವ್ಯಕ್ತಿವೋರ್ವ ಎರಡನೇ ಮದುವೆಯಾಗಿರುವ ಪ್ರಕರಣ ಬೆಳಕಿಗೆ ಬಂದು ನಗರದ ನಾಗೇಂದ್ರನಮಟ್ಟಿಯಲ್ಲಿ ಬೀದಿ ಜಗಳ ನಡೆದಿದೆ. ಚಂದ್ರಶೇಖರ ಎಂಬಾತ ಎರಡನೇ ಮದುವೆಯಾಗಿರುವ ಮಹಾಶಯ. ಈತ ದ್ಯಾಮಕ್ಕ ಮಂಟೂರ ಎಂಬ ಮಹಿಳೆಯನ್ನು 2016ರ ಮೇ ನಲ್ಲಿ ವಿವಾಹವಾಗಿದ್ದ. ಕೆಲ ದಿನಗಳ ನಂತರ ಕಾರಣಾಂತರಗಳಿಂದ ಅವಳ ಜೊತೆ ಜಗಳ ಮಾಡಿಕೊಂಡು ಕೋರ್ಟ್​ ಮೆಟ್ಟಿಲೇರಿದ್ದ.

ಈ ಮಧ್ಯ ನ್ಯಾಯಾಲಯದಲ್ಲಿ ಪ್ರಕರಣ ಇದ್ದರೂ ಸಹ ಪ್ರಸಕ್ತ ವರ್ಷದಲ್ಲಿ ಚಂದ್ರಶೇಖರ ಎರಡನೇಯ ವಿವಾಹವಾಗಿದ್ದಾನೆ ಎಂದು ದ್ಯಾಮಕ್ಕ ಆರೋಪಿಸಿದ್ದಾಳೆ.ದ್ಯಾಮಕ್ಕ ಮಂಟೂರ ತನ್ನ ಗಂಡ ಕಟ್ಟಿಕೊಂಡಿರುವ ಎರಡನೇ ಪತ್ನಿ ಮನೆಗೆ ನುಗ್ಗಿ ರಂಪಾಟ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಅಷ್ಟೇ ಅಲ್ಲದೇ ಮಗನಿಗೆ ಎರಡನೇ ಮದುವೆ ಮಾಡಿದ ಅತ್ತೆ ಮತ್ತು ಎರಡನೇ ಹೆಂಡತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.

ತನಗೆ ನ್ಯಾಯ ಬೇಕು ಎಂದು ಪಟ್ಟುಹಿಡಿದಿದ್ದಾಳೆ. ಅಲ್ಲದೆ ಪತಿ ಮನೆಯವರು ನನ್ನ ಕಡೆಯಿಂದ ಸಹಿ ಪಡೆದು ಮನೆಯಿಂದ ಹೊರಹಾಕಿದ್ದಾರೆ ಎಂದು ದ್ಯಾಮಕ್ಕ ಆರೋಪಿಸಿದ್ದಾಳೆ. ಆದರೆ ಆಕೆಯ ಅತ್ತೆ ದ್ಯಾಮಕ್ಕನೇ ಗಂಡ ಬೇಡ ಎಂದು ಮನೆಬಿಟ್ಟು ಹೋಗಿದ್ದಾಳೆ ಎಂದು ಆರೋಪಿಸಿದ್ದಾರೆ.ಈಗ ಈ ಪ್ರಕರಣ ಹಾವೇರಿ ಶಹರಾ ಪೊಲೀಸ್ ಠಾಣಾ ಮೆಟ್ಟಲು ಹತ್ತಿದ್ದು ಈಕೆಯ ಮೊದಲ ಪತಿಮಹಾಶಯ ಬಂದು ಸತ್ಯ ಹೇಳಿದಾಗಲೆ ಯಾವುದು ನಿಜ ಯಾವುದು ಸುಳ್ಳು ಎಂದು ಹೊರಬರಲಿದೆ.

 

LEAVE A REPLY

Please enter your comment!
Please enter your name here