Home Crime “ಬೆಡ್ ಶೀಟ್” ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ..!! ಇಂಜಿನಿಯರಿಂಗ್ ವಿದ್ಯಾರ್ಥಿಯನ್ನ ಇರಿದು ಕೊಂದ ಸ್ನೇಹಿತ…

“ಬೆಡ್ ಶೀಟ್” ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ..!! ಇಂಜಿನಿಯರಿಂಗ್ ವಿದ್ಯಾರ್ಥಿಯನ್ನ ಇರಿದು ಕೊಂದ ಸ್ನೇಹಿತ…

857
0
SHARE

ಆತ ಇಂಜಿನಿಯರಿಂಗ್ ಓದ್ತಾ, ಸ್ವಿಗ್ಗಿ ಪುಡ್ ಡೆಲಿವರಿಯಲ್ಲಿ ಪಾರ್ಟ್ ಟೈಮ್ ಕೆಲ್ಸವೂ ಮಾಡ್ತಿದ್ದ. ನಿನ್ನೆ ಕಾಲೇಜಿಗೆ, ಕೆಲಸಕ್ಕೆ ರಜೆ ಇದ್ದಿದ್ರಿಂದ ಸ್ನೇಹಿತನ ಮನೆಗೆ ಹೋಗಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ರು. ಕೊನೆಗೆ ಆ ಪಾರ್ಟಿಲಿ ಶುರುವಾದ ಸಣ್ಣದೊಂದ್ ಜಗಳ ಆತನ ಕೊಲೆಯಲ್ಲಿ ಎಂಡ್ ಆಗಿತ್ತು…

ಫೋಟೋದಲ್ಲಿ ಕಾಣ್ತಿರೋ ಇವ್ನ ಹೆಸ್ರು ಅವಿನಾಶ್. ತಂದೆತಾಯಿಯೊಂದಿಗೆ ಸುಂಕದಕಟ್ಟೆಯಲ್ಲಿ ವಾಸವಾಗಿದ್ದ ಅವಿನಾಶ್, ಹೆಬ್ಬಾಳ ಸಮೀಪದ ಭೂಪಸಂದ್ರ ಬಳಿಯ ಆಲ್ ಕತಿಬ್ ಪಾಲಿಟೆಕ್ನಿಕ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದ. ಅದ್ರ ಜೊತೆಯಲ್ಲಿ ಕಾಲೇಜು ಫೀಸ್ ಸಂಬಂಧಿಸಿದಂತೆ ಪೋಷಕರಿಗೆ ಹೊರೆಯಾಗ್ಬಾರ್ದು ಅಂತ ಸ್ವಿಗ್ಗಿ ಪುಡ್ ಡೆಲವರಿ ಬಾಯ್ ಆಗಿ ಕೆಲ್ಸ ಮಾಡ್ತಿದ್ದ…

ಹಾಗೆ ಕೆಲ್ಸ ಮಾಡ್ತಿದ್ದ ಅವಿನಾಶ್ ಗೌಡ ನಿನ್ನೆ ಕಾಲೇಜು ಹಾಗೂ ಕೆಲ್ಸಕ್ಕೆ ರಜೆ ಇದ್ದಿದ್ರಿಂದ ಸ್ನೇಹಿತ ಮನೋಜ್ ಎಂಬಾತನೊಂದಿಗೆ ಮತ್ತೊಬ್ಬ ಸ್ನೇಹಿತ ಸತೀಶ್ ಎಂಬಾತನ ಮನೆಗೆ ಎಣ್ಣೆ ಪಾರ್ಟಿ ಮಾಡಲು ಹೋಗಿದ್ರು. ಆದ್ರೆ, ಅಲ್ಲಿ ಎಣ್ಣೆ ಹೊಡೆಯೋದಕ್ಕು ಮುನ್ನ ಅವಿನಾಶ್ ಹಾಗೂ ಸತೀಶ್ ನಡುವೆ ಹಣಕಾಸಿನ ವಿಚಾರವಾಗಿ ಜಗಳ ನಡೆದಿತ್ತಂತೆ…

ನಂತರ ಕಾಂಪ್ರಮೈಸ್ ಮಾಡಿಕೊಂಡು ಎಣ್ಣೆ ಪಾರ್ಟಿ ಮಾಡಿದ್ದ ಅವಿನಾಶ್ ಹಾಗೂ ಆತನ ಏಳೆಂಟು ಮಂದಿ ಸ್ನೇಹಿತ್ರು ಪಾರ್ಟಿ ಮಾಡಿ ಅಲ್ಲೆ ಮಲಗಿದ್ರಂತೆ.ಆದ್ರೆ, ಮಧ್ಯರಾತ್ರಿ ಅವಿನಾಶ್ ನ ಸ್ನೇಹಿತ ಮನೋಜ್ ಹಾಗೂ ಸತೀಶ್ ಎಂಬುವರ ನಡುವೆ ಬೆಡ್ ಶೀಟ್ ವಿಚಾರವಾಗಿ ಜಗಳ ಶುರುವಾಗಿದೆ. ಈ ವೇಳೆ ಅವಿನಾಶ್ ಮಧ್ಯ ಪ್ರವೇಶಿಸಿದ್ದು, ಆಕ್ರೋಶಗೊಂಡ ಸತೀಶ ಮನೆಯಲ್ಲಿದ್ದ ಚಾಕುವಿನಿಂದ ಅವಿನಾಶ್ ಗೆ ಇರಿದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ…

ಕೂಡ್ಲೇ ಜೊತೆಯಲ್ಲಿದ್ದ ಕೆಲ ಸ್ನೇಹಿತ್ರು ಅವಿನಾಶ್ ನನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಿತ್ತಾದ್ರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರೋ ಕಾಮಾಕ್ಷಿಪಾಳ್ಯ ಪೊಲೀಸ್ರು ಕೆಲ ಆರೋಪಿಗಳನ್ನ ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರೆಸಿದ್ದಾರೆ…

LEAVE A REPLY

Please enter your comment!
Please enter your name here