Home Cinema ಬೆರಗಾಗೋದು ನೀವ್ ಖಾತ್ರಿ, ಪ್ರಜಾಕಾರಣಿ ಉಪ್ಪಿ ಹೊಸ ಆಟಕ್ಕೆ..! “ಸಿನಿಮಾ ಧ್ಯಾನ ಮಾಡ್ತಾನೇ, ರಾಜಕೀಯದಲ್ಲೊಂದು ಕ್ರಾಂತಿ”…

ಬೆರಗಾಗೋದು ನೀವ್ ಖಾತ್ರಿ, ಪ್ರಜಾಕಾರಣಿ ಉಪ್ಪಿ ಹೊಸ ಆಟಕ್ಕೆ..! “ಸಿನಿಮಾ ಧ್ಯಾನ ಮಾಡ್ತಾನೇ, ರಾಜಕೀಯದಲ್ಲೊಂದು ಕ್ರಾಂತಿ”…

321
0
SHARE

ಉಪೇಂದ್ರ.. ಗಾಂಧಿನಗರದ ರಿಯಲ್ ಸ್ಟಾರ್ & ಪ್ರಜಾಕಾರಣಿ. ಸಿನಿಮಾ ಧ್ಯಾನ ಮಾಡ್ತಾನೇ, ರಾಜಕೀಯದಲ್ಲೊಂದು ಕ್ರಾಂತಿ ಮಾಡಲು ಸಿದ್ಧವಾಗಿರುವ ಉಪ್ಪಿ, ಇದೀಗ ಮತ್ತೊಮ್ಮೆ ಫಿಲಾಸಫಿ ಹೇಳಲು ಮುಂದಾಗುತ್ತಿದ್ದಾರೆ. ಅದು, ಓನ್ಸ್ ಅಗೈನ್ ಸಿಲ್ವರ್ ಸ್ಕ್ರೀನ್‌ನಲ್ಲಿ.ಹೌದು, ಉಪ್ಪಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ..

ಫಿಲಾಸಫಿಯ ನೆರಳಿನಲ್ಲಿ ಸಿದ್ದವಾಗಿರುವ ಕಥೆಯನ್ನ, ಉಪೇಂದ್ರ.. ತುಂಬಾನೇ ಇಷ್ಟಪಟ್ಟಿದ್ದಾರೆ. ಯಸ್, ಸಾಮಾನ್ಯವ್ಯಕ್ತಿ ಹಾಗೂ ಬುದ್ದಿವಂತನ ನಡುವೆ ನಡೆಯೋ ಕಥೆ, ಉಪ್ಪಿಯ ಟೇಸ್ಟಿಗೆ ತಕ್ಕಂತೆ ಇದೆ. ಹಾಗಾಗೇ, ಚಿತ್ರವನ್ನ ಬಹುಬೇಗ ಶುರುಮಾಡುವ ಉತ್ಸಾಹದಲ್ಲಿ ಉಪೇಂದ್ರ ಇದ್ದಾರೆ. ಕಥೆ ಕೇಳಿ ಉಪೇಂದ್ರ ಎಷ್ಟರ ಮಟ್ಟಿಗೆ ಇಂಪ್ರೆಸ್ ಆಗಿದಾರಂದ್ರೆ, ಒಪ್ಪಿಕೊಂಡ ಎರಡ್ಮೂರು ಸಿನಿಮಾದ ಚಿತ್ರೀಕರಣಗಳನ್ನ, ಇದೇ ಚಿತ್ರಕ್ಕಾಗಿ ಅಂಥನೇ ಮುಂದೂಡಿದ್ದಾರೆ.

ಅಂದ ಹಾಗೇ, ಉಪ್ಪಿಯ ಮನ ಗೆದ್ದಿರುವದು ಮೌರ್ಯ ಬಿ.ಎನ್. ನಾಗ್ತಿಹಳ್ಳಿ ಚಂದ್ರಶೇಖರ್ ಹಾಗೂ ಸೂರಿ ಜೊತೆ ಕೆಲ್ಸ ಮಾಡಿದ ಅನುಭವ ಇವ್ರದ್ದು. ಇನ್ನೂ ಇವ್ರ ಅಖಂಡ ಹನ್ನೆರಡು ವರ್ಷದ ತಪಸಿನ ಫಲವೆನ್ನುವಂತೆ, ಉಪ್ಪಿಗೆ ಸಿನಿಮಾ ಮಾಡುವ ಅವಕಾಶ ಇವ್ರಿಗೆ ಸಿಕ್ಕಿದೆ. ಇನ್ನೂ ಚಿತ್ರಕ್ಕೆ ಚಂದ್ರಶೇಖರ್ ಬಂಡವಾಳ ಹೂಡುತ್ತಿದ್ದಾರೆ.

ಗಾಂಧಿನಗರದ ಸಕ್ಸಸ್‌ಫುಲ್ ನಿರ್ಮಾಪಕ ಅನಿಸಿಕೊಂಡಿರುವ ಚಂದ್ರಶೇಖರ್ ತಮ್ಮ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದು ಇವ್ರ ನಿರ್ಮಾಣದ ಐದನೇ ಸಿನಿಮಾ.ಇನ್ನು ಚಿತ್ರದ ನಾಯಕಿಯಾಗಿ, ಖ್ಯಾತ ನಟಿಯೊಬ್ಬರು ಚಂದನವನಕ್ಕೆ ಬರುವ ಸಾಧ್ಯತೆಗಳಿವೆ.

ಈಗಾಗ್ಲೇ ಮಾತುಕಥೆಯನ್ನೂ ಮಾಡಲಾಗ್ತಿದೆ. ಇನ್ನುಳಿದಂತೆ ಟೆಕ್ನಿಕಲ್ ಟೀಮ್‌ನ ಆಯ್ಕೆ ಆಗಬೇಕಿದೆ. ಸದ್ಯ, ರಾಜ್ಯೋತ್ಸವದ ಪ್ರಯುಕ್ತ ಘೋಶಣೆಯಾಗಿರುವ ಉಪ್ಪಿ ಹೊಸ ಸಿನಿಮಾದ ಮುಹೂರ್ತ ಸದ್ಯದಲ್ಲೇ ನಡೆಯಲಿದೆ.

LEAVE A REPLY

Please enter your comment!
Please enter your name here