Home Cinema ’ಬೆಲ್ ಬಾಟಮ್’ ಖದರ್ ನೋಡಿ ಎಲ್ರೂ ಸುಸ್ತೋಸುಸ್ತು..! ಬಾಂಡ್ ಶೈಲಿಯ “ರಿಷಬ್” ಎಂಟ್ರಿ ಮಸ್ತೋಮಸ್ತು..!

’ಬೆಲ್ ಬಾಟಮ್’ ಖದರ್ ನೋಡಿ ಎಲ್ರೂ ಸುಸ್ತೋಸುಸ್ತು..! ಬಾಂಡ್ ಶೈಲಿಯ “ರಿಷಬ್” ಎಂಟ್ರಿ ಮಸ್ತೋಮಸ್ತು..!

287
0
SHARE

ರಿಷಬ್ ಶೆಟ್ಟಿಯ ಹೊಸ ಅವತಾರ ನೋಡಿದ ಸ್ಯಾಂಡಲ್‌ವುಡ್‌ನ ಸಿನಿಪ್ರಿಯರು ವಾರೆ! ವಾ ಎಂದಿದ್ದಾರೆ. ಟಾಪ್ ಟು ಬಾಟಮ್ ರೆಟ್ರೋ ಲುಕ್‌ನಲ್ಲಿ ಸದ್ಯದಲ್ಲೇ ನಮ್ಮ ಮುಂದೆ ಎಂಟ್ರಿ ಕೊಡ್ತಾರೆ ಈ ಕುಂದಪುರದ ಹುಡುಗ. ರಿಷಬ್ ಶೆಟ್ಟಿಯ ಈ ಗೆಟ್‌ಅಪ್‌ಗೆ ಗಾಂಧಿನಗರದ ಮಂದಿ ವಾರ್ಮ್ ವೆಲ್‌ಕಮ್ ಹೇಳಿದ್ದಾರೆ.ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಡೈರೆಕ್ಟರ್ ಟೋಪಿಗೆ ಕೊಂಚ ರೆಸ್ಟ್ ಕೊಟ್ಟಿದಾರೆ. ಜಸ್ಟ್ ಫಾರ್ ಎ ಚೇಂಜ್ ಅಂತ ಮೊದಲಬಾರಿಗೆ ಹೀರೊ ಆಗಿ ಮಿಂಚೋಕೆ ರಿಷಬ್ ತುದಿಗಾಲಲ್ಲಿ ನಿಂತಿದಾರೆ. ಹಾಗೇ ನೋಡಿದ್ರೆ ರಿಷಬ್‌ಗೆ ಮುಖಕ್ಕೆ ಬಣ್ಣ ಹಚ್ಕೊಂಡು ಕ್ಯಾಮೆರಾ ಮುಂದೆ ನಿಲ್ಲೋದು ಹೊಸತೇನಲ್ಲ ಬಿಡಿ.

ರಕ್ಷಿತ್ ಶೆಟ್ಟಿ ಅಭಿನಯದ ’ತುಘಲಕ್’ ಸಿನಿಮಾದಲ್ಲಿ ವಿಲನ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ರಿಷಬ್‌ಗೆ ಆಕ್ಟಿಂಗ್ ಅನ್ನೋದು ’ಇಸೀ ಕಪ್ ಆಫ್ ಟೀ’.ಇಂಡಸ್ಟ್ರಿಯಲ್ಲಿ ತುಂಬಾ ವರ್ಷ ಆಕ್ಟರ್ ಆಗಬೇಕು ಅಂತ ಕನಸು ಕಟ್ಕೊಂಡು ಸೈಕಲ್ ಹೊಡೆದ ರಿಷಬ್ ಶೆಟ್ಟಿ ಫೈನಾಲಿ ತಮ್ಮ ಆಸೆ ಈಡೇರಿಸಿಕೊಂಡಿದ್ದಾರೆ. ನಿರ್ದೇಶಕ ಜಯತೀರ್ಥರ ಹೊಸ ಎಕ್ಸಾಪೆರಿಮೆಂಟ್ ’ಬೆಲ್‌ಬಾಟಮ್’ ಮೂಲಕ ಪೂರ್ಣಪ್ರಮಾಣದ ಹೀರೊ ಆಗಿದಾರೆ ರಿಷಬ್ ಶೆಟ್ಟಿ. ಹಾಲಿವುಡ್‌ನ ಮಾಸ್ಟರ್ ರೋಲ್ ಜೇಮ್ಸ್ ಬಾಂಡ್ ರೀತಿಯಲ್ಲಿರೋ ಕನ್ನಡದ ಡಿಟೆಕ್ಟಿವ್ ದಿವಾಕರನ ಮೋಡಿ ಈಗಾಗಲೇ ಸಕತ್ ವೈರಲ್ ಆಗಿದೆ.ಇಷ್ಟೆಲ್ಲಾ ಕುತೂಹಲ ಮೂಡಿಸಿರೊ ’ಬೆಲ್ ಬಾಟಮ್’ ಸಿನಿಮಾದ ಅಫಿಶಿಯಲ್ ಟೀಸರ್ ಇಂದು ಬೆಳ್ಳಿಗೆ ೧೦ ಘಂಟೆಗೆ ಲಾಂಚ್ ಆಗಿದೆ.

ತಮ್ಮ ಕುಚುಕು ಗೆಳೆಯ ಸಿಂಪಲ್‌ಸ್ಟಾರ್ ರಕ್ಷಿತ್ ಶೆಟ್ಟಿಯ ಕೈಯಲ್ಲೇ ರಿಷಬ್ ಟೀಸರ್ ಲಾಂಚ್ ಮಾಡಿಸಿದ್ದಾರೆ. ಟೀಸರ್ ಬಿಡುಗಡೆಗೊಳಿಸಿದ ರಕ್ಷಿತ್ ’ ಟೀಸರ್ ನೋಡಿ ತುಂಬಾ ಎಕ್ಸಾಯಟ್ ಆಗೀದೀನಿ. ರಿಷಬ್ ಹೊಸ ಲುಕ್ ಕೂಡ ಚೆನ್ನಾಗಿದೆ. ಟೀಸರ್ ನೋಡಿದ್ರೆನೇ ಇದೊಂದು ಕನ್ನಡದಲ್ಲಿ ಮೈಲ್‌ಸ್ಟೋನ್ ಆಗುವ ಲಕ್ಷಣ ಇದೆ’ ಎಂದ್ರು.ಇನ್ನು ರಿಷಬ್‌ಗೆ ಜೋಡಿಯಾಗಿ ನೀರ್ ದೋಸೆ ಬೆಡಗಿ ಹರಿಪ್ರಿಯಾ ಕಾಮಾಲ್ ತೋರಿಸಲಿದ್ದಾರೆ. ಈ ಹಿಂದೆ ’ರಿಕ್ಕಿ’ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿರೋದ್ರಿಂದ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಕೂಡ ಚೆನ್ನಾಗಿ ವರ್ಕೌಟ್ ಆಗಿದೆಯಂತೆ. ಚಿತ್ರಕ್ಕೆ ಅಜನೀಶ್ ಲೋಕ್‌ನಾಥ್ ಸಂಗೀತ ಸಂಯೋಜಿಸಿದ್ದು, ಅರವಿಂದ್ ಕಶ್ಯಪ್ ಕ್ಯಾಮೆರಾ ಕೈ ಚಳಕವಿದೆ.

ನಿರ್ದೇಶಕ ಜಯತೀರ್ಥರ ಹಾರ್ಡ್‌ವರ್ಕ್ ’ಬೆಲ್ ಬಾಟಮ್’ ಸಿನಿಮಾವನ್ನ ಗೆದ್ದೆಗೆಲ್ಲಿಸುತ್ತೆ ಎನ್ನೋದು ಚಿತ್ರತಂಡದ ವಾದ. ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ’ಬೆಲ್‌ಬಾಟಮ್’ ಬ್ಯುಸಿಯಾಗಿದೆ. ಜನೆವರಿ ಕೊನೆವಾರದಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಜಯತೀರ್ಥ ಸಜ್ಜಾಗಿದ್ದಾರೆ.ತನ್ನ ಟೀಸರ್ ಹಾಗೂ ಡಿಫ್‌ರೆಂಟ್ ಇಂಟ್ರಡಕ್ಷನ್ ಮೂಲಕ ಗಾಂಧಿನಗರದಲ್ಲಿ ಸೌಂಡ್ ಮಾಡ್ತೀರೊ ’ಬೆಲ್‌ಬಾಟಮ್’ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇತ್ತೀಚೆಗೆ ಬೇರೆಬೇರೆ ಜಾನರ್ ಹೊಂದರೋ ಸಿನಿಮಾಗಳನ್ನೂ ಬಾಚಿ ತಬ್ಬಿಕೊಳ್ತೀರೊ ಕನ್ನಡ ಪ್ರೇಕ್ಷಕರು ’ಬೆಲ್‌ಬಾಟಮ್’ಗೆ ಅಸ್ತು ಅಂತರಾ ಅನ್ನೋದನ್ನ ಕಾದುನೋಡಬೇಕಾಗಿದೆ.

 

LEAVE A REPLY

Please enter your comment!
Please enter your name here