Home District ಬೆಳಗಾವಿ ಜಿಲ್ಲಾ ರಾಜಕಾರಣದಲ್ಲೂ ಸಾಹುಕಾರ್ ಕಿಂಗ್ ಮೇಕರ್..! ಜಿಲ್ಲಾ ಪಂಚಾಯಿತಿಯಲ್ಲಿ ಈ ಸಲ ಕಮಲ ಅರಳುವುದು...

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲೂ ಸಾಹುಕಾರ್ ಕಿಂಗ್ ಮೇಕರ್..! ಜಿಲ್ಲಾ ಪಂಚಾಯಿತಿಯಲ್ಲಿ ಈ ಸಲ ಕಮಲ ಅರಳುವುದು ಗ್ಯಾರಂಟಿ..

6019
0
SHARE

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಗೋಕಾಕ ಸಾಹುಕಾರ್ ರಮೇಶ ಜಾರಕಿಹೊಳಿಯೇ ಕಿಂಗ್ ಮೇಕರ್.. ರಮೇಶ ಜಾರಕಿಹೊಳಿ ಕಾಂಗ್ರೆಸ್ ಮತ್ತು ತಮ್ಮ ಸಹೋದರರ ವಿರುದ್ಧ ಒಂದೊಂದೆ ರಾಜಕೀಯ ದಾಳಗಳನ್ನ ಉರಳಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳಾಯ್ತು ಈಗ ಜಿಪಂಗೆ ಕೈ ಹಾಕಿದ ಸಾಹುಕಾರ ನಡೆಯಿಂದ ಮತ್ತೆ ಬೆಳಗಾವಿ ಜಿಲ್ಲಾ ಪಂಚಾಯಿತಿಯಲ್ಲಿ ಕಮಲ ಅರಳುವುದು ಗ್ಯಾರಂಟಿ ಆಗಿದೆ..!

ಕಾಂಗ್ರೆಸ್ ಪಕ್ಷಕ್ಕೆ ರಮೇಶ ಜಾರಕಿಹೊಳಿ ಗುಡ್ ಹೇಳಿದ ಬಳಿಕ ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಕಾಂಗ್ರೆಸ್ ಪಕ್ಷ ಮತ್ತು ತಮ್ಮ ಸಹೋದರರಾದ ಮಾಜಿ ಸಚಿವ ಸತೀಶ ಜಾರಕಿಹೊಳಿ, ಲಖನ್ ಜಾರಕಿಹೊಳಿಗೆ ಒಂದರ ಮೇಲೊಂದು ಶಾಕ್ ನೀಡುತ್ತಿದ್ದಾರೆ. ಒಂದೇ ವಾರದಲ್ಲಿ ಗೋಕಾಕ ತಾಲೂಕು ಪಂಚಾಯಿತಿ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ. ಈಗ ಬೆಳಗಾವಿ ಜಿಲ್ಲಾ ಪಂಚಾಯಿತಿಗೆ ಗೋಕಾಕ ಸಾಹುಕಾರ್ ಕೈ ಹಾಕಿದ್ದು, ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಹಿಡಿತದಲ್ಲಿ ಇರುವ ಬೆಳಗಾವಿ ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬ್ಳೆ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ರಣತಂತ್ರ ರೂಪಿಸಿದ್ದಾರೆ ರಮೇಶ ಜಾರಕಿಹೊಳಿ.

ಇನ್ನು ಹಾಗೇ ನೋಡಿದ್ರೆ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ರಮೇಶ ಜಾರಕಿಹೊಳಿಯೇ ಕಿಂಗ್ ಮೇಕರ್ ಆಗಿದ್ದಾರೆ. ಯಾಕೆಂದ್ರೆ ಅನರ್ಹಗೊಂಡ ಬಳಿಕವೂ ರಮೇಶ ಜಾರಕಿಹೊಳಿ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಿಡಿತ ಸಾಧಿಸಿದ್ದಾರೆ. ಇದರ ಪರಿಣಾಮವಾಗಿಯೇ ರಮೇಶ ಜಾರಕಿಹೊಳಿ ಬೆಂಬಲಿತ 22ಕ್ಕೂ ಅಧಿಕ ಜಿಪಂ ಸದಸ್ಯರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಗೋಕಾಕ ಸಾಹುಕಾರನ ಗ್ರೀನ್ ಸಿಗ್ನಲ್ಗೆ ರಮೇಶ ಬೆಂಬಲಿತ ಸದಸ್ಯರು ಕಾಯುತ್ತಿದ್ದು, ಸುಪ್ರೀಂ ಕೋರ್ಟ ತೀರ್ಪಿನ ಬಳಿಕ ಬೆಳಗಾವಿ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನ ಕಳೆದುಕೊಳ್ಳಲಿದೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಮಾಜಿ ಮಂತ್ರಿ ಸತೀಶ ಜಾರಕಿಹೊಳಿ ಬಿಗ್ ಶಾಕ್ ಕೊಡುವುದಕ್ಕೆ ಈಗಾಗಲೇ ತೆರೆಮರೆಯಲ್ಲಿ ವೇದಿಕೆ ಸಿದ್ಧವಾಗಿದೆ.

ಒಟ್ಟಿನಲ್ಲಿ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ರಮೇಶ ಜಾರಕಿಹೊಳಿ ರಾಜಕೀಯ ದಾಳಗಳಿಂದ ಕಾಂಗ್ರೆಸ್ ಸುಧಾರಿಸಿಕೊಳ್ಳುಲ್ಲ ಆಗುತ್ತಿಲ್ಲ. ಗೋಕಾಕ ಸಾಹುಕಾರನ ನಡೆ ಕೈ ಪಾಳಯದಲ್ಲಿ ತಲ್ಲಣ ಮೂಡಿಸಿದೆ.

LEAVE A REPLY

Please enter your comment!
Please enter your name here