Home District ಬೆಳಗಾವಿ ಲೋಕ ಸಂಗ್ರಾಮ | ಜಾತಿ ಬಲ, ಹಣ ಬಲ, ತೋಳ್ಬಲದ ಕ್ಷೇತ್ರದಲ್ಲಿ ಯಾರಾಗಲಿದ್ದಾರೆ ಅಧಿಪತಿ…?...

ಬೆಳಗಾವಿ ಲೋಕ ಸಂಗ್ರಾಮ | ಜಾತಿ ಬಲ, ಹಣ ಬಲ, ತೋಳ್ಬಲದ ಕ್ಷೇತ್ರದಲ್ಲಿ ಯಾರಾಗಲಿದ್ದಾರೆ ಅಧಿಪತಿ…? ಕೈಗೆ ಜೈ ಅಂತಾರಾ ಜಾರಕಿಹೊಳಿ ಬ್ರದರ್ಸ್..?

2086
0
SHARE

ಕ್ಷೇತ್ರ : ಬೆಳಗಾವಿ ಲೋಕಸಭಾ ಕ್ಷೇತ್ರ.ಯಾರ್ ಯಾರ ನಡುವೆ ಪೈಪೋಟಿ : ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿನಡುವೆ.ಮೈತ್ರಿ ಅಬ್ಯರ್ಥಿಗಳು ಮತ್ತು ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿ :ಬಿಜೆಪಿ : ಬಿಜೆಪಿ ಹಾಲಿ ಸಂಸದ ಸುರೇಶ್ ಅಂಗಡಿ .. !!ಮೈತ್ರಿ ಅಭ್ಯರ್ಥಿಗಾಗಿ ಇನ್ನೂ ಹುಡುಕಾಟ, ಪ್ರಭಲ ಲಿಂಗಾಯತ ಅಭ್ಯರ್ಥಿಗಾಗಿ ಹುಡುಕಾಟ.ಆದರೂ ಆಕಾಂಕ್ಷಿಗಳ ಪಟ್ಟಿ : ಮಾಜಿ ಶಾಸಕರಾದ ಅಶೋಕ್ ಪಟ್ಟಣ್, ಫೀರೋಜ್ ಸೇಠ್, ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ್, ಶಿವಕಾಂತ್ ಸಿದ್ನಾಳ್, ಡಾ.ಸಾಧುನವರ್ ಮತ್ತು ಮಾಜಿ ಶಾಸಕ ರಮೇಶ್ ಕುಡಚಿ.

 ಬೆಳಗಾವಿ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲೇ ಕಾಂಗ್ರೆಸ್‌ನಿಂದ ಮಹಿಳಾ ಅಭ್ಯರ್ಥಿಯಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧಿಸಿ ಸೋಲಿನ ರುಚಿ ಅನುಭವಿಸಿದ್ರು. ಆದರಿಗ ಲಕ್ಷ್ಮೀ ಹೆಬ್ಬಾಳಕರ್, ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ ಬೇರೆ ಅಭ್ಯರ್ಥಿಗಳಿಗೆ ಮಣೆ ಹಾಕಬೇಕಿದೆ. ಇನ್ನು ಕಾಂಗ್ರೆಸ್‌ನ ಕೆಲವರು ಈಗಾಗಲೇ ತೆರೆಮರೆಯಲ್ಲಿ ಚುನಾವಣಾ ತಾಲಿಮು ನಡೆಸಿದ್ದಾರೆ. ಇನ್ನು ಸತತ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿ ಹ್ಯಾಟ್ರಿಕ್ ಸಾಧನೆ ಮಾಡಿರೋ ಸುರೇಶ ಅಂಗಡಿ ನಾಲ್ಕನೇ ಭಾರಿ ವಿಜಯ ಪತಾಕೆ ಹಾರಿಸೋಕೆ ತಮ್ಮದೇ ಆದ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಸುರೇಶ ಅಂಗಡಿ ಬರೋಬ್ಬರಿ ೧೫ ವರ್ಷಗಳ ಕಾಲ ಸಂಸದರಾಗಿ ಕ್ಷೇತ್ರವನ್ನ ಆಳಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ, ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅನುದಾನದ ಮಹಾಪೂರವೇ ಹರಿದು ಬಂದಿದೆ. ಮೊದಲ ಹಂತದಲ್ಲಿಯೇ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ನಗರ ಆಯ್ಕೆಯಾಗಿದೆ. ಸಿಟಿ ಅಭಿವೃದ್ಧಿಗೆ ೧ ಸಾವಿರ ಕೋಟಿ ರೂ. ಅನುದಾನ, ಅಮೃತ ಸಿಟಿ ಯೋಜನೆಯಲ್ಲಿ ೫೦೦ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ೩,೬೦೦ ಕೋಟಿ ರೂ. ವೆಚ್ಚದಲ್ಲಿ ಲೋಂಡಾ-ಮೀರಜ್ ಜೋಡಿ ಮಾರ್ಗದ ಅಭಿವೃದ್ಧಿ ಕೆಲಸ ನಡೆಯುತ್ತಿದ್ದು, ಏಪ್ರಿಲ್ ಅಂತ್ಯದವರೆಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ೧೪೨ ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸಲಾಗಿದೆ. ಜತೆಗೆ ಉಡಾನ್-೩ ಯೋಜನೆಯಲ್ಲಿ ಸಾಂಬ್ರಾ ನಿಲ್ದಾಣ ಆಯ್ಕೆಯಾಗಿರುವುದರಿಂದ ಮಾರ್ಚ್ ಮಾಸಾಂತ್ಯದ ವೇಳೆಗೆ ೧೪ ನಗರಗಳಿಗೆ ವಿಮಾನ ಸೇವೆ ದೊರೆಯಲಿದೆ.

ಬೆಳಗಾವಿ ನಗರದಲ್ಲಿ ತೀವ್ರ ಸಂಚಾರ ದಟ್ಟಣೆಯಿಂದ ಸಮಸ್ಯೆ ಅನುಭವಿಸುತ್ತಿದ್ದ ಪ್ರದೇಶಗಳಲ್ಲಿ ಸಂಚಾರ ಸುಗಮಗೊಳಿಸಲು ೪ ರೈಲ್ವೆ ಮೇಲ್ಸೇತುವೆಗಳನ್ನು ನಿರ್ವಿ?ಸಲು ಕೇಂದ್ರ ಸರ್ಕಾರದಿಂದ ೮೦ ಕೋಟಿ ರೂ. ಮಂಜೂರು ಮಾಡಲಾಗಿದೆ. ಮೂರು ಮೇಲ್ಸೇತುವೆ ಪೂರ್ಣಗೊಂಡಿದ್ದು, ನಗರದ ೩ನೇ ಗೇಟ್ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ೮೦ ವರ್ಷ ಹಳೆಯದಾದ ಬೆಳಗಾವಿ ರೈಲ್ವೆ ನಿಲ್ದಾಣವನ್ನು ೧೮ ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ೪.೨ ಕೋಟಿ ರೂ. ವೆಚ್ಚದಲ್ಲಿ ಘಟಪ್ರಭಾ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಂಸ್ಕೃತಿಕ ಭವನ, ಸಮುದಾಯ ಭವನ, ಶಾಲೆಗಳ ಸುಧಾರಣೆ ಸೇರಿ ಅನೇಕ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಕೆಲವು ಪ್ರಗತಿಯಲ್ಲಿವೆ.

ಬೆಳಗಾವಿಯಲ್ಲಿ ಡಿಜಿಎಫ್‌ಟಿ ಕಚೇರಿ, ಪಾಸ್‌ಪೋರ್ಟ್ ಕಚೇರಿ ಮಂಜೂರು ಮಾಡಿಸಿದ್ದು, ಕಾರ್ಯಾರಂಭ ಮಾಡಿವೆ. ಪ್ರಧಾನಿ ಮೋದಿ ಬೆಳಗಾವಿಗೆ ಆಗಮಿಸಿ ಫಸಲ್ ಬಿಮಾ ಯೋಜನೆಯನ್ನು ದೇಶಕ್ಕೆ ಲೋಕಾರ್ಪಣೆ ಮಾಡಿದ್ದು ವಿಶೇಷ. ಇವೆಲ್ಲವೂ ಅಂಗಡಿಗೆ ಪ್ಲಸ್ ಆಗಲಿವೆ.ಬೆಳಗಾವಿ ಲೋಕ ಸಭಾ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಗಳಿಗಿಂತ ಈ ಬಾರಿ ಬಿಜೆಪಿಗೂ ಬಾರಿ ಸವಾಲಿದೆ. ಯಾಕಂದ್ರೆ ಬಿಜೆಪಿ ಎದುರಿಗೆ ಸ್ಪರ್ಧಿಸುತ್ತಿರೋದು ಈ ಬಾರಿ ಮೈತ್ರಿ ಅಭ್ಯರ್ಥಿ.. ಲಿಂಗಾಯತ ಮತಗಳೇ ನಿರ್ಣಾಯಕ ಪಾತ್ರ ವಹಿಸುವ ಈ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳು ಕೂಡ ಅದೇ ಸಮುದಾಯದ ಪ್ರಭಲ ಅಭ್ಯರ್ಥಿಯ ಹುಡುಕಾಟದಲ್ಲಿವೆ..

ಇಲ್ಲಿ ಜೆಡಿಎಸ್ ಗೆ ನೆಲೆ ಇಲ್ಲದ ಕಾರಣ ಈ ಕ್ಷೇತ್ರವನ್ನ ಅದು ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿದ್ದು, ಕೈ ಪಕ್ಷದ ಅಭ್ಯರ್ಥಿಯನ್ನ ಬೆಂಬಲಿಸಲಿದೆ.. ಇಲ್ಲಿ ಮುಖ್ಯವಾದದ್ದು ಅದು ಅಲ್ಲ.. ಸತತ ಮೂರು ಬಾರಿ ಜಯಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿರೋ ಅಂಗಡಿಗೆ ಸ್ವಪಕ್ಷದಲ್ಲೇ ಕೇಳಿ ಬರುತ್ತಿರೋ ಅಪಸ್ವರ ಈ ಬಾರಿಯ ಗೆಲುವಿಗೆ ಕಗ್ಗಂಟಾಗಲಿದೆ.,. ಹಾಗಾಗಿ ಇದನ್ನೇ ಬಂಡವಾಳ ಮಾಡಿಕೊಳ್ಳಲು ಹೊರಟಿರುವ ಮೈತ್ರಿ ಪಡೆ ಗೆಲುವಿನ ತಂತ್ರಗಳನ್ನ ರೂಪಿಸುತ್ತಿದೆ..ಹಾಗಾದ್ರೆ ಈ ಬಾರಿ ಹೇಗಿದೆ ಕ್ಷೇತ್ರದಲ್ಲಿ ಮೈತ್ರಿ ಬಲಾಬಲ…? ಲೋಕಸಭಾ ಕ್ಷೇತ್ರದ ಫಲಿತಾಂಶ ಜಾರಕಿಹೊಳಿ ಬ್ರದರ‍್ಸ್ ಕೈಗೊಳ್ಳೋ ನಿರ್ಧಾರದ ಮೇಲೆ ನಿಂತಿರುತ್ತೇ ಅನ್ನೋದು ಈ ಹಿಂದೆಯೂ ಸಾಬೀತಾಗಿದೆ. ಯಾರೇ ಗೆಲ್ಲಬೇಕಿದ್ರೂ ಜಾರಕಿಹೊಳಿ ಬ್ರದರ‍್ಸ್ ಕೃಪಾಕಟಾಕ್ಷ ಬೇಕೆ ಬೇಕು. ಈ ಹಿಂದೆ ಹಾಲಿ ಸಂಸದ ಸುರೇಶ ಅಂಗಡಿ ಗೆಲುವಿಗೆ ಇವರೇ ಕಾರಣರಾಗಿದ್ದು ಈಗ ಗುಟ್ಟಾಗಿ ಉಳಿದಿಲ್ಲ. ಆದ್ರೆ ಸುರೇಶ ಅಂಗಡಿ ಮತ್ತು ಜಾರಕಿಹೊಳಿ ಬ್ರದರ‍್ಸ್ ನಡುವೆ ಮನಸ್ತಾಪ ಉಂಟಾಗಿದ್ದು, ಆ ಅಸಮಾಧಾನವೇ ಅಂಗಡಿ ಗೆಲುವಿಗೆ ತೊಡಕಾಗಿ ಪರಿಣಮಿಸೋ ಸಾಧ್ಯತೆಯಿದೆ.

ಇತ್ತ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ತಂದು ಟಿಕೆಟ್‌ಗಾಗಿ ಶತಾಯಗತಾಯ ಪ್ರಯತ್ನಪಡುತ್ತಿರೋ ಮಾಜಿ ಶಾಸಕ ಅಶೋಕ ಪಟ್ಟಣ್ ಅವರಿಗೆ ಜಾರಕಿಹೊಳಿ ಅವರ ಬೆಂಬಲ ಸಿಗೋದು ಕಷ್ಟಸಾಧ್ಯ. ಆದರೆ ಈ ಭಾರಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಆದ ಹೈಡ್ರಾಮಾ. ನಂತರ ರಮೇಶ್ ಜಾರಕಿಹೊಳಿಯವರ ಕೈ ತಪ್ಪಿದ ಸಚಿವಗಿರಿಯಿಂದ ಸಧ್ಯ ಬೆಳಗಾವಿ ಜಿಲ್ಲೆಯಿಂದ ಸಚಿವ ಸ್ಥಾನ ಅಲಂಕರಿಸಿ, ಜಿಲ್ಲಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಈ ಭಾರಿಯ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಇನ್ನು ರಾಮದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನುಂಡ ಅಶೋಕ ಪಟ್ಟಣ ಅವರಿಗೆ ಕಾಂಗ್ರೆಸ್ ವ್ಮಣೆ ಹಾಕಿದ್ರೆ, ಅವರು ಕೂಡ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಅವರೂ ಲಿಂಗಾಯತ ಸಮುದಾಯದ ಅಪಾರ ಮತಗಳನ್ನ ಪಡೆಯುವುದರಲ್ಲಿ ಸಂದೇಹವಿಲ್ಲ. ಇದೇಲ್ಲದರ ಲಾಭ ನಷ್ಟವನ್ನ ಅಳೆದು ತುಗಿದ್ರೆ ಮತದಾರ ಪ್ರಭುವಿನ ತೀರ್ಪು ಹೇಗಿರುತ್ತೆ  ಅಂತ ಉಹಿಸೋದು ಸಧ್ಯಕ್ಕೆ ಕಷ್ಟ ಸಾಧ್ಯ.

ಪ್ರಸ್ತುತ ರಾಜಕೀಯ ಲೆಕ್ಕಾಚಾರವನ್ನ ಅವಲೋಕಿಸಿದಾಗ ಈ ಬಾರಿ ಜಾತಿ ಮತ್ತು ವ್ಯಕ್ತಿ ಎರಡಕ್ಕೂ ಮತದಾರ ಸಮಾನ ಪ್ರಾತಿನಿಧ್ಯ ನೀಡಲಿದ್ದು, ಅಂತಿಮವಾಗಿ ಆಯಾ ಅಭ್ಯರ್ಥಿಗಳ ಸ್ವಂತ ವರ್ಚಸ್ಸು ಕೂಡ ಅವರ ಫಲಿತಾಂಶವನ್ನ ಆದರಿಸಿದೆ. ಇನ್ನು ಈ ಬಾರಿ ಎಂಇಎಸ್‌ನಿಂದ ಯಾವೊಬ್ಬ ಶಾಸಕರು ಆಯ್ಕೆ ಆಗದೇ ಇದ್ದರೂ ಅವರು ಸೂಚಿಸೋ ಬೆಂಬಲ ಕೂಡ ಅಭ್ಯರ್ಥಿಗಳಿಗೆ ವರದಾನವಾಗಿ ಪರಿಣಮಿಸಲಿದೆ. ೮ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಲೋಕಸಭಾ ಕ್ಷೇತ್ರದಲ್ಲಿ ಬೆಳಗಾವಿ ತಾಲೂಕಿನ ಮೂರು ಕ್ಷೇತ್ರಗಳಲ್ಲಿ ಮರಾಠಿ ಮತಗಳೇ ಹೆಚ್ಚಿವೆ. ಮರಾಠಿಗರಿಗೆ ಬಿಜೆಪಿ ಕಡೆಗೆ ಒಲವು ಜಾಸ್ತಿ ಇದೆ. ಲಿಂಗಾಯತ ಮತಗಳು ಹೆಚ್ಚಾಗಿರುವುದರಿಂದ ಅವರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಬಿಜೆಪಿ ಕೇಂದ್ರ ಸರ್ಕಾರದ ಸಾಧನೆ, ಕಾಂಗ್ರೆಸ್ ನಲ್ಲಿ ಇದುವರೆಗೂ ಪ್ರಭಲವಾದ ಅಭ್ಯರ್ಥಿ ಸಿಗದೇ ಇರುವುದು,  ಜಾರಕೀಹೊಳಿ ಬ್ರದರ್ಸ್ ನಡುವೆ ಮತ್ತು ಲಕ್ಷ್ಮಿ ಹೆಬ್ಬಾಳ್ ಕರ್ ನಡುವೆ ಉಂಟಾದ ವೈಮನಸ್ಸು, ಇವೆಲ್ಲವೂ ಕಾಂಗ್ರೆಸ್ ಗೆ ವಿರೋಧವಾಗಿಯೇ ಇವೆ.. ಸದ್ಯಕ್ಕೆ ಮೇಲ್ನೋಟಕ್ಕೆ ಬಿಜೆಪಿಯೇ ಮುಂಚೂಣಿಯಲ್ಲಿದ್ದರೂ ಇಲ್ಲಿ ಕಾಂಗ್ರೆಸ್ , ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಮಲಪಡೆಗೆ ತೀವ್ರ ಪೈಪೋಟಿ ಕೊಡುವುದಂತೂ ಸತ್ಯ.ಸಕ್ಕರೆ ಜಿಲ್ಲೆ ಬೆಳಗಾವಿ ಲೋಕಸಭಾ ಕ್ಷೇತ್ರ ಬರೋಬ್ಬರಿ ೮ ವಿಧಾನಸಭಾ ಕ್ಷೇತ್ರಗಳನ್ನ ಹೊಂದಿರೋ ಭೌಗೋಳಿಕವಾಗಿ ಅತೀ ದೊಡ್ಡ ಕ್ಷೇತ್ರ. ಹಿಂಗಾರು-ಮುಂಗಾರು ಬೆಳೆಗಳೇ ಇಲ್ಲಿಯ ರೈತರ ಜೀವನಾಧಾರ. ೧೩,೪೧೫ ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರೋ ಈ ಕ್ಷೇತ್ರದಲ್ಲಿ ಕಬ್ಬು, ಜೋಳ, ಗೋದಿ, ಭತ್ತ, ಸಜ್ಜೆ, ಶೇಂಗಾ, ಕಡಲೆ, ತಂಬಾಕು ಪ್ರಮುಖ ವಾಣಿಜ್ಯ ಬೆಳೆ. ಕೃಷ್ಣ, ಮಲಪ್ರಭೆ, ಘಟಪ್ರಭೆ, ಮಾರ್ಕಂಡೇಯ, ಹಿರಣ್ಯಕೇಶಿ, ದೂದಗಂಗಾ ಹಾಗೂ ವೇದಗಂಗಾ ಹೀಗೆ ಸಪ್ತ ನದಿಗಳ ತವರಿದು.

ಹೀಗೆ ಸಮೃದ್ಧವಾಗಿರೋ ಈ ಕ್ಷೇತ್ರದಲ್ಲಿ ರಾಜಕೀಯ ಮೇಲಾಟ ಮಾತ್ರ ತಗ್ಗಿಲ್ಲ. ರಾಜಕೀಯ ಪಕ್ಷಗಳು ಇಲ್ಲಿನ ಜನರನ್ನ ತಮ್ಮ ರಾಜಕೀಯ ದಾಳವಾಗಿ ಬಳಸಿಕೊಂಡಿದ್ದಾರೆ.ಹೆಸರಿಗೆ ಸಪ್ತನದಿಗಳ ನಾಡು. ಆದ್ರೆ ಬೇಸಿಗೆ ಬಂತೆಂದ್ರೆ ಇಲ್ಲಿ ಹನಿ ನೀರಿಗೂ ತತ್ವ್ತಾರ. ಕುಡಿಯೋ ನೀರಿನ ಭೀಕರತೆ ಊಹಿಸೋಕೂ ಅಸಾಧ್ಯ. ಇನ್ನು ದಶಕಗಳಿಂದ ನೆನೆಗುದಿಗೆ ಬಿದ್ದಿರೋ ಬಳ್ಳಾರಿ ನಾಲಾ ಯೋಜನೆ, ಕಳಸಾ-ಬಂಡೂರಿ ನಾಲಾ ಯೋಜನೆ, ಬೆಣ್ಣಿಹಳ್ಳ ಏತನೀರಾವರಿ ಯೋಜನೆ, ನಮ್ಮೂರ ಬಾಂಧಾರ ಕಾಮಗಾರಿಗಳು ಕುಂಟುತ್ತಾ ಸಾಗಿರೋದು ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಿ ಪರಿಣಮಿಸಿವೆ.

ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 62,864 ಮತ ಪಡೆದಿದ್ದರೆ,  ಕಾಂಗ್ರೆಸ್ 78,419 ಮತ ಪಡೆದಿತ್ತು. ಅರಬಾವಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವರ್ಚಸ್ಸಿದ್ರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಳಗಿಂದೊಳಗೆ ಕಾಂಗ್ರೆಸ್‌ಗೆ ಬೆಂಬಲಿಸಿದ್ದರು. ಆದರೆ ಈ ಭಾರಿಯ ಚುನಾವಣೆಯಲ್ಲಿ ಆಪರೇಷನ್ ಕಮಲದ ಹವಾ ಜೋರಾಗಿದ್ದು, ಮತ್ತು ಆಪರೇಷನ್ ಕಮಲದ ಒಂದು ಹಂತದ ಉಸ್ತುವಾರಿಯನ್ನ ಬಾಲಚಂದ್ರ ಜಾರಕಿಹೊಳಿಯವರೇ ವಹಿಸಿಕೊಂಡಿದ್ದು ನೋಡಿದ್ರೆ ಅದು ಈ ಭಾರಿ ಹಾಲಿ ಸಂಸದ ಸುರೇಶ ಅಂಗಡಿಯವರಿಗೆ ವರದಾನವಾಗುವ ಸಾಧ್ಯತೆಯಿದೆ.

ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 54,419 ಮತ ಪಡೆದಿದ್ದರೆ,  ಕಾಂಗ್ರೆಸ್ 85,328 ಮತ ಪಡೆದಿತ್ತು. ಕಳೆದ ಬಾರಿ ಇಲ್ಲಿ ಕೈ ಪಕ್ಷಕ್ಕೆ ಅತ್ಯಧಿಕ ಮತ ಬರೋಕೆ ಕಾರಣ ಶಾಸಕ ರಮೇಶ್ ಜಾರಕೀಹೊಳಿ.. ಆದ್ರೆ ಈ ಬಾರಿ ಅವರು ಕೈ ಸರ್ಕಾರದ ಮೇಲೆ ಮುನಿಸಿಕೊಂಡಿದ್ದು, ಬಿಜೆಪಿಗೆ ವರದಾನವಾಗಲಿದೆ..ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 68,999 ಮತ ಪಡೆದಿದ್ದರೆ,  ಕಾಂಗ್ರೆಸ್ 53,412 ಮತ ಪಡೆದಿತ್ತು. ಈ ಕ್ಷೇತ್ರದಿಂದ ಎರಡು ಬಾರಿ ಜಯಭೇರಿ ಗಳಿಸಿರೋ ಕಾಂಗ್ರೆಸ್ ಮಾಜಿ ಶಾಸಕ ಫಿರೋಜ್ ಶೇಠ್ ಈ ಭಾರಿ ಚುನಾವಣೆಯಲ್ಲಿ ಸೋಲನುಭವಿಸಿದ್ದು, ಇಲ್ಲಿ ಬಿಜೆಪಿಯ ಅನೀಲ್ ಬೆನಕೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಹೀಗಾಗಿ ಸಹಜವಾಗಿಯೇ ಈ ಕ್ಷೇತ್ರದ ಜನರಲ್ಲಿ ಬಿಜೆಪಿ ಬಗೆಗೆ ಒಲವಿದೆ. ಉತ್ತಮ ಕೆಲಸಗಾರ, ಬಡವರಿಗೆ ಉಪಕಾರಿ ಅನ್ನೋ ಅನುಕಂಪ ಕೂಡ ಅನೀಲ್ ಬೆನಕೆ  ಗಳಿಸಿದ್ದಾರೆ. ಹೀಗಾಗಿ ಈ ಕ್ಷೇತ್ರದ ಬಹುತೇಕ ಓಟುಗಳು ಬಿಜೆಪಿ ಪಾಲಾಗೋ ಸಾಧ್ಯತೆಯಿದೆ.ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 96,118 ಮತ ಪಡೆದಿದ್ದರೆ,  ಕಾಂಗ್ರೆಸ್ 34,336 ಮತ ಪಡೆದಿತ್ತು. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ ಮುಂಚೆಯಿಚಿದಲೂ ಕೆಲಸಗಾರ ಅನ್ನೊ ಹಣೆಪಟ್ಟಿ ಕಟ್ಟಿಕೊಂಡಿದ್ದು, ಅಲ್ಲದೇ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಸ್ತಿತ್ವ ಇಲ್ಲದೇ ಇರೋದು ಬಿಜೆಪಿಗೆ ಒಂದು ಕಡೆ ಲಾಭವಾದ್ರೆ. ಈ ಕ್ಷೇತ್ರದ ಅರ್ಧದಷ್ಟು ಮರಾಠಿ ಮತಗಳು ನಿಸ್ಸಂದೇಹವಾಗಿ ಬಿಜೆಪಿ ಹಾಗೂ ನರೇಂದ್ರ ಮೋದಿ ಹೆಸ್ರಲ್ಲಿ ಹಂಚಿಹೋಗುತ್ತವೆ.

ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 77,120 ಮತ ಪಡೆದಿದ್ದರೆ,  ಕಾಂಗ್ರೆಸ್ 66,301 ಮತ ಪಡೆದಿತ್ತು. ಸತತ ಪ್ರಯತ್ನದಿಂದ ಲಕ್ಷ್ಮೀ ಹೆಬ್ಬಾಳಕರ್ ಈ ಭಾರಿಯ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದು, ಐವತ್ತು ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು. ಇಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್ ಅಧಿಕಾರದಲ್ಲಿದ್ರು. ಮರಾಠಿ ಮತಗಳೆ ನಿರ್ಣಾಯಕವಾಗಿದ್ದರಿಂದ ಮಾಜಿ ಶಾಸಕ ಸಂಜಯ್ ಪಾಟೀಲ್ ಕೂಡ ಇಲ್ಲಿ ತಮ್ಮದೇ ಆದ ಹಿಡಿತವನ್ನು ಸಾಧಿಸಿದ್ದಾರೆ.  ಹೀಗಾಗಿ ಗ್ರಾಮೀಣ ಕ್ಷೇತ್ರದ ಮತದಾರ ಮೋದಿ ಪರ ಹೆಚ್ಚು ಒಲವು ಹೊಂದಿದ್ದಾನೆ ಎನ್ನಲಾಗಿದೆ.ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 63,227 ಮತ ಪಡೆದಿದ್ದರೆ,  ಕಾಂಗ್ರೆಸ್ 51,382 ಮತ ಪಡೆದಿತ್ತು.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಮಹಾಂತೇಶ್ ಕೌಜಲಗಿ ಶಾಸಕರಾಗಿದ್ರು, ಬೈಲಹೊಂಗಲದ ಜನತೆಗೆ ಮಾತ್ರ ಬಿಜೆಪಿಯತ್ತ ಹೆಚ್ಚು ಒಲವಿದೆ. ಮಾಜಿ ಬಿಜೆಪಿ ಶಾಸಕ ವಿಶ್ವನಾಥ ಪಾಟೀಲ ಅವರ ವರ್ಚಸ್ಸು ಮತ್ತು ಮತ್ತೊಬ್ಬ ಮಾಜಿ ಬಿಜೆಪಿ ಶಾಸಕ ಜಗದೀಶ್ ಮೆಟಗುಡ್ಡ ಅವರ ವರ್ಚಸ್ಸು ಇಲ್ಲಿ ವಿಲಿನವಾದೆ ಬಿಜೆಪಿಯತ್ತ ಹೆಚ್ಚು ಮತಗಳು ವಾಲಬಹುದು.ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 60,347 ಮತ ಪಡೆದಿದ್ದರೆ,  ಕಾಂಗ್ರೆಸ್ 59,257 ಮತ ಪಡೆದಿತ್ತು. ಬಿಜೆಪಿ ಶಾಸಕ ಆನಂದ ಮಾಮನಿ ಅವರ ವರ್ಚಸ್ಸು ಹಾಗೂ ಮೋದಿ ಅಲೆ ಇಲ್ಲಿ ಕಂಡು ಬಂದಿದ್ದು, ಕಾಂಗ್ರೆಸ್‌ಗಿಂತ ಬಿಜೆಪಿ ಪ್ರಾಬಲ್ಯ ಇಲ್ಲಿ ಹೆಚ್ಚಾಗಿದೆ.ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 70,558 ಮತ ಪಡೆದಿದ್ದರೆ,  ಕಾಂಗ್ರೆಸ್ 49.939 ಮತ ಪಡೆದಿತ್ತು.

ಈ ಕ್ಷೇತ್ರದಿಂದ ಸತತ ಎರಡು ಬಾರಿ ಆಯ್ಕೆಯಾಗಿರೋ ಕಾಂಗ್ರೆಸ್‌ನ ಅಶೋಕ ಪಟ್ಟಣ ಈ ಭಾರಿ ನೆಲಕಚ್ಚಿದ್ದು. ಬಿಜೆಪಿಯ ಮಹಾದೇವಪ್ಪ ಯಾದವಡ್ ಸಧ್ಯ ಶಾಸಕರಾಗಿರೋದು ಬಿಜೆಪಿ ಪರ ಅಲೇ ಇದೆ ಅನ್ನಿಸಿದ್ರು. ಕಾಂಗ್ರೆಸ್ಸಿನ ಅಶೋಕ್ ಪಟ್ಟಣ್ ಅವರೇ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿರೋದು ರಾಮದುರ್ಗ ಕ್ಷೇತ್ರದಲ್ಲಿ ಎರಡು ಪಕ್ಷಗಳಿಗೂ ಸಮಬಲ ಕಂಡು ಬಂದರೂ ಅಚ್ಚರಿಯಿಲ್ಲ.ಹಾಗಾದ್ರೆ ಈ ಕ್ಷೇತ್ರದಲ್ಲಿನ ಜಾತಿವಾರು ಮತದಾರರ ಸಂಖ್ಯಾವಾರು ನೋಡೋದಾದ್ರೆ, 2018 ರ ಮಾಹಿತಿಯಂತೆ.ಲಿಂಗಾಯತ- 4.42 ಲಕ್ಷ.ಮರಾಠ- 2.26 ಲಕ್ಷ.ಮುಸ್ಲಿಂ- 1.84 ಲಕ್ಷ.ಕುರುಬ-1.50 ಲಕ್ಷ..ಎಸ್ಸಿ- 1.62 ಲಕ್ಷ.ಎಸ್ಟಿ- 96 ಸಾವಿರ.ನೇಕಾರ- 70 ಸಾವಿರ.ಉಪ್ಪಾರ- 60 ಸಾವಿರ.ಹಣಬರ- 15 ಸಾವಿರ.ಬ್ರಾಹ್ಮಣ- 37 ಸಾವಿರ.ಕ್ಷತ್ರಿಯ-26 ಸಾವಿರ.ರಡ್ಡಿ – 28 ಸಾವಿರ.ಇತರೆ- 2.50 ಲಕ್ಷ.ಇದು ಈ ಕ್ಷೇತ್ರದ ಜಾತಿ ವಾರು ಅಂಶವಾದ್ರೆ, ಇದೇ 2018 ರ ಪ್ರಕಾರ ಇಲ್ಲಿನ ಮತದಾರರ ಸಂಖ್ಯೆ ಈ ಕೆಳಕಂಡಂತಿದೆ..ಒಟ್ಟು ಪುರುಷ ಮತದಾರರು  : 8,79,382.ಒಟ್ಟು ಮಹಿಳಾ ಮತದಾರರು : 8,70,927  ಇತರೆ : 49. ಒಟ್ಟು ಮತದಾರರು : 17,50,358   

ಇದು 2018 ರ ಮತದಾರರ ಜನಗಣತಿಯ ಮಾಹಿತಿ.. ಹತ್ತಿರ ಹತ್ತಿರ 18 ಲಕ್ಷ ಮತದಾರರನ್ನ ಹೊಂದಿರೋ ಬಹುದೊಡ್ಡ  ಕ್ಷೇತ್ರ ಬೆಳಗಾವಿ ಲೋಕಸಭಾ ಕ್ಷೇತ್ರವಾಗಿದ್ದು, ಇಂತಹ ಐತಿಹಾಸಿಕ ಕ್ಷೇತ್ರದಲ್ಲಿ ಈ ಬಾರಿ ಸೋಲಿಲ್ಲದ ಸರದಾರ ಬಿಜೆಪಿಯ ಸುರೇಶ್ ಅಂಗಡಿಯನ್ನ ಸೋಲಿಸಲೇ ಬೇಕು ಅಂತ ಕಾಂಗ್ರೆಸ್ ಮೈತ್ರಿ ಪಡೆ ಇನ್ನಿಲ್ಲದ ತಂತ್ರಗಳನ್ನ ಹೆಣೆಯುತ್ತಿದೆ… ಅಂತಿಮವಾಗಿ ವಿಜಯ ಮಾಲೆ ಯಾರ ಕೊರಳಿಗೆ ಬೀಳುತ್ತೆ..?