Home Cinema ಬೆಳಗೆರೆ ಮೇಲೆ ದುನಿಯಾ ವಿಜಿಗೆ ಕೆಂಡದಂತ ಕೋಪ..! ಬೆಳ್ ಬೆಳ್ಳಿಗ್ಗೆ ಬೆಳಗೆರೆ ಬಾಂಬ್‌ಗೆ ಕೆರಳಿದ ಕರಿಚಿರತೆ...

ಬೆಳಗೆರೆ ಮೇಲೆ ದುನಿಯಾ ವಿಜಿಗೆ ಕೆಂಡದಂತ ಕೋಪ..! ಬೆಳ್ ಬೆಳ್ಳಿಗ್ಗೆ ಬೆಳಗೆರೆ ಬಾಂಬ್‌ಗೆ ಕೆರಳಿದ ಕರಿಚಿರತೆ ..!

1709
0
SHARE

ಫೈನಾಲಿ ರವಿ ಬೆಳಗೆರೆಯವರ ಟೀಕೆಗಳ ಸುರಿಮಳೆಗೆ ನಟ ದುನಿಯಾ ವಿಜಿ ಒಂದು ಕ್ಲಾರಿಟಿ ಕೊಟ್ಟಿದಾರೆ. ಇಷ್ಟುದಿನ ಯಾವುದಕ್ಕೂ ಪ್ರತಿಕ್ರಯಿಸದೇ ಸುಮ್ಮನಿದ್ದ ಬ್ಲಾಕ್ ಕೋಬ್ರಾ ಕಡೆಗೂ ತಮ್ಮ ಮನಸ್ಸಿನಲ್ಲಿದ್ದ ಬೆಂಕಿಯನ್ನ ಆಚೆ ಹಾಕಿದಾರೆ. ತಮ್ಮ ಪರ್ಸನಲ್ ಲೈಫ್ ಬಗ್ಗೆ ಹೇಳಿಕೆ ನೀಡಿದ್ದ ಲೇಖಕ ರವಿ ಬೆಳಗೆರೆ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತಾಡೋಕೆ ಅವರ‍್ಯಾರು ಅಂತ ಕ್ವಾಷೆನ್ ಮಾರ್ಕ್ ಇಟ್ಟಿದ್ದಾರೆ ಈ ಕರುನಾಡ ಕರಿಯ. ಇಷ್ಟೇಲ್ಲಾ ನಡೆದಿದ್ದು ಇಂದಿನ ಡಾಲಿ ಧನಂಜಯ್ ಅಭಿನಯದ ಮುಂದಿನ ಚಿತ್ರ ಬಡವ ರಾಸ್ಕಲ್ ಮುಹೂರ್ತ ಸಮಾರಂಭದಲ್ಲಿ. ತಮ್ಮ ಗೆಳೆಯ ಡಾಲಿಗೆ ಶುಭಕೋರಲು ಬಂದಿದ್ದ ನಟ ದುನಿಯಾ ವಿಜಿ ನಂತರ ಮಾಧ್ಯಮದವರ ಜೊತೆ ಮಾತನಾಡಿದ್ರು.

ಇದೇ ಸಂದರ್ಭದಲ್ಲಿ ರವಿ ಬೆಳಗೆರೆ ತಮ್ಮ ಸಾಂಸರಿಕ ಬದುಕಿನ ಬಗ್ಗೆ ಮಾಡಿದ್ದ ಕಾಮೆಂಟ್‌ಗಳಿಗೆ ಬಹಳ ಖಾರವಾಗಿಯೇ ಆನ್ಸರ್ ಮಾಡಿದ್ದಾರೆ. ರವಿ ಬೆಳಗೆರೆ ಇನ್ನೂ ಬದುಕಿದ್ದಾರಾ..? ಆತನಿಗೆ ಮೊದಲೇ ಪ್ರಜ್ಞೆ ಇಲ್ಲ. ಅವರಿಗೇನೂ ಸ್ವಲ್ಪ ಪ್ರಾಬ್ಲಮ್ ಇದೆ. ಆತನ ವಯಸ್ಸಿಗಾದ್ರೂ ಮಾರ್ಯದೆಯಿರಬೇಕು. ಅವನಿಗೆ ಇಬ್ಬರು ಹೆಂಡತಿರು, ನಾಲ್ಕು ಮಕ್ಕಳು. ಅವನಿಗೆ ಏನಾದ್ರೂ ಪ್ರಾಬ್ಲಮ್ ಇದೆಯಾ.. ವಿಚಾರಿಸಿ ಅಂತ ರಿರ್ಟನ್ ಕ್ವಾಷೆನ್ ಹಾಕಿದಾರೆ ನಟ ದುನಿಯಾ ವಿಜಿ.ನಂತರ ಮಾತು ಮುಂದುವರೆಸಿದ ವಿಜಯ್, ಆತ ಕುಡಿದುಕುಡಿದು ತಿಂಗಳಲ್ಲಿ ಒಂದು ಇಪ್ಪತ್ತು ದಿನ ಆಸ್ಪತ್ರೆಯಲ್ಲಿರ‍್ತಾನೆ.

ಪ್ರಜ್ಞೆ ಬಂದಾಗ ಬಂದು ಬರಿತಾನೆ. ಈತನಿಗೆ ಪ್ರಜ್ಞೆ ಬಂದಾಗ ದರ್ಶನ್ ಹೆಂಡತಿ ಹಾಗೂ ನನ್ನ ಹೆಂಡತಿ ನೆನಾಪಾಗ್ತಾರೆ. ಅವರ ಹೆಂಡತಿಯರು ಅವನ ಕಣ್ಣಿಗೆ ಕಾಣೋದೆ ಇಲ್ವಾ ಅಂತ ಖಡಕ್ ವಾರ್ನಿಂಗ್ ಕೊಟ್ಟಿದಾರೆ ಮಿಸ್ಟರ್.ಬ್ಲಾಕ್ ಕೋಬ್ರಾ. ಇಷ್ಟು ವಿವಾದಗಳಿಗೆ ಕಾರಣವಾಗಿದ್ದು ಮೊನ್ನೆಯಷ್ಟೇ ರವಿ ಬೆಳಗೆರೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಡಿದ ಒಂದು ಬ್ಲಾಸ್ಟಿಂಗ್ ಕಾಮೆಂಟ್. ನಟ ದರ್ಶನ್ ಹಾಗೂ ದುನಿಯಾ ವಿಜಿ ಸಂಸಾರ ತಾಪತ್ರಯಗಳ ಬಗ್ಗೆ ಮಾತನಾಡಿದ ರವಿ ಬೆಳಗೆರೆ ಪ್ರೀತಿಯಿಂದ ಹೇಳ್ತೆನೆ ಇವರೆಲ್ಲಾ ಹೀಗಾಡಬಾರದು ಅಂತ ಅಡ್‌ವೈಸ್ ಮಾಡಿದ್ರು. ವಿಜಿ ಸಂಸಾರ ಗಲಾಟೆಯನ್ನ ಟೀಕಿಸಿದ್ದ ರವಿ ಬೆಳಗೆರೆ ಬ್ಲಾಕ್ ಕೋಬ್ರಾರನ್ನ ಕರಿಗೊಬ್ಬರ ಎಂದುಬಿಟ್ರು.

ನೀನು ಎಷ್ಟು ಜನರನ್ನ ಮದುವೆಯಾಗ್ತಿಯಾ..? ನಿನಗೆ ಒಳ್ಳೆ ಮಾರ್ಕೆಟ್ ಇದೆ, ಒಳ್ಳೆ ಇನ್‌ಕಮ್ ಇದೆ. ಒಳ್ಳೆ ಜೀವನ ಮಾಡೋಕೆ ಏನಪ್ಪ ಅಂತ ದುನಿಯಾ ವಿಜಿ ಮೇಲೆ ಮುಗಿಬಿದ್ದಿದ್ರು ರವಿ ಬೆಳಗೆರೆ. ಒಟ್ಟಿನಲ್ಲಿ ಭೀಮಾ ತೀರದಲ್ಲಿ ಸಿನಿಮಾದಿಂದ ಶುರುವಾದ ದುನಿಯಾ ವಿಜಿ ಹಾಗೂ ರವಿ ಬೆಳಗೆರೆ ಮುಸುಕಿನ ಗುದ್ದಾಟ ಮುಗಿಯೋ ಲಕ್ಷಣಗಳೇ ಕಾಣ್ತಿಲ್ಲ. ಈ ಬಗ್ಗೆ ನಟ ದುನಿಯಾ ವಿಜಯ್‌ಗೆ ಎಷ್ಟು ಅಸಮಾಧಾನವಿದೆ ಎನ್ನುವ ಸತ್ಯ ಈಗ ಆಚೆ ಬಂದಿದೆಯಷ್ಟೇ. ದರ್ಶನ್ ಹಾಗೂ ವಿಜಯ್‌ರನ್ನ ಜೈಲ್ ಗಿರಾಕಿಗಳು ಎಂದ ರವಿ ಬೆಳಗೆರೆ ಇಂಡಸ್ಟ್ರಿಯ ಮುನಿಸಿಗೆ ಕಾರಣವಾಗ್ತಿರೋದು ಕೂಡ ಅಷ್ಟೇ ಸತ್ಯ.

ಈ ಹೊಸ ಕಾಂಟ್ರವರ್ಸಿಯ ಬಗ್ಗೆ ದುನಿಯಾ ವಿಜಿ ಸ್ಪಷ್ಟನೆ ಕೊಟ್ಟದಾಗಿದೆ. ಇನ್ನು ಚಾಲೆಂಜಿಂಗ್ ದರ್ಶನ್ ರಿಯಾಕ್ಷನ್ ಮಾತ್ರ ಬಾಕಿಯಿದೆಯಷ್ಟೇ. ಅದೇನೆ ಇರ‍್ಲಿ, ಸಿನಿಮಾ ನಟರ ಬಗ್ಗೆ ಮಾತನಾಡಿದ ರವಿ ಬೆಳಗೆರೆ ಒಂಷ್ಟು ಜನರನ್ನ ಎದುರುಹಾಕಿಕೊಂಡಿರೋದಂತೂ ಸುಳ್ಳಲ್ಲ. ಸದಾ ತಮ್ಮ ಯೂಟ್ಯೂಬ್ ವಿಡಿಯೋಗಳಿಂದ ಚಾಲ್ತಿಯಲ್ಲಿರುವ ರವಿ ಬೆಳಗೆರೆಗೆ ಇನ್ಯಾರು ಟೀಕಾ ಬಾಣ ಬಿಡ್ತಾರೋ ಕಾದುನೋಡಬೇಕು.

LEAVE A REPLY

Please enter your comment!
Please enter your name here