Home District ಬೇಕೇ ಬೇಕು…ನಮಗೆ ಬಾರ್ ಬೇಕೇ…ಬೇಕು… ನಮ್ಮ ಯಜಮಾನರಿಗೆ ಎಣ್ಣೆ ಕೊಡಿ ಎಂದ ಮಹಿಳಾ ಮಣಿಗಳು…

ಬೇಕೇ ಬೇಕು…ನಮಗೆ ಬಾರ್ ಬೇಕೇ…ಬೇಕು… ನಮ್ಮ ಯಜಮಾನರಿಗೆ ಎಣ್ಣೆ ಕೊಡಿ ಎಂದ ಮಹಿಳಾ ಮಣಿಗಳು…

1383
0
SHARE

ಹೆಂಡ ಸಾರಾಯಿ ಕುಡಿದು ಚರಂಡಿಯಲ್ಲಿ ಬಿದ್ದು ಉರುಳಾಡುವವನ ಹೆಂಡತಿ ಮಕ್ಕಳ ಪರಿಸ್ಥಿತಿಯನ್ನ ಕಣ್ಣಾರೆ ಕಂಡಿದ್ದೇವೆ,ಇದರಿಂದಲೇ ಹೆಂಡ ಸಾರಾಯಿ ಸಹವಾಸ ಹೆಂಡಿರ ಮಕ್ಕಳ ಉಪವಾಸ ಎಂಬ ನಾಣುಡಿ ಪ್ರಚಲಿತಕ್ಕೆ ಬಂತು, ಹಾಗಾಗಿ ಎಲ್ಲೇ ಮದ್ಯದಂಗಡಿ ಪ್ರಾರಂಭವಾದ್ರು ಸಾಕಷ್ಟು ಮಹಿಳೆಯರು ಸೇರಿ ಪ್ರತಿಭಟನೆ ನಡೆಸಿ ಪ್ರಾರಂಭವಾಗುವ ಮದ್ಯದಂಗಡಿಯನ್ನ ಅಲ್ಲಿಂದ ತೆರವುಗೊಳಿಸಿರುವುದನ್ನ ಕಂಡು ಕೇಳಿದ್ದೇವೆ, ಆದರೆ ಇಲ್ಲಿನ ಪರಿಸ್ಥಿತಿಯೇ ಬೇರೆ.

ಮಹಿಳೆಯರೇ ನಿಂತು ಪ್ರತಿಭಟನೆ ಮಾಡುವ ಮೂಲಕ ಮದ್ಯದಂಗಡಿ ಬೇಕೇ ಬೇಕು ಎಂದು ಹೋರಾಟಮಾಡಿ ತಮ್ಮ ಮನೆಯ ಯಜಮಾನರಿಗೆ ಎಣ್ಣೆ ಕೊಡಿಸಲು ಮುಂದಾಗಿದ್ದಾರೆ, ಅರೆ ಅದು ಎಲ್ಲಪ್ಪಾ ಅಂತೀರ..?

ತಮ್ಮ ಗ್ರಾಮಕ್ಕೆ ಬಾರ್ ಬೇಕೇ ಬೇಕು ಎಂದು ಒತ್ತಾಯಿಸಿ ಹಮ್ಮಿಕೊಂಡಿರುವ ಪ್ರತಿಭಟನೆ ಇದು. ಇಂತದ್ದೊಂದು ಎಣ್ಣೆ ಬೇಡಿಕೆ ಹೋರಾಟ ನಡೆಯುತ್ತಿರುವುದು. ಗಣಿನಾಡು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮ ಪಂಚಾಯ್ತಿ ಕಛೇರಿಯ ಮುಂಭಾಗದಲ್ಲಿ, ಈ ಹಿಂದೆ ಈ ಗ್ರಾಮದಲ್ಲಿ ಅಕ್ರಮ ಮದ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿತ್ತು, ಈ ಹಿನ್ನೆಲೆಯಲ್ಲಿ ಈ ಗ್ರಾಮದ ಮದ್ಯಪ್ರಿಯರ ಬೇಡಿಕೆಯಂತೆ ಈ ಗ್ರಾಮಕ್ಕೆ ಒಂದು ಎಂಎಸ್ಐಎಲ್ ವೈನ್ ಶಾಪ್ ಮಂಜೂರಾಗಿದ್ದು. ಬಾರ್ ಪ್ರಾರಂಭಿಸುವ ಸಂಬಂಧ ಈ ಸೋವೇನಹಳ್ಳಿ ಗ್ರಾಮಪಂಚಾಯ್ತಿ ಕಛೇರಿಯ ಮುಂದೆ ಗ್ರಾಮ ಸಭೆ ಕೂಡ ನಡೆದಿತ್ತು, ಸ್ಥಳೀಯ ಜನಗಳ ಅಭಿಪ್ರಾಯ ಪಡೆದು ಬಾರ್ ಶಾಪ್ ಪ್ರಾರಂಬಿಸುವುದು ಅಥವಾ ಬೇಡವೋ ಎನ್ನುವುದು ಈ ಗ್ರಾಮ ಸಭೆಯ ಉದ್ದೇಶವಾಗಿತ್ತು,

ಹಾಗಾಗಿ ನಮಗೆ ಬಾರ್ ಬೇಕು ಎಂದು ಬಂದಿದ್ದ ಕೆಲವು ಮದ್ಯ ಪ್ರಿಯರು ನೇರವಾಗಿ ಪ್ರತಿಭಟನೆ ಪ್ರಾರಂಭ ಮಾಡಿಯೇ ಬಿಟ್ರು.ಆದ್ರೆ ಇದೇ ಸೋವೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಲವು ಜನಗಳು ಈ ವೈನ್ ಶಾಪ್ ಪ್ರಾರಂಬಿಸುವುದು ಬೇಡ, ವೈನ್ ಶಾಪ್ ಪ್ರಾರಂಭವಾದ್ರೆ ಇಲ್ಲಿನ ಸಾಕಷ್ಟು ಬಡ ಜನಗಳು ಮದ್ಯವೆಸನಿಯಾಗಿ ಸಂಸಾರವನ್ನ ಹಾಳುಮಾಡಿಕೊಳ್ಳುತ್ತಾರೆ, ಅಲ್ಲದೆ ಈಗಾಗಲೆ ಸಾಕಷ್ಟು ಜನ ರೈತರು ಸಾಲ ಸೂಲಮಾಡಿಕೊಂಡು ಆತ್ಮಹತ್ಯ ದಾರಿ ಹಿಡಿದಿದ್ದಾರೆ, ಹೀಗಿರುವಾಗ ಮತ್ತೆ ಮನೆ ಬಾಗಿಲಿಗೆ ಬಾರ್ ಬಂದ್ರೆ ಬದುಕು ಬರ್ಬಾದ್ ಆಗುತ್ತೆ ಎಂದು ವಿರೋಧ ವ್ಯಕ್ತಪಡಿಸಿದ್ರು.

ಸದ್ಯಕ್ಕೆ ಈ ಬಾರ್ ಪ್ರಾರಂಭಮಾಡಲು ಅವಕಾಶ ಕೊಡಬೇಕೊ ಅಥವಾ ನಿರಾಕರಿಸಬೇಕೊ ಎಂಬ ಇಕ್ಕಟ್ಟಿನಲ್ಲಿ ಗ್ರಾಮಪಂಚಾಯ್ತಿ ಸಿಕ್ಕಿ ಹಾಕಿಕೊಂಡಿದ್ರೆ, ಇತ್ತ ಪ್ರಕರಣ ಹೂವಿನಹಡಗಲಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ನಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸಲೇ ಬೇಕು ಎಂಬುದು ಇಲ್ಲಿನ ಮದ್ಯ ಪ್ರಿಯರ ಪಟ್ಟಾಗಿದೆ.

LEAVE A REPLY

Please enter your comment!
Please enter your name here