Home Crime “ಬೇರೆ ಮದುವೆ ಆಗ್ತೀದ್ದೀನಿ ಸಾಯಿ ಎಂದು ವಿಷ ಕೊಟ್ಟ ಯುವತಿ”..!? ಸೆಲ್ಫಿ ವಿಡಿಯೋ ಮಾಡಿ ಆರೋಪಿಸಿ...

“ಬೇರೆ ಮದುವೆ ಆಗ್ತೀದ್ದೀನಿ ಸಾಯಿ ಎಂದು ವಿಷ ಕೊಟ್ಟ ಯುವತಿ”..!? ಸೆಲ್ಫಿ ವಿಡಿಯೋ ಮಾಡಿ ಆರೋಪಿಸಿ ಪ್ರಿಯಕರ ಆತ್ಮಹತ್ಯೆ

788
0
SHARE

ಹೀಗೆ, ಸಾಯೋ ಮುನ್ನ ಸೆಲ್ಫಿ ವೀಡಿಯೋದಲ್ಲಿ ತನಗಾದ ಪ್ರೇಮವಂಚನೆ ಬಗ್ಗೆ ಹೇಳಿಕೊಳ್ಳುತ್ತಿರುವ ಈ ಯುವಕನ ಹೆಸರು ಸಿದ್ದರಾಜು. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಕಸುವಿನಹಳ್ಳಿ ಗ್ರಾಮದ ನಿವಾಸಿಯಾಗಿರುವ ಈತ ಪ್ರೇಮ ವೈಪಲ್ಯದಿಂದಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೈಸೂರು ಸಮೀಪದ ಬೆಳವಾಡಿ ಗ್ರಾಮದ ಬೇಕರಿಯಲ್ಲಿ ಸಿದ್ದರಾಜು ಕೆಲಸ ಮಾಡಿಕೊಂಡಿದ್ದ. ಇನ್ನೂ ಅದೇ ಬೆಳವಾಡಿ ಗ್ರಾಮದ ಭಾವನ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಪ್ರೀತಿ ವಿಷಯ ಭಾವನ ಮನೆಯವರಿಗೆ ತಿಳಿದು ಸಿದ್ದರಾಜುಗೆ ಧಮ್ಕಿನೂ ಹಾಕಿದ್ರು. ಅಲ್ಲದೆ ಭಾವನಗೆ ಬೇರೊಂದು ಮದುವೆ ಮಾಡುವ ತಯಾರಿ ಕೂಡ ಮಾಡಿದ್ರು. ಈ ವಿಷಯ ತಿಳಿದು ಪ್ರೇಮಿಗಳು ಮನೆ ಬಿಟ್ಟು ಹೋಗುವ ತಯಾರಿ ಕಡೆಸಿದ್ದು ಮನೆಯವರಿಗೆ ತಿಳಿದು, ಪೊಲೀಸ್ ಠಾಣೆಗೆ ದೂರು ನೀಡಿದ್ರು.

ಇದರಿಂದ ಭಯಭೀತನಾದ ಸಿದ್ದರಾಜು, ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಸೆಲ್ಫಿ ವೀಡಿಯೋ ಮಾಡಿದ್ದು, ತನಗಾದ ವಂಚನೆಯನ್ನು ಬಹಿರಂಗ ಪಡಿಸಿದ್ದಾನೆ.ತನ್ನನ್ನು ಪ್ರೇಯಸಿ ಭಾವನಳೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಹೇಳಿ ವಿಷದ ಬಾಟಲಿ ಕೊಟ್ಟಿದ್ದಾಳೆ. ನನ್ನ ಸಾವಿಗೆ ಪ್ರೇಯಸಿ ಭಾವನ ಹಾಗೂ ಅವರ ಭಾವ ಕಾರಣ ಎಂದು ಹೇಳಿದ್ದು ಆಕೆಯನ್ನು ಜೈಲಿಗೆ ಕಳುಹಿಸುವಂತೆ ಆಗ್ರಹಿಸಿದ್ದಾನೆ. ಪ್ರೀತಿಸುವ ವೇಳೆಯಲ್ಲಿ ತೆಗೆದ ಇಬ್ಬರ ಪೋಟೋಗಳು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಆಗಿದ್ದು, ಪೊಲೀಸರ ಕೈ ಸೇರಿವೆ…

ಇನ್ನೂ ಈ ಬಗ್ಗೆ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರೇಯಸಿ ಹಾಗೂ ಆಕೆಯ ಪೋಷಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದೇನೇ ಇರಲಿ. ಪ್ರೀತಿ ಹುಚ್ಚಾಟದಿಂದ ಜೀವವೇ ಬಲಿಯಾಗಿದ್ದು, ದುಡಿಯುವ ಮಗನನ್ನು ಕಳೆದುಕೊಂಡು ಹೆತ್ತವರು ಕಂಗಾಲಾಗಿದ್ದಾರೆ.

LEAVE A REPLY

Please enter your comment!
Please enter your name here