Home District ಬೋವಿ ಸಮುದಾಯದವರನ್ನೇ ಚುನಾವಣೆಗೆ ನಿಲ್ಲಿಸುತ್ತೇನೆಂದು BSY ಮಾತು..!? ಮಾತು ತಪ್ಪಿದ್ದಕ್ಕೆ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದ...

ಬೋವಿ ಸಮುದಾಯದವರನ್ನೇ ಚುನಾವಣೆಗೆ ನಿಲ್ಲಿಸುತ್ತೇನೆಂದು BSY ಮಾತು..!? ಮಾತು ತಪ್ಪಿದ್ದಕ್ಕೆ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದ ಬೋವಿ ಸಮುದಾಯದ ಮುಖಂಡರು.!?

972
0
SHARE

ಬಿಎಸ್‌ವೈ ವಿರುದ್ದ ಬೋವಿ ಸಮುದಾಯದ ಮುಖಂಡರು ಮುನಿಸಿಕೊಂಡಿದ್ದಾರೆ. ಚಿತ್ರದುರ್ಗದಲ್ಲಿ ಬೋವಿ ಸಮುದಾಯದವರೇ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚಿನ ಮತದಾರರಿದ್ದು, ಸಮುದಾಯವನ್ನು ಪ್ರತಿನಿಧಿಸುವ ಇಬ್ಬರು ಶಾಸಕರು ಇದೇ ಜಿಲ್ಲೆಯಲ್ಲಿದ್ದಾರೆ.

ಹೀಗಾಗಿ ಕಳೆದ 20 ದಿನಗಳ ಹಿಂದೆ ಚಿತ್ರದುರ್ಗದಲ್ಲಿ ಸಮುದಾಯದ ಪ್ರಬಲ ಸ್ವಾಮೀಜಿಯವರಾದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ನೇತೃತ್ವದಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಸಿದ ಬೋವಿ ಸಮುದಾಯದ ಮುಖಂಡರು, ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಸಮುದಾಯದ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಆಗ್ರಹಿಸಿ,

ಮಾಜಿ ಸಂಸದ ಜನಾರ್ಧನಸ್ವಾಮಿ, ಮಾಜಿ ಶಾಸಕ ಮಾನಪ್ಪ ವಜ್ಜಲ್, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಿನಾರಾಯಣ್ ಸೇರಿದಂತೆ ಏಳೆಂಟು ಆಕಾಂಕ್ಷಿಗಳನ್ನ ಯಡಿಯೂರಪ್ಪ ಮುಂದೆ ಹಾಜರುಪಡಿಸಿದ್ರು,

ಈ ಸಭೆಯಲ್ಲಿ ಭಾಗವಹಿಸಿದ್ದ ಬಿಎಸ್‌ವೈ ತುಂಬಿದ ಸಭೆಯಲ್ಲಿ ಮಾತನಾಡಿ, ನಿಮ್ಮ ಬೇಡಿಕೆಯಂತೆ ಬೋವಿ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಿಸುತ್ತೇನೆ, ನೀವು ಅವರನ್ನು ಗೆಲ್ಲಿಸಿಕೊಂಡು ಬರುವ ಪ್ರಯತ್ನ ಮಾಡಿ ಎಂದು ಭರವಸೆ ನೀಡಿದ್ರು. ಕೊಟ್ಟ ಭರವಸೆ ಈಡೇರಿಸದೆ ಇರುವುದಕ್ಕೆ ಬಿಎಸ್‌ವೈ ಮೇಲೆ ಭೋವಿ ಜನಾಂಗದವರು ಮುನಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here