Home Crime ಬ್ಯಾಂಕಿಂಗ್ ಹಗರಣ ಸುಳಿಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್..!ಆದರೆ ನಾನು ಸಾಲ ಮಾಡೇಇಲ್ಲ ಅಂತಾರೆ ಸಚಿವರು..!!!

ಬ್ಯಾಂಕಿಂಗ್ ಹಗರಣ ಸುಳಿಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್..!ಆದರೆ ನಾನು ಸಾಲ ಮಾಡೇಇಲ್ಲ ಅಂತಾರೆ ಸಚಿವರು..!!!

99
0
SHARE

ಚುನಾವಣಾ ಹೊಸ್ತಿಲಲ್ಲೇ ರಾಜ್ಯ ಕಾಂಗ್ರೆಸ್‌ಗೆ ಗಂಡಾಂತರಗಳು ಕಾಡತೊಡಗುತ್ತಿವೆ,ಗೂಂಡಾಗಿರಿ ಪ್ರಕರಣಗಳು ಆಯ್ತು ಈಗ ಬ್ಯಾಂಕಿಂಗ್ ಹಗರಣದಲ್ಲೂ ಪ್ರಭಾವಿ ಸಚಿವರ ಹೆಸರು ಕೇಳಿ ಬಂದಿದೆ.

ಹೌದು ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಮೇಲೆ ಬ್ಯಾಂಕಿಂಗ್ ಹಗರಣದ ಆರೋಪ ಕೇಳಿ ಬಂದಿದೆ. ಸಚಿವರು 1.10ಕೋಟಿ ಮೌಲ್ಯದ ಜಮೀನಿಗೆ ಸಿಂಡಿಕೇಟ್ ಬ್ಯಾಂಕ್‌ನಿಂದ  193 ಕೋಟಿ ಸಾಲ ನೀಡಲಾಗಿದೆ. ಇದರಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಮಾಡಲಾಗಿದೆ.. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಟಿ.ಜೆ,ಅಬ್ರಹಾಂ ಕೇಂದ್ರ ಹಣಕಾಸು ಇಲಾಖೆ ಹಾಗೂ ಭಾರತೀಯ ರಿಸರ್ವ ಬ್ಯಾಂಕ್‌ಗೆ ದೂರು ಸಲ್ಲಿಸಿದ್ದಾರೆ. ಇನ್ನೂ ಸಿಂಡಿಕೇಟ್ ಬ್ಯಾಂಕ್ ‌ನಲ್ಲಿ ಕಡಿಮೆ ಮೌಲ್ಯದ ಆಸ್ತಿ ಮೇಲೆ ಭಾರಿ ಮೊತ್ತದಸಾಲ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು, ಈ ಹಗರಣ ಕುರಿತು ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯಿಸಿದ್ದಾರೆ. ಉಡುಪಿಯಲ್ಲಿ ಹೇಳಿಕೆ ನೀಡಿದ ಅವರು ಈ ಅವ್ಯವಹಾರದ ಹಿಂದೆ ಬ್ಯಾಂಕ್ ಅಧಿಕಾರಿಗಳ ಕೈವಾಡವೂ ಇದೆ, ಇದೆಲ್ಲವೂ ನೂರಕ್ಕೆ ನೂರರಷ್ಟು ಸುಳ್ಳು ಅಂತಾ ತಿಳಿಸಿದ್ದಾರೆ…

LEAVE A REPLY

Please enter your comment!
Please enter your name here