Home Crime ಬ್ಯೂಟಿ ಪಾರ್ಲರ್‌ಗೆ ಕರೆಸಿಕೊಂಡು ಸರಸಕ್ಕೆ ಆಹ್ವಾನಿಸಿದ್ದ ಮಹಿಳೆ..! ಹನಿ ಟ್ರಾಪ್ ದಂಧೆಗೆ ಇಳಿದಿದ್ದ ಖತರ್ನಾಕ್ ಗ್ಯಾಂಗ್...

ಬ್ಯೂಟಿ ಪಾರ್ಲರ್‌ಗೆ ಕರೆಸಿಕೊಂಡು ಸರಸಕ್ಕೆ ಆಹ್ವಾನಿಸಿದ್ದ ಮಹಿಳೆ..! ಹನಿ ಟ್ರಾಪ್ ದಂಧೆಗೆ ಇಳಿದಿದ್ದ ಖತರ್ನಾಕ್ ಗ್ಯಾಂಗ್ ಅಂದರ್..!

1783
0
SHARE

ಒಂದಿಲ್ಲೊಂದು ಕ್ರೈಂ ಸುದ್ದಿಗಳಿಂದ ಸದಾ ಸುದ್ದಿಯಲ್ಲಿರುವ ವಿಜಯಪುರ ಜಿಲ್ಲೆಯಲ್ಲಿ ಈಗ ಸದ್ದಿಲ್ಲದೆ ಹನಿಟ್ರಾಫ್ ದಂಧೆ ಶುರುವಾಗಿದೆ. ಫೇಸ್ ಬುಕ್ ನಲ್ಲಿ ಉಧ್ಯಮಿಗಳನ್ನ ಪರಿಚಯ ಮಾಡಿಕೊಂಡು. ಅವರನ್ನ ಬಲೆಗೆ ಬೀಳಿಸಿಕೊಂಡು ನಂತ್ರ ಅವರನ್ನ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ಅನ್ನು ಪೊಲೀಸರು ಕಂಬಿ ಹಿಂದೆ ಕಳಿಸಿದ್ದಾರೆ.

ಭೀಮಾತೀರದ ಹಂತಕರಿಂದ ಕುಖ್ಯಾತಿಗೆ ಒಳಗಾಗಿರುವ ವಿಜಯಪುರದಲ್ಲಿ ಶುರುವಾಗಿರೋ ಮತ್ತೊಂದು ಕರಾಳ ದಂದೆ ಶ್ರೀಮಂತರನ್ನ ಬೆಚ್ಚಿ ಬೀಳಿಸಿದೆ. ಹನಿಟ್ರಾಫ್ ದಂದೆಯನ್ನು ಶುರು ಮಾಡಿದ ಕಿರಾತಕರು ಸಧ್ಯ ಖಾಕಿ ಕಯ್ಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಸಂಘಟನೆಯೊಂದರ ಮುಖಂಡನಾಗಿರುವ ವಿಠ್ಠಲ್ ವಡ್ಡರ ಹಾಗೂ ಮಹೇಶ ಉಳ್ಳಾಗಡ್ಡಿ ಹಾಗೂ ಮತ್ತೊರ್ವ ಮಹಿಳೆ ಮಾಡಬಾರದ್ದನ್ನ ಮಾಡಿ ಜೈಲು ಸೇರಿದ್ದಾರೆ.

ಇಂಡಿ ಪಟ್ಟಣದ ನಿವಾಸಿ ಉಧ್ಯಮಿ ಸುನೀಲ್ ಪಾಟೀಲ್ ಎಂಬುವವರನ್ನ ಫೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡ ಈ ಸುಂದರಾಂಗಿ ಮೊದಲು ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾಳೆ. ಜನವರಿ 18 ರಂದು ಇಂಡಿ ಪಟ್ಟಣದ ಬ್ಯೂಟಿ ಪಾರ್ಲರ್ ಗೆ ಕರೆಯಿಸಿಕೊಂಡು ಸರಸಕ್ಕೆ ಆಹ್ವಾನಿಸಿದ್ಧಾಳೆ. ಈ ವೇಳೆ ವಿಠ್ಠಲ್ ವಡ್ಡರ್, ಮುರುಗೇಶ ಉಳ್ಳಾಗಡ್ಡಿ ಹಾಗೂ ಲಿಂಗರಾಜ್ ಮಿಡಿಯಾ ಹೆಸರು ಹೇಳಿಕೊಂಡು 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ.

ಹಣ ಇಲ್ಲ ಎಂದಿದ್ದಕ್ಕೆ ಎಟಿಎಂ ಪಡೆದು 12 ಸಾವಿರ ಹಣ, ಹಾಗೂ ಒಡವೆಗಳನ್ನು ಕಿತ್ತುಕೊಂಡಿದ್ದಾರೆ. ಅಲ್ಲದೆ ಇಂಡಿಯಿಂದ ಪೂನಾಕ್ಕೆ ಕರೆದುಕೊಂಡು ಹೋಗಿ ಎರಡು ಲಕ್ಷ ರೂಪಾಯಿ ನೀಡುವಂತೆ ಕಿರಿಕಿರಿ ಮಾಡಿದ್ದಾರೆ. ಇದರಿಂದ ರೋಸಿ ಹೋದ ಸುರೇಶ್ ಇಂಡಿ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇಂಡಿ ಪೊಲೀಸರು ಕಾರ್ಯಪ್ರವೃತ್ತರಾಗಿ ಹನಿಟ್ರ್ಯಾಪ್ ಗ್ಯಾಂಗ್ ಅನ್ನು ಅಂದರ್ ಮಾಡಿದ್ದಾರೆ.

ಹನಿಟ್ರ್ಯಾಪ್ ದಂಧೆ ಕಾಲಿಟ್ಟಿದ್ದರಿಂದ ಉಧ್ಯಮಿಗಳು ಬೆಚ್ಚಿ ಬಿದ್ದಿದ್ದಾರೆ. ಸಧ್ಯ ಹನಿಟ್ರಾಫ್ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ವಿಠ್ಠಲ್ ವಡ್ಡರ್ ಹಲವು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ. ಹಲವು ಬ್ಲಾಕ್ ಮೇಲ್ ಕೇಸ್ ಗಳಲ್ಲು ಆರೋಪಿಯಾಗಿದ್ದಾನ ಎನ್ನಲಾಗಿದೆ. ಅಲ್ಲದೆ ವಿಜಯಪುರ ನಗರದ ಕೆಲ ಠಾಣೆಗಳಲ್ಲಿ ಈಗಾಗಲೇ ಈತನ ಮೇಲೆ ಚೀಟಿಂಗ್ ಕೇಸ್ ಗಳು ಇವೆ.

ಇನ್ನು ಪ್ರಜಾ ಟಿವಿಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಪ್ರಕಾಶ ನಿಕ್ಕಂ ವಿಠ್ಠಲ್ ವಡ್ಡರ್ ಸೇರಿ ಸಂಗಡಿಗ ಮೇಲೆ ರೌಡಿ ಶೀಟ್ ಓಪನ್ ಮಾಡುವುದಾಗಿ ಹೇಳಿದ್ದಾರೆ.ಒಟ್ಟಾರೆ ಹನಿ ಟ್ರ್ಯಾಪ್ ದಂಧೆ ಗುಮ್ಮಟ ನಗರಿಯಲ್ಲಿ ಚಿಗುರೊಡೆಯುತ್ತಿದೆ. ಆರಂಭದಲ್ಲಿಯೇ ಪೊಲೀಸರು ಇದನ್ನು ಚಿವುಟಿ ಹಾಕಿದರೆ ಇಂಥ ಕೃತ್ಯಗಳು ಬೆಳೆಯದಂತೆ ತಡೆಯಬಹುದು.

LEAVE A REPLY

Please enter your comment!
Please enter your name here