Home Elections 2018 ಬ್ಲಡ್ ಬ್ಯಾಂಕ್‌ನಲ್ಲಿ ರಕ್ತವಿಲ್ಲದೆ ರೋಗಗಿಳ ಪರದಾಟ, ಕಾರಣ “ಚುನಾವಣೆ”.!? ಏಗಂತೀರಾ..? ಈ ಸ್ಟೋರಿ ಓದಿ…

ಬ್ಲಡ್ ಬ್ಯಾಂಕ್‌ನಲ್ಲಿ ರಕ್ತವಿಲ್ಲದೆ ರೋಗಗಿಳ ಪರದಾಟ, ಕಾರಣ “ಚುನಾವಣೆ”.!? ಏಗಂತೀರಾ..? ಈ ಸ್ಟೋರಿ ಓದಿ…

145
0
SHARE

ರಾಜ್ಯದಲ್ಲಿ ಚುನಾವಣಾ ಬಿಸಿ ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಇದೀಗ ಈ ಚುನಾವಣೆಯ ಎಫೆಕ್ಟ್ ರಕ್ತ ನಿಧಿಗೂ ತಟ್ಟಿದೆ. ರಕ್ತ ನಿಧಿಯಲ್ಲಿ ಬ್ಲಡ್‌ ಸ್ಟಾಕ್ ಇಲ್ಲದೇ ರೋಗಿಗಳು ಪರದಾಡುವಂತಾಗಿದೆ. ಚುನಾವಣೆ ಗೂ ರಕ್ತ ನಿಧಿಗೂ ಏನಪ್ಪಾ ಸಂಬಂಧ ಅಂತೀರಾ..???

 

ಇದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ. ದೇಶಾದ್ಯಂತ ಯಾರಿಗೆ ಬ್ಲಡ್‌ ಬೇಕಂದ್ರೂ ಇಲ್ಲಿಗೆ ಒಂದು ಫೋನ್ ಮಾಡಿದ್ರೆ ಸಾಕು ಬ್ಲಡ್‌ ದೊರೀತಿತ್ತು. ಆದ್ರೆ ಇದೀಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ…

ಎಮೆರ್ಜೆನ್ಸಿ ಅಂತ ಬಂದ್ರೆ ರಕ್ತವೇ ಸಿಗದ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ ರಾಜ್ಯ ವಿಧಾನಸಭಾ ಚುನಾವಣೆ…

ಹೌದು. ಚುನಾವಣೆಗೆ ದಿನಾಂಕ ಘೋಷಣೆಯಾಗ್ತಿದ್ದ ಹಾಗೆ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಾಗಿದೆ. ಈ ನೀತಿ ಸಂಹಿತೆಯ ಎಫೆಕ್ಟ್ ಬ್ಲಡ್‌ ಬ್ಯಾಂಕ್ ಗಳಿಗೂ ತಟ್ಟಿದೆ. ಸಾಧಾರಣವಾಗಿ ರಾಜ್ಯದ ವಿವಿಧೆಡೆ ಆಗಾಗ ರಕ್ತ ದಾನ ಶಿಬಿರ ನಡೀತಿತ್ತು. ಈ ಶಿಬಿರಗಳಿಂದಾಗಿ ಬ್ಲಡ್‌ ಬ್ಯಾಂಕ್ ನಲ್ಲಿ ಸದಾ ರಕ್ತದ ಸ್ಟಾಕ್ ಇರ್ತಿತ್ತು. ಆದ್ರೆ ಸದ್ಯ ನೀತಿ ಸಂಹಿತೆಯಿಂದಾಗಿ ಶಿಬಿರವೂ ನಡೀತಿಲ್ಲ ಇತ್ತ ಬ್ಲಡ್‌ ಬ್ಯಾಂಕ್ ನಲ್ಲಿ ರಕ್ತವೂ ಇಲ್ಲದಂತಾಗಿದೆ…
ಈ ಮೊದ್ಲು, ರಾಜಕೀಯ ನಾಯಕರು ಮತ್ತು ಚಲನಚಿತ್ರ ಕಲಾವಿದರು ಆಗಾಗ ರಕ್ತದಾನ ಶಿಬಿರವನ್ನು ಆಯೋಜಿಸ್ತಿದ್ರು. ಆದ್ರೆ ನೀತಿ ಸಂಹಿತೆಯಿಂದಾಗಿ ಎಲ್ಲಾ ಶಿಬಿರಗಳಿಗೂ ಬ್ರೇಕ್ ಬಿದ್ದಿದೆ. ಇಂತಹ ಶಿಬಿರಗಳಿಂದಾಗಿಯೇ ಪ್ರತಿ ವರ್ಷ ಏಪ್ರಿಲ್ ತಿಂಗಳೊಂದರಲ್ಲೇ ಬರೋಬ್ಬರಿ 7 ಸಾವಿರ ಯುನಿಟ್ ರಕ್ತ ಸಂಗ್ರಹವಾಗ್ತಿತ್ತು…

ಆದ್ರೆ ಈ ಬಾರಿ ಏಪ್ರಿಲ್ ನಲ್ಲಿ ಕೇವಲ 2 ಸಾವಿರ ಯುನಿಟ್ ನಷ್ಟು ರಕ್ತ ಸಂಗ್ರಹವಾಗಿದೆ. ಈ ಮೂಲಕ ರಕ್ತ ನಿಧಿಯಲ್ಲಿ ಶೇಕಡಾ 80 ರಷ್ಟು ರಕ್ತದ ಕೊರತೆಯುಂಟಾಗಿದೆ. ತುರ್ತು ಸಂದರ್ಭದಲ್ಲಿ ಬ್ಲಡ್‌ ಗಾಗಿ ರಕ್ತ ನಿಧಿಗೆ ಆಗಮಿಸುವ ಜನ ಬರಿಗೈಯಲ್ಲಿ ವಾಪಾಸ್ ಹೋಗುವ ಪರಿಸ್ಥಿತಿ ಎದುರಾಗಿದೆ. ಜೊತೆಗೆ ರೋಗಿಗಳ ಪ್ರಾಣಕ್ಕೂ ಒಮ್ಮೊಮ್ಮೆ ಸಂಚಕಾರ ಎದುರಾಗ್ತಿದೆ…
ಇನ್ನು ರಕ್ತದಾನ ಶ್ರೇಷ್ಠ ದಾನ ಅಂತಾರೆ, ಎಷ್ಟೋ ಜೀವಗಳಿಗೆ ಸಂಜೀವಿನಿಯಂತೆ ನೆರವಾಗುತ್ತೆ. ಆದ್ರೆ ನೀತಿ ಸಂಹಿತೆ ಎಫೆಕ್ಟ್ ನಿಂದಾಗಿ ಬ್ಲಡ್‌ ಬ್ಯಾಂಕ್ ನಲ್ಲಿ ರಕ್ತದ ಕೊರತೆ ಎದುರಾಗಿದೆ. ಹೀಗಾಗಿ ರಕ್ತ ದಾನ ಶಿಬಿರಕ್ಕೆ ಚುನಾವಣಾ ಆಯೋಗ ಅವಕಾಶ ಮಾಡಿಕೊಡಬೇಕಾಗಿದೆ…

LEAVE A REPLY

Please enter your comment!
Please enter your name here