Home District ಬ್ಲೂವೇಲ್ ನಂತ್ರ ಏಂಟ್ರಿ ಕೊಟ್ಟಿದೆ ಮತ್ತೊಂದು ಡೆಂಜುರಸ್ ಗೇಮ್.. ಒಂದು ಆಟ; ನೂರು ಜನ ಆಟಗಾರರು;...

ಬ್ಲೂವೇಲ್ ನಂತ್ರ ಏಂಟ್ರಿ ಕೊಟ್ಟಿದೆ ಮತ್ತೊಂದು ಡೆಂಜುರಸ್ ಗೇಮ್.. ಒಂದು ಆಟ; ನೂರು ಜನ ಆಟಗಾರರು; ಒಂದು ವಿನ್ನಿಂಗ್ ಟೀಮ್.! ಈ ಗೇಮ್ ಆಡಿದ್ರೆ ನೀವು ಮಾನಸಿಕ ರೋಗಿಗಳಾಗೋದು ಗ್ಯಾರಂಟಿ..!

5891
0
SHARE

ಈ ಹಿಂದೆ ಸಾವಿರಾರು ವಿಧ್ಯಾರ್ಥಿಗಳನ್ನ ಬಲಿ ಪಡೆದು ದಿ ಮೋಸ್ಟ್ ಡೇಂಜರಸ್ ಗೇಮ್ ಅಂತ ಕರೆಯಿಸಿಕೊಂಡಿದ್ದ ಬ್ಲೂವೇಲ್ ಗೇಮ್ ಗೇಮಿಂಗ್ ಇತಿಹಾಸದಲ್ಲಿ ಭಯ ಹುಟ್ಟಿಸಿತ್ತು. ಆದ್ರೆ ಟ್ರೆಂಡಿಂಗ್ ವಿಚಾರದಲ್ಲಿ ನೋಡೊದಾದ್ರೆ ನಿರ್ಬಂಧಗಳ ಪರಿಣಾಮ ಬ್ಲೂವೇಲ್ ಎಲ್ಲ ಗೇಮರ್ಗಳನ್ನ ತಲುಪೋದಕ್ಕೆ ಸಾಧ್ಯವಾಗಲೇ ಇಲ್ಲ. ಆದ್ರೆ ಗೇಮಿಂಗ್ ಪ್ರಪಂಚದಲ್ಲಿ ಹವಾ ಹುಟ್ಟಿಸಿರೋ PUBG ಹಾಗಲ್ಲ. ಗೇಮಿಂಗ್ ವರ್ಡ್ ನಲ್ಲಿ ತನ್ನದೆಯಾದ ಟ್ರೆಂಡ್ ಕ್ರಿಯೆಟ್ ಮಾಡಿದೆ. ಗೇಮ್ ಆಂಡ್ರೈಡ್ ಮೊಬೈಲ್ ಗಳಲ್ಲಿ ಲಾಂಚ್ ಆದ ಕೆಲವೆ ಕೆಲವು ತಿಂಗಳಲ್ಲಿ ಬಾರಿ ಸದ್ದು ಮಾಡಿದೆ. ಈ ವರೆಗೆ ಅಂದಾಜಿನ ಪ್ರಕಾರ ಪ್ಲೇಸ್ಟೋರ್ ನಲ್ಲಿ 100 ಮಿಲಿಯನ್ ಡೌವ್ನೋಡ್ ಕಂಡಿದೆ.

90 ಮಿಲಿಯನ್ ಗು ಅಧಿಕ ಯುವಕರು ಈ ಗೇಮ್ ನ್ನ ಪ್ರತಿ ನಿತ್ಯ ತಪ್ಪದೆ ಆಡುತ್ತಿದ್ದಾರೆ ಅಂದ್ರೆ ಈ PUBG ಗೇಮ್ ನ ಹವಾ ಹೆಂಗಿರಬೇಕು ಅನ್ನೋದನ್ನ ನೀವೆ ಲೆಕ್ಕಾ ಹಾಕಿ.. ಸಿಂಪಲ್ಲಾಗಿ ಈ PUBG ಗೇಮ್ ಬಗ್ಗೆ ಹೇಳೋದಾದ್ರೆ ಇದೊಂದು ಆಕ್ಷನ್ ಕಮ್ ಅಡ್ವೆಂಚರಸ್ ಗೇಮ್. ಆನ್ ಲೈನ್ ನಲ್ಲೆ ಆಡುವಂತ ಗೇಮ್. ಆಟಕ್ಕೆ ಏಂಟ್ರಿಕೊಟ್ಟ ಆಟಗಾರರನ್ನ ಒಂದು ವಿಮಾನದಲ್ಲಿ ಕರೆದುಕೊಂಡು ಹೋಗಿ ನಿರ್ಧಿಷ್ಟ ಪ್ರದೇಶಕ್ಕೆ ಬಿಡಲಾಗುತ್ತೆ. ಒಂದು ಪ್ಲೇನ್ ನಲ್ಲಿ ಸೂಮಾರು ನೂರು ಜನ ಆಟಗಾರರಿರ್ತಾರೆ. ಇವರೆಲ್ಲರು ಪ್ಯಾರಾಚುಟ್ ಸಹಾಯದಿಂದ ವಿಮಾನದಿಂದ ಹಾರಿ ನಿರ್ದಿಷ್ಟ ಪ್ರದೇಶದಲ್ಲಿ ತರ ತರಹದ ಬಟ್ಟೆ, ಬೇರೆ ಬೇರೆ ಮಾಡಲ್ ನ ಗನ್, ಎನರ್ಜಿ ಡ್ರಿಂಕ್, ತರಹೇವಾರಿ ವಾಹನಗಳ ಹುಡುಕಿಕೊಂಡು ಅವುಗಳ ಸಹಾಯದಿಂದ ಇತರೆ ಆಟಗಾರರನ್ನ ಕೊಂದು ಮುಗಿಸಿ ಬೇಕು.

ಯಾರು ಈ ಗೇಮ್ ನಲ್ಲಿ ಕೊನೆಯಲ್ಲಿ ಉಳಿದುಕೊಳ್ತಾರೋ ಅವ್ರು ಗೇಮ್ ನ್ನ ಗೆದ್ದಂತೆ. ಹೀಗೆ ಗೆದ್ದ ಆಟಗಾರನಿಗೆ ಚಿಕನ್ ಡಿನ್ನರ್ ಮೂಲಕ ಅವಾರ್ಡ್ ನೀಡಲಾಗುತ್ತೆ. ವಿಶೇಷ ಅಂದ್ರೆ ಒಂದೆ ಟೈಮಿಗೆ 100 ಜನರು ಒಟ್ಟಿಗೆ ಆನ್ ಲೈನ್ ನಲ್ಲಿ ಆಡ ಬಹುದಾದಂತ ಆಟವಿದು. ಸಿಂಗಲ್, ಡಬಲ್, ಅಥವ 4 ಜನರ ಗೆಳೆಯರ ಗುಂಪಿನ ಜೊತೆಗು ಈ ಗೇಮ್ ನ್ನ ಆಡಬಹುದು. ಈ ಗೇಮನ್ನ ಆನ್ ಲೈನ್ ನಲ್ಲಿ ಕುಳಿತು ಎಲ್ಲರು ಆಡಬಹುದಾದ ಕಾರಣ ಇದ್ರಲ್ಲಿ ರಿಯಾಟಿಲಿ ಫೀಲ್ ಆಗುತ್ತೆ. ಹೀಗಾಗಿ ಈ ಗೇಮ್ ಎಲ್ಲ ಯುವಕರಿಗೆ ದಿನದಿಂದ ದಿನಕ್ಕೆ ಹತ್ತಿರವಾಗ್ತಿದೆ. ಒಮ್ಮೆ ಆನ್ ಲೈನ್ ನಲ್ಲಿ ಆಟವಾಡುವ ಹುಡುಗ ದಿನ ಕಳೆದಂತೆ ಅಡಿಕ್ಟ್ ಆಗುತ್ತ ಹೋಗ್ತಾನೆ. ಇದೆ PUBG ಗೇಮ್ ನ ವೈಶಿಷ್ಟ್ಯ.ಕೇಳಿದ್ರಲ್ಲ PUBG ಆಟವಾಡೋ ಸಂತೋಷ ಹೊಸಮನಿ ಮಾತನ್ನ. ಗೇಮ್ ಬಗ್ಗೆ ಕೇಳಿದ್ರೆ ನಾವ್ಯಾಕ್ ಒಂದ್ಸಾರಿ ಟ್ರೈ ಮಾಡ್ಬಾರ್ದು ಅಂತ ನೀವು ಯೋಚನೆ ಮಾಡ್ತಿರಬಹುದು.

ಆದ್ರೆ ಈ ಗೇಮ್ ಅದೇಷ್ಟು ಥ್ರಿಲ್ಲಿಂಗ್ ಆಗಿದ್ಯೋ ಅಷ್ಟೆ ಅಪಾಯಕಾರಿ. ಯಾಕಂದ್ರೆ ನೀವೆನಾದ್ರು ಒಂದು ಸಾರಿ ಜಸ್ಟ್ ಟ್ರೈ ಮಾಡೋಕೆ ಅಂತಾನು ಗೇಮನ್ನ ಪ್ಲೇಸ್ಟೋರಿಂದ ಡೌಲೋಡ್ ಮಾಡಿಕೊಂಡು ಆಡೋದಕ್ಕೆ ಶುರು ಮಾಡಿದ್ರೆ ನಿಲ್ಸೋದೆ ಇಲ್ಲ. ಊಟ, ನೀರು, ನಿದ್ರೆಯನ್ನ ಬಿಟ್ಟು ಆಡೋದಕ್ಕೆ ಶುರು ಮಾಡಿಕೊಂಡು ಬಿಡ್ತೀರಿ. ಮೊಬೈಲ್ ನ್ನ ಹಿಡಿದು ಗೇಮ್ ಪ್ರವೇಶ ಮಾಡಿದ್ರೋ, ಅದು ಮುಗಿಯೋ ವರೆಗೆ ನಿಮ್ಮ ಸುತ್ತ ಮುತ್ತ ಅದೇನ್ ನಡೆಯುತ್ತಿದೆ ಅನ್ನೋದೆ ಅರಿವಿಗೆ ಬರೋದಿಲ್ಲ. ಹಾಗೀದೆ ಈ PUBG ಕರಾಮತ್ತು.ವಿಶ್ವಾಧ್ಯಂತ 100 ಮಿಲಿಯನ್ ಗು ಅಧಿಕ ಯುವಕರು, ಹೈಸ್ಕುಲು-ಕಾಲೇಜು ವಿಧ್ಯಾರ್ಥಿಗಳೂ PUBG ಆಟ ಆಡ್ತಿದ್ದಾರೆ. ಇದು ಬರಿ ಆಟವಾಗಿದ್ರೆ ಪರವಾಗಿಲ್ಲ. ಇದೆ ಆಟ ಎಲ್ಲವು ಆದ್ರೆ ಸಮಸ್ಯೆಗಳು ಶುರುವಾಗಿ ಬಿಡುತ್ವೆ. ಸಧ್ಯ ಆಗ್ತಿರೋದೆ ಅದೆ.

ಒಂದು ಸಾರಿ PUBG ಆಟ ಆಡಿದ ಆಸಾಮಿ ಅದನ್ನ ಬಿಡೋದಕ್ಕೆ ರೆಡಿ ಇಲ್ಲ. ಕೆಲವರಿಗಂತು ಬೆಳಿಗ್ಗೆ-ರಾತ್ರಿ PUBG ಆಡೋದೆ ಒಂದು ಕಾಯಕ ಆಗಿ ಬಿಟ್ಟಿದೆ. ಅದ್ರಲ್ಲು ಕೆಲವರು PUBG ಆಡ್ತಿದ್ರೆ ಲೋಕವನ್ನೆ ಮರೆಯುತ್ತಿದ್ದಾರೆ. ಮನೆಯಲ್ಲಿ ತಂದೆ-ತಾಯಿ, ಅಣ್ಣ-ತಮ್ಮ ಅನ್ನೋ ಸಂಬಂಧಗಳನ್ನೆ ಮರೆತು PUBG ಆಟದಲ್ಲಿ ಮುಳುಗಿ ಹೋಗಿದ್ದಾರೆ.ಈ PUBG ಗೇಮ್ ಗೆ ಹೆಚ್ಚಿನ ಪ್ರಮಾಣದಲ್ಲಿ ಅಡಿಕ್ಟ್ ಆಗ್ತಿರೋದು ಹೈಸ್ಕೂಲು ಹಾಗೂ ಪಿ.ಯು ವಿಧ್ಯಾರ್ಥಿಗಳು. ಮನೆಯಲ್ಲಿ ಕಾಡಿ ಬೇಡಿ ಆಂಡ್ರೈಡ್ ಮೊಬೈಲ್ ತಗೊಂಡಿರೋ ಹುಡುಗರೆಲ್ಲ ಆಡ್ತಿರೋದೆ ಈ ಗೇಮನ್ನ. ಕಾಲೇಜು-ಶಾಲೆಯಿಂದ ಬಂದಿದ್ದೆ ತಡ ಮನೆಯಲ್ಲಿ ಮೊಬೈಲ್ ಹಿಡಿದು ಕೂತು ಬಿಡ್ತಿದ್ದಾರೆ. ಅಂದಿನ ಪಠ್ಯ-ಪುಸ್ತಕಗಳನ್ನ ಓದಿ ರಿವಿಜನ್ ಮಾಡಿಕೊಳ್ಳೊದು ಒಂದಟ್ಟಿಗಿರಲಿ.

ಊಟಕ್ಕೆ ಕರೆದು ತಂದೆ-ತಾಯಿಗಳ ಮೇಲೆ ಸಿಟ್ಟಿಗೆ ಬರ್ತಿದ್ದಾರೆ. ಇನ್ನು ಕೆಲವರಂತು ಗೇಮ್ ಆಡುವಾಗ ಮನೆಯಲ್ಲೆ ಅನಾಹುತಗಳಾದ್ರು ತಿರುಗಿಯು ನೋಡ್ತಿಲ್ಲ. ಸಂಕಟದಲ್ಲಿರೋ ಗೆಳೆಯರು, ಮನೆಯರು ಕರೆ ಮಾಡಿದ್ರು ಕಾಲ್ ಪಿಕ್ ಮಾಡೋದಿಲ್ಲ. ಯಾರಾದರೂ ಗೇಮ್ ಆಡುವಾಗ ಡಿಸ್ಟರ್ಬ್ ಮಾಡಿದ್ರೆ ಹೊಡೆಯೋ ಮಟ್ಟಕ್ಕೆ ಹೋಗ್ತಿದ್ದಾರೆ. ಅರ್ಥಾತ್ PUBG ಗೇಮ್ ಆಟವಾಡೋ ಹುಡುಗರು ಮಾನಸಿಕ ಸೀಮಿತವನ್ನೆ ಕಳೆದುಕೊಳ್ತಿದ್ಧಾರೆ. ಈ PUBG ಆಡೋರ ಮನಸ್ಥಿತಿ ಹೇಗಿರುತ್ತೆ ಅಂತ. ಇಷ್ಟೆ ಈ ಆನ್ ಲೈನ್ ಗೇಮ್ ನಲ್ಲಿ ಗೆಳೆಯರು ಮತ್ತೊಬ್ಬ ಗೆಳೆಯನಿಗೆ ಬಯೋಸ್ಕೋಪ್, ಗನ್, ಬುಲೆಟ್, ಲೈಫ್ ನೀಡುವ ಮೂಲಕ ಸಹಕಾರ ನೀಡುವ ಮೂಲಕ ಆಟವನ್ನ ಆಡಬಹುದು. ಆದ್ರೆ ಆಟದ ವೇಳೆ ಕೆಲವರು ತಮ್ಮ ಸಹ ಆಟಗಾರನಿಗೆ ಸಹಾಯ ಮಾಡೋದಿಲ್ಲ. ಇಂಥ ಸಂದರ್ಭದಲ್ಲಿ ಆಟ ಆಡುವಾಗಿನ ಸಿಟ್ಟನ್ನ ರಿಯಲ್ ಲೈಪ್ ನಲ್ಲಿ ಪ್ರದರ್ಶಿಸುತ್ತಿದ್ದಾರೆ. ರಾತ್ರಿ PUBG ಗೇಮ್ ನಲ್ಲಿನ ಜಗಳವನ್ನ ಬೆಳಿಗ್ಗೆ ಸ್ಕೂಲ್-ಕಾಲೇಜುಗಳಲ್ಲಿ ಮುಂದುವರೆಸುತ್ತಿದ್ದಾರೆ.

ಕೆಲ ವೆರೆಗ ಇದೆ PUBG ಗೇಮ್ ನಿಂದಾಗಿ ಹೊಡೆದಾಟಗಳು ನಡೆದಿವೆ. ಅದ್ರಲ್ಲು ವಿದೇಶಗಳಲ್ಲಿ ಒಬ್ಬ ಗೆಳೆಯ ಬರೀ ಗನ್ ಸ್ಕೋಪ್ ನೀಡದ ಕಾರಣ ಮತ್ತೊಬ್ಬ ಗೆಳೆಯನನ್ನ ರಿಯಲ್ಲಾಗಿಯೇ ಕೊಂದಿರುವ ವರದಿಗಳಾಗಿವೆ. ಹೀಗಾಗಿ ಈ ಗೇಮ್ ನ ಬ್ಯಾನ್ ಮಾಡಬೇಕು ಅಂತ ಸ್ವತಃ PUBG ಆಟಗಾರರ ಒತ್ತಾಯಿಸುತ್ತಿದ್ದಾರೆ.ಇನ್ನು ಈ ಗೇಮ್ ಬಗ್ಗೆ ತಿಳಿದಿರುವ ಮಾನಸಿಕ ತಜ್ಞರು ಹೇಳುವಂತೆ ಇದಕ್ಕೆ ಅಡಿಕ್ಟ್ ಆದಲ್ಲಿ ಅಂತವರು ನಿಧಾನವಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರಂತೆ. ಒಂದೆ ಆಟವನ್ನ ಮೇಲಿಂದ ಮೇಲೆ ಆಡೋದ್ರಿಂದ ಮೆದುಳಿನಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳಲ್ಲು ಏರುಪೇರಾಗುವ ಸಾಧ್ಯತೆಗಳಿವೆಯಂತೆ. ಇನ್ನು ಯುವಕರು-ಮಕ್ಕಳು ಅನ್ನಾಹಾರ ಬಿಟ್ಟು ಆಟವಾಡೋದ್ರಿಂದ ದೇಹದ ಮೇಲು ದುಷ್ಪರಿಣಾಮಗಳು ಆಗುತ್ತವಂತೆ.. ಅದ್ರಲ್ಲು ಹೈಸ್ಕೂಲು ಓದುವ ವಿಧ್ಯಾರ್ಥಿಗಳಿಗೆ ಈ ಗೇಮ್ ಪಕ್ಕಾ ವಿಲನ್ ಇದ್ದಂತೆ.

ಈ ಗೇಮ್ ನ್ನ ಸತತವಾಗಿ ಆಡೋದ್ರಿಂದ ವಿಧ್ಯಾಭ್ಯಾಸದ ಮೇಲಿನ ಮನಸ್ಸು ಹೋಗುತ್ತೆ. ಶಾಲೆಗೆ ಹೋಗೊದಕ್ಕು ಮನಸ್ಸಾಗೋದಿಲ್ಲ. ಮುಂದೆ ಪರೀಕ್ಷೆಗಳ ತಯಾರಿ ಮಾಡಿಕೊಳ್ಳೊದಕ್ಕು ವಿಧ್ಯಾರ್ಥಿಗಳು ಮುಂದಾಗೋದಿಲ್ಲ. ಪರಿಣಾಮ ವಿಧ್ಯಾರ್ಥಿಗಳೂ ಸಂಪೂರ್ಣವಾಗಿ ತಮ್ಮ ಶೈಕ್ಷಣಿಕ ಜೀವನವನ್ನೆ ಹಾಳೂ ಮಾಡಿಕೊಳ್ತಾರೆ ಅಂತಾರೇ ವಿಜಯಪುರ ಬಿಎಲ್ಡಿ ಆಸ್ಪತ್ರೆ ಮಾನಸಿಕ ತಜ್ಞ ಡಾ ಚೌಕಿಮಠ..ಈ ಗೇಮ್ ಅಡಿಕ್ಟ್ ಆದಲ್ಲಿ ಮಾನಸಿಕವಾಗಿಯು ತೊಂದರೆ ಶುರುವಾಗುತ್ವೆ. ಗೆಳೆಯ ಗೆಳೆಯರಲ್ಲೆ ಹೊಂದಾಣಿಕೆ ದೂರವಾಗುತ್ತೆ. ಇದು ಏನು ಇಲ್ಲದೆಯೇ ದ್ವೇಷಕ್ಕೆ ಕಾರಣವಾಗುತ್ತೆ. ಅದ್ರಲ್ಲು ಯುವಕರು ಇದನ್ನ ಅಭ್ಯಾಸ ಮಾಡಿಕೊಂಡಲ್ಲಿ ತಮ್ಮ ಉಧ್ಯೋಗ, ವಹಿವಾಟುಗಳಿಗೆ ನೀರು ಹಣಿಸಿಕೊಳ್ಳುತ್ತಾರೆ. ಇನ್ನು ಗೇಮ್ ಜೊತೆಗೆ ಕುಡಿತ, ಸಿಗರೇಟ್ ಹಾಗೂ ಗಾಂಜಾ, ಅಫಿಮಿನ ಚಟಕ್ಕು ಇದು ದಾರಿಯಾಗ್ಬುದು ಎನ್ನಲಾಗ್ತಿದೆ. ಸಧ್ಯ PUBG ಗೇಮ್ ಆಟವನ್ನ ನೆಚ್ಚಿಕೊಂಡವರು ಹೇಳೋ ಅಜೆಷನ್ ಹೀಗಿದೆ

ಒಟ್ಟಿನಲ್ಲಿ PUBG ಆಡೋ ಆಟಗಾರರು ಮಾತ್ರ ಒಂದನ್ನ ತಿಳಿದುಕೊಳ್ಳಬೇಕು. ಇದು ಕೇವಲ ಆಟ ಅಷ್ಟೆ, ಅದು ನಮ್ಮ ಅಡಿಯಲ್ಲಿದೆ ಹೊರತಾಗಿ ಅದಕ್ಕೆ ನಾವು ಅಡಿಯಾಳು ಅಲ್ಲವೆ ಅಲ್ಲ. ಆಟವನ್ನ ಕೇವಲ ಆಟವನ್ನಾಗಿ ಆಡಿ ನಮ್ಮ ಸುತ್ತ ಮುತ್ತಲಿರುವ ಸಂಬಂಧಗಳಿಗೆ ಬೆಲೆ ಕೊಡಬೇಕು. ಆಟಕ್ಕೆ ಒಂದು ಸಮಯ ಅಂತ ಮಾಡಿಕೊಂಡು ಅಷ್ಟರಲ್ಲೆ ಆಟವಾಗಿ ಸಂತಸ ಪಟ್ಟರೇ ಯಾವ ಮೊಬೈಲ್ ಗೇಮ್ ಗಳು ಡೆಂಜುರಸ್ ಅಲ್ಲ. PUBG ಕೂಡ ಅಷ್ಟೆ ಇದನ್ನು ಎಷ್ಟು ಬೇಕೋ ಅಷ್ಟೆ ಆಟವಾಗಿ ಊಟ, ನಿದ್ರೆ, ಓದಿನ ಕಡೆಗೆ ಗಮನ ಕೊಡಬೇಕಿದೆ. ಇಲ್ಲದೆ ಹೋದಲ್ಲಿ ಬ್ಲೂವೇಲ್ ಜೀವಕ್ಕ ಹಾನಿ ಮಾಡಿದ್ರೆ ಈ PUBG ನಿಮ್ಮ ಜೀವನವನ್ನೆ ಹಾಳು ಮಾಡೋದ್ರಲ್ಲಿ ಎರೆಡು ಮಾತಿಲ್ಲ. ಒಂದು ಮಾಧ್ಯವಾಗಿ ಪ್ರಜಾ ಟಿವಿ ಎಚ್ಚರಿಸುವ ಕೆಲಸ ಮಾಡಿದೆ ಮುಂದಿನದು ನಿಮಗೆ ಬಿಟ್ಟಿದ್ದು….

LEAVE A REPLY

Please enter your comment!
Please enter your name here