Home KARNATAKA ಬ್ಲೂವೇಲ್ ಹೋಯ್ತು ಕೀಕಿ ಬಂತು ಢುಂಢುಂಢುಂ.! ಹುಚ್ಚರ ಸಂತೆಯಲ್ಲಿ ಜೀವ ತೆಗೆಯಲು ಬಂತು ಮತ್ತೊಂದು ಗೇಮ್.!...

ಬ್ಲೂವೇಲ್ ಹೋಯ್ತು ಕೀಕಿ ಬಂತು ಢುಂಢುಂಢುಂ.! ಹುಚ್ಚರ ಸಂತೆಯಲ್ಲಿ ಜೀವ ತೆಗೆಯಲು ಬಂತು ಮತ್ತೊಂದು ಗೇಮ್.! ಹಾಲಿವುಡ್,ಬಾಲಿವುಡ್,ಸ್ಯಾಂಡಲ್‌ವುಡ್ ಎಲ್ಲೆಡೆ ಕೀಕಿಯದ್ದೇ ಸೌಂಡ್.!?

2909
0
SHARE

ಇಡೀ ವಿಶ್ವವೇ ಒಂದು ಜಾಗತಿಕ ಹಳ್ಳಿ ಅಂತಾ ಅದ್ಯಾವ ಪುಣ್ಯಾತ್ಮ ಹೇಳಿದ್ನೋ, ಪ್ರಪಂಚದಾದ್ಯಂತ ಕೆಲವೇ ಕ್ಷಣದಲ್ಲಿ ಮಾಹಿತಿಗಳು ಶರವೇಗದಲ್ಲಿ ಹಬ್ಬುತ್ತಿದೆ, ಇಂದು ಎಲ್ಲಾ ನವ ಯುವಕರ ಕೈಯಲ್ಲಿ ಸ್ಮಾರ್ಟ್ ಫೋನ್ ರಾರಾಜಿಸುತ್ತಿದೆ, ಇಡೀ ವಿಶ್ವವೇ ಅಂಗೈ ಬೆರಳ ತುದಿಯಲ್ಲಿ ಸ್ಕ್ರೀನ್ ಟಚ್ ಮೂವಕ ಸಂಹವನ ಗೊಳಿಸಲಾಗುತ್ತಿದೆ, ಈ ಟೆಕ್ನಾಲಜಿ ಅದೆಷ್ಟು ಉಪಯೋಗ ಆಗುತ್ತಿದ್ಯೋ ಅಷ್ಟೆ ದುರುಪಯೋಗ ಮತ್ತು ಅನಾಹುತಗಳಿಗೆ ಎಡೆ ಮಾಡಿಕೊಳ್ಳುತ್ತಿದೆ, ಟೆಕ್ನಾಲಜಿಯಿಂದ ಆಗೋತ್ತಿರೋ ಮತ್ತೊಂದು ಎಡವಟ್ಟಿನ ಸಾಲಿಗೆ ಈ ಕೀಕಿ ಡ್ಯಾನ್ಸ್ ಕೂಡ ಸೇರುತ್ತಿದೆ.

ಏನಪ್ಪ ಇದು ಕೀಕಿ ಡ್ಯಾನ್ಸ್ ಚಾಲೆಂಚ್ ಅಂತಾ ನಿಮಗೂ ಅನ್ನಿಸಬಹುದು ಅದಕ್ಕೆ ಉತ್ತರ ಹೇಳ್ಬಿಡ್ತಿವಿ ಕೇಳಿ, ನಿಧಾನವಾಗಿ ಚಲಿಸುತ್ತಿರಿರೋ ಕಾರಿನಿಂದ ಇಳಿದು ಚಲಿಸುವ ಕಾರಿನ ಜೊತೆಯಲ್ಲೇ ನೃತ್ಯ ಮಾಡಬೇಕು, ನೃತ್ಯ ಮಾಡುವಾಗ ಬ್ಯಾಕ್ ಗ್ರೌಂಡ್ ನಲ್ಲಿ ಒಂದು ಒಂದು ಮ್ಯೂಸಿಕ್ ಹಾಕಿಕೊಳ್ಳಬೇಕು, ಆ ಮ್ಯೂಸಿಕ್ ನ ಹೆಸರು ಇನ್ ಮೈ ಫೀಲಿಂಗ್ಸ್ ಕೀಕಿ ಡು ಯು ಲವ್ ಮಿ ಅಂತಾ..ಸೋಷಿಯಲ್​ ಮೀಡಿಯಾದಲ್ಲಿ ಇದು ಈಗ ಚಾಲೆಂಜ್​ ಹಾಗೂ ಟ್ರೋಲ್​ ಕಾಲ ನಡೀತಿದೆ.

ಪ್ರತಿಯೊಂದಕ್ಕೂ ಕೋ…ಕೋ..ಕೊಡ್ತಾ ಚಾಲೆಂಜ್​ ಹಾಕೋದು ಹೊಸ ಟ್ರೆಂಡ್​ ಆಗ್ತಿದೆ. ಸದ್ಯ ಇಂತಹದ್ದೊಂದು ಚಾಲೆಂಜ್​ಗಳಿಗೆ ಹೊಸ ಸೇರ್ಪಡೆ ಕೀಕಿ ಚಾಲೆಂಜ್​.ಈ ಕೀಕೀ ಚಾಲೆಂಚ್ ಶುರು ಮಾಡಿದ್ದು  ಕೆನೆಡಿಯನ್​ ರ್ಯಾಪ್ ಸಿಂಗರ್​ ಡ್ರೇಕ್​ , ಆತ ಅದೇನು ಮೋಡಿದ್ನೋ ಗೊತ್ತಿಲ್ಲ ಇಂದು ಜಗತ್ತಿನಾದ್ಯಂತ ಈ ಚಾಲೆಂಚ್ ಸ್ವೀಕರಿಸಲಾಗುತ್ತಿದೆ, ಎಲ್ಲಿ ನೋಡಿದ್ರು ಈ ಕೀಕಿಯದ್ದೇ ಕಿರಿಕಿರಿ, ಕೀಕಿಯದ್ದೇ ಮಾತು, ಸಧ್ಯದ ಚಾಲೆಂಚ್ ಟ್ರೆಂಡ್ ಈ ಕೀಕಿ.. ಜುಲೈ ಹತ್ತರಂದು ತನ್ನ ಅಲ್ಬಮ್​ನಲ್ಲಿ ಡ್ರೇಕ್ ಕೀಕೀ..ಡು ಯು ಲವ್​ ಮೀ ಎನ್ನುವ ಸಾಂಗ್​ ರಿಲೀಸ್​ ಮಾಡಿದ್ದ.

ಈ ಹಾಡು ಅದೆಷ್ಟು ಫೇಮಸ್​ ಆಗಿದೆ ಅಂದ್ರೆ, ವಿಶ್ವದೆಲ್ಲೆಡೆ ಈತನ ಸಾಂಗ್​ಗೆ ಜನ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಯಾವ ರಸ್ತೆಯಲ್ಲಿ ನೋಡಿದ್ರು ಕಾರಿನಿಂದ ಇಳಿದು ಹುಡುಗಿಯರು ಡ್ಯಾನ್ಸ್​ ಮಾಡೋದಕ್ಕೆ ಶುರು ಮಾಡಿದ್ದಾರೆ. ಹಾಟ್​..ಹಾಟ್​..ಯುವತಿಯರ ಡ್ಯಾನ್ಸ್​ ಈ ಚಾಲೆಂಜ್​ ಮತ್ತಷ್ಟು ಹಿಟ್ ಆಗುವಂತೆ ಮಾಡಿದೆ.ಎಸ್ ಈ ಹಾಡು ಇಷ್ಟೊಂದು ಫೇಮಸ್ ಆಗಲು ಇದು ಸಹ ಕಾರಣ ಎನ್ನಬಹುದು, ತುಂಡು ತುಂಡು ಉಡುಗೆ ತೊಟ್ಟ ಹರೆಯದ ಯುವತಿಯರು ಬಿಂದಾಸ್ ಆಗಿ ನಡು ರಸ್ತೆಯಲ್ಲಿ ಸ್ಟೇಪ್ ಹಾಕುತ್ತಿದ್ದಾರೆ, ಅವರ ಸ್ಪೆಪ್ ಗೆ ಈ ವಿಡಿಯೋ ಮತ್ತಷ್ಟು ವೈರಲ್ ಆಗುತ್ತಿದೆ.

ವಿದೇಶದಲ್ಲಿ ಅರೆನಗ್ನವಾಗಿ ಕುಣಿಯುತ್ತಿರೋ ಈ ಡ್ಯಾನ್ಸ್ ಚಾಲೆಂಚ್ ಭಾರತಕ್ಕೂ ಕಾಲಿಟ್ಟು ಬಿಟ್ಟಿದೆ, ಭಾರತವೇನು ನಮ್ಮ ರಾಜ್ಯಕ್ಕೂ ವಕ್ಕರಿಸಿದೆ, ಬಿಗ್ ಬಾಸ್ ಖ್ಯಾತಿಯ ಡಬ್ ಸ್ಮಾಶ್ ನಿವೇದಿತ ಈ ಕೀಕಿ ಹಾಡಿಗೆ ಡ್ಯಾನ್ಸ್ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ.ನಿವೇದಿತ ಮಾಡಿರೋ ಈ ಹುಚ್ಚಾಟದ ಚಾಲೆಂಚ್ ಗೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿದೆ, ಅಷ್ಟೆ ಅಲ್ಲ ಪೊಲೀಸ್ ಕಂಪ್ಲೇಂಟ್ ಕೂಡ ಆಗಿದೆ, ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ಅಂತಾ ನಿವೇದಿತ ಈಗ ಸ್ಯಾಡ್ ಡಬ್ ಸ್ಮಾಶ್ ಮಾಡುವಂತೆ ಆಗಿದೆ.

ಯಾವನೋ ಒಬ್ಬ ತಲೆ ಕೆಟ್ಟ ರ್ಯಾಪ್ ಸಿಂಗರ್ ಕೀಕಿ ಅನ್ನೋ ಚಾಲೆಂಚ್ ಹಾಕಿ ಬಿಟ್ಟ, ಆತ ಚಾಲೆಂಚ್ ಹಾಕಿದ ಕೆಲವೇ ಕ್ಷಣದಲ್ಲಿ ಈ ಕೀಕಿ ವಿಶ್ವದಾದ್ಯಂತ ಹೊಸ ಟ್ರೆಂಡ್ ಆಗಿ ಬದಲಾಗಿ ಬಿಟ್ಟಿದೆ. ಯಾವ ರಸ್ತೆಯಲ್ಲಿ ನೋಡಿದ್ರು ಅಲ್ಲಿ ಕೀಕಿ ಡು ಯೂ ಲವ್ ಮಿ ಅನ್ನೋ ಸಾಂಗ್ ಕೇಳಿ ಬರ್ತಾ ಇದೆ.ಬಾಲಿವುಡ್ ನಟರು, ಹಾಲಿವುಡ್ ನಟರು , ಟಾಲಿವುಡ್ , ಕಾಲಿವುಡ್ ನಟರು ಈ ಕೀಕಿ ಚಾಲೆಂಚ್ ನಲ್ಲಿ ಬ್ಯೂಸಿ ಆಗಿದ್ದಾರೆ, ಕನ್ನಡದ ನಟರಿಗೂ ಈ ಕೀಕಿ ಬಿಟ್ಟಿಲ್ಲ, ಪುನೀತ್ ಜೊತೆ ರಣವಿಕ್ರಮ ಸಿನಿಮಾದಲ್ಲಿ ನಟಿಸಿದ್ದ ಆದ ಶರ್ಮ ಈ ಕೀಕಿ ಡ್ಯಾನ್ಸ್ ಮಾಡಿದ್ದಾರೆ,ಭರತನಾಟ್ಯ ಮಾಡುವ ಶೈಲಿಯಲ್ಲಿ ಕೀಕಿ ಡು ಯು ಲವ್ ಮಿ ಅಂದಿರೋ ಆದ ಶರ್ಮ, ಸಕ್ಕತ್ ಹಾಟ್ , ಅಂಡ್ ಬೋಲ್ಡ್ ಆಗಿ ಕಾಣಿಸಿದ್ದಾರೆ,

ಆದ ಶರ್ಮಾರ ಕೀಕಿಯನ್ನ ಕಣ್ತುಂಬಿಕೊಂಡ ನೆಟ್ಟಿಗರು, ಕೀಕಿಯನ್ನ ಹೀಗೂ ಮಾಡಬಹುದೆ ಅಂತಾ ಆದ ಶರ್ಮಾರ ಕೀಕಿಯನ್ನ ಕಣ್ಣು ಮಿಟುಕಿಸದೇ ನೋಡಿದ್ದಾರೆ, ಶರ್ಮಾರ ಈ ಸೆಕ್ಸಿ ಕೀಕಿಗೆ ಲಕ್ಷಗಟ್ಟಲೇ ವೀವ್ಸ್, ಲೈಕ್ಸ್ ಬಂದಿದೆ.ವಿದೇಶದಲ್ಲಿ ಸದ್ದು ಗದ್ದಲವಿಲ್ಲ ಸಾಗಿದ್ದ ಈ ಕೀಕಿ ಭಾರತಕ್ಕೂ ಕಾಲಿಟ್ಟು ಬಿಟ್ಟಿತ್ತು, ಅಲ್ಲಿಂದಲೇ ನೋಡಿ ಕೀಕಿಯ ಕಿರಿ ಕಿರಿಯಿಂದ ನಮ್ಮ ಪೊಲೀಸರಿಗೆ ತಲೆ ನೋವು ಶುರುವಾಗಿದ್ದು…. ಹೌದು ಕೀಕಿ ಡು ಯು ಲವ್ ಮಿ ಅಂತಾ ಕಾರು ಬಿಟ್ಟು ರಸ್ತೆಗೆ ಇಳಿಯುತ್ತಿದ್ದ ಯುವಕರನ್ನ ಕಂಡ ಪೊಲೀಸರು ಇದ್ಯಾವುದಪ್ಪ ಹೊಸ ತಲೆ ನೋವು ಅಂತಾ ತಲೆ ಮೇಲೆ ಕೈ ಹೊದ್ದು ಕುಳಿತಿದ್ದಾರೆ,

ಯಾಕೆಂದ್ರ ಈ ಕೀಕಿಯಿಂದ ಆಗಿರೋ ಅವಾಂತರ ಅಷ್ಟಿಷ್ಟಲ್ಲ.ಕೀಕಿ ಡ್ಯಾನ್ಸ್ ಮಾಡಲು ಹೋಗಿ ಹಲವಾರು ಜನ ಗಾಯ ಮಾಡಿಕೊಂಡಿದ್ದಾರೆ, ಚಲಿಸುತ್ತಿದ್ದ ಕಾರಿನಿಂದ ಇಳಿದ ಪರಿಣಾಮ ಎಷ್ಟೊ ಜನ ಎದುರಿಗೆ ಇದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ, ಡ್ಯಾನ್ಸ್ ಮಾಡುತ್ತಾ, ರಸ್ತೆ ಬದಿಯ ಕಂಬಕ್ಕೆ ಗುದ್ದಿಕೊಂಡಿದ್ದಾರೆ, ಡ್ಯಾನ್ಸ್ ಮಾಡೋ ಭರದಲ್ಲಿ ರಸ್ತೆಯಲ್ಲಿದ್ದ ಗುಂಡಿಯನ್ನ ಗಮನಿಸಿದೆ ಎಷ್ಟೋ ಜನ ಗುಂಡಿ ಪಾಲಾಗಿದ್ದಾರೆ, ಹಾಡು ಎಷ್ಟು ಪಾಪ್ಯುಲರ್ ಆಯ್ತೋ ಅಷ್ಟೆ ಅವಘಡಗಳು ಸಾಲು ಸಾಲಾಗಿ ನಡೆಯಲಾರಂಭಿಸಿದೆ.

ಈ ಎಲ್ಲವನ್ನ ಕಂಡಿರೋ ಪೊಲೀಸರು ಕೀಕಿ ಪ್ಲೀಸ್ ಡೋನ್ಟ್ ಡೂ ಮಿ ಅಂತಾ ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ.ಈ ಕೀಕಿ ಹವಾ ಎಷ್ಟರ ಮಟ್ಟಿಗೆ ವಿಶ್ವವನ್ನ ಆವರಿಸಿದೆ ಅಂದ್ರೆ, ಕಟ್ಟರ್ ಸಂಪ್ರದಾಯವಾದಿಗಳ ನಾಡು ಸೌದಿ ಅರೆಬಿಯಾಕ್ಕೂ ಕಾಲಿಟ್ಟಿದೆ, ನಿನ್ನೆ ಮೊನ್ನೆ ತಾನೆ ಸೌದಿಯಲ್ಲಿ ಹೆಂಗಸರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಿದ್ದಾರೆ, ಇಲ್ಲಿವರೆಗೂ ಅಲ್ಲಿ ಮಹಿಳೆಯರು ವಾಹನವನ್ನೇ ಚಲಾಯಿಸುವಂತಿರಲಿಲ್ಲ, ಅಂತಹ ದೇಶದಲ್ಲಿ ಮಹಿಳೆಯೊಬ್ಬಳು ಡ್ರೈವಿಂಗ್ ಸೀಟ್ ಬಿಟ್ಟು ಕೆಳಗಿಳಿದು ಕೀಕಿ ಅಂತಾ ಹಾಡಿದ್ದಾಳೆ…

ಈಕೆಯ ಹಾಡು ಕೇಳುತ್ತಿದ್ದಂತೆ ಅಲರ್ಟ್ ಆದ ಪೊಲೀಸರು, ಅರೆ ಇಸ್ಕಿ ಅಂತಾ ಆಕೆಯನ್ನ ಎತ್ತಾಂಕಂಡ್ ಹೋಗಿ ಜೈಲಿಗೆ ಬಿಟ್ಟಿದ್ದಾರೆ.ಸಧ್ಯಕ್ಕಂತು ಕೀಕಿ ದೊಡ್ಡ ಟ್ರೆಂಡ್ ಆಗಿದೆ, ಮೊದಲೆಲ್ಲ ಮಾನಸಿಕ ಅಸ್ವಸ್ಥರು, ಮೆಂಟಲ್ ಗಿರಾಕಿಗಳು, ಈ ರೀತಿಯ ಸಮಾಜ ಸ್ವಾಸ್ಥ್ಯ ಕೆಡಿಸೋ ಕೆಲಸ ಮಾಡುತ್ತಿದ್ದರು, ಆದ್ರೀಗ ಎಲ್ಲವು ಬದಲಾಗಿದೆ, ಶಿಕ್ಷಿತರು , ನವ ಯುವಕರು, ಸ್ಮಾರ್ಟ್ ಪೋನ್ ಬಳಸೋ ಬುದ್ದಿವಂತ ಅವಿವೇಕಿಗಳು ಇಂತಹ ಚಾಲೆಂಚ್ ಅಂತಾ ಹಾಕಿ ಇಲ್ಲ ಸಲ್ಲದನ್ನ ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ,

LEAVE A REPLY

Please enter your comment!
Please enter your name here