Home District ಬ್ಲ್ಯೂವೇಲ್ ಗೇಮ್ ಗೆ ಬಾಲಕ ಬಲಿ..?! ಗೇಮ್ ಆಡುತ್ತಲೇ ನೇಣಿಗೆ ಶರಣಾದ ವಿದ್ಯಾರ್ಥಿ ಸಮರ್ಥ್…?!

ಬ್ಲ್ಯೂವೇಲ್ ಗೇಮ್ ಗೆ ಬಾಲಕ ಬಲಿ..?! ಗೇಮ್ ಆಡುತ್ತಲೇ ನೇಣಿಗೆ ಶರಣಾದ ವಿದ್ಯಾರ್ಥಿ ಸಮರ್ಥ್…?!

722
0
SHARE

ಪೋಷಕರೇ ಇನ್ಮುಂದೆ ನಿಮ್ಮ ಮಕ್ಕಳಿಗೆ ಮೊಬೈಲ್ ಕೊಡೋವಾಗ ಅಥವಾ ಕೊಡಿಸುವಾಗ ಕೊಂಚ ಎಚ್ಚರ ವಹಿಸಿ.. ಅಪ್ಪಿತಪ್ಪಿ ನಿವೇನಾದರು ಮಕ್ಕಳಿಗೆ ಮೊಬೈಲ್ ಬಳಸಲು ಕೊಟ್ಟರೇ ಅವರ ಜೀವಕ್ಕೆ ಸಂಚಕಾರ ಬರಬಹುದು.. ಯಾಕಂದ್ರೆ ಇಲ್ಲೊಂದು ಅಂತಹದ್ದೆ ಘೋರ ದುರಂತವೊಂದು ನಡೆದಿದೆ.. ಆನ್​ಲೈನ್​ನಲ್ಲಿ ಗೇಮ್ ಆಡುತ್ತಿರುವಾಗಲೇ ಬಾಲಕನೊರ್ವ ನೇಣಿಗೆ ಶರಣಾಗಿರುವಂತಹ ಹೃದಯವಿದ್ರಾವಕ ಘಟನೆ ನಡೆದಿದೆ.

ವಿಶ್ವದಾದ್ಯಂತ ಆತಂಕ ಮೂಡಿಸಿರುವ ಅಪಾಯಕಾರಿ ಬ್ಲೂವೇಲ್ ಗೇಮ್‍ಗೆ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ. ಕಲಬುರಗಿ ನಗರದ ಮಹಾಲಕ್ಷ್ಮೀ ಬಡಾವಣೆಯಲ್ಲಿ ವಾಸವಿದ್ದ ನಗರದ ಖ್ಯಾತ ಚಿನ್ನಾಭರಣ ವ್ಯಾಪಾರಿ ಸೂರಜ್ ಪಾಲ್ ಪುತ್ರ ಸಮರ್ಥ್ ಬ್ಲೂವೇಲ್ ಗೇಮ್ ಆಡಿ ಪ್ರಾಣವನ್ನು ಕಳೆದುಕೊಂಡಿದ್ದಾನೆ. ನಿನ್ನೆ ಸಂಜೆ ಏಳು ಗಂಟೆಗೆ ಸಮರ್ಥ್ ಎಂದಿನಂತೆ ಶಾಲೆಯಿಂದ ಬಂದು ಬೆಡ್​​ರೂಂನಲ್ಲಿ ಮೊಬೈಲ್​ನಲ್ಲಿ ಆನ್​ಲೈನ್ ಗೇಮ್ ಆಡುತ್ತಿದ್ದ..

ಈ ವೇಳೆ ಮಗ ಗೇಮ್ ಆಡುತ್ತಿರುವುದನ್ನ ಕಂಡು, ಏನೋ ಯಾವಾಗಲೂ ಮೊಬೈಲ್​ನಲ್ಲಿ ಆಡ್ತಿರ್ತಿಯಾ ಓದ್ಕೋ ಹೋಗು ಅಂತಾ ಸಮರ್ಥ್ ತಾಯಿ ಬೈಯ್ದಿದ್ದಾರೆ.. ಈ ವೇಳೆ ಬಾಲಕ ನನಗೆ ಪಾನಿಪೂರಿ ತಂದುಕೊಟ್ಟರೇ ನಾ ಓದ್ಕೋತ್ತಿನಿ ಅಂತಾ ತಾಯಿಯನ್ನ ಬಲವಂತವಾಗಿ ಪಾನಿಪೂರಿ ತರಲು ಹೊರಗೆ ಕಳುಹಿಸಿದ್ದಾನೆ.. ಈ ವೇಳೆ ಬಾಲಕ ಯಾರು ಇಲ್ಲದಿರುವುದನ್ನ ಕಂಡು ವೆಲ್​ನಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಮರ್ಥ್‌ನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಇನ್ನೂ ಮನೆಗೆ ಆಗಮಿಸಿದ್ದ ಬಾಲಕನ ಶಾಲೆಯ ಶಿಕ್ಷಕರು ಸಹ ಸಮರ್ಥ್ ದುರಂತ ಸಾವಿಗೆ ಕಂಬನಿಯನ್ನ ಮಿಡಿದಿದ್ದಾರೆ.. ಶಾಲೆಯಲ್ಲಿ ಎಲ್ಲಾ ಶಿಕ್ಷಕರ ಜೊತೆ ಉತ್ತಮ ಒಡನಾಟವನ್ನ ಇಟ್ಟುಕೊಂಡಿದ್ದ ಸಮರ್ಥ್ ಇಂದು ನಮ್ಮೊಂದಿಗಿಲ್ಲ ಅನ್ನೊದಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.ಬಾಲಕ ಸಮರ್ಥ್ ಕಲಬುರಗಿ ನಗರದ ಖಾಸಗಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.. ದಿನನಿತ್ಯ ಶಾಲೆಯಿಂದ ಬಂದ ತಕ್ಷಣ ಮೊಬೈಲ್​ನ ಆನ್​ಲೈನ್​ನಲ್ಲಿ ಗೇಮ್ ಆಡುತ್ತಿದ್ದ..

ಆದರೆ ಆ ಬಾಲಕ ಆನ್​ಲೈನ್​ನಲ್ಲಿ ಡೆಡ್ಲಿ ಬ್ಲೂವೇಲ್ ಗೇಮ್ ಆಡುತ್ತಿದ್ದ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಯಾಕಂದ್ರೆ ಆ ಒಂದು ಗೇಮ್ ಆಡೋದಕ್ಕಂತಾನೇ ಇತ್ತೀಚಿಗಷ್ಟೇ ಪೋಷಕರಿಗೆ ಒತ್ತಾಯ ಮಾಡಿ ಏಣಿ ಸಹ ಖರೀದಿಸಿದ್ದನಂತೆ.ಮುಂದಿನ ಹಂತದ ಆಟವನ್ನು ಆಡಲು ಹೋಗಿ ತಾಯಿಯನ್ನ ಬಲವಂತವಾಗಿ ಪಾನಿಪೂರಿ ತರಲು ಹೊರಗಡೆ ಕಳುಹಿಸಿ ಏಣಿ ಸಹಾಯದಿಂದ ಫ್ಯಾನಿಗೆ ನೇಣು ಬಿಗುದುಕೊಂಡು ದುರಂತವಾಗಿ ಸಾವನ್ನಪ್ಪಿದ್ದಾನೆ..

ಇನ್ನೂ ತಾಯಿ ಮಗನಿಗಾಗಿ ಪಾನಿಪೂರಿಯನ್ನ ಮನೆಗೆ ತಂದು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.. ಘಟನೆ ನಡೆದ ತಕ್ಷಣವೇ ಬಾಲಕನನ್ನ ಕೆಳಗೆ ಇಳಿಸಲಾಗಿದೆ. ಆದರೆ ಅಷ್ಟೊತ್ತಿಗೆ ಮಗ ಮಹಾಡೆಡ್ಲಿ ಗೇಮ್​ಗೆ ಬಲಿಯಾಗಿ ಹೋಗಿದ್ದ.. ಇನ್ನೂ ಘಟನಾ ಸ್ಥಳಕ್ಕೆ ಕಲಬುರಗಿ ಎಸ್ಪಿ ಎನ್ ಶಶಿಕುಮಾರ್ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.. ಅಲ್ಲದೇ ಈ ಬಗ್ಗೆ ನ್ಯೂ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣವನ್ನ ದಾಖಲಿಸಿರುವ ಪೋಷಕರು, ನಮ್ಮ ಮಗ ಹೆಚ್ಚಾಗಿ ಮೊಬೈಲ್​ನಲ್ಲೆ ಕಾಲ ಕಳೆಯುತ್ತಿದ್ದ,

ಓದಲು ಬುದ್ದಿವಾದ ಹೇಳಿದ್ದೇವೆ, ಅದಕ್ಕೆ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ದೂರನ್ನ ದಾಖಲಿಸಿದ್ದಾರೆ..ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಬ್ಲ್ಯೂವೆಲ್ ಗೇಮ್​ನ್ನ ನಿಷೇಧಿಸಿದೆ. ಆದರೂ ಸಹ ಮಕ್ಕಳು ಆನ್​ಲೈನ್​ನಲ್ಲಿ ಬರುವಂತಹ ಚಿತ್ರವಿಚಿತ್ರ ಗೇಮ್​ಗಳನ್ನ ಆಡುತ್ತ ಬಲಿಯಾಗುತ್ತಿರುವುದು ದುರಂತವೇ ಸರಿ. ಸದ್ಯ ಬಾಲಕ ಬಳಸುತ್ತಿದ್ದ ಮೊಬೈಲ್​ನ್ನ ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನ ನಡೆಸುತ್ತಿದ್ದಾರೆ.. ಒಟ್ಟಿನಲ್ಲಿ ಬಾಳಿ ಬದುಕಬೇಕಾದ ಪುಟ್ಟ ಬಾಲಕನೋರ್ವ ಡೆಡ್ಲಿ ಆನ್​ಲೈನ್​ ಗೇಮ್​ಗೆ ಬಲಿಯಾಗಿರುವುದು ಪ್ರತಿಯೊಬ್ಬ ಪೋಷಕರು ಪಾಠ ಕಲಿಯಲೇಬೇಕಾದ ಸಂದರ್ಭ ಬಂದಿದೆ ಎಂದರು ತಪ್ಪಾಗಲಾರದು…

LEAVE A REPLY

Please enter your comment!
Please enter your name here