Home Cinema ಭಯಾನಕ ‘ಭೈರವಗೀತಾ’ನ ಕಂಡು ‘ಫ್ಯಾನ್ಸ್’ ಮೂಕವಿಸ್ಮಿತ..!? ಡಾಲಿ ನಯಾ ದುನಿಯಾದಲ್ಲಿ ‘ಪ್ರೀತಿ’ಯ ಜೊತೆಯಲ್ಲಿದೆ ‘ರಕ್ತಪಾತ’..!?

ಭಯಾನಕ ‘ಭೈರವಗೀತಾ’ನ ಕಂಡು ‘ಫ್ಯಾನ್ಸ್’ ಮೂಕವಿಸ್ಮಿತ..!? ಡಾಲಿ ನಯಾ ದುನಿಯಾದಲ್ಲಿ ‘ಪ್ರೀತಿ’ಯ ಜೊತೆಯಲ್ಲಿದೆ ‘ರಕ್ತಪಾತ’..!?

618
0
SHARE

ಭೈವರ ಗೀತಾ.. ಡಾಲಿ ಖ್ಯಾತಿಯ ಧನಂಜಯ್ ಅಭಿನಯದ ಮೋಸ್ಟ್ ಅವೇಟೆಡ್ ಸಿನಿಮಾ. ಇತ್ತೀಚೆಗಷ್ಟೇ ಲಿಪ್‌ಲಾಕ್ ಪೋಸ್ಟರ್ ಮೂಲಕವೇ ಅಭಿಮಾನಿಗಳ ಉಬ್ಬೇರಿಸಿ, ಸದ್ದು ಮಾಡಲು ರೆಡಿಯಾಗಿರುವ ಸಿನಿಮಾದ ಇಂಟ್ರೆಸ್ಟಿಂಗ್ ಟ್ರೇಲರ್ ರಿವೀಲ್ ಆಗಿದೆ.ಅತೀ ನಿರೀಕ್ಷೆ ಮತ್ತು ಭರವಸೆಯ ಭೈರವ ಗೀತಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ…

ಡಾಲಿ ಪಾತ್ರದಲ್ಲಿ ಧನಂಜಯ್ ಟಗರಿನಲ್ಲಿ ಲಾಂಗ್ ಹಿಡಿದು ಅಬ್ಬರಿಸಿ ಬೋಬ್ಬಿರಿದ್ರು. ಇನ್ನು ಭೈರವ ಗೀತಾ ಚಿತ್ರದಲ್ಲಿ ಧನಂಜಯ್ ಯಾವ ನಯಾ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು. ಹಾಗಾಗಿನೇ ಚಿತ್ರದ ಟ್ರೇಲರ್‌ನ್ನು ಎದುರು ನೋಡ್ತಿದ್ದ ಸಿನಿಪ್ರೇಕ್ಷಕರ ಕಾಯುವಿಕೆಗೆ ತೆರೆ ಬಿದ್ದಿದ್ದು…

ಚಿತ್ರದ ಇಂಟ್ರೆಸ್ಟಿಂಗ್ ಅಂಶಗಳನ್ನೊಳಗೊಂಡಿರುವ ಟ್ರೇಲರ್‌ನಲ್ಲಿ ಅನಾವರಣ ಮಾಡಿದೆ ಚಿತ್ರತಂಡ.ಭೈರವ ಗೀತಾ ನೈಜಘಟನೆಯಾಧರಿಸಿ ಚಿತ್ರ. ಧನಂಜಯ್ ಅಭಿನಯದ ಮಹತ್ವಾಕಾಂಕ್ಷೆಯ ಸಿನಿಮಾ ಬೈ ಲ್ಯಾಗ್ವೇಜ್‌ನಲ್ಲಿ ಮೂಡಿಬರ್ತಿದ್ದು. ಸಿನಿಮಾ ಎರಡು ಟ್ರೇಲರನ್ನು ನಿರ್ಮಾಪಕರಾದ ರಾಮ್ ಗೋಪಾಲ್ ವರ್ಮ ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲವನ್ನು ತಣಿಸಿದ್ದಾರೆ…

ಭೈರವನ ಅವತಾರದಲ್ಲಿ ಧನಂಜಯ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು. ಕೂಲಿ ಹುಡುಗನ ಪಾತ್ರದಲ್ಲಿ ಧನು ನಟಿಸಿದ್ದಾರೆ. ಧನು ಡಿಫರೆಂಟ್ ಲುಕ್ ನೋಡಿದ ಫ್ಯಾನ್ಸ್ ಫಿದಾ ಆಗಿದ್ದಾರೆ. ಕೈಯಲ್ಲಿ ಲಾಂಗ್ ಬದಲು ಮಚ್ಚು ಹಿಡಿದು ಮೈ ಝುಮ್ಮೆನ್ನಿಸುವಂತೆ ಧನಂಜಯ್ ನಟಿಸಿದ್ದಾರೆ. ಸ್ಯಾಂಡಲ್‌ವುಡ್ & ಟಾಲಿವುಡ್‌ನಲ್ಲಿ ಟ್ರೇಲರ್ ಮೂಲಕವೇ ಅಭಿಮಾನಿಗಳಿಗೆ ಬೆರಗಾಗುವಂತೆ ಮಾಡಿದ್ದಾರೆ…

ಇನ್ನು ಧನಂಜಯ್‌ಗೆ ಜೋಡಿಯಾಗಿ ಇರಾ ನಟಿಸಿದ್ದಾರೆ. ಶ್ರೀಮಂತ ಮನೆ ಹುಡುಗಿಯ ಪಾತ್ರದಲ್ಲಿ ಇರಾ ಕಾಣಸಿಕ್ತಾರೆ. ಅಲ್ಲದೆ ಕೂಲಿಯವನ ಪ್ರೀತಿಯ ಬಲೆಗೆ ಬೀಳುವ ಮುಗ್ಧ ಹುಡುಗಿಯಾಗಿ ಇರಾ ಗಮನಸೆಳೆಯುತ್ತಾರೆ.ಹಿಂಸಾತ್ಮಕ ಪ್ರೇಮಕಥೆಯ ಚಿತ್ರದ ನಾಯಕಿ ಇರಾ ನಡುವಿನ ಲಿಪ್‌ಲಾಕ್ ದೃಶ್ಯಗಳು ಕೂಡ ಟ್ರೇಲರ್‌ನಲ್ಲಿ ಅನಾವರಣವಾಗಿದೆ…

ಅಲ್ಲದೆ ರಗಡ್ ಲುಕ್ ಜೊತೆಗೆ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವ ಧನು ಎಲ್ಲರ ಚಿತ್ತ ಕದ್ದಿಯುತ್ತಿದ್ದಾರೆ. ಪೋಸ್ಟರ್‌ನಲ್ಲಿ ತುಟಿಗೆ ತುಟಿ ಓತ್ತಿದ್ದ ಇರಾ ಮತ್ತು ಧನಂಜಯ್ ಲಿಪ್ ಲಾಕ್ ಸೀನ್ ಕೂಡ್ ಟ್ರೇಲರ್‌ನಲ್ಲಿ ಮೂಡಿಬಂದಿದ್ದು, ಚಿತ್ರದ ಮೇಲಿನ ಕುತೂಹಲ ಹೆಚ್ಚಾಗುವಂತೆ ಮಾಡಿದೆ.ಆರ್.ಜಿ.ವಿ ಶಿಷ್ಯ ಸಿದ್ದಾರ್ಥ್ ತಟೋಲು ಸಾರಥ್ಯದಲ್ಲಿ ಮೂಡಿ ಚಿತ್ರ ಮೂಡಿಬರ್ತಿದ್ದು. ಪೋಸ್ಟರ್ ಮತ್ತು ಟ್ರೇಲರ್ ಮೂಲಕ ಭರವಸೆ ಮೂಡಿಸಿದ್ದಾರೆ…

ನಟ ಧನಂಜಯ್, ಸಂಭಾಷಣೆಕಾರ ಮಾಸ್ತಿಮಂಜು ಮತ್ತು ವಂಶಿ ರಾಜ್ ಭಲವಾಡಿ ಮೂವರು ಕನ್ನಡಿಗರು ಟಾಲಿವುಡ್ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಇನ್ನುಳಿದಂತೆ ಹೊಸ ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದು, ರವಿಶ್ ಕ್ಯಾಮರಾ ವರ್ಕ್, ಮಾಸ್ತಿ ಮಂಜು ಸಂಭಾಷಣೆ , ರವಿ ಶಂಕರ್ ಸಂಗೀತ ಚಿತ್ರಕ್ಕಿದೆ…

ರಾಶಿ ಕಂಬೈನ್ಸ್‌ನಲ್ಲಿ ಚಿತ್ರ ಮೂಡಿಬಂದಿದ್ದು ರಾಮ್ ಗೋಪಾಲ್ ವರ್ಮ ಮತ್ತು ಭಾಸ್ಕರ್ ರಾಶಿ ನಿರ್ಮಾಣವಿದೆ.ಅದೇನೇ ಇದ್ರು..ಲಿಪ್‌ಲಾಕ್ ಫೋಟೋ ಮೂಲಕ ಅಭಿಮಾನಿಗಳಿಗೆ ದಂಗು ಬಡಿಸಿದ್ದ ಭೈರವ ಗೀತಾ ಚಿತ್ರತಂಡ ಸದ್ಯ, ಟ್ರೇಲರ್ ಮೂಲಕ ಭಂಗಿ ಇಲ್ಲದೆ ಭೈರವನ ಜಪ ಮಾಡುವಂತೆ ಮಾಡ್ತಿದ್ದು. ಸದ್ಯ ಚಿತ್ರ ಬಿಡುಗಡೆಯನ್ನು ಎದುರು ನೋಡುವಂತೆ ಮಾಡಿದೆ…

LEAVE A REPLY

Please enter your comment!
Please enter your name here