Home KARNATAKA ಭಾರತದ ಮಾರಕ ಬೌಲಿಂಗ್ ದಾಳಿಗೆ ಕಿವೀಸ್ ಉಡೀಸ್..! ಕಿವೀಸ್ ಕಿವಿ ಹಿಂಡಿದ ಬ್ಲೂಬಾಯ್ಸ್..! ಮೊದಲ ಏಕದಿನ...

ಭಾರತದ ಮಾರಕ ಬೌಲಿಂಗ್ ದಾಳಿಗೆ ಕಿವೀಸ್ ಉಡೀಸ್..! ಕಿವೀಸ್ ಕಿವಿ ಹಿಂಡಿದ ಬ್ಲೂಬಾಯ್ಸ್..! ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ 8 ವಿಕೆಟ್ ಗೆಲುವು…

291
0
SHARE

ನೇಪಿಯರ್ ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 08 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಸಾಂಘಿಕ ಪ್ರದರ್ಶನ ತೋರಿದ ಕೊಹ್ಲಿಪಡೆ ತವರಿನಲ್ಲಿ ಕಿವೀಸ್ ಕಿವಿ ಹಿಡಿತು. ಇದರೊಂದಿಗೆ ಏಕದಿನ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿತು.ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಮತ್ತು ಏಕದಿನ ಸರಣಿ ಗೆದ್ದಿದ್ದ ಟೀಂ ಇಂಡಿಯಾ, ಕಿವೀಸ್ ನೆಲದಲ್ಲೂ ತನ್ನ ಗೆಲುವಿನ ಓಟ ಮುಂದುವರೆಸಿದೆ.

ನೇಪಿಯರ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿಪಡೆ, ವಿಲಿಯಂಸನ್ ಬಳಗವನ್ನ 8 ವಿಕೆಟ್ ಗಳಿಂದ ಬಗ್ಗುಬಡಿಯಿತು. ಈ ಮೂಲಕ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.ನ್ಯೂಜಿಲೆಂಡ್ ನೀಡಿದ್ದ 158 ರನ್ ಗಳ ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲಿ 11 ರನ್ ಗಳಿಸಿದ್ದ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ನಂತ್ರ ಒಂದಾದ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅತ್ಯಮೋಘ ಬ್ಯಾಟಿಂಗ್ ನಡೆಸಿದ್ರು.

ಕಿವೀಸ್ ಬೌಲರ್ ಗಳ ಮೇಲೆ ಸವಾರಿ ಮಾಡಿದ ವಿರಾಟ್ 45 ರನ್ ಗಳಿಸಿ ಔಟಾದ್ರು.ಇನ್ನು ಕಾಂಗರೂಗಳ ನಾಡಲ್ಲಿ ಮಂಕಾಗಿದ್ದ ಧವನ್ ನ್ಯೂಜಿಲೆಂಡ್ ವಿರುದ್ಧ ಆಕ್ರಮಣಕಾರಿ ಇನ್ನಿಂಗ್ಸ್ ಕಟ್ಟಿದ್ರು. 6 ಬೌಂಡರಿ ನೆರವಿನಿಂದ ಅಜೇಯ 75 ರನ್ ಗಳಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಉಳಿದಂತೆ ಅಂಬಾಟಿ ರಾಯುಡು ಅಜೇಯ 13 ರನ್ ಬಾರಿಸಿದ್ರು. ಅಂತಿಮವಾಗಿ ಭಾರತ 34.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು.

ಇದಕ್ಕೂ ಮೊದ್ಲು ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಗೆ ಮೊಹಮ್ಮದ್ ಶಮಿ ಆರಂಭಿಕ ಆಘಾತ ನೀಡಿದ್ರು. ಮಾರ್ಟಿನ್ ಗಪ್ಟಿಲ್ 05, ಕಾಲಿನ್ ಮನ್ರೋ 11 ರನ್ ಗಳಿಸಿ ಶಮಿಗೆ ವಿಕೆಟ್ ಒಪ್ಪಿಸಿದ್ರು. ನಂತ್ರ ಏಕಾಂಗಿಯಾಗಿ ಬ್ಯಾಟ್ ಬೀಸಿದ ನಾಯಕ ಕೇನ್ ವಿಲಿಯಂಸನ್ 64 ರನ್ ಗಳಿಸಿ ಔಟಾದ್ರೆ, ರಾಸ್ ಟೇಲರ್ 24 ರನ್ ಗಳಿ ಪೆವಿಲಿಯನ್ ಸೇರಿಕೊಂಡ್ರು. ಭಾರತದ ಬಿಗು ಬೌಲಿಂಗ್ ದಾಳಿಗೆ ತತ್ತರಿಸಿದ ವಿಲಿಯಂಸನ್ ಪಾಳೆಯ 38 ಓವರ್ ಗಳಲ್ಲಿ 157 ರನ್ ಗಳಿಗೆ ಸರ್ವಪತನವಾಯ್ತು. ಟೀಂ ಇಂಡಿಯಾ ಕುಲ್ದೀಪ್ ಯಾದವ್ 4, ಶಮಿ 3 ಮತ್ತು ಚಹಲ್ 2 ವಿಕೆಟ್ ಉರುಳಿಸಿದ್ರು.

LEAVE A REPLY

Please enter your comment!
Please enter your name here