ಬ್ರಿಸ್ಬೇನ್: ಆ ಒಂದು ಗೆಲುವು ಇಡೀ ಭಾರತವನ್ನು ವಿಶ್ವ ಕ್ರಿಕೆಟ್ ಭೂಪಟದಲ್ಲಿ ನಂಬರ್ ವನ್ ಸ್ಥಾನಕ್ಕೆ ಬಂದು ನಿಲ್ಲುತ್ತಿತ್ತು .ಆ ಐತಿಹಾಸಿಕ ಗೆಲುವಿನ ಓಟ ಭಾರತವನ್ನು ಇಡೀ ವಿಶ್ವ ಕ್ರಿಕೆಟ್ ಜಗತ್ತೇ ತಿರುಗಿ ನೋಡುವಂತೆ ಮಾಡಿತು. ದಟ್ ಇಸ್ ಮೀನಿಂಗ್ ಪಾಯಿಂಟ್. ಮರಿ ಟೈಗರ್ ಗಳ ಗೆಲುವು ಆಸ್ಟ್ರೇಲಿಯನ್ ಅವರದೇ ನೆಲದಲ್ಲಿ ಬಗ್ಗುಬಡಿದು ಗೆಲುವಿನ ನಾಗಾಲೋಟದಲ್ಲಿ ಓಡತೊಡಗಿದೆ ಗೆಲುವಿನ ಸಂಭ್ರಮದಲ್ಲಿ ಭಾರತದ ಪ್ರಧಾನಮಂತ್ರಿ ಮೋದಿ ಭಾಗಿಯಾಗಿದ್ದಾರೆ.
ಬಾರ್ಡರ್ -ಗವಸ್ಕರ್ ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದ ಕೊನೆಯ ದಿನದಲ್ಲಿ ಭಾರತ ಗೆಲ್ಲಲು328 ರನ್ನುಗಳ ಗುರಿಯನ್ನು ಇನ್ನೂ 18 ಎಸೆತ ಬಾಕಿ ಇರುವಾಗಲೇ ರಿಷಬ್ ಪಂತ್ ಆಕರ್ಷಕ ಆಟದಿಂದ ಐದು ವಿಕೆಟ್ಗಳ ಐತಿಹಾಸಿಕ ಗೆಲುವನ್ನು ಭಾರತ ಪಡೆದುಕೊಂಡಿದೆ ಈ ಗೆಲುವಿಗೆ ಬಿಸಿಸಿಐ ಐದು ಕೋಟಿ ರೂಪಾಯಿಗಳ ಬೋನಸ್ ಭಾರತ ತಂಡಕ್ಕೆ ಘೋಷಣೆ ಮಾಡಿ ಗೆಲುವಿನ ಸಂಭ್ರಮದಲ್ಲಿ ಭಾಗಿಯಾಗಿದೆ.
ಹಲವು ಅನುಭವಿ ಆಟಗಾರರ ಅನುಪಸ್ಥಿತಿಯಲ್ಲೂ ಯುವ ಆಟಗಾರರ ಪಡೆಯೇ ಆಸ್ಟ್ರೇಲಿಯಾ ತಂಡವನ್ನು ಅದರ ನೆಲದಲ್ಲೇ ಬಗ್ಗು ಬಡಿಯುವಲ್ಲಿ ಯಶಸ್ವಿಯಾಗಿದೆ. ಮೂರು ಟೆಸ್ಟ್ ಸರಣಿಯ ಪಂದ್ಯಾವಳಿಯಲ್ಲಿ ಭಾರತ 2-1 ರಿಂದ ಐತಿಹಾಸಿಕ ಗೆಲುವನ್ನು ಪಡೆದು ವಿಶ್ವ ಟೆಸ್ಟ್ ರ್ಯಾಂಕಿಂಗ್ ನಲ್ಲಿ ನಂಬರ್ ವನ್ ಸ್ಥಾನಕ್ಕೆ ಏರಿದಂತಾಗಿದೆ ಸೋತ ಆಸ್ಟ್ರೇಲಿಯಾ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಕೊನೆಯ ದಿನದ ಕೊನೆಯ 1 ಗಂಟೆ ರೋಚಕ ಸ್ಥಿತಿಯಲ್ಲಿ ಆಟ : ಆ ಒಂದು ಗಂಟೆಯ ಆಟ ಇಡೀ ವಿಶ್ವ * ಕೊನೆಯ ದಿನದ ಕೊನೆಯ 1 ಗಂಟೆ ರೋಚಕ ಸ್ಥಿತಿಯಲ್ಲಿ ಆಟ* ಕ್ರಿಕೆಟ್ ಪ್ರೇಮಿಗಳನ್ನು ರೋಚಕ ಸ್ಥಿತಿಯಲ್ಲಿ ಇರುವಂತೆ ಮಾಡಿತು ಊಟದ ವಿರಾಮ ಕ್ಕಿಂತ ಮುಂಚೆ ಗಿಲ್ ಹಾಕಿಕೊಟ್ಟ ಅಡಿಪಾಯದ ಮೇಲೆ ಚೇತೇಶ್ವರ ಪೂಜಾರ ಹಾಗೂ ರಿಷಬ್ ಜೋಡಿ ಗೆಲುವಿನ ಸೌಧವನ್ನು ಭಾರತಕ್ಕೆ ಕಟ್ಟಿಕೊಟ್ಟರು. ಒಂದು ಹಂತದಲ್ಲಿ ಪೂಜಾರ್ ಔಟಾದ ಸಂದರ್ಭದಲ್ಲಿ ಭಾರತಕ್ಕೆ ಆತಂಕ ಮನೆಮಾಡಿತ್ತು ಆದರೆ ರಿಶಬ್ ಯಾವುದೇ ಅಳುಕಿಲ್ಲದೆ ಭಾರತವನ್ನು ಟಿ-ಟ್ವೆಂಟಿ ಮಾದರಿಯಲ್ಲಿ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದರು.
ಭಾರತದ ತಂಡ ಆಸ್ಟ್ರೇಲಿಯಾ ಗೆಲುವನ್ನು ಇಡೀ ಭಾರತೀಯರು ಸಂಭ್ರಮಿಸಲಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಭಾರತೀಯರ ಆಟವನ್ನು ಮುಕ್ತಕಂಠ ದಿಂದ ಕೊಂಡಾಡಿದ್ದಾರೆ. ಕೊನೆಯ 5 ಓವರ್ ಗಳಲ್ಲಂತೂ ರಿಷಬ್ ಆಸ್ಟ್ರೇಲಿಯಾ ಬೌಲರುಗಳನ್ನು ಮನಬಂದಂತೆ ದಂಡಿಸಿ ಚೆಂಡನ್ನು ಬೌಂಡರಿ ಆ ಗೆರೆಗಳಿಗೆ ದಾಟಿಸಿ ಭಾರತದ ಗೆಲುವಿನ ನಾಗಾಲೋಟಕ್ಕೆ ಮುನ್ನುಡಿ ಬರೆದರು. ಈ ಮೂಲಕ ಭಾರತ ಐತಿಹಾಸಿಕ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಯಿತು.