Home KARNATAKA ಭಾರತ ಆಟಗಾರರ ಬ್ಯಾಟಿಂಗ್‌ಗೆ ಆಸ್ಟ್ರೇಲಿಯಾ ಬೌಲರ್ಸ್ ತತ್ತರ..! ಕಾಂಗೊರೂಗಳಿಗೆ ಪೂಜಾರ-ಪಂತ್ ಪಂಚ್..! ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ...

ಭಾರತ ಆಟಗಾರರ ಬ್ಯಾಟಿಂಗ್‌ಗೆ ಆಸ್ಟ್ರೇಲಿಯಾ ಬೌಲರ್ಸ್ ತತ್ತರ..! ಕಾಂಗೊರೂಗಳಿಗೆ ಪೂಜಾರ-ಪಂತ್ ಪಂಚ್..! ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 622/7ಕ್ಕೆ ಡಿಕ್ಲೇರ್

513
0
SHARE

ಸಿಡ್ನಿಯಲ್ಲಿ ನಡೆಯುತ್ತಿರೋ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತ ಕಲೆಹಾಕಿದೆ. ಚೇತೇಶ್ವರ್ ಪೂಜಾರ ಹಾಗೂ ರಿಶಬ್ ಪಂತ್ ರ ಸೆಂಚುರಿ ನೆರವಿನಿಂದ ಕೊಹ್ಲಿಪಡೆ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.ಈ ಮೂಲಕ ಆತಿಥೇಯರನ್ನ ಹೆಚ್ಚಿನ ಒತ್ತಡಕ್ಕೆ ಸಿಲುಕಿಸಿದೆ.ಸಿಡ್ನಿಯಲ್ಲಿ ನಡೆಯುತ್ತಿರೋ ಆಸೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಚೇತೇಶ್ವರ್ ಪೂಜಾರರ 193 ಹಾಗೂ ರಿಶಬ್ ಪಂತ್ ಸಿಡಿಸಿದ ಅಜೇಯ 159 ರನ್ ಗಳ ಸಾಹಸದಿಂದ ಭಾರತ, ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 622 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.. ಅತ್ತ ಇನ್ನಿಂಗ್ಸ್ ಆರಂಭಿಸಿರೋ ಆಸ್ಟ್ರೇಲಿಯಾ 2ನೇ ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 24 ರನ್ ಕಲೆಹಾಕಿದೆ.ಮೊದಲ ದಿನ 303 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ, 2ನೇ ದಿನದಾಟದಲ್ಲಿ ಆಕ್ರಮಣಕಾರಿ ಆಟವಾಡಿತು.

ಆಸೀಸ್ ಬೌಲರ್ ಗಳ ಬೆವರಿಳಿಸಿದ ಚೇತೇಶ್ವ ರ್ ಪೂಜಾರ ಹಾಗೂ ಹನುಮ ವಿಹಾರಿ ವೇಗವಾಗಿ ರನ್ ಗಳಿಸಿದ್ರು. ಇದೇ ವೇಳೆ ಪೂಜಾರ 150 ರನ್ ಗಳಿಸಿದ್ರೆ, ವಿಹಾರಿ 42 ರನ್ ಗಳಿಸಿ ಔಟಾದ್ರು.
ವಿಹಾರಿ ಔಟಾದ ನಂತ್ರ ಬಂದ ರಿಶಬ್ ಪಂತ್ ಮತ್ತು ಚೇತೇಶ್ವರ್ ಪೂಜಾರ ಸೊಗಸಾದ ಬ್ಯಾಟಿಂಗ್ ನಡೆಸಿದ್ರು. ಆದ್ರೆ ಮ್ಯಾರಥಾನ್ ಇನ್ನಿಂಗ್ಸ್ ಮೂಲಕ ಗಮನ ಸೆಳೆದಿದ್ದ ಪೂಜಾರ 193 ರನ್ ಗಳಿಸಿ ನಥನ್ ಲಿಯೋನ್ ಗೆ ವಿಕೆಟ್ ಒಪ್ಪಿಸಿದ್ರು. ಇದರೊಂದಿಗೆ ದ್ವಿಶತಕ ವಂಚಿತರಾದ್ರು.

ಸಿಡ್ನಿ ಅಂಗಳದಲ್ಲಿ ಕಾಂಗರೂಪಡೆಯ ಮೇಲೆ ಅಕ್ಷರಃಶ ಮುಗಿಬಿದ್ದ ರಿಶಬ್ ಪಂತ್ ಟೆಸ್ಟ್ ಕ್ರಿಕೆಟ್ ನಲ್ಲಿ 2ನೇ ಶತಕ ಸಿಡಿಸಿದ್ರು. ಅಲ್ಲದೇ ಆಸೀಸ್ ವಿರುದ್ಧ ಶತಕ ಬಾರಿಸಿದ ಭಾರತದ ಮೊದಲ ಕೀಪರ್ ಬ್ಯಾಟ್ಸ್ ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾದ್ರು. 189 ಎಸೆತಗಳಲ್ಲಿ ಪಂತ್ 15 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 159 ರನ್ ಬಾರಿಸಿದ್ರು.

ಇನ್ನು 7ನೇ ವಿಕೆಟ್ ಗೆ ಒಂದಾದ ರಿಶಬ್ ಪಂತ್ ಹಾಗೂ ರವೀಂದ್ರ ಜಡೇಜಾ ಅಬ್ಬರದ ಬ್ಯಾಟಿಂಗ್ ನಡೆಸಿದ್ರು. ಈ ಇಬ್ಬರು ರನ್ ಹೊಳೆ ಹರಿಸುತ್ತಿದಂತೆ ಆತಿಥೇಯರು ಸುಸ್ತಾಗಿ ಹೋದ್ರು. ಇದೇ ಸಂದರ್ಭದಲ್ಲಿ ಜಡೇಜಾ ಟೆಸ್ಟ್ ಕ್ರಿಕೆಟ್ ನಲ್ಲಿ 10ನೇ ಅರ್ಧಶತಕ ದಾಖಿಲಿಸಿದ್ರು. ಅಲ್ಲದೇ ಪಂತ್ ಜೊತೆ 204 ಕಲೆಹಾಕುವ ಮೂಲಕ ತಂಡದ ಮೊತ್ತವನ್ನ 600ರ ಗಡಿ ದಾಟಿಸಿದ್ರು …

LEAVE A REPLY

Please enter your comment!
Please enter your name here