Home District ಭಿನ್ನಮತೀಯ ನಾಯಕರ ಗುಂಪು ತೊರೆದ್ರಾ ಶಾಸಕ ನಾಗೇಂದ್ರ..? ನಾಗೇಂದ್ರ ಸ್ಥಿತಿ ಅತ್ತವೂ ಇಲ್ಲ, ಇತ್ತವೂ ಇಲ್ಲ...

ಭಿನ್ನಮತೀಯ ನಾಯಕರ ಗುಂಪು ತೊರೆದ್ರಾ ಶಾಸಕ ನಾಗೇಂದ್ರ..? ನಾಗೇಂದ್ರ ಸ್ಥಿತಿ ಅತ್ತವೂ ಇಲ್ಲ, ಇತ್ತವೂ ಇಲ್ಲ ಎಂಬತಾಗಿದ್ಯಾ..?

1420
0
SHARE

ಸಮ್ಮಿಶ್ರ ಸರಕಾರ ರಚನೆಯಾದಾಗಿನಿಂದಲೂ ಭಿನ್ನಮತೀಯ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ. ಸರ್ಕಾರ ಕೆಡವಲು ಭಿನ್ನರು ಹಲವು ಪ್ರಯತ್ನಗಳನ್ನ ಹಿಂದೆಯೂ ನಡೆಸಿದ್ರು. ಈ ಪ್ರಯತ್ನಕ್ಕೆ ಬಳ್ಳಾರಿ ಕೈ ಶಾಸಕ ನಾಗೇಂದ್ರ ಸಾಥ್ ನೀಡಿದ್ರು. ಭಿನ್ನಮತೀಯ ಗುಂಪಿನ ನಾಯಕ ರಮೇಶ್ ಜಾರಕಿಹೊಳಿಗೆ ಸಾಥ್ ನೀಡಿದ್ರು. ಆದ್ರೆ ಭಿನ್ನಮತೀಯ ಚಟುವಟಿಕೆ ನಡೆಸಿದ್ದ ನಾಗೇಂದ್ರ ಈಗ ಅತಂತ್ರರಾಗಿದ್ದಾರೆ. ಅತ್ತವೂ ಇಲ್ಲ, ಇತ್ತವೂ ಇಲ್ಲ ಅನ್ನುವಂತಾಗಿದೆ ಅವರ ಸ್ಥಿತಿ.

ಹೌದು…ರಾಜ್ಯ ರಾಜಕಾರಣದಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಠಿಯಾಗಲು ಅತೃಪ್ತರ ಬಣ ಕಾರಣವಾಗಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಭಿನ್ನಮತಕ್ಕೆ ಪ್ರಮುಖ ಕಾರಣ. ಇನ್ನೂ ಅತೃಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೈ ಶಾಸಕ ನಾಗೇಂದ್ರ ಮಾತ್ರ ಎಲ್ಲಿಯೂ ಕೂಡ ಈಗ ಬಹಿರಂಗವಾಗಿ ಕಾಣಿಸುತ್ತಿಲ್ಲ. ಭಿನ್ನಮತೀಯ ಚಟುವಟಿಕೆಯಲ್ಲಿ ಮೊದಲು ಗುರುತಿಸಿಕೊಂಡಿದ್ದ ನಾಗೇಂದ್ರ, ಮೊದಲು ರಮೇಶ್ ಜಾರಕಿಹೊಳಿ ಗುಂಪಲ್ಲಿದ್ರು. ಸಹೋದರನಿಗೆ ಬಿಜೆಪಿ ಎಂಪಿ ಟಿಕೆಟ್ ಕೊಡಿಸಿಲ್ಲವೆಂದು ರಮೇಶ್ ತಂಡ ಬಿಟ್ರು. ನಂತರ ಒಂಟಿಯಾಗಿ ತಂಡಕಟ್ಟಲು ಹೋದ್ರು.

ಇನ್ನೂ ಸಚಿವ ಸ್ಥಾನ ಸಿಗುಬಹುದು ಎಂದು ಒಂದೊಮ್ಮೆ ಕಾಂಗ್ರೆಸ್ ಗೆ ನಿಷ್ಠರಾದ್ರೆ, ಮತ್ತೊಮ್ಮೆ ಸಚಿವ ಸ್ಥಾನ ಸಿಗಲ್ಲ ಎಂದು ತಿಳಿದೊಡನೆ ಭಿನ್ನರ ಜೊತೆ ಕಾಣಿಸಿಕೊಳ್ಳುತ್ತಾರೆ. ಒಮ್ಮೆ ಆ ಕಡೆ ಮತ್ತೊಮ್ಮೆ ‌ಈ ಕಡೆ ಕಾಣಿಸಿಕೊಳ್ತಿರೋ ನಾಗೇಂದ್ರ. ಸದ್ಯ ಗೊಂದಲದಲ್ಲಿದ್ದಾರೆ.ನಾಗೇಂದ್ರ ಇದೀಗ ‌ಮತ್ತೊಮ್ಮೆ ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯ ಕೂಡ ಇದೆ. ನಾಗೇಂದ್ರ ‌ನಡೆ ಸದ್ಯ ತೀವ್ರ ಕುತೂಹಲ ಕೆರಳಿಸಿದ್ದು, ಕಾಂಗ್ರೆಸ್ ನಲ್ಲಿಯೇ ಉಳಿದುಕೊಂಡ್ರೆ ಸಚಿವಸ್ಥಾನ ಸಿಗಬಹುದು ಎಂಬ ಚಿಂತನೆಯಲ್ಲಿದ್ದಾರೆ. ಇನ್ನೂ ಭಿನ್ನರ ಜೊತೆ ಗುರುತಿಸಿಕೊಂಡ್ರೆ ಮುಂದೆ ಟಿಕೆಟ್ ಸಿಗೋದು ಕಷ್ಟ ಎನ್ನಲಾಗ್ತಿದೆ. ಒಟ್ಟಾರೆ ಬಿಜೆಪಿಗೆ ಹೋಗೋದಕ್ಕೆ ತಾವೇ ತೊಡಕು ಮಾಡಿಕೊಂಡಿರುವ ನಾಗೇಂದ್ರ, ಒಮ್ಮೆ ಬರುವೆ ಮತ್ತೊಮೆ ಬರಲ್ಲ ಎಂದು ಬಿಜೆಪಿ ಜೊತೆ ಆಟವಾಡಿದ್ದಾರೆ. ಹೀಗಾಗಿ ಬಿಜೆಪಿಯವರ ಜೊತೆ ನಂಬಿಕೆ ಉಳಿಸಿಕೊಳ್ಳುವಲ್ಲಿ ನಾಗೇಂದ್ರ ವಿಫಲರಾಗಿದ್ದಾರೆ.

LEAVE A REPLY

Please enter your comment!
Please enter your name here