Home District ಭೀಕರ ಅಪಘಾತದಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ದುರ್ಮರಣ…ಬೆಂಗಳೂರಿನ ನಿಷ್ಟಾವಂತ ಸಿಐಡಿ ಡಿವೈಎಸ್‌ಪಿ ಬಾಳೇಗೌಡ ಸೇರಿ ಮೂವರ...

ಭೀಕರ ಅಪಘಾತದಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ದುರ್ಮರಣ…ಬೆಂಗಳೂರಿನ ನಿಷ್ಟಾವಂತ ಸಿಐಡಿ ಡಿವೈಎಸ್‌ಪಿ ಬಾಳೇಗೌಡ ಸೇರಿ ಮೂವರ ಸಾವು..!!!

499
0
SHARE

ಲಾರಿ ಮತ್ತು ಪೊಲೀಸ್ ವಾಹನ ಮುಖಾಮುಖಿ ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೂವರು ಪೊಲೀಸ್ ಅಧಿಕಾರಿಗಳು ಮೃತ ಪಟ್ಟ ಘಟನೆ ಬಾಗಲಕೋಟೆ ಬಳಿ ನಡೆದಿದೆ…

ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಸಿಐಡಿ ಡಿವೈಎಸ್ ಪಿ ಬಾಳೇಗೌಡ, ಸಿಐಡಿ ಸಿಪಿಐ ಶಿವಸ್ವಾಮಿ, ಚಾಲಕ ವೇಣು ಗೋಪಾಲ ಸಾವನಪ್ಪಿದ್ದಾರೆ…

ಸುಮಾರು ರಾತ್ರಿ 12.30ಕ್ಕೆ ಬಾಗಲಕೋಟೆಯ ಸಂಗಮ ಕ್ರಾಸ್ ಬಳಿ ಅಪಘಾತ ಸಂಭವಿಸಿದ್ದು, ಬೆಂಗಳೂರಿನಿಂದ ಚುನಾವಣೆ ಕೆಲಸದ ಮೇಲೆ ಬಾಗಲಕೋಟೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಂಶಿಕೃಷ್ಣ ಹಾಗೂ ಡಿವೈಎಸ್ ಪಿ ಗಿರೀಶ ಸೇರಿದಂತೆ ಇತರ ಅಧಿಕಾರಿಗಳು ದೌಡಾಯಿಸಿದ್ದಾರೆ…

LEAVE A REPLY

Please enter your comment!
Please enter your name here