ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ ಎನ್ನುವಾಗಲೇ ರಾಜ್ಯದಲ್ಲಿ ಜನ ನಾಯಕರು ಒಂದೊಂದೇ ಬ್ರೇಕಿಂಗ್ ನ್ಯೂಸ್ ಕೊಡ್ತಿದ್ದಾರೆ…
ಉಸ್ತುವಾರಿ ಸಚಿವ ಎ ಮಂಜು ಅವರೇ ಲೆಕ್ಕಕೊಡಿ ಎಂಬ ಜನಾಭಿಪ್ರಾಯ ಸಂಗ್ರಹಿಸಿರೋ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ…
ಸುಮಾರು 3 ನಿಮಿಷದ ವೀಡಿಯೋ ಇದಾಗಿದ್ದು, ಅರಕಲಗೂಡು ಕ್ಷೇತ್ರದ್ಯಾಂತ ಹರಿದಾಡುತ್ತಿದೆ. ಅನಾಮಿಕರು ಡಾಕ್ಯುಮೆಂಟರಿ ಮಾಡಿ…
ವಾಟ್ಸ್ ಆ್ಯಪ್ ಫೇಸ್ಬುಕ್ ನಲ್ಲಿ ಮಂಜು ವಿರುದ್ಧ ವೀಡಿಯೋ ಹರಿ ಬಿಟ್ಟಿದ್ದಾರೆ. ವಿಡಿಯೋದಲ್ಲಿ ಮಂಜು ಅವರ ದುರಾಡಳಿತ, ಭ್ರಷ್ಟಾಚಾರ ದರ್ಪದ ನಡವಳಿಕೆ, ದಲಿತ ವಿರೋಧಿ ನೀತಿ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ…
ಇನ್ನು ಮತ ಕೇಳಲು ಮಾತ್ರ ಬರ್ತಾರೆ, ನಾವು ಯಾವುದೇ ಆಮಿಷಕ್ಕೆ ಬಲಿಯಾಗಲ್ಲ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ…